Site icon Vistara News

LIC Scheme vs Mutual Fund : ಎಲ್‌ಐಸಿ ಪಾಲಿಸಿ ಅಥವಾ ಮ್ಯೂಚುವಲ್‌ ಫಂಡ್, ಯಾವುದು ಉತ್ತಮ?

mutual fund

ಜೀವನದಲ್ಲಿ ಆರ್ಥಿಕ ಭದ್ರತೆಯ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಹಲವು ಆಯ್ಕೆಗಳು ಇವೆ. ಅವುಗಳಲ್ಲೊಂದು ಮ್ಯೂಚುವಲ್‌ ಫಂಡ್.‌ ಮ್ಯೂಚುವಲ್‌ ಫಂಡ್‌ಗಳಲ್ಲಿ ಹಲವಾರು ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಸ್ಟಾಕ್ಸ್‌, ಬಾಂಡ್‌ ಇತ್ಯಾದಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದಾಯವನ್ನು ಹಂಚಲಾಗುತ್ತದೆ. ದೀರ್ಘಾವಧಿಗೆ ಲಾಭದಾಯಕವಾಗುತ್ತದೆ. ಈ ಹೂಡಿಕೆಯನ್ನು ಎಸ್‌ಐಪಿ (systematic investment plan -SIP) ಹಾಗೂ ಲಂಪ್ಸಮ್‌ ಆಗಿ ಮಾಡಬಹುದು. ಮತ್ತೊಂದು ಕಡೆ ಭಾರತೀಯ ಜೀವ ವಿಮೆ ನಿಗಮ (LIC) ಪಾಲಿಸಿಗಳನ್ನೂ ಖರೀದಿಸಿ ಹೂಡಿಕೆ ಮಾಡಬಹುದು. ಈ ಎರಡು ಹೂಡಿಕೆಯ ಆಯ್ಕೆಗಳನ್ನು ನೋಡೋಣ.

ಎಲ್‌ಐಸಿ ಸ್ಕೀಮ್: ಎಲ್‌ಐಸಿ ಸರ್ಕಾರಿ ಬೆಂಬಲಿತ ಸಂಸ್ಥೆಯಾಗಿದ್ದು ಪಾಲಿಸಿದಾರರ ವಿಮೆ ಅಗತ್ಯವನ್ನು ನೀಡುತ್ತದೆ. ರಿಸ್ಕ್‌ ಕವರೇಜ್‌ ಹಾಗೂ ಹಣಕಾಸು ಭದ್ರತೆ ಇರುವ ಜೀವ ವಿಮೆ ಸ್ಕೀಮ್‌ಗಳನ್ನು ಎಲ್‌ಐಸಿ ನೀಡುತ್ತದೆ. ಪಾಲಿಸಿಯ ಅವಧಿಯಲ್ಲಿ ಒಂದು ವೇಳೆ ಪಾಲಿಸಿದಾರ ಮೃತಪಟ್ಟರೆ ನಾಮಿನಿಗೆ ವಿಮೆಯ ಪರಿಹಾರ ಸಿಗುತ್ತದೆ.

ಮ್ಯೂಚುವಲ್‌ ಫಂಡ್‌ ಸ್ಕೀಮ್:‌ ಮ್ಯೂಚುವಲ್‌ ಫಂಡ್‌ಗಳು ಮತ್ತೊಂದು ಜನಪ್ರಿಯ ಹೂಡಿಕೆಯ ಸಾಧನವಾಗಿದೆ. ಅವುಗಳನ್ನು ಎರಡು ಕೆಟಗರಿಗಳಲ್ಲಿ ವಿಭಜಿಸಬಹುದು. ಡೆಟ್‌ ಮತ್ತು ಈಕ್ವಿಟಿ ಮ್ಯೂಚುವಲ್‌ ಫಂಡ್ಸ್‌ ಎಂದು ಪರಿಗಣಿಸಬಹುದು. ಡೆಟ್‌ ಮ್ಯೂಚುವಲ್‌ ಫಂಡ್‌ಗಳು ಸರ್ಕಾರಿ ಸಾಲಪತ್ರ, ಮನಿ ಮಾರ್ಕೆಟ್‌ ಇನ್‌ಸ್ಟ್ರುಮೆಮಟ್‌ ಮತ್ತು ಬಾಂಡ್‌ಗಳಲ್ಲಿ ಹೂಡಿಕೆ ಮಾಡುತ್ತವೆ. ಈಕ್ವಿಟಿ ಮ್ಯೂಚುವಲ್‌ ಫಂಡಗಳು ಈಕ್ವಿಟಿ ಸಂಬಂಧಿತ ಇನ್‌ಸ್ಟ್ರುಮೆಂಟ್‌ಗಳಲ್ಲಿ ಹೂಡುತ್ತವೆ. 500 ರೂ. ಎಸ್‌ಐಒಇಯಿಂದಲೂ ಆರಂಭಿಸಬಹುದು. 100 ರೂ.ಗಳಿಂದಲೂ ಸಿಪ್‌ ಶುರು ಮಾಡಬಹುದು.

ಇದನ್ನೂ ಓದಿ:Mutual Fund SIP : ಮ್ಯೂಚುವಲ್‌ ಫಂಡ್‌ನಲ್ಲಿ ಪ್ರತಿಯೊಂದು ಸಿಪ್‌ ಕೂಡ ಅಷ್ಟೇ ಮುಖ್ಯ

ಎಲ್‌ ಐಸಿ vs ಮ್ಯೂಚುವಲ್‌ ಫಂಡ್‌ : ಪ್ರಮುಖ ವ್ಯತ್ಯಾಸಗಳು: ಎಲ್‌ ಐಸಿ ಪಾಲಿಸಿಗಳಿಗೆ ಸರ್ಕಾರದ ಬೆಂಬಲ ಇರುತ್ತದೆ. ಕಡಿಮೆ ರಿಸ್ಕ್.‌ ಡೆತ್‌ ಬೆನಿಫಿಟ್‌ ಸೇರಿ ಖಾತರಿಯ ಆಫರ್‌ ನೀಡುತ್ತದೆ. ಮ್ಯೂಚುವಲ್‌ ಫಂಡ್‌ ರಿಟರ್ನ್‌ ಮಾರುಕಟ್ಟೆಯ ಏರಿಳಿತವನ್ನು ಆಧರಿಸಿದೆ.

ರಿಟರ್ನ್ : ಎಲ್‌ಐಸಿಗೆ ಹೋಲಿಸಿದರೆ ದೀರ್ಘಾವಧಿಯಲ್ಲಿ ಮ್ಯೂಚುವಲ್‌ ಫಂಡ್‌ ಹೆಚ್ಚು ಆದಾಯ ನೀಡಿದೆ.

ಉದ್ದೇಶ: ಎಲ್‌ಐಸಿ ಸ್ಕೀಮ್‌ಗಳು ಹೂಡಿಕೆದಾರರಿಗೆ ಅವರ ಅವಲಂಬಿತರಿಗೆ ಸುಭದ್ರ ಆಥಿಕ ಭದ್ರತೆ ಒದಗಿಸಲು ಸಹಕಾರಿ. ಮ್ಯೂಚುವಲ್‌ ಫಂಡ್‌ಗಳು ದೀರ್ಘಕಾಲೀನವಾಗಿ ಸಂಪತ್ತಿನ ಸೃಷ್ಟಿಗೆ ಸಹಕಾರಿ. ಆರ್ಥಿಕ ಗುರಿ ಸಾಧನೆಗೆ ಪೂರಕ.

ತೆರಿಗೆ ಅನುಕೂಲ: 1961ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಪ್ರಕಾರ ಎಲ್‌ ಐಸಿ ಪ್ರೀಮಿಯಂನಲ್ಲಿ 1.5 ಲಕ್ಷ ರೂ. ತನಕದ ಮೊತ್ತಕ್ಕೆ ತೆರಿಗೆ ಇರುವುದಿಲ್ಲ. ಮ್ಯೂಚುವಲ್‌ ಫಂಡ್‌ ನಲ್ಲಿ ಈಕ್ವಿಟಿ ಲಿಂಕ್ಡ್‌ ಸೇವಿಂಗ್ಸ್‌ ಸ್ಕೀಮ್‌ (ELSS) ಮಾತ್ರ ಸೆಕ್ಷನ್‌ 80 ಸಿ ಅಡಿಯಲ್ಲಿ ಡಿಡಕ್ಷನ್‌ಗೆ ಅರ್ಹ.

ಎಲ್‌ ಐಸಿ vs ಮ್ಯೂಚುವಲ್‌ ಫಂಡ್ಸ್:‌ ಯಾವುದು ಸೂಕ್ತ? ನಿಮ್ಮ ಹೂಡಿಕೆಯ ಅಗತ್ಯ ಮತ್ತು ಉದ್ದೇಶ ಆಧರಿಸಿ ಆಯ್ಕೆ ಮಾಡಿಕೊಳ್ಳಿ. ದೀರ್ಘಾವಧಿಗೆ ಹಣ ಮಾಡಬೇಕು ಎಂಬುದು ಗುರಿಯಾಗಿದ್ದರೆ ಮ್ಯೂಚುವಲ್‌ ಫಂಡ್‌ ಸೂಕ್ತ. ಕುಟುಂಬದ ಭವಿಷ್ಯದ ಆರ್ಥಿಕ ಭದ್ರತೆಗಾಗಿ ವಿಮೆ ಸೂಕ್ತ.

Exit mobile version