ಬೆಂಗಳೂರಿನ ನಿವಾಸಿ ಶ್ರೀನಿವಾಸ್ ಅವರಿಗೆ (ಹೆಸರು ಬದಲಿಸಿದೆ) ಈಗ 52 ವರ್ಷ ವಯಸ್ಸು. ಅವರು ತಮ್ಮಲ್ಲಿರುವ 5 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಲು ಬಯಸಿದ್ದಾರೆ. ( Money Guide ) ಅವರಿಗೆ ಎರಡು ಮನೆ ಇದೆ. ಅದಕ್ಕಾಗಿ ತಿಂಗಳಿಗೆ 1.30 ಲಕ್ಷ ರೂ. ಇಎಂಐ ಕಟ್ಟುತ್ತಿದ್ದಾರೆ. ಒಂದು ಮನೆ ಅವರ ಹೆಸರಿನಲ್ಲಿದ್ದರೆ, ಮತ್ತೊಂದು ಅವರ ಮಡದಿಯ ಹೆಸರಿನಲ್ಲಿದೆ. ಮಗ ಕಾಲೇಜಿನಲ್ಲಿ ದ್ವಿತೀಯ ವರ್ಷದ ಶಿಕ್ಷಣ ಪಡೆಯುತ್ತಿದ್ದಾನೆ. ಅವರ ವಾರ್ಷಿಕ ಸಿಟಿಸಿ 1.5 ಕೋಟಿ ರೂ. ಶ್ರೀನಿವಾಸ್ ಅವರಿಗೆ ನಿವೃತ್ತಿಯ ಜೀವನಕ್ಕೂ ದುಡ್ಡು ಬೇಕು. ಆದ್ದರಿಂದ ಎರಡೂ ಮನೆಗಳನ್ನು ಎರಡು ಕೋಟಿ ರೂ.ಗೆ ಮಾರಿ, ಎಲ್‌ಟಿಸಿಜಿ (ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ) ತೆರಿಗೆ ಉಳಿತಾಯ ಸೌಲಭ್ಯಕ್ಕಾಗಿ 5 ಕೋಟಿ ರೂ. ಮೌಲ್ಯದ ಮತ್ತೊಂದು ಮನೆಯನ್ನು ಖರೀದಿಸಬೇಕೆ? ತೆರಿಗೆ ಕಟ್ಟಿ ಇಎಂಐ ಮುಂದುವರಿಸುವುದು ಒಳ್ಳೆಯದೇ. ಷೇರುಗಳನ್ನು ಮಾರಿ ಎಫ್ ಡಿ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಇನ್ವೆಸ್ಟ್ ಮಾಡುವುದು ಒಳ್ಳೆಯದೇ?
ಈ ಪ್ರಶ್ನೆಗೆ ಬ್ಯಾಂಕಿಂಗ್ ತಜ್ಞರು ನೀಡಿದ ಉತ್ತರ ಹೀಗಿದೆ- ಶ್ರೀನಿವಾಸ್ ಅವರು ಯಾವ ಆಯ್ಕೆ ಮಾಡಿದರೂ,
ತೆರಿಗೆ ತಪ್ಪಿದ್ದಲ್ಲ. ಎರಡು ಮನೆ ಮಾರಿ ಬಂದ ಹಣದಲ್ಲಿ ಮತ್ತೊಂದು ದೊಡ್ಡ ಮನೆ ಖರೀದಿಸಿದರೆ, ಷೇರುಗಳ ಮಾರಾಟದಿಂದ ಬರುವ ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಉಳಿಸಲು ಅನುಕೂಲವಾದೀತು. ಆದರೆ ಎರಡು ಮನೆಗಳ ಮಾರಾಟದಿಂದ ಗಳಿಸಿದ ಆದಾಯಕ್ಕೆ ಕ್ಯಾಪಿಟಲ್ ಗೇನ್ಸ್ ತೆರಿಗೆ ಬರುತ್ತದೆ. ಸಾಮಾನ್ಯವಾಗಿ ಭಿನ್ನ ಆಸ್ತಿಗಳಿಗೆ ಸಂಬಂಧಿಸಿದ ಕ್ಯಾಪಿಟಲ್ ಗೇನ್ಸ್ ಅನ್ನು ಪ್ರತ್ಯೇಕವಾಗಿಯೇ ನೋಡಲಾಗುತ್ತದೆ. ಒಟ್ಟುಗೂಡಿಸಲು ಸಾಧ್ಯವಾಗುವುದಿಲ್ಲ. ಎರಡನೇ ಆಯ್ಕೆ ನೇರವಾಗಿದೆ. ಹೀಗಿದ್ದರೂ, ನಿಮ್ಮ ತೆರಿಗೆಗೆ ಅರ್ಹ ಆದಾಯಗಳನ್ನು ಗಮನಿಸಬೇಕಾಗುತ್ತದೆ. ಆದ್ದರಿಂದ ತೆರಿಗೆ ತಜ್ಞರನ್ನು ಭೇಟಿಯಾಗಿ ನಿರ್ಧರಿಸಿ. ನಿಮ್ಮ ಈಗಿನ ಆದಾಯದ 25 ಪಟ್ಟು ಮೊತ್ತದ ರಿಟೈರ್ ಮೆಂಟ್ ಕಾರ್ಪಸ್ ಇರುವುದು ಮುಖ್ಯ. ನಿಮ್ಮ ಲೈಫ್ ಸ್ಟೈಲ್ ಅನ್ನು ತಗ್ಗಿಸಬೇಡಿ. ನಿಮ್ಮ ನಿವೃತ್ತಿಯ ಪ್ಲಾನಿಂಗ್ ಅನ್ನು ಹಣಕಾಸು ಗುರಿಯ ಜತೆಗೆ ಮಿಕ್ಸ್ ಮಾಡದಿರಿ.
ಇದನ್ನೂ ಓದಿ: New Year 2024: ಹೊಸ ವರ್ಷದಲ್ಲಿ ಹಣ ಉಳಿತಾಯ ಮಾಡಬೇಕೆ? ಈ ಟಿಪ್ಸ್ ಫಾಲೋ ಮಾಡಿ
ಚೆನ್ನೈನಲ್ಲಿ ಅಮಿತ್ ಮಾಹೇಶ್ವರಿ ಎಂಬುವರು 2,400 ಚದರ ಅಡಿ ವಿಸ್ತೀರ್ಣದ ಭೂಮಿ ಮತ್ತು ಮನೆಯನ್ನು ಹೊಂದಿದ್ದಾರೆ. ಅವರು ಮನೆಯನ್ನು ಮಗಳಿಗೆ ಮತ್ತು ಮಗನಿಗೆ ಭೂಮಿಯನ್ನು ವರ್ಗಾವಣೆ ಮಾಡಲು ಬಯಸಿದ್ದಾರೆ. ಅವರು ಎರಡು ವರ್ಷಗಳ ಬಳಿಕ ಪ್ರಾಪರ್ಟಿಗಳನ್ನು ಮಾರಲು ಬಯಸಿದರೆ ಅವರಿಗೆ ಎಷ್ಟು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಬರುತ್ತದೆ?
ಈ ಪ್ರಶ್ನೆಗೆ ತಜ್ಞರು ಕೊಟ್ಟಿರುವ ಉತ್ತರ ಹೀಗಿದೆ- ಈ ಪ್ರಕರಣದಲ್ಲಿ ನಿಮ್ಮ ಮಗಳು ಮತ್ತು ಪುತ್ರ ಪ್ರಾಪರ್ಟಿಯನ್ನು ಮಾರಾಟ ಮಾಡಿದರೆ, 20% ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಬರುತ್ತದೆ. ಜತೆಗೆ ಸರ್ ಚಾರ್ಜ್, ಸೆಸ್ ಅನ್ವಯವಾಗುತ್ತದೆ.