Site icon Vistara News

Money Plus : ಲೀಲಾವತಿ ವಿನೋದ್‌ ರಾಜ್‌ ಶ್ರೀಮಂತಿಕೆಯ ಸೀಕ್ರೆಟ್ಸ್‌

Money

cash

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಧನರಾದ ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ ವಿನೋದ್‌ ರಾಜ್‌ ಅವರು ಸಿನಿಮಾಗಳಲ್ಲಿ ದುಡಿದು ಸಂಪಾದಿಸಿದ ಹಣವನ್ನು ಕೃಷಿ, ಸಮಾಜಸೇವೆಯಲ್ಲಿ ತೊಡಗಿಸಿದವರು. ಹಾಗಾದರೆ ತಾಯಿ ಮತ್ತು ಮಗನ ಪರ್ಸನಲ್‌ ಫೈನಾನ್ಸ್‌ ಹೇಗಿತ್ತು? ಉಳಿತಾಯ ಮತ್ತು ಹೂಡಿಕೆಯ ಕ್ರಮಗಳು (Money Plus ) ಯಾವುದಾಗಿತ್ತು? ಈ ಕುರಿತ ಅಪರೂಪದ ವಿಡಿಯೊ ಸಂದರ್ಶನವನ್ನು ಮನಿ ಪ್ಲಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಿಸಬಹುದು.

ಹಣಕಾಸು ವಿಷಯಗಳಲ್ಲಿ ಅಮ್ಮ ಲೀಲಾವತಿಯವರೇ ನನಗೆ ಕಲಿಸಿದವರು. ನಿನ್ನ ಬಳಿ ಹತ್ತು ರೂ. ಇದ್ದರೆ ಅಷ್ಟೂ ಖರ್ಚು ಮಾಡಲು ಇರುವುದಲ್ಲ. ಕೆಲವರಿಗೆ ಅದು ಹತ್ತು ಲಕ್ಷ ಆಗಬಹುದು, ಕೆಲವರಿಗೆ ಅದು ಕೋಟಿ ಆಗಬಹುದು. ಆದ್ದರಿಂದ ನೀವು ಗಳಿಸುವ ಪ್ರತಿ ಹತ್ತು ರೂಪಾಯಿಯಲ್ಲಿ ಆರರಿಂದ ಆರೂವರೆ ರೂಪಾಯಿಯನ್ನು ಇನ್ವೆಸ್ಟ್‌ ಮಾಡಿ. ಆರೂವರೆ ರೂಪಾಯಿಯಲ್ಲಿ ಯೋಗ್ಯತೆಗೆ ಅನುಸಾರ ರಿಯಲ್‌ ಎಸ್ಟೇಟ್‌ ಅಥವಾ ನೆಲದಲ್ಲಿ ಹೂಡಿಕೆ ಮಾಡಿ. ನಿಮಗೆ ಲಿಕ್ವಿಡಿಟಿ ಬೇಕು. ಇನ್ನೂ ನಾಲ್ಕೂವರೆ ರೂಪಾಯಿಯಲ್ಲಿ ಮೂರು ರೂಪಾಯಿ ಲಿಕ್ವಿಡಿಟಿ ಆಸ್ತಿಯಾಗಬೇಕು. ಅಂದರೆ ಪ್ರತಿ ತಿಂಗಳೂ ಹಣ ಬರುವ ಹಾಗೆ ಹೂಡಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಹಣಕಾಸು ಸಲಹೆಗಾರರ ನೆರವು ಪಡೆಯಿರಿ. ಪೋಸ್ಟ್‌ ಆಫೀಸ್‌ನಲ್ಲಿ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮಾಸಿಕ ಆದಾಯ ಬರಬಹುದು. ಮೂರು ತಿಂಗಳಿಗೊಮ್ಮೆ ಹಣ ಪಡೆಯುವುದು ಉತ್ತಮ. ಗಂಡ-ಹೆಂಡತಿ ಇಬ್ಬರಿಗೂ ಖರ್ಚಿಗೆ ಮಾಸಿಕ ಆದಾಯ ಯೋಜನೆಯಡಿ 18 ಲಕ್ಷ ರೂ. ಹೂಡಿಕೆ ಮಾಡಬಹುದು. ತಿಂಗಳಿಗೆ 9-10 ಸಾವಿರ ರೂ. ಸಿಗಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 8.9-10% ಬಡ್ಡಿ ಸಿಗುತ್ತದೆ. ಉಳಿದ ಹಣವನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿ.

ಜಾಸ್ತಿ ದುಡ್ಡು ಇರುವವರಿಗೆ ಆರ್‌ ಬಿಐ ಬಾಂಡ್‌ ಇದೆ. ಎಲ್‌ ಐಸಿ ಮಾಸಿಕ ಆದಾಯ ಯೋಜನೆ, ಎಲ್‌ಐಸಿ ಸಿಪ್‌, ಮ್ಯೂಚುವಲ್‌ ಫಂಡ್‌ ಗಳಲ್ಲಿ ಹೂಡಿಕೆ ಮಾಡಬಹುದು. ಈಕ್ವಿಟಿಗಳಲ್ಲಿ ನಿಮ್ಮ ಹಣ ಬೇಗ ಬೆಳೆಯುತ್ತದೆ. ಲಾಂಗ್‌ ಟರ್ಮ್‌ ಇನ್ವೆಸ್ಟ್‌ ಮೆಂಟ್‌ ಉತ್ತಮ. ಸಣ್ಣ ಸಣ್ಣ ಸೈಟ್‌ಗಳಲ್ಲಿ ಹೂಡಿಕೆ ಮಾಡುವುದು ಕೂಡ ಉತ್ತಮ. ಭವಿಷ್ಯದಲ್ಲಿ ಉತ್ತಮ ಸಂಪತ್ತಾಗುತ್ತದೆ.

ತಮಿಳುನಾಡಿನಲ್ಲಿ ಹದಿನೇಳೂವರೆ ಎಕರೆ ಜಾಗ ಇತ್ತು. ಅದರಲ್ಲಿ ಮೂರು ಎಕರೆ ಸೇಲ್‌ ಮಾಡಿ, ಮೈಲನಹಳ್ಳಿ ಬಳಿ ಆರೆಕೆರೆ ಜಮೀನು ಖರೀದಿಸಿದೆವು. ತಾಯಿ ಸ್ಟೀಲನ್ನು ಸಂಗ್ರಹಿಸಿಟ್ಟು ಉತ್ತಮ ದರ ಬಂದಾಗ ಮಾರುತ್ತಿದ್ದರು. ಸೋಲದೇವನಹಳ್ಳಿಯಲ್ಲಿ ಪ್ರತಿ ಎಕರೆಗೆ ಮೂವತ್ತು ಸಾವಿರ ರೂ. ಕೊಟ್ಟಿದ್ದೆವು. ಈಗ ಪ್ರತಿ ಎಕರೆಗೆ ಒಂದು ಕೋಟಿ ರೂ. ಆಗುತ್ತೆ. ಭೂಮಿಯ ಮೌಲ್ಯ ಹೆಚ್ಚುತ್ತಾ ಹೋಗುತ್ತದೆ.

Exit mobile version