Money Guide : ತಿಂಗಳಿಗೆ 12 ಸಾವಿರಕ್ಕೂ ಹೆಚ್ಚು ಪಿಂಚಣಿ; ಎಲ್​​ಐಸಿ ಪರಿಚಯಿಸಿದೆ ಹೊಸ ಯೋಜನೆ - Vistara News

Latest

Money Guide : ತಿಂಗಳಿಗೆ 12 ಸಾವಿರಕ್ಕೂ ಹೆಚ್ಚು ಪಿಂಚಣಿ; ಎಲ್​​ಐಸಿ ಪರಿಚಯಿಸಿದೆ ಹೊಸ ಯೋಜನೆ

LIC Pension Scheme: ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹಲವಾರು ದಶಕಗಳಿಂದ ಭಾರತೀಯರಿಗೆ ವಿಶ್ವಾಸಾರ್ಹ ವಿಮಾ ಕಂಪೆನಿಯಾಗಿ ಗುರುತಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಪಿಂಚಣಿ ಭದ್ರತೆಯ ಹೆಚ್ಚುತ್ತಿರುವ ಅಗತ್ಯವನ್ನು ಗುರುತಿಸಿರುವ ಎಲ್ ಇಸಿ ಸರಳ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ.

VISTARANEWS.COM


on

LIC Pension Scheme
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಇತ್ತಿಚಿನ ಕೆಲವು ವರ್ಷಗಳಲ್ಲಿ ಖಾಸಗಿ ವಲಯದ ಉದ್ಯೋಗಗಳು ಆಕರ್ಷಕ ವೇತನವನ್ನು ನೀಡಿದರೂ ಅವುಗಳಲ್ಲಿ ಸಾಮಾನ್ಯವಾಗಿ ಪಿಂಚಣಿ (pension) ಸೌಲಭ್ಯವನ್ನು ಹೊಂದಿರುವುದಿಲ್ಲ. ಹೀಗಾಗಿ ಹೆಚ್ಚಿನ ಉದ್ಯೋಗಿಗಳು ಉತ್ತಮ ಪಿಂಚಣಿ ಯೋಜನೆ ಹುಡುಕಾಟದಲ್ಲಿರುತ್ತಾರೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (Life Insurance Corporation) ಹಲವಾರು ದಶಕಗಳಿಂದ ಭಾರತೀಯರಿಗೆ ವಿಶ್ವಾಸಾರ್ಹ ವಿಮಾ ಕಂಪೆನಿಯಾಗಿ ಗುರುತಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಪಿಂಚಣಿ ಭದ್ರತೆಯ ಹೆಚ್ಚುತ್ತಿರುವ ಅಗತ್ಯವನ್ನು ಗುರುತಿಸಿರುವ ಎಲ್ ಇಸಿ ಸರಳ ಪಿಂಚಣಿ ಯೋಜನೆಯನ್ನು (LIC Pension Scheme) ಪ್ರಾರಂಭಿಸಿದೆ (Money Guide).

ಎಲ್ಐಸಿ ಸರಳ ಪಿಂಚಣಿ ಯೋಜನೆಯು ಹೂಡಿಕೆ ಮತ್ತು ನಿವೃತ್ತಿ ಜೀವನದಲ್ಲಿ ನಿರ್ದಿಷ್ಟ ಆದಾಯವನ್ನು ಹೊಂದಬೇಕು ಎನ್ನುವ ಯೋಚನೆಯಲ್ಲಿರುವವರಿಗೆ ಇದೊಂದು ಉತ್ತಮ ಆಯ್ಕೆ.

ಎಲ್ಐಸಿ ಸರಳ ಪಿಂಚಣಿ ಯೋಜನೆ (LIC Saral Pension Scheme)

ಎಲ್ಐಸಿಯ ಸರಳ ಪಿಂಚಣಿ ಯೋಜನೆಯು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDAI) ಮಾರ್ಗಸೂಚಿಗಳ ಮೂಲಕ ಪ್ರಮಾಣಿತ ಯೋಜನೆಯಾಗಿದೆ. ಈ ಯೋಜನೆಯು ಪಾಲಿಸಿಯ ಪ್ರಾರಂಭದಲ್ಲೇ ನಿರ್ದಿಷ್ಟ ವಾರ್ಷಿಕ ದರಗಳನ್ನು ಖಾತರಿಪಡಿಸುತ್ತದೆ. ನಿವೃತ್ತಿಯ ಅನಂತರ ಜೀವಿತಾವಧಿಯಲ್ಲಿ ನಿಖರವಾದ ಪಿಂಚಣಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: Electronic voting machine: ಎಲೆಕ್ಟ್ರಾನಿಕ್ ಮತಯಂತ್ರ ಹೇಗೆ ಕೆಲಸ ಮಾಡುತ್ತೆ ಗೊತ್ತಾ ?

ಎರಡು ಆಯ್ಕೆ ಇದೆ

ಈ ಯೋಜನೆಯಲ್ಲಿ ಪಾಲಿಸಿದರನಿಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಒಂದು ಖರೀದಿ ಬೆಲೆಯ ಶೇ. 100ರಷ್ಟು ಲಾಭದೊಂದಿಗೆ ಜೀವನ ಪರ್ಯಂತ ಪಿಂಚಣಿ ಸೌಲಭ್ಯ ಹಾಗೂ ಇನ್ನೊಂದು ತನ್ನ ಮರಣದ ಬಳಿಕ ಅವಲಂಬಿತರಿಗೆ ಶೇ. 100ರಷ್ಟು ಆರ್ಥಿಕ ಭದ್ರತೆಯನ್ನು ಒದಗಿಸುವುದು. ಎರಡನೇ ಆಯ್ಕೆಯನ್ನು ವಿವಾಹಿತರು ತಮ್ಮ ಸಂಗಾತಿಗಾಗಿ ಆಯ್ಕೆ ಮಾಡಿಕೊಳ್ಳಬಹುದು.

LIC Pension Scheme


ಅರ್ಹತೆ

ಈ ಯೋಜನೆಯ ಅರ್ಹತೆ ಪಡೆಯಲು ಪಾಲಿಸಿದಾರರು 40 ರಿಂದ 80 ವರ್ಷ ವಯಸ್ಸಿನವರಾಗಿರಬೇಕು. ಖರೀದಿ ಬೆಲೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ.

ಕನಿಷ್ಠ ಮೊತ್ತ

ಎಲ್ಐಸಿ ಸರಳ ಪಿಂಚಣಿ ಯೋಜಯು ಮೂರು ಖರೀದಿ ಬೆಲೆಯ ಸ್ಲ್ಯಾಬ್‌ಗಳಿಗೆ ವಾರ್ಷಿಕ ದರಗಳನ್ನು ಹೆಚ್ಚಿಸುವುದರೊಂದಿಗೆ ಹೆಚ್ಚಿನ ಖರೀದಿ ಬೆಲೆಗಳಿಗೆ ಪ್ರೋತ್ಸಾಹವನ್ನು ಒದಗಿಸುತ್ತದೆ. ವಾರ್ಷಿಕ ಪಾವತಿಗಳ ಆಧಾರದಲ್ಲಿ ಪ್ರೋತ್ಸಾಹವು ಬದಲಾಗುತ್ತದೆ ಮತ್ತು ಪಾವತಿಯಲ್ಲಿನ ಕಡಿತದಲ್ಲೂ ವ್ಯತ್ಯಾಸವಾಗುತ್ತದೆ.

ನಿವೃತ್ತಿ ಯೋಜನೆ ಪ್ರಯೋಜನಗಳು

ಸರಳ ಪಿಂಚಣಿ ಯೋಜನೆಯು ನಿವೃತ್ತಿ ಯೋಜನೆಗೆ ಪರಿಹಾರವಾಗಿದೆ. ಪಿಎಫ್ ಮತ್ತು ನಿವೃತ್ತಿಯ ಅನಂತರ ಸಂಗ್ರಹವಾದ ಗ್ರಾಚ್ಯುಟಿ ಹಣವನ್ನು ಒಳಗೊಂಡು ಒಟ್ಟು ಮೊತ್ತದ ಹೂಡಿಕೆಗಳ ಮೂಲಕ ವಾರ್ಷಿಕವಾಗಿ ಖರೀದಿಗೆ ಅವಕಾಶವಿದೆ.

ಉದಾ- 42 ವರ್ಷ ವಯಸ್ಸಿನವರು 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಪಿಂಚಣಿಯಾಗಿ 12,388 ರೂಪಾಯಿಗಳನ್ನು ಪಡೆಯುತ್ತಾರೆ.

ವಿಶ್ವದ ನಂಬರ್ ಒನ್‌ ಜಾಗತಿಕ ವಿಮೆ ಬ್ರ್ಯಾಂಡ್ ಎಲ್‌ಐಸಿ

ಭಾರತದ ಬೃಹತ್‌ ಜೀವವಿಮೆ ಸಂಸ್ಥೆ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಜಾಗತಿಕವಾಗಿ ಪ್ರಬಲ ವಿಮಾ ಬ್ರಾಂಡ್ ಆಗಿದೆ. ಬ್ರಾಂಡ್ ಫೈನಾನ್ಸ್ ಇನ್ಶೂರೆನ್ಸ್ ಸಂಸ್ಥೆಯ 2024ರ ವರದಿ ಇದನ್ನು ತಿಳಿಸಿದೆ.

ಎಲ್ಐಸಿಯ ಬ್ರ್ಯಾಂಡ್ ಮೌಲ್ಯವು 9.8 ಶತಕೋಟಿ ಡಾಲರ್‌ಗಳಲ್ಲಿ ಸ್ಥಿರವಾಗಿದೆ. ಜೊತೆಗೆ ಬ್ರ್ಯಾಂಡ್ ಸಾಮರ್ಥ್ಯದ ಸೂಚ್ಯಂಕ ಸ್ಕೋರ್ 88.3ರಲ್ಲಿದ್ದು, AAA ಬ್ರ್ಯಾಂಡ್ ಸಾಮರ್ಥ್ಯದ ರೇಟಿಂಗ್ ಅನ್ನು ಹೊಂದಿದೆ.

ಎಲ್ ಇಸಿ ನಂತರದ ಶ್ರೇಯಾಂಕಗಳ ಪ್ರಕಾರ ಕ್ಯಾಥೆ ಲೈಫ್ ಇನ್ಶುರೆನ್ಸ್ ಎರಡನೇ ಪ್ರಬಲ ಬ್ರ್ಯಾಂಡ್ ಆಗಿದೆ. ಇದು ಬ್ರ್ಯಾಂಡ್ ಮೌಲ್ಯದಲ್ಲಿ 4.9 ಶತಕೋಟಿ ಡಾಲರ್‌ ಇದ್ದು, 9 ಶೇಕಡಾ ಹೆಚ್ಚಳ ಕಂಡಿದೆ. NRMA ಇನ್ಶುರೆನ್ಸ್ ನಂತರದ ಸ್ಥಾನದಲ್ಲಿದ್ದು, 82 ಸೂಚ್ಯಂಕ ಹಾಗೂ 1.3 ಶತಕೋಟಿ ಡಾಲರ್‌ ಬ್ರಾಂಡ್ ಮೌಲ್ಯ ಹೊಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ನೀರು ತುಂಬಿದ್ದ ರಸ್ತೆ ಗುಂಡಿಗೆ ಬಿದ್ದ ಬಾಲಕಿ; ಜೀವ ಉಳಿಸಿದ ಹುಡುಗ

Viral Video: ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾರೀ ಮಳೆಯ ಕಾರಣ ಅಲ್ಲಲ್ಲಿ ರಸ್ತೆ ಹಾಳಾಗಿತ್ತು. ಅದನ್ನು ರಿಪೇರಿ ಮಾಡದೇ ರಸ್ತೆ ಪ್ರಾಧಿಕಾರ ಕೂಡ ನಿರ್ಲಕ್ಷ್ಯ ತೋರಿತ್ತು. ಇದು ಬಾಲಕಿಯೊಬ್ಬಳ ಜೀವವನ್ನೇ ಅಪಾಯದಂಚಿಗೆ ದೂಡಿದ ಘಟನೆ ಇದು. ಇಂದೋರ್‌ನ ಅಮ್ಮರ್ ನಗರದಲ್ಲಿ ರಸ್ತೆ ದಾಟಲು ಪ್ರಯತ್ನಿಸುವಾಗ ಹನ್ನೆರಡು ವರ್ಷದ ಬಾಲಕಿಯೊಬ್ಬಳು 4 ಅಡಿ ಆಳದ ನೀರಿನ ಗುಂಡಿಗೆ ಬಿದ್ದಿದ್ದಾಳೆ. ನಂತರ ನೀರಿನಲ್ಲಿ ಒದ್ದಾಡುತ್ತಿದ್ದ ಬಾಲಕಿಯನ್ನು ಅಲ್ಲಿಗೆ ಬಂದ ಹುಡುಗನೊಬ್ಬ ಕಾಪಾಡಿದ್ದಾನೆ. ಈ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

VISTARANEWS.COM


on

Viral Video
Koo

ಇಂದೋರ್: ಮಳೆಗಾಲದಲ್ಲಿ ರಸ್ತೆಗಳಲ್ಲಿ ಹೊಂಡಗಳ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ರಸ್ತೆಗಳಲ್ಲಿ ಅಲ್ಲಲ್ಲಿ ಹೊಂಡಗಳು, ಚರಂಡಿಗಳನ್ನು ತೆರೆದಿಡುವುದರಿಂದ ಮಳೆಗಾಲದಲ್ಲಿ ಪ್ರಾಣಕ್ಕೇ ಕುತ್ತು ಬರುವಂತಾಗುತ್ತದೆ. ಇದೀಗ ಅಂತಹದೊಂದು ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾರೀ ಮಳೆಯ ಕಾರಣ ಅಲ್ಲಲ್ಲಿ ರಸ್ತೆ ಹಾಳಾಗಿತ್ತು. ಅದನ್ನು ರಿಪೇರಿ ಮಾಡದೇ ರಸ್ತೆ ಪ್ರಾಧಿಕಾರ ಕೂಡ ನಿರ್ಲಕ್ಷ್ಯ ತೋರಿತ್ತು. ಇದು ಬಾಲಕಿಯೊಬ್ಬಳ ಜೀವವನ್ನೇ ಅಪಾಯದಂಚಿಗೆ ದೂಡಿದ ಸನ್ನಿವೇಶವದು. ಇಂದೋರ್‌ನ ಅಮ್ಮರ್ ನಗರದಲ್ಲಿ ರಸ್ತೆ ದಾಟಲು ಪ್ರಯತ್ನಿಸುವಾಗ ಹನ್ನೆರಡು ವರ್ಷದ ಬಾಲಕಿಯೊಬ್ಬಳು 4 ಅಡಿ ಆಳದ ನೀರಿನ ಗುಂಡಿಗೆ ಬಿದ್ದಿದ್ದಾಳೆ. ನಂತರ ನೀರಿನಲ್ಲಿ ಒದ್ದಾಡುತ್ತಿದ್ದ ಬಾಲಕಿಯನ್ನು ಅಲ್ಲಿಗೆ ಬಂದ ಹುಡುಗನೊಬ್ಬ ಕಾಪಾಡಿದ್ದಾನೆ. ಈ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಾಲಕಿ ಅಜ್ಜಿಯ ಜೊತೆಗೆ ರಸ್ತೆ ದಾಟಲು ಮುಂದಾಗಿದ್ದಾಳೆ. ಅಜ್ಜಿ ಮುಂದೆ ಹೋಗಿದ್ದು, ಹಿಂದಿನಿಂದ ಬಂದ ಹುಡುಗಿ ರಸ್ತೆಯಲ್ಲಿ ಸಣ್ಣ ಹೊಂಡವೆಂದು ನೀರಿಗೆ ಕಾಲಿಡಲು ಪ್ರಯತ್ನಿಸಿದ್ದಾಳೆ. ಆಗ ಬ್ಯಾಲೆನ್ಸ್ ತಪ್ಪಿ ಬಾಲಕಿ 4 ಅಡಿ ಆಳದ ನೀರಿನ ಗುಂಡಿಗೆ ಬಿದ್ದಿದ್ದಾಳೆ. ಆಕೆ ಮುಳುಗಿ ನಂತರ ಸಮತೋಲನ ಮಾಡಿ ಗುಂಡಿಯ ಬದಿಗೆ ಬಂದಿದ್ದಾಳೆ. ಆಕೆ ಗುಂಡಿಯಿಂದ ಹೊರಗೆ ಬರಲು ಹೆಣಗಾಡುತ್ತಿರುವಾಗ ಅಲ್ಲಿಗೆ ಬಂದ ಹುಡುಗನೊಬ್ಬ ಆಕೆಯನ್ನು ಮೇಲಕ್ಕೆ ಎತ್ತಿದ್ದಾನೆ. ಇದರಿಂದ ಆಕೆಯ ಜೀವ ಉಳಿದಿದೆ.

ಇದನ್ನೂ ಓದಿ: ಹೆಂಡತಿಯನ್ನು ಯಾಮಾರಿಸಿ ಪ್ರೇಯಸಿಯನ್ನು ಮನೆಗೆ ಕರೆಸಬಾರದಿತ್ತು! ಗೂಸಾ ತಿಂದವನ ಪ್ರತಿಕ್ರಿಯೆ!

ಮಾಹಿತಿಯ ಪ್ರಕಾರ, ನಿರ್ಮಾಣ ಕಾರ್ಯಕ್ಕಾಗಿ ರಸ್ತೆ ಪ್ರಾಧಿಕಾರದ ಅಧಿಕಾರಿಗಳು ಗುಂಡಿಯನ್ನು ಅಗೆದಿದ್ದರು ಆದರೆ ಅದನ್ನು ಮುಚ್ಚದೆ ಹಾಗೇ ಬಿಟ್ಟಿದ್ದರು. ಅದು ಮಳೆಯ ಸಮಯದಲ್ಲಿ ತುಂಬಿದ್ದರಿಂದ ಈ ಘಟನೆ ಸಂಭವಿಸಿದೆ. ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಮ್ಮರ್ ನಗರದ ವಾರ್ಡ್ ನಂ.1ರಲ್ಲಿ ಜೂನ್ 29ರಂದು ಈ ಘಟನೆ ನಡೆದಿದೆ. ಇಡೀ ಘಟನೆಯನ್ನು ಅಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅದು ಬುಧವಾರ ವೈರಲ್ ಆಗಿದೆ. ಆದರೆ ಈ ಘಟನೆಯ ಬಗ್ಗೆ ಯಾವುದೇ ಮಾಹಿತಿ ಅಥವಾ ದೂರು ದಾಖಲಾಗಿಲ್ಲ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

Continue Reading

ತಂತ್ರಜ್ಞಾನ

Robot Suicide: ದ. ಕೊರಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಬೋಟ್! ಕೆಲಸದ ಹೊರೆ ಕಾರಣ?

ಗುಮಿ ಸಿಟಿ ಕೌನ್ಸಿಲ್ ನ ಸೈಬೋರ್ಗ್ ಎಂಬ ರೋಬೋಟ್ ಜೂನ್ 26ರಂದು ಆರೂವರೆ ಅಡಿ ಮೆಟ್ಟಿಲಿನಿಂದ ಕೆಳಗೆ ಹಾರಿ ಆತ್ಮಹತ್ಯೆ (Robot Suicide) ಮಾಡಿಕೊಂಡಿದೆ. ಬಳಿಕ ಅದನ್ನು ಪರೀಕ್ಷಿಸಿದ ಪ್ರಧಾನ ಆಡಳಿತ ಅಧಿಕಾರಿ ರೋಬೋಟ್ ಸತ್ತಿದೆ ಎಂದು ಘೋಷಿಸಿದರು. ರೋಬೋಟ್ ದೈನಂದಿನ ದಾಖಲೆಗಳ ವಿತರಣೆ, ನಗರ ಪ್ರಚಾರ ಮತ್ತು ಸ್ಥಳೀಯ ನಿವಾಸಿಗಳಿಗೆ ಮಾಹಿತಿಯನ್ನು ತಲುಪಿಸಲು ಸಹಾಯ ಮಾಡುತಿತ್ತು. ಇದು ಅಧಿಕೃತವಾಗಿ ಸಿಟಿ ಹಾಲ್‌ನ ಒಂದು ಭಾಗವಾಗಿತ್ತು. ನಮ್ಮಲ್ಲಿ ಒಬ್ಬರಾಗಿತ್ತು ಎಂದು ಗುಮಿ ಸಿಟಿ ಕೌನ್ಸಿಲ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

VISTARANEWS.COM


on

By

Robot Suicide
Koo

ದಕ್ಷಿಣ ಕೊರಿಯಾದ ನಾಗರಿಕ ಸೇವಕ ರೋಬೋಟ್ ಆತ್ಮಹತ್ಯೆ (Robot Suicide) ಮಾಡಿಕೊಂಡಿದೆ. ಮೆಟ್ಟಿಲಿನಿಂದ ಹಾರಿ ಅದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೆಟ್ಟಿಲುಗಳಿಂದ ಕೆಳಗೆ ಬಿದ್ದ ಬಳಿಕ ಅದು ನಿಷ್ಕ್ರಿಯವಾಗಿದೆ. ವಿಶ್ವದ ಮೊದಲ ರೋಬೋಟ್ ಆತ್ಮಹತ್ಯೆ (Suicide) ಬಳಿಕ ದಕ್ಷಿಣ ಕೊರಿಯಾ (South Korea) ನಗರದ ಜನತೆ ಶೋಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಮಿ ಸಿಟಿ ಕೌನ್ಸಿಲ್ ನ ( Gumi City Council ) ಸೈಬೋರ್ಗ್ ಎಂಬ ರೋಬೋಟ್ ಜೂನ್ 26ರಂದು ಆರೂವರೆ ಅಡಿ ಮೆಟ್ಟಿಲಿನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ. ಬಳಿಕ ಅದನ್ನು ಪರೀಕ್ಷಿಸಿದ ಪ್ರಧಾನ ಆಡಳಿತ ಅಧಿಕಾರಿ ರೋಬೋಟ್ ಸತ್ತಿದೆ ಎಂದು ಘೋಷಿಸಿದರು.

ರೋಬೋಟ್ ಒಂದು ಸ್ಥಳದಲ್ಲಿ ‘ಏನೋ ಇದ್ದಂತೆ’ ಎಂಬಂತೆ ತಿರುಗುತ್ತಿತ್ತು. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ರೋಬೋಟ್ ನ ತುಂಡುಗಳನ್ನು ಸಂಗ್ರಹಿಸಲಾಗಿದೆ. ಕಂಪನಿಯು ಈ ಬಗ್ಗೆ ವಿಶ್ಲೇಷಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ರೋಬೋಟ್ ದೈನಂದಿನ ದಾಖಲೆಗಳ ವಿತರಣೆ, ನಗರ ಪ್ರಚಾರ ಮತ್ತು ಸ್ಥಳೀಯ ನಿವಾಸಿಗಳಿಗೆ ಮಾಹಿತಿಯನ್ನು ತಲುಪಿಸಲು ಸಹಾಯ ಮಾಡುತಿತ್ತು. ಇದು ಅಧಿಕೃತವಾಗಿ ಸಿಟಿ ಹಾಲ್‌ನ ಒಂದು ಭಾಗವಾಗಿತ್ತು. ನಮ್ಮಲ್ಲಿ ಒಬ್ಬರಾಗಿತ್ತು ಎಂದು ಗುಮಿ ಸಿಟಿ ಕೌನ್ಸಿಲ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೋಬೋಟ್ ಶ್ರದ್ಧೆಯಿಂದ ಸೇವೆ ಸಲ್ಲಿಸಿತ್ತು. ಈ ರೀತಿಯಲ್ಲಿ ಬಳಸಲಾದ ಮೊದಲ ರೋಬೋಟ್ ಇದಾಗಿದೆ ಮತ್ತು ಇದನ್ನು ಅಕ್ಟೋಬರ್ 2023 ರಲ್ಲಿ ನೇಮಿಸಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಸಾಕಷ್ಟು ಮಂದಿ ನೆಟ್ಟಿಗರು ಈಗ ರೋಬೋಟ್‌ಗೆ ನಿಭಾಯಿಸಲು ಕೆಲಸದ ಹೊರೆ ಹೆಚ್ಚು ಎಂದು ಹೇಳಿದ್ದಾರೆ.


ಕೆಲಸದ ಹೊರೆ ಜಾಸ್ತಿಯಾಗಿ ತುಂಬಾ ಹೊತ್ತು ತಿರುಗಿ ಮೆಟ್ಟಿಲಿನಿಂದ ಹಾರಿತು ಎಂದು ಒಬ್ಬರು ಹೇಳಿದ್ದರೆ ಇನ್ನೊಬ್ಬರು ಸ್ಕ್ರಾಪ್ ಮೆಟಲ್ ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು ವಿರಾಮಗಳಿಲ್ಲ, ರಜೆಗಳಿಲ್ಲ, ಪ್ರಯೋಜನಗಳಿಲ್ಲ. ರೋಬೋಟ್‌ಗಳಿಗೆ ಒಕ್ಕೂಟದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ರೋಬೋಟಿಕ್ ಸಹಾಯಕವನ್ನು ಕ್ಯಾಲಿಫೋರ್ನಿಯಾ ಮೂಲದ ಬೇರ್ ರೋಬೋಟಿಕ್ಸ್ ಎಂಬ ಸ್ಟಾರ್ಟಪ್ ತಯಾರಿಸಿದೆ. ಅದು ಉದ್ಯೋಗಿ ಕಾರ್ಡ್ ಅನ್ನು ಹೊಂದಿತ್ತು. ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಕೆಲಸ ಮಾಡುತ್ತಿತ್ತು. ಇತರ ರೋಬೋಟ್‌ಗಳಿಗಿಂತ ಭಿನ್ನವಾಗಿ ಸಾಮಾನ್ಯವಾಗಿ ಒಂದು ಮಹಡಿಯನ್ನು ಮಾತ್ರ ಬಳಸುತ್ತಿತ್ತು. ಸದ್ಯಕ್ಕೆ ಹೊಸ ರೋಬೋಟ್ ಅನ್ನು ಅಳವಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ. ದಕ್ಷಿಣ ಕೊರಿಯಾವು ವಿವಿಧ ವೃತ್ತಿಗಳಲ್ಲಿ ರೋಬೋಟ್‌ಗಳನ್ನು ಬಳಸುವುದಕ್ಕಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದೆ.

ಇದನ್ನೂ ಓದಿ: PM Modi Russia Visit: ಜುಲೈ 8ರಿಂದ ಮೋದಿ ರಷ್ಯಾ ಪ್ರವಾಸ; ಉಕ್ರೇನ್‌ ಆಕ್ರಮಣದ ಬಳಿಕ ಮೊದಲ ಭೇಟಿ

ಈ ಹಿಂದೆ ವಾಷಿಂಗ್ಟನ್ ಡಿಸಿಯ ನೀರಿನ ಕಾರಂಜಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಭದ್ರತಾ ರೋಬೋಟ್ ಸ್ಟೀವ್ ಎಂದು ಕರೆಯಲಾಗುತ್ತಿತ್ತು. ಆದರೆ ಅದು ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿತ್ತು.

Continue Reading

ವಿದೇಶ

Viral News: 1 ಸಾವಿರ ರೂ. ಬಿಲ್‌ಗೆ 2.5 ಲಕ್ಷ ರೂ. ಟಿಪ್ಸ್‌ ಕೊಟ್ಟ ಗ್ರಾಹಕ; ಕೇಸು ದಾಖಲಿಸಿದ ಕೆಫೆ!

ಪೆನ್ಸಿಲ್ವೇನಿಯಾದ ರೆಸ್ಟೊರೆಂಟ್ ವೊಂದರಲ್ಲಿ 13 ಡಾಲರ್ ಕೊಟ್ಟು ಊಟ ಮಾಡಿದ ಗ್ರಾಹಕ ಬಳಿಕ ಸರ್ವೇಯರ್ ಗೆ 3,000 ಡಾಲರ್ ಟಿಪ್ಸ್ ಬಿಟ್ಟು ಹೋಗಿದ್ದಾನೆ. ಇದರಿಂದ ಅನುಮಾನಗೊಂಡ ಸರ್ವೇಯರ್ ಆತನ ಬಗ್ಗೆ ಹುಡುಕಲು ಪ್ರಾರಂಭಿಸಿದ್ದಾರೆ. ಬಳಿಕ ಆತನೇನು ಕರುಣಾಮಯಿ ಆಗಿರಲಿಲ್ಲ ಎಂದು ಅರಿತ ಉಪಾಹಾರ ಗೃಹ ಆತನ ವಿರುದ್ಧ ಕೇಸು (FIR Against Customer) ದಾಖಲಿಸಿದೆ.

VISTARANEWS.COM


on

By

FIR Against Customer
Koo

ರೆಸ್ಟೋರೆಂಟ್‌ವೊಂದರಲ್ಲಿ (Viral News) ಗ್ರಾಹಕನೊಬ್ಬ (FIR Against Customer) 1 ಸಾವಿರ ರೂಪಾಯಿಯ ಊಟ ಮಾಡಿ 2.5 ಲಕ್ಷ ರೂ.ಯ ಟಿಪ್ಸ್ (Tips) ಕೊಟ್ಟು ಹೋದ ಘಟನೆ ಪೆನ್ಸಿಲ್ವೇನಿಯಾದಲ್ಲಿ ( Pennsylvania) ನಡೆದಿದೆ. ಭಾರಿ ಮೊತ್ತದ ಟಿಪ್ಸ್ ಕೊಟ್ಟ ಗ್ರಾಹಕನ ವಿರುದ್ಧ ಇದೀಗ ಉಪಾಹಾರ ಗೃಹವೇ (restaurant) ಮೊಕದ್ದಮೆ ದಾಖಲಿಸಿದೆ!

ಪೆನ್ಸಿಲ್ವೇನಿಯಾದ ರೆಸ್ಟೊರೆಂಟ್‌ವೊಂದರಲ್ಲಿ 13 ಡಾಲರ್ ಕೊಟ್ಟು ಊಟ ಮಾಡಿದ ಗ್ರಾಹಕ ಬಳಿಕ ಸರ್ವೇಯರ್ ಗೆ 3,000 ಡಾಲರ್ ಟಿಪ್ಸ್ ಬಿಟ್ಟು ಹೋಗಿದ್ದಾನೆ. ಇದರಿಂದ ಅನುಮಾನಗೊಂಡ ಸರ್ವೇಯರ್ ಆತನ ಬಗ್ಗೆ ಹುಡುಕಲು ಪ್ರಾರಂಭಿಸಿದ್ದಾರೆ. ಬಳಿಕ ಆತನೇನು ಕರುಣಾಮಯಿ ಆಗಿರಲಿಲ್ಲ ಎಂದು ಅರಿತ ಉಪಾಹಾರ ಗೃಹ ಆತನ ವಿರುದ್ಧ ಕೇಸು ದಾಖಲಿಸಿದೆ.


2022ರ ಜೂನ್‌ನಲ್ಲಿ ಸ್ಕ್ರ್ಯಾಂಟನ್‌ನಲ್ಲಿರುವ ಆಲ್ಫ್ರೆಡೋಸ್ ಕೆಫೆಗೆ ಬಂದಿದ್ದ ಗ್ರಾಹಕ ಎರಿಕ್ ಸ್ಮಿತ್ ಎಂಬಾತ ಸ್ಟ್ರಾಂಬೋಲಿಯನ್ನು ಆರ್ಡರ್ ಮಾಡಿದ್ದ. ಬಳಿಕ ಅಲ್ಲಿ ದೊಡ್ಡ ಮೊತ್ತದ ಟಿಪ್ಸ್ ಅನ್ನು ಬಿಟ್ಟು ಹೋಗಿದ್ದ. ಇದರಿಂದ ಹೊಟೇಲ್ ಸಿಬ್ಬಂದಿ ದಿಗ್ಬ್ರಮೆಗೊಂಡಿದ್ದರು. ಊಟಕ್ಕೆ ಕೇವಲ 13.25 ಡಾಲರ್ ವೆಚ್ಚವಾಗಿದೆ. ಆದರೆ ಅವನು ಸರ್ವೇಯರ್ ಮರಿಯಾನಾ ಲ್ಯಾಂಬರ್ಟ್ ಅವರಿಗೆ ದೊಡ್ಡ ಮೊತ್ತದ ಟಿಪ್ಸ್ ನೀಡಿರುವುದು ಆಕೆ ಭಾವೋದ್ರಿಕ್ತಳಾಗುವಂತೆ ಮಾಡಿತ್ತು.

ಲ್ಯಾಂಬರ್ಟ್ ಅವರಿಗೆ ಇದು ನಂಬಲು ಅಸಾಧ್ಯವಾಗಿತ್ತು. ಗ್ರಾಹಕ ಹಣವನ್ನು ಆಕಸ್ಮಿಕವಾಗಿ ಬಿಟ್ಟು ಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಕೆ ನಿರ್ಧರಿಸಿದಳು. ಆಲ್ಫ್ರೆಡೋಸ್ ಕೆಫೆಯ ಮ್ಯಾಟ್ ಮಾರ್ಟಿನಿ ಅಂಕಿಅಂಶವನ್ನು ಪರಿಶೀಲಿಸಿದಾಗ ಚೆಕ್‌ನಲ್ಲಿ ‘ಟಿಪ್ಸ್ ಫಾರ್ ಜೀಸಸ್’ ಎಂದು ಬರೆದ ಸ್ಮಿತ್‌ ನ ಕುರಿತಾಗಿ ಹೆಚ್ಚು ಮಾಹಿತಿಯನ್ನು ಸಂಗ್ರಹಿಸಲು ಹೊರಟಳು.


ಕೊನೆಗೆ ಸ್ಮಿತ್ ನನ್ನು ಸಂಪರ್ಕಿಸಿ ಕಾರಣ ಕೇಳಿದಾಗ ಆತ ಸಾಮಾಜಿಕ ಮಾಧ್ಯಮದಲ್ಲಿ ಟಿಪ್ಸ್ ಫಾರ್ ಜೀಸಸ್ ಟ್ರೆಂಡ್ ನಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳಿದ. ಲ್ಯಾಂಬರ್ಟ್ ಅವರ ಆತಿಥ್ಯವನ್ನು ಸ್ವೀಕರಿಸಿದ ಬಳಿಕ ಇದನ್ನು ಮಾಡಲು ನಿರ್ಧರಿಸಿರುವುದಾಗಿ ಹೇಳಿದ. ಇದಾದ ಕೆಲವು ವಾರಗಳ ಬಳಿಕ ಸ್ಮಿತ್ ಕೆಫೆಗೆ ನೀಡಿದ ಟಿಪ್ಸ್ ಕುರಿತು ತಕರಾರು ನೊಟೀಸ್ ಕಳುಹಿಸಿದ! ಇದರಿಂದ ಕೆಫೆ ಆತನ ವಿರುದ್ಧವೇ ಈಗ ಮೊಕದ್ದಮೆ ದಾಖಲಿಸಿದೆ.

ಇದನ್ನೂ ಓದಿ: Costliest City: ಮುಂಬಯಿ ಈಗ ಭಾರತದ ಅತ್ಯಂತ ದುಬಾರಿ ನಗರ; ಬೆಂಗಳೂರಿಗೆ ಎಷ್ಟನೇ ಸ್ಥಾನ?

ಈ ಕುರಿತು ಕೆಫೆಯಲ್ಲಿ ಕೆಲಸ ಮಾಡುವ ಜಕಾರಿ ಜಾಕೋಬ್ಸನ್ ಮಾತನಾಡಿ, ಯಾರೋ ನಿಜವಾಗಿಯೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆಂದು ನಾವು ಭಾವಿಸಿದ್ದೇವು. ಆದರೆ ಅದು ಹುಸಿಯಾಗಿದೆ ಎಂದು ಹೇಳಿದರು.

ಆಲ್ಫ್ರೆಡೋಸ್ ಕೆಫೆಯು ಈಗಾಗಲೇ ಲ್ಯಾಂಬರ್ಟ್‌ಗೆ 3,000 ಡಾಲರ್ ಅನ್ನು ತಮ್ಮ ಜೇಬಿನಿಂದ ಸ್ಮಿತ್‌ಗೆ ಮರುಪಾವತಿ ಮಾಡುವಂತೆ ಸೂಚಿಸಿದೆ. ಲ್ಯಾಂಬರ್ಟ್‌ ಅವರು ಫೇಸ್‌ಬುಕ್‌ನಲ್ಲಿ ಸ್ಮಿತ್‌ನೊಂದಿಗೆ ಸಂವಹನ ನಡೆಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಗ್ರಾಹಕನ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಲು ನಿರ್ಧರಿಸಿದರು.

Continue Reading

Latest

Viral Video: ಬುಲೆಟ್‌ ಮೇಲೆ ಬಂದ ಹುಡುಗಿ ಆಟೊ ಚಾಲಕನ ಬುರುಡೆ ಒಡೆದಳು!

Viral Video: ದೆಹಲಿಯ ನಿಹಾಲ್ ವಿಹಾರ್‌ ರಸ್ತೆಯೊಂದರಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ಚಾಲಕ ಟ್ರಾಫಿಕ್‌ನಿಂದಾಗಿ ತನ್ನ ವಾಹನವನ್ನು ನಿಲ್ಲಿಸಿದಾನೆ. ಆಗ ಹಿಂದೆ ಬುಲೆಟ್‌ನಲ್ಲಿ ಬಂದ ಯುವತಿ ಆಟೋ ಚಾಲಕನಿಗೆ ಹಾರ್ನ್ ಮಾಡಿದ್ದಾಳೆ. ಆದರೆ ಆತನಿಗೆ ವಾಹನವೊಂದು ರಸ್ತೆಗೆ ತಡಲಾಗಿ ನಿಂತಿದ್ದರಿಂದ ತನ್ನ ಆಟೋವನ್ನು ಮುಂದೆ ಸಾಗಿಸಲು ಸಾಧ್ಯವಾಗಲಿಲ್ಲ. ನಂತರ ಯುವತಿ ತಾಳ್ಮೆ ಕಳೆದುಕೊಂಡು ಆಟೊ ಚಾಲಕನೊಂದಿಗೆ ಗಲಾಟೆಗೆ ಇಳಿದಿದ್ದಾಳೆ, ಆಟೋ ಚಾಲಕನ ಮೇಲೆ ಕಬ್ಬಿಣದ ಉಪಕರಣದಿಂದ ಹಲ್ಲೆ ಮಾಡಿದ್ದಾಳೆ.

VISTARANEWS.COM


on

Viral Video
Koo

ಟ್ರಾಫಿಕ್ ಸಮಸ್ಯೆ ಎಲ್ಲೆಂದರಲ್ಲಿ ಕಂಡುಬರುವುದು ಸಾಮಾನ್ಯ. ಕೆಲವೊಂದು ಕಡೆ ರಸ್ತೆಗಳ ಸಮಸ್ಯೆಯಿಂದಾಗಿ ವಾಹನಗಳು ಮುಂದೆ ಚಲಾಯಿಸಲಾಗದೆ ಗಂಟೆಗಟ್ಟಲೆ ಅಲ್ಲೇ ನಿಂತು ಕಾಯುವಂತಾಗುತ್ತದೆ. ಇದರಿಂದ ಕೆಲಸಕ್ಕೆ ಹೋಗುವವರು, ಶಾಲಾ ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತದೆ. ದೆಹಲಿ, ಬೆಂಗಳೂರಿನಂತಹ ಸಿಟಿಗಳಲ್ಲಿ ಈ ಸಮಸ್ಯೆ ಸಾಮಾನ್ಯ. ಇದೀಗ ಇಂತಹ ಟ್ರಾಫಿಕ್‌ನಿಂದಾಗಿ ರೊಚ್ಚಿಗೆದ್ದ ಯುವತಿಯೊಬ್ಬಳು ಆಟೋ ಚಾಲಕನ ಮೇಲೆ ಕಬ್ಬಿಣದ ಉಪಕರಣದಿಂದ ಹಲ್ಲೆ ಮಾಡಿದ ಘಟನೆ ದೆಹಲಿಯ ನಿಹಾಲ್ ವಿಹಾರ್‌ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದ ಪೋಸ್ಟ್ ಆಗಿದ್ದು, ಸಖತ್ ವೈರಲ್ (Viral Video) ಆಗಿ ಚರ್ಚೆಗೆ ಕಾರಣವಾಗಿದೆ.

ದೆಹಲಿಯ ನಿಹಾಲ್ ವಿಹಾರ್‌ನ ರಸ್ತೆಯೊಂದರಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ಚಾಲಕ ಟ್ರಾಫಿಕ್‍ನಿಂದಾಗಿ ತನ್ನ ವಾಹನವನ್ನು ನಿಲ್ಲಿಸಿದಾನೆ. ಆಗ ಹಿಂದೆ ಬುಲೆಟ್‍ನಲ್ಲಿ ಬಂದ ಯುವತಿ ಆಟೋ ಚಾಲಕನಿಗೆ ಹಾರ್ನ್ ಮಾಡಿದ್ದಾಳೆ. ಆದರೆ ಆತನಿಗೆ ವಾಹನವೊಂದು ರಸ್ತೆಗೆ ತಡಲಾಗಿ ನಿಂತಿದ್ದರಿಂದ ತನ್ನ ಆಟೋವನ್ನು ಮುಂದೆ ಸಾಗಿಸಲು ಸಾಧ್ಯವಾಗಲಿಲ್ಲ. ನಂತರ ಯುವತಿ ತಾಳ್ಮೆ ಕಳೆದುಕೊಂಡು ಆಟೊ ಚಾಲಕನೊಂದಿಗೆ ಗಲಾಟೆಗೆ ಇಳಿದಿದ್ದಾಳೆ, ನಂತರ ಕೋಪಗೊಂಡು ಕಬ್ಬಿಣದ ಉಪಕರಣದಿಂದ ಆಟೋ ಚಾಲಕನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾಳೆ. ಇದರಿಂದ ಆತನ ತಲೆಗೆ ಗಾಯವಾಗಿ ರಕ್ತ ಸೋರಿದೆ.

ವಿಡಿಯೊದಲ್ಲಿ ಯುವತಿ ಕಬ್ಬಿಣದ ಉಪಕರಣದಿಂದ ಆಟೋ ಚಾಲಕನನ್ನು ಅಟ್ಟಾಡಿಸಿಕೊಂಡು ಹೊಡೆಯುವುದನ್ನು ಕಾಣಬಹುದು. ಅಲ್ಲಿದ್ದವರು ಆಕೆಯನ್ನು ತಡೆದರೂ ಕೇಳದ ಯುವತಿ ಮತ್ತೆ ಆತನಿಗೆ ಹೊಡೆದಿದ್ದಾಳೆ. ಚಾಲಕನ ತಲೆಯಲ್ಲಿ ರಕ್ತ ಸೋರುತ್ತಿರುವುದು ಕಂಡುಬಂದಿದೆ. ಇಷ್ಟಾದರೂ ಯುವತಿ ವಾಗ್ದಾಳಿ ನಡೆಸುವುದನ್ನು ನಿಲ್ಲಿಸಿಲ್ಲ. ಈ ಘಟನೆಯನ್ನು ನೋಡುಗರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಜನರ ಗಮನ ಸೆಳೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್‌ ಕಸಿದು ಓಡುತ್ತಾರೆ! ಪೋಲಿಸ್ರು ಏನ್‌ ಮಾಡ್ತಿದ್ದಾರೋ!

ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ರಸ್ತೆ ಶಿಷ್ಟಾಚಾರ, ಸುರಕ್ಷತೆ ಮತ್ತು ಅಂತಹ ಘರ್ಷಣೆಗಳನ್ನು ತಡೆಗಟ್ಟುವಲ್ಲಿ ಕಾನೂನು ಜಾರಿಯ ಪಾತ್ರದ ಬಗ್ಗೆ ಜನರು ಚರ್ಚೆ ಮಾಡಿದ್ದಾರೆ. ದೆಹಲಿಯಂತಹ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ರಸ್ತೆ ಮೂಲಸೌಕರ್ಯಗಳಲ್ಲಿ ಸಮಸ್ಯೆ ಎದುರಿಸುತ್ತಿರುವುದನ್ನು ಕಂಡು ಆಶ್ವರ್ಯವಾಗಿದೆ. ಕಿಕ್ಕಿರಿದ ರಸ್ತೆಗಳಲ್ಲಿ ಸಂಚರಿಸುವಾಗ ಸುರಕ್ಷತೆ ಮತ್ತು ಪರಸ್ಪರ ಗೌರವಕ್ಕೆ ಆದ್ಯತೆ ನೀಡುವಂತೆ ಚಾಲಕರಿಗೆ ಮನದಟ್ಟು ಮಾಡಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ರಸ್ತೆ ಸುರಕ್ಷತೆ ಮತ್ತು ಜವಾಬ್ದಾರಿಯುತ ಚಾಲನೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯಬೇಕಿದೆ ಎಂದು ಹೇಳಲಾಗಿದೆ.

Continue Reading
Advertisement
Team India
ಪ್ರಮುಖ ಸುದ್ದಿ16 mins ago

Team India : ಮುಂಬೈನಲ್ಲಿ ನಡೆದ ಭಾರತ ತಂಡದ ವಿಜಯೋತ್ಸವ ನೋಡಿದರೆ ರೋಮಾಂಚನ ಖಾತರಿ

Viral Video
ದೇಶ22 mins ago

10 ರೂ.ಗಾಗಿ ಎಲ್ಲರ ಮುಂದೆ ಪ್ಯಾಂಟ್‌ ಬಿಚ್ಚಿ, ಆಟೋ ಡ್ರೈವರ್‌ ಮೇಲೆ ಮಂಗಳಮುಖಿ ಹಲ್ಲೆ; Video ಇಲ್ಲಿದೆ

A lorry collided with a bike Two persons died on the spot
ಕರ್ನಾಟಕ33 mins ago

Road Accident: ಬೈಕ್‌ಗೆ ಲಾರಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು!

Drowned In Water A woman died while crossing the kalu sanka
ಕರ್ನಾಟಕ35 mins ago

Drowned In Water: ಕಾಲು ಸಂಕ ದಾಟುವಾಗ ನೀರಲ್ಲಿ ಕೊಚ್ಚಿ ಹೋದ ಮಹಿಳೆ!

Fans came from Japan to Hyderabad to watch Prabhas starrer Kalki 2898 AD
ಕರ್ನಾಟಕ38 mins ago

Kalki 2898 AD: “ಕಲ್ಕಿ 2898 ಎಡಿ” ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!

India's open-bus parade
ಪ್ರಮುಖ ಸುದ್ದಿ55 mins ago

India’s open-bus parade : ಮುಂಬೈನಲ್ಲಿ ನಡೆದ ಭಾರತ ಕ್ರಿಕೆಟ್​ ತಂಡದ ವಿಜಯೋತ್ಸವ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ

Dr Jitendra Singh
ದೇಶ1 hour ago

2025ರ ವೇಳೆಗೆ ಬಾಹ್ಯಾಕಾಶ, ಸಮುದ್ರದ ಆಳಕ್ಕೆ ಮಾನವ ಸಹಿತ ಮಿಷನ್;‌ ಕೇಂದ್ರ ಸಚಿವ ಮಹತ್ವದ ಘೋಷಣೆ

Rohit Sharma
ಕ್ರಿಕೆಟ್2 hours ago

Rohit Sharma : ವಾಂಖೆಡೆ ಸ್ಟೇಡಿಯಮ್​ನಲ್ಲಿ ಡಾನ್ಸ್ ಮಾಡಿದ ರೋಹಿತ್ ಶರ್ಮಾ

Mukesh Ambani
ದೇಶ2 hours ago

Mukesh Ambani: ಸೋನಿಯಾ ಗಾಂಧಿಯನ್ನು ಮಗನ ಮದುವೆಗೆ ಆಹ್ವಾನಿಸಿದ ಮುಕೇಶ್‌ ಅಂಬಾನಿ

India's open-bus parade
ಪ್ರಮುಖ ಸುದ್ದಿ3 hours ago

India’s open-bus parade : ಭಾರತ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ; ಬಸ್​​ನಲ್ಲಿದ್ದ ಆಟಗಾರರು ಜಸ್ಟ್​ ಮಿಸ್​​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ6 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ8 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ9 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ10 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ11 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ12 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ13 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

ಟ್ರೆಂಡಿಂಗ್‌