Site icon Vistara News

Money Guide : ಹಣಕ್ಕಾಗಿ ಕೆಲಸ ಮಾಡದವರು ಶ್ರೀಮಂತರಾಗುವುದು ಹೇಗೆ?

notes new

notes new

ರಿಚ್‌ ಡ್ಯಾಡ್‌ ಪೂರ್‌ ಡ್ಯಾಡ್‌ ಕೃತಿಯ ಲೇಖಕ, ಹೆಸರಾಂತ ( Money Guide ) ಹಣಕಾಸು ತಜ್ಞ ರಾಬರ್ಟ್‌ ಕಿಯೊಸಾಕಿ ಹೀಗೆನ್ನುತ್ತಾರೆ- ಶ್ರೀಮಂತರು ಹಣಕ್ಕಾಗಿ ಕೆಲಸ ಮಾಡುವುದಿಲ್ಲ ( The rich do not work for money ) ಬಹುತೇಕ ಮಂದಿ ಹಣಕ್ಕಾಗಿ ಕೆಲಸ ಮಾಡುತ್ತಾರೆ. ಏಕೆಂದರೆ ತೆರಿಗೆಗಳು, ಹಣದುಬ್ಬರದ ಪರಿಣಾಮ ಹಣದ ಮೌಲ್ಯ ಕಳೆದು ಹೋಗುತ್ತದೆ. ಹೀಗಾಗಿ ಶ್ರೀಮಂತರು ಆಸ್ತಿಗಳನ್ನು ಖರೀದಿಸುತ್ತಾರೆ. ಆ ಮೂಲಕ ಸಂಪತ್ತು ಸೃಷ್ಟಿಸುತ್ತಾರೆ. ಬಡವರು ಮತ್ತು ಮಧ್ಯಮ ವರ್ಗದ ಜನರು ಉದ್ಯೋಗಿಗಳಾಗಿ ದುಡಿಯುತ್ತಾರೆ. ನಕಲಿ ಡಾಲರ್‌ ಆದಾಯ ಪಡೆಯುತ್ತಾರೆ. ನಕಲಿ ಡಾಲರ್‌ ಉಳಿತಾಯ ಮಾಡುತ್ತಾರೆ. ಅವುಗಳನ್ನು ಷೇರುಗಳಲ್ಲಿ ಮತ್ತು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಮಾರುಕಟ್ಟೆ ಪತನವಾದಾಗ ಅವುಗಳ ಮೌಲ್ಯಗಳೂ ಕುಸಿಯುತ್ತದೆ. ಆದ್ದರಿಂದ ಶ್ರೀಮಂತರು ಇಂಥ ಫೇಕ್‌ ಪೇಪರ್‌ ಅಸೆಟ್‌ಗಳನ್ನು ನಂಬುವುದಿಲ್ಲ (Fake paper assets) ಅವರು ತೆರಿಗೆ ರಹಿತ ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಬಯಸುತ್ತಾರೆ. ಚಿನ್ನ, ಬೆಳ್ಳಿ ಇತ್ಯದಿ ಹಣದುಬ್ಬರದ ಎದುರು ಸಂಪತ್ತನ್ನು ರಕ್ಷಿಸುವ ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಕ್ಯಾಶ್‌ ಫ್ಲೋ ಇರುವಂಥ ರೆಂಟಲ್‌ ಪ್ರಾಪರ್ಟಿಗಳು, ತೈಲ, ಆಹಾರೋತ್ಪಾದನೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ.

ಆದಾಯದ ಅಸಮತೋಲನ 1929ರಿಂದೀಚೆಗೆ ಕಂಡು ಕೇಳರಿಯದಷ್ಟು ತೀವ್ರವಾಗಿದೆ. 1950 ರಲ್ಲಿ ಉತ್ಪಾದನೆಯ ಹೆಚ್ಚಳದ ಪರಿಣಾಮ ಲಭಿಸುವ ಆದಾಯವು ಕಾರ್ಮಿಕರ ಜೇಬಿಗೂ ಹೋಗುತ್ತಿತ್ತು. ಆದರೆ ಈಗ ಬಹುತೇಕ ಇಡೀ ಮೊತ್ತವು ಬಿಸಿನೆಸ್‌ ಮಾಲೀಕರು ಮತ್ತು ಹೂಡಿಕೆದಾರರ ಬಳಿಯೇ ಉಳಿದುಕೊಳ್ಳುತ್ತಿದೆ ಎನ್ನುತ್ತಾರೆ ರೈಸ್‌ ಆಫ್‌ ದಿ ರೊಬಾಟ್ಸ್‌ ಕೃತಿಯ ಲೇಖಕ ಮಾರ್ಟಿನ್‌ ಫೋರ್ಡ್.‌

ಶ್ರೀಮಂತ ಉದ್ಯಮಿಗಳು ಏಕೆ ಮತ್ತಷ್ಟು ಶ್ರೀಮಂತರಾಗುತ್ತಾರೆ? ರಾಬರ್ಟ್‌ ಕಿಯೊಸಾಕಿ ಈ ಪ್ರಶ್ನೆಗೆ ಹೀಗೆ ಉತ್ತರಿಸುತ್ತಾರೆ- ಶ್ರೀಮಂತ ಉದ್ಯಮಿಗಳು ಹಣಕಾಸು ವಿಚಾರದಲ್ಲಿ ಹೆಚ್ಚು ಬುದ್ಧಿವಂತಿಕೆ ತೋರಿಸುತ್ತಾರೆ. ಅವರ ಫೈನಾನ್ಷಿಯಲ್‌ ಐಕ್ಯೂ ಇತರರಿಗೆ ಹೋಲಿಸಿದರೆ ಹೆಚ್ಚು ಇರುತ್ತದೆ. ಬಹುತೇಕ ಮಂದಿ ಸಾಲವನ್ನು ಉತ್ತರದಾಯಿತ್ವ ಅಥವಾ ಲಾಯಬಿಲಿಟಿಯಾಗಿ ಹೊಂದಿದ್ದರೆ, ಶ್ರೀಮಂತರು ಸಾಲವನ್ನು ಬಳಸಿಕೊಂಡು ಆಸ್ತಿಗಳನ್ನು ಖರೀದಿಸುತ್ತಾರೆ. ತೆರಿಗೆಯನ್ನು ಹೇಗೆ ಉಪಯೋಗಿಸಬೇಕು ಎಂಬ ಜಾಣ್ಮೆ ಅವರಲ್ಲಿ ಇರುತ್ತದೆ. ತಮಗಾಗಿ ಆಸ್ತಿಯನ್ನು ಖರೀದಿಸಲು ಅವರು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾರೆ.

ಹಲವಾರು ಮಂದಿ ಮಿಲಿಯನೇರ್‌ ಆಗಲು ಬಯಸುತ್ತಾರೆ. ಆದರೆ ಎಲ್ಲ ಮಿಲಿಯನೇರ್‌ಗಳೂ ಸಮಾನರಲ್ಲ. ಕೆಲವು ಮಿಲಿಯನೇರ್‌ಗಳು ಇತರರಿಗಿಂತ ಹೆಚ್ಚು ಶ್ರೀಮಂತರಾಗಿರುತ್ತಾರೆ. ಆದ್ದರಿಂದ ಭಿನ್ನ ರೀತಿಯ ಮಿಲಿಯನೇರ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು. ಇದರಿಂದ ಅವರು ಹೇಗೆ ಶ್ರೀಮಂತರಾದರು ಎಂಬುದು ಗೊತ್ತಾಗುತ್ತದೆ. ನೀವು ಮಿಲಿಯನ್‌ ಡಾಲರ್‌ ವೇತನ ಇರುವ ಮಿಲಿಯನೇರ್‌ ಆಗ್ತೀರಾ? ಇದರ ಸಮಸ್ಯೆ ಏನೆಂದರೆ ಮಿಲಿಯನ್‌ ಡಾಲರ್‌ ಸಂಬಳದಲ್ಲಿ 40% ತೆರಿಗೆ ರೂಪದಲ್ಲಿ ಸರ್ಕಾರಕ್ಕೇ ಹೋಗುತ್ತದೆ. ನೀವು ನಿವ್ವಳ ಆಸ್ತಿಯಲ್ಲಿ ಮಿಲಿಯನೇರ್‌ ಆಗಬೇಕಾ? ಹಾಗಾದರೆ ನಿಮ್ಮ ಮನೆ, ಕಾರು, ಉಳಿತಾಯ, ಪಿಂಚಣಿ ಎಲ್ಲವನ್ನೂ ಲೆಕ್ಕ ಹಾಕಬೇಕು. ಅನೇಕ ಮಿಲಿಯನೇರ್‌ಗಳ ನಿವ್ವಳ ಸಂಪತ್ತು ಕಡಿಮೆಯಾಗಿರುತ್ತದೆ.

ಇದನ್ನೂ ಓದಿ: Money Guide: ಹೋಮ್‌ಲೋನ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ

ನೀವು ಕ್ಯಾಪಿಟಲ್‌ ಗೇನ್ಸ್‌ ಮಿಲಿಯನೇರ್‌ ಆಗಬೇಕಾ? ಅಂದರೆ ನಿಮ್ಮ ಆಸ್ತಿಗಳನ್ನು ಮಿಲಿಯನ್‌ ಡಾಲರ್‌ ಕ್ಯಾಪಿಟಲ್‌ ಗೇನ್ಸ್‌ನೊಂದಿಗೆ ಮಾರಾಟ ಮಾಡಬೇಕು. ಆದರೆ ಕ್ಯಾಪಿಟಲ್‌ ಗೇನ್ಸ್‌ಗೆ ತೆರಿಗೆಯೂ ಇರುತ್ತದೆ. ಆದರೆ ಇದಕ್ಕೆ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ ಕೂಡ ಇರುತ್ತದೆ. ನೀವು ಕ್ಯಾಶ್‌ ಫ್ಲೋ ಮಿಲಿಯನೇರ್‌ ಆಗಲು ಬಯಸುತ್ತೀರಾ? ಈ ಮಿಲಿಯನೇರ್‌ಗಳಿಗೆ ಲಕ್ಷಾಂತರ ಡಾಲರ್‌ ಕ್ಯಾಶ್‌ ಫ್ಲೋ ಆಗಿ ಬರುತ್ತದೆ. ಅವರು ತಮ್ಮ ತೆರಿಗೆ ಮತ್ತು ಭವಿಷ್ಯದ ಬಗ್ಗೆ ಬಹುತೇಕ ನಿಯಂತ್ರಣವನ್ನು ಪಡೆದಿರುತ್ತಾರೆ.

Exit mobile version