Site icon Vistara News

Money Guide : ಸುಲಭವಾಗಿ ನಿಮ್ಮ ಆದಾಯ ಹೆಚ್ಚಿಸಿಕೊಳ್ಳೋದು ಹೇಗೆ?

note

ಆದಾಯದ ಮೂಲಗಳನ್ನು ಹೆಚ್ಚಿಸುವುದು ಹೇಗೆ? ಇಲ್ಲೊಂದು ಉದಾಹರಣೆ ಇದೆ. ಒಬ್ಬ ವ್ಯಕ್ತಿ ವೈದ್ಯರಾಗಿದ್ದು ಯಾವುದೋ ಒಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಅದಕ್ಕೆ ಸಂಬಳ ಸಿಗುತ್ತದೆ. (Money Guide) ಸಂಜೆ ಒಂದು ಕ್ಲಿನಿಕ್‌ ಅನ್ನು ನಡೆಸುತ್ತಿರಬಹುದು. ಅಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಪ್ರತಿಯಾಗಿ ಆದಾಯ ಪಡೆಯಬಹುದು. ಮೂರನೆಯದಾಗಿ ಅವರು ಉತ್ತಮ ವಾಗ್ಮಿಯೂ ಆಗಿದ್ದರೆ ಯೂಟ್ಯೂಬ್‌ ಚಾನೆಲ್‌ ಮಾಡಿ ಹಣ ಗಳಿಸಬಹುದು. ಈ ರೀತಿ ಗಳಿಸಿದ್ದನ್ನು ಮ್ಯೂಚುವಲ್‌ ಫಂಡ್‌ ಇತ್ಯಾದಿಗಳಲ್ಲಿ ಹೂಡಬಹುದು. ಅದು ಮತ್ತೊಂದು ಆದಾಯ. ಅಥವಾ ಹೊಸ ಪುಸ್ತಕ ಬರೆದು ಅದರ ಮೂಲಕವೂ ಆದಾಯ ಗಳಿಸಬಹುದು. ಯಾವುದಾದರೂ ಕಾಲೇಜಿಗೆ ಹೋಗಿ ಪಾಠ ಮಾಡಬಹುದು.

ಒಬ್ಬರು ಮೇಸ್ಟ್ರು ಬಹಳ ಚೆನ್ನಾಗಿ ಪಾಠ ಮಾಡುತ್ತಾರೆ ಎಂದಿಟ್ಟುಕೊಳ್ಳಿ. ಅವರಿಗೆ ಸಂಬಳ ಬರುತ್ತದೆ. ಅವರು ಉಳಿದ ಸಮಯದಲ್ಲಿ ಟ್ಯೂಷನ್‌ ಕ್ಲಾಸ್‌ ಮಾಡಬಹುದು. ಯೂಟ್ಯೂಬ್‌ ಚಾನೆಲ್‌ ಮಾಡಬಹುದು. ಹೀಗೆ ಬೇರೆ ಬೇರೆ ಆದಾಯ ಮೂಲಗಳನ್ನು ಸೃಷ್ಟಿಸಬೇಕು. ಇದಕ್ಕಾಗಿ ವ್ಯಕ್ತಿ ನಿರ್ದಿಷ್ಟ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿರಬೇಕು.

ವೈದ್ಯರಾಗಿದ್ದೀರಾ, ವೈದ್ಯಕೀಯದಲ್ಲಿ ಉತ್ತಮ ಹೆಸರು ಮಾಡಿರಬೇಕು. ಜರ್ನಲಿಸ್ಟ್‌ ಆಗಿದ್ದೀರಾ, ಒಳ್ಳೆಯ ಪತ್ರಕರ್ತ ಆಗಿರಬೇಕು. ವಕೀಲರಾಗಿದ್ದೀರಾ, ಒಳ್ಳೆಯ ವಕೀಲರಾಗಬೇಕು. ಐಎಎಸ್‌ ಅಧಿಕಾರಿಯಾಗಿದ್ದೀರಾ, ಒಳ್ಳೆಯ ಹೆಸರು ಎನ್ನುವುದು ಮೂಲ ಅಗತ್ಯ. ಇದನ್ನು ನಾವು ಕ್ರಿಯೇಟ್‌ ಮಾಡುವುದಲ್ಲ. ಸ್ವಾಭಾವಿಕವಾಗಿ ಇರುವುದನ್ನು ಬೆಳೆಸಬೇಕು. ಆಗ ಜನ ಅದನ್ನು ಒಪ್ಪುತ್ತಾರೆ. ಇದರಿಂದ ಒಂದು ವೃತ್ತಿಯಲ್ಲಿಯೇ ಹಲವು ಆದಾಯ ಮೂಲಗಳನ್ನು ಕಂಡುಕೊಳ್ಳಬಹುದು.

ಹೆಚ್ಚಿ ಓದು-ಬರಹ ಇಲ್ಲದಿದ್ದರೂ ಹಲವು ಆದಾಯ ಮೂಲಗಳನ್ನು ಕ್ರಿಯೇಟ್‌ ಮಾಡಬಹುದು. ನಿಮ್ಮ ಸಮಯವನ್ನು ಸರಿಯಾಗಿ ಬಳಸಬೇಕು. ಬೆಳಗ್ಗೆ ಚೆನ್ನಾಗಿ ಅಂಗಡಿ ನಡೆಸುತ್ತಿದ್ದರೆ ಸಂಜೆ ಚುರುಮುರಿ, ಬಜ್ಜಿ ಮಾರಾಟ ಮಾಡಬಹುದು. ಕೆಲಸದಲ್ಲಿ ಮೇಲು-ಕೀಳು ಅಂತ ನೋಡಬಾರದು. ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚು ಜನರಿದ್ದಾರೆ. ನೀರಿನ ಸಂಪ್‌ ಕ್ಲೀನ್‌ ಮಾಡುವ ಮೂಲಕವೂ ಆದಾಯ ಗಳಿಸಬಹುದು. ನಮ್ಮ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಮೂಲಕ ಹೊಸ ಆದಾಯ ಮೂಲ ಮಾಡಬಹುದು.

Exit mobile version