ಐಟಿಆರ್ ಫೈಲ್ (ITR Filing) ಆದ ಮೇಲೆ, ಕೆಲವರುವ ಕೆಲವರು ರಿಫಂಡ್‌ಗಾಗಿ (ITR Refund) ಕಾಯುತ್ತಿರುತ್ತಾರೆ. ಈಗೆಲ್ಲ, ನಿರ್ದಿಷ್ಟ ದಿನಾಂಕದೊಳಗೇ ರಿಫಂಡ್ ಖಾತೆದಾರರಿಗೆ ಅಕೌಂಟ್‌ಗೆ (Bank Account) ಜಮಾ ಆಗುತ್ತದೆ. ಆದರೆ, ಕೆಲವೊಮ್ಮೆ ರಿಫಂಡ್ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಜಮಾ ಆಗದಿದ್ದರೆ, ನಿಮ್ಮ ಬ್ಯಾಂಕ್ ಖಾತೆಯನ್ನು ಮರುಮೌಲ್ಯಮಾಪನ (revalidation) ಮಾಡಬೇಕಾಗುತ್ತದೆ ಎನ್ನುತ್ತದೆ ಆದಾಯ ತೆರಿಗೆ ಇಲಾಖೆ(Income Tax Department). ಬಹಳಷ್ಟು ಸಂದರ್ಭದಲ್ಲಿ ನಾವು ಫೈಲಿಂಗ್ ಮಾಡುವ ಸಂದರ್ಭದಲ್ಲಿ ನಮ್ಮ ಬ್ಯಾಂಕ್ ಖಾತೆಯ ವಿವರವನ್ನು ಸರಿಯಾಗಿ ನಮೂದಿಸಿರುವುದಿಲ್ಲ. ಇಲ್ಲವೇ ನಮ್ಮ ಬ್ಯಾಂಕ್ ವ್ಯವಹಾರವು ಬದಲಾಗಿರುತ್ತದೆ. ಹಾಗಾಗಿ ನಿರ್ದಿಷ್ಟ ಸಮಯದಲ್ಲಿ ರಿಫಂಡ್ ಪಡೆಯಲು ನಮಗೆ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ವಿಶ್ಲೇಷಕರು(Money Guide).
ಒಂದು ವೇಳೆ ನಿಮ್ಮ ಬ್ಯಾಂಕ್ ಶಾಖೆ, ಬ್ಯಾಂಕ್ ಅಕೌಂಟ್ ನಂಬರ್, ಐಎಎಫ್‌ಎಸ್‌ಸಿ ಕೋಡ್ ಬದಲಾಗಿದ್ದರೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಆ ಕುರಿತು ಅಪ್‌ಡೇಟ್ ಮಾಡಬೇಕಾಗುತ್ತದೆ ಮತ್ತು ಆ ಖಾತೆಯನ್ನು ಮರುಮೌಲ್ಯಮಾಪನ ಮಾಡಬೇಕಾಗುತ್ತದೆ. ಮರುಪಾವತಿಗಾಗಿ ಸರಿಯಾಗಿ ನಾಮನಿರ್ದೇಶನಗೊಂಡ ಮೌಲ್ಯೀಕರಿಸಿದ ಬ್ಯಾಂಕ್ ಖಾತೆಯು ಮರುಪಾವತಿಗಾಗಿ ಅಗತ್ಯವಾಗಿರುತ್ತದೆ.
ಯಾವಾಗ ತೊಂದರೆ ಎದುರಾಗುತ್ತದೆ?
ಒಂದು ಬ್ಯಾಂಕ್ ಇನ್ನೊಂದು ಬ್ಯಾಂಕ್ ಜತೆ ವಿಲೀನವಾದಾಗ, ನಿಮ್ಮ ಬ್ಯಾಂಕ್ ಬ್ರ್ಯಾಂಚ್ ಬದಲಾದಾಗ, ಬ್ಯಾಂಕ್ ಖಾತೆ ಬದಲಾದಾಗ, ಬ್ಯಾಂಕ್ ಖಾತೆಯಲ್ಲಿ ಹೆಸರಿನಲ್ಲಿ ವ್ಯತ್ಯಾಸವಾದಾಗ, ಖಾತೆ ಮುಕ್ತಾಯಗೊಂಡಾಗ ಇಲ್ಲವೇ ನಿಷ್ಕ್ರಿಯವಾದಾಗ ಮತ್ತು ಐಎಫ್ಎಸ್‌ಸಿ ಕೋಡ್ ಬದಲಾದ ರಿಫಂಡ್ ಸಮಸ್ಯೆ ಎದುರಾಗುತ್ತದೆ.
ಬ್ಯಾಂಕ್ ಖಾತೆ ಮಾಹಿತಿ ಅಪ್‌ಡೇಟ್/ಮರುಮೌಲ್ಯೀಕರಿಸುವುದು ಹೇಗೆ?
ಮೊದಲಿಗೆ https://eportal.incometax.gov.in ವೆಬ್‌ಸೈಟ್‌ಗೆ ಲಾಗಿನ್ ಆಗಿ. ಪ್ರೊಫೈಲ್‌ನಲ್ಲಿ My bank accounts ಮೇಲೆ ಹಾಗೂ ಅಲ್ಲಿರುವ ಲಂಬವಾಗಿ ಕಾಣುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ. ಬಳಿಕ Revalidate ಆಯ್ಕೆ ಮಾಡಿ ಮತ್ತು ಡಿಟೇಲ್ಸ್ ಅಪ್‌ಡೇಟ್ ಮಾಡಲು ಅಗತ್ಯವಿರುವ ಎಲ್ಲ ಮಾಹಿತಿಯನ್ನು ನಮೂದಿಸಿ. ಬಳಿಕ Validate ಬಟನ್ ಮೇಲೆ ಕ್ಲಿಕ್ ಮಾಡಿ.
ಹೊಸ ಬ್ಯಾಂಕ್ ಖಾತೆಯನ್ನು ಸೇರಿಸುವುದು ಹೇಗೆ?
ಒಂದೊಮ್ಮೆ ಹೊಸದಾಗಿ ನೀವು ಬ್ಯಾಂಕ್ ಖಾತೆಯನ್ನು ಸೇರಿಸುವುದಾಗಿದ್ದರೆ ಆನ್‌ಲೈನ್ ಮೂಲಕವೇ ಈ ಕೆಲಸವನ್ನು ಮಾಡಬಹುದಾಗಿದೆ. ಅದಕ್ಕಾಗಿ ಈ ಸ್ಟೆಪ್ಸ್ ಫಾಲೋ ಮಾಡಿ.
ಮೊದಲಿಗೆ https://eportal.incometax.gov.in ಜಾಲತಾಣಕ್ಕೆ ಲಾಗಿನ್ ಆಗಿ. ಪ್ರೊಫೈಲ್ ವಿಭಾಗದಲ್ಲಿ My bank Accounts ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ Add bank account ಆಪ್ಷನ್ ಮೇಲೆ ಕ್ಲಿಕ್ ಮಾಡಿ ಬಳಿಕ ಅಗತ್ಯವಿರುವ ಎಲ್ಲ ಮಾಹಿತಿಯನ್ನು ನಮೂದಿಸಿ. ಈ ಪ್ರಕ್ರಿಯೆ ಪೂರ್ತಿಯಾದ ಬಳಿಕ Validate ಬಟನ್ ಮೇಲೆ ಕ್ಲಿಕ್ ಮಾಡಿ.
ಸ್ಟೇಟಸ್ ಚೆಕ್ ಮಾಡ್ತಾ ಇರಿ…
ಆನ್‌ಲೈನ್‌ನಲ್ಲಿ ಈ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಕೆಲವು ಸಮಯದ ಬಳಿಕ ಸ್ಟೇಟಸ್ ಚೆಕ್ ಮಾಡಿ. ಆಗ ನಿಮ್ಮ ಬ್ಯಾಂಕ್ ಖಾತೆಯ ಮರುಮೌಲ್ಯಮಾಪನ ಪೂರ್ಣಗೊಂಡಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗುತ್ತದೆ. ಬ್ಯಾಂಕ್ ಖಾತೆಯು ಮೌಲ್ಯೀಕರಿಸಿದ ಕ್ರಿಯೆ ಪೂರ್ಣಗೊಂಡಿದ್ದರೆ, ‘ರಿಫಂಡ್‌ಗೆ ನಾಮನಿರ್ದೇಶನ’ ಆಯ್ಕೆಯನ್ನು ಸಕ್ರಿಯಗೊಳಿಸುವ ಮೂಲಕ ಮರುಪಾವತಿಗಾಗಿ ಅದನ್ನು ನಾಮನಿರ್ದೇಶನ ಮಾಡಲು ಮರೆಯಬೇಡಿ.
ಈ ಸುದ್ದಿಯನ್ನೂ ಓದಿ: ವಿಸ್ತಾರ Money Guide : ಹಿರಿಯ ನಾಗರಿಕರು ಬಡ್ಡಿ ಆದಾಯಕ್ಕೆ ತೆರಿಗೆ ಡಿಡಕ್ಷನ್ ಕ್ಲೇಮ್ ಮಾಡುವುದು ಹೇಗೆ?
ಒಂದೊಮ್ಮೆ ಬ್ಯಾಂಕ್ ಖಾತೆ ಮೌಲ್ಯೀಕರಣಗೊಳಿಸುವ ಪ್ರಕ್ರಿಯೆ ವಿಫಲವಾದರೆ, ವೆಬ್‌ಸೈಟ್ ಹೋಗಿ ಮತ್ತು ಅಲ್ಲಿ ಸ್ಕ್ರೀನ್ ಮೇಲೆ ಕಾಣುವ ಮೈ ಬ್ಯಾಂಕ್ ಅಕೌಂಟ್ಸ್‌ನ ಮೂರು ಚುಕ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಡಿಲಿಟ್ ಮಾಡಬಹುದು. ಆದರೆ, ಒಂದು ಸಂಗತಿಯನ್ನು ನೀವು ಗಮನಿಸಬೇಕು. ಪ್ಯಾನ್ ಜತೆ ಲಿಂಕ್ ಆದ ಬ್ಯಾಂಕ್ ಖಾತೆ ಮಾತ್ರವೇ ಮೌಲ್ಯೀಕರಿಸಲು ಸಾಧ್ಯವಾಗುತ್ತದೆ. ಒಂದೊಮ್ಮ ಪ್ಯಾನ್ ಜತೆ ಲಿಂಕ್ ಆಗದಿದ್ದರೆ ರಿಫಂಡ್ ಮಾಡಲು ಸಾಧ್ಯವಾಗುವದಿಲ್ಲ ಎಂದು ಸಂಗತಿಯನ್ನು ಗಮನಿಸಬೇಕು.