ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಡಿಸ್ಕೌಂಟ್ ಬ್ರೋಕರ್‌ಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. (Money Guide) ಡಿಸ್ಕೌಂಟ್ ಬ್ರೋಕರೇಜ್ ಸಂಸ್ಥೆಗಳೂ ಜನಪ್ರಿಯವಾಗುತ್ತಿವೆ. ಏಕೆಂದರೆ ಮ್ಯೂಚುವಲ್ ಫಂಡ್, ಸ್ಟಾಕ್ಸ್, ಇಟಿಎಫ್, ಬಾಂಡ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. (Discount broker) ಹಾಗಾದರೆ ಏನಿದು ಡಿಸ್ಕೌಂಟ್ ಬ್ರೋಕರ್?
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಎರಡು ವಿಧದ ಬ್ರೋಕರ್ ಸಂಸ್ಥೆಗಳು ಸಿಗುತ್ತವೆ. ಒಂದು ಫುಲ್-ಸರ್ವೀಸ್ ಬ್ರೋಕರ್. ಮತ್ತೊಂದು ಡಿಸ್ಕೌಂಟ್ ಬ್ರೋಕರ್. ಫುಲ್ ಸರ್ವೀಸ್ ಬ್ರೋಕರ್ ಸಂಸ್ಥೆಗಳು ಕಸ್ಟಮೈಸ್ಡ್ ಸೇವೆ ಒದಗಿಸುತ್ತವೆ. ಇಲ್ಲೂ ಮ್ಯೂಚುವಲ್ ಫಂಡ್, ಐಪಿಒ, ಡೆಟ್, ವಿಮೆ ಮತ್ತು ಸಾಲದ ಸೇವೆ ಸಿಗುತ್ತದೆ.
ಹೆಸರೇ ಸೂಚಿಸುವಂತೆ ಡಿಸ್ಕೌಂಟ್ ಬ್ರೋಕರ್‌ಗಳು ಕಡಿಮೆ ಖರ್ಚಿನಲ್ಲಿ ಟ್ರೇಡಿಂಗ್ ಸೌಲಭ್ಯ ಒದಗಿಸುತ್ತವೆ. ಆನ್ ಲೈನ್ ಅಕೌಂಟ್ ಮ್ಯಾನೇಜ್ ಮೆಂಟ್, ರಿಸರ್ಚ್ ಟೂಲ್ಸ್ ಮತ್ತು ಎಜುಕೇಶನಲ್ ರಿಸೋರ್ಸ್ ಅನ್ನು ಒದಗಿಸುತ್ತವೆ. ಹೂಡಿಕೆದಾರರಿಗೆ ಇದು ಲಾಭದಾಯಕವಾಗಿದೆ. ಸ್ಟ್ಯಾಂಡರ್ಡ್ ಫುಲ್ ಸರ್ವೀಸ್ ಬ್ರೋಕರ್‌ಗಳಿಗೆ ಹೋಲಿಸಿದರೆ ಡಿಸ್ಕೌಂಟ್ ಬ್ರೋಕರ್ ಎಂದರೆ ಅಗ್ಗದ ವೆಚ್ಚದಲ್ಲಿ ಇಂಟರ್ ನೆಟ್ ಟ್ರೇಡಿಂಗ್ ಸೇವೆ ಒದಗಿಸುವ ಬ್ರೋಕರೇಜ್ ಸಂಸ್ಥೆಗಳಾಗಿವೆ.
ಡಿಸ್ಕೌಂಟ್ ಬ್ರೋಕರೇಜ್ ಕಂಪನಿಗಳು ರೆಗ್ಯುಲರ್ ಸಾಂಪ್ರದಾಯಿಕ ಬ್ರೋಕರ್‌ಗಳು ನೀಡುವ ಸೇವೆಗಳನ್ನು ನೀಡುತ್ತವೆ. ಆದರೆ ಕಡಿಮೆ ವೆಚ್ಚದಲ್ಲಿ ನೀಡುತ್ತವೆ. ಡಿಸ್ಕೌಂಟ್ ಬ್ರೋಕರೇಜ್ ಕಂಪನಿಗಳು ರೆಗ್ಯುಲರ್ ಸಾಂಪ್ರದಾಯಿಕ ಬ್ರೋಕರ್ ಗಳು ಕೊಡುವಂತೆ ಸ್ಪೆಶಲೈಸ್ಡ್ ಅಕೌಂಟ್ ಮ್ಯಾನೇಜರ್ ಸೇವೆಯನ್ನು ಕೊಡುವುದಿಲ್ಲ. ಕಸ್ಟಮೈಸ್ಡ್ ಇನ್ವೆಸ್ಟ್ ಮೆಂಟ್ ಅಡ್ವೈಸ್ ನೀಡುವುದಿಲ್ಲ. ಬದಲಿಗೆ ಸರಳ, ನೇರವಾದ ಟ್ರೇಡಿಂಗ್ ಪ್ಲಾಟ್ ಫಾರ್ಮ್ ಅನ್ನು ಒದಗಿಸುತ್ತವೆ. ಮಿನಿಮಲ್ ಅಡ್ವೈಸ್ ಮತ್ತು ರಿಸರ್ಚ್ ಸರ್ವೀಸ್ ನೀಡುತ್ತವೆ. ಆನ್ ಲೈನ್ ಟೂಲ್‌ಗಳನ್ನು ಬಳಸುತ್ತವೆ. ಕಸ್ಟಮರ್ ಸರ್ವೀಸ್ ಅನ್ನು ಆನ್‌ಲೈನ್ ಮೂಲಕ ಕೊಡುತ್ತವೆ. ಹೀಗಾಗಿ ಕಡಿಮೆ ಖರ್ಚಾಗುತ್ತದೆ.
ಇದನ್ನೂ ಓದಿ: Money plus : ಕೇಂದ್ರ ಬಜೆಟ್‌ನಲ್ಲಿ ತೆರಿಗೆದಾರರ ನಿರೀಕ್ಷೆಗಳು ಈಡೇರಲಿದೆಯೇ?
ಡಿಸ್ಕೌಂಟ್ ಬ್ರೋಕರ್ ಸಂಸ್ಥೆಗಳು ಮಾರುಕಟ್ಟೆ ಬಗ್ಗೆ ನಾನಾ ಮಾಹಿತಿಗಳನ್ನು, ಮಾರ್ಗದರ್ಶನವನ್ನು ಆನ್ ಲೈನ್‌ನಲ್ಲಿ ಒದಗಿಸುತ್ತವೆ. ಇದು ಅದರ ಎಲ್ಲ ಗ್ರಾಹಕರಿಗೂ ಲಭಿಸುತ್ತವೆ. ಇಲ್ಲಿ ಹೂಡಿಕೆದಾರರು ತಾವೇ ತಮ್ಮನ್ನು ನಿರ್ದೇಶಿಸುತ್ತಾರೆ. ಅಂಥವರಿಗೆ ಇದು ಅಫರ್ಡಬೆಲ್ ಆಗಿರುತ್ತದೆ. ಕಡಿಮೆ ಖರ್ಚಿನಲ್ಲಿ ಷೇರು ವ್ಯವಹಾರವನ್ನು ಮಾಡಲು ಬಯಸುವವರಿಗೆ ಡಿಸ್ಕೌಂಟ್ ಬ್ರೋಕರ್ ಸಂಸ್ಥೆಗಳು ಸಹಾಯಕ. ಸಕ್ರಿಯ ಹೂಡಿಕೆದಾರರು. ಲಾಂಗ್ ಟರ್ಮ್ ಇನ್ವೆಸ್ಟರ್ಸ್ ಇದರ ಲಾಭವನ್ನು ಪಡೆಯಬಹುದು. ಸ್ಟಾಕ್ಸ್, ಮ್ಯೂಚುವಲ್ ಫಂಡ್, ಬಾಂಡ್, ಇಟಿಎಫ್ ಇತ್ಯಾದಿಗಳ ಹೂಡಿಕೆ ಕುರಿತ ಸೇವೆಯನ್ನು ಡಿಸ್ಲೌಂಟ್ ಬ್ರೋಕರ್ ಮೂಲವೂ ಪಡೆಯಬಹುದು. ಟ್ರೇಡಿಂಗ್ ಪ್ಲಾಟ್ ಫಾರ್ಮ್ ಬಳಸಿ ಹೂಡಿಕೆದಾರರು ಮನೆಯಲ್ಲೇ ಇದ್ದರೂ, ಕಚೇರಿಯಲ್ಲೇ ಇದ್ದರೂ ಹೂಡಿಕೆ ಮಾಡಬಹುದು. ಮೊಬೈಲ್ ಟ್ರೇಡಿಂಗ್ ಅಪ್ಲಿಕೇಶನ್ ಗಳೂ ಲಭ್ಯವಿದೆ.
ಭಾರತದಲ್ಲಿ ಪ್ರಮುಖ ಡಿಸ್ಕೌಂಟ್ ಬ್ರೋಕರ್ ಸಂಸ್ಥೆಗಳಿವು
ಬ್ರೋಕರ್ | ಸಕ್ರಿಯ ಗ್ರಾಹಕರ ಸಂಖ್ಯೆ |
ಗ್ರೊ | 7,092,413 |
ಜೆರೋಧಾ | 6,598,363 |
ಏಂಜೆಲ್ ಒನ್ | 5,098,124 |
ಅಪ್ ಸ್ಟಾಕ್ | 2,237,974 |
ಪೇಟಿಎಂ ಮನಿ | 740,285 |
ಪ್ರಮುಖ ಫುಲ್ ಸರ್ವೀಸ್ ಬ್ರೋಕರ್ ಸಂಸ್ಥೆಗಳು
ಬ್ರೋಕರ್ ಸಂಸ್ಥೆ | ಸಕ್ರಿಯ ಗ್ರಾಹಕರು |
ಐಸಿಐಸಿಐ ಡೈರೆಕ್ಟ್ | 1,875,350 |
ಕೋಟಕ್ ಸೆಕ್ಯುರಿಟೀಸ್ | 1,055,717 |
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ | 1,016,329 |
ಮೋತಿಲಾಲ್ ಓಸ್ವಾಲ್ | 807,786 |
ಎಸ್ ಬಿಐ ಸೆಕ್ಯುರಿಟೀಸ್ | 757,635 |