Site icon Vistara News

Microsoft Layoffs | ಇಂದು 10 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಿದೆ ಮೈಕ್ರೋಸಾಫ್ಟ್!

Microsoft Layoffs

ನವದೆಹಲಿ: ಆರ್ಥಿಕ ಹಿಂಜರಿತದ ಭೀತಿಯ ಹಿನ್ನೆಲೆಯಲ್ಲಿ ದೈತ್ಯ ಟೆಕ್ ಕಂಪನಿಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಉದ್ಯೋಗಗಳನ್ನು ಕಡಿತ ಮಾಡುತ್ತಿವೆ. ಈ ಸಾಲಿಗೆ ಮೈಕ್ರೋಸಾಫ್ಟ್ (Microsoft Layoffs) ಕೂಡ ಸೇರ್ಪಡೆಯಾಗಿದೆ. ಕಂಪನಿಯು ಇಂದು(ಬುಧವಾರ) ಸುಮಾರು ಹತ್ತು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಿದೆ. ಈಗಾಗಲೇ ಮೆಟಾ, ಟ್ವಿಟರ್, ಅಮೆಜಾನ್, ಗೋಲ್ಡಮನ್ ಸಾಚ್ಸ್ ಸೇರಿದಂತೆ ಅನೇಕ ಕಂಪನಿಗಳು ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗಗಳನ್ನು ಕಡಿಮೆ ಮಾಡಿವೆ.

ಮೈಕ್ರೋಸಾಫ್ಟ್ ತನ್ನ ಮಾನವ ಸಂಪನ್ಮೂಲ ವಿಭಾಗ, ಎಂಜನಿಯರಿಂಗ್ ವಿಭಾಗಗಳಲ್ಲಿ ಸಾಕಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಮೈಕ್ರೋಸಾಫ್ಟ್‌ನಲ್ಲಿನ ಉದ್ಯೋಗಿಗಳ ವಜಾ ಬೆಳವಣಿಗೆ ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ಇತ್ತೀಚಿನ ಬೆಳವಣಿಗೆಯಾಗಿದೆ. ಅಮೆರಿಕದಲ್ಲಿ ಈಗಾಗಲೇ ಹಲವಾರು ಕಂಪನಿಗಳು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿವೆ.

ಭಾರತೀಯ ಮೂಲದ ಸತ್ಯಾ ನಾಡೆಳ್ಳಾ ನೇತೃತ್ವದ ಮೈಕ್ರೋಸಾಫ್ಟ್ ತನ್ನ ಒಟ್ಟು ಉದ್ಯೋಗಿಗಳ ಪೈಕಿ ಶೇ.5ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಯೋಜನೆ ಹಾಕಿಕೊಂಡಿದೆ. ಅಂದರೆ ಸುಮಾರು 11 ಸಾವಿರ ಉದ್ಯೋಗಿಗಳು ಕೆಲಸವನ್ನು ಕಳೆದುಕೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ವರ್ಷವು ಕಂಪನಿ ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿತ್ತು.

ಇದನ್ನೂ ಓದಿ | Xiaomi Job cuts | ಶೇ.15ರಷ್ಟು ಉದ್ಯೋಗ ಕಡಿತ ಮಾಡಿದ ಸ್ಮಾರ್ಟ್‌ಫೋನ್ ಕಂಪನಿ ಶವೊಮಿ?

Exit mobile version