Site icon Vistara News

Money Guide : ಓಪನ್‌ ಎಂಡೆಡ್‌, ಕ್ಲೋಸ್ಡ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ ಎಂದರೇನು, ಯಾವುದು ಬೆಸ್ಟ್?

Mutual Fund

ಮ್ಯೂಚುವಲ್‌ ಫಂಡ್‌ಗಳಲ್ಲಿ ಓಪನ್‌ ಎಂಡೆಡ್‌ ಮತ್ತು ಕ್ಲೋಸ್ಡ್‌ ಎಂಡೆಡ್‌ (Money Guide) ಎಂಬ ಎರಡು ವಿಧದ ಯೋಜನೆಗಳಿರುತ್ತವೆ. ಏನಿದು ಎನ್ನುತ್ತೀರಾ. ಇಲ್ಲಿದೆ ವಿವರ. ಮೊದಲಿಗೆ ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ ಎಂದರೇನು ಎಂಬುದನ್ನು ತಿಳಿಯೋಣ. ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ನೀವು ಯಾವುದೇ ಸಂದರ್ಭ ಖರೀದಿ ಅಥವಾ ಮಾರಾಟವನ್ನು ಮಾಡಬಹುದು. ಯಾವುದೇ ವೇಳೆ ಯುನಿಟ್‌ಗಳನ್ನು ಖರೀದಿ ಅಥವಾ ವಿಕ್ರಯಕ್ಕೆ ಸಾಧ್ಯವಿದೆ. ಇವುಗಳಿಗೆ ಯಾವುದೇ ಮೆಚ್ಯೂರಿಟಿ ಅವಧಿ ಇರುವುದಿಲ್ಲ. ನಿಮಗೆ ಬೇಕಾದಷ್ಟು ಸಮಯದ ತನಕ ಹೂಡಿಕೆಯನ್ನು ಮುಂದುವರಿಸಬಹುದು.

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಆರಂಭದಲ್ಲಿಯೇ ಸೂಕ್ತವಾದ ಆಯ್ಕೆಯನ್ನು ಮಾಡಿಕೊಳ್ಳಬೇಕು. ಓಪನ್‌ ಎಂಡೆಡ್‌ ಫಂಡ್‌ಗಳು ಸಾಮಾನ್ಯವಾಗಿ ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಿರುತ್ತದೆ. ಇದರಲ್ಲಿ ಲಿಕ್ವಿಡಿಟಿ ಹೆಚ್ಚು. ಹೂಡಿಕೆದಾರರು ನಿರಂರವಾಗಿ ಇನ್ವೆಸ್ಟ್‌ ಮಾಡುತ್ತಾ ಹೋಗಬಹುದು. ಇಎಲ್‌ಎಸ್‌ಎಸ್‌ ಫಂಡ್‌ಗಳು ಮತ್ತು ಸಲ್ಯೂಷನ್‌ ಓರಿಯೆಂಟೆಡ್‌ ಪ್ಲಾನ್‌ ( ಉದಾಹರಣೆಗೆ ಚಿಲ್ಡ್ರೆನ್ಸ್‌ ಫಂಡ್‌ ಅಥವಾ ರಿಟೈರ್‌ಮೆಂಟ್‌ ಫಂಡ್) ಹೊರತುಪಡಿಸಿ ಉಳಿದ ಬಹುತೇಕ ಎಲ್ಲ ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳಿಗೆ ಲಾಕ್‌ ಇನ್‌ ಪಿರೀಡ್‌ ಇರುವುದಿಲ್ಲ. ( Open ended mutual fund)‌

ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳಿಂದ ಹೂಡಿಕೆದಾರರು ಸಿಸ್ಟಮ್ಯಾಟಿಕ್‌ ಪ್ಲಾನ್‌ಗಳನ್ನು ಮಾಡಬಹುದು. ಇನ್ವೆಸ್ಟ್‌ ಮೆಂಟ್‌ ಮತ್ತು ವಿತ್‌ ಡ್ರಾವಲ್‌ ಆಯ್ಕೆಯ ಸ್ವಾತಂತ್ರ್ಯ ಇಲ್ಲಿ ಹೂಡಿಕೆದಾರರಿಗೆ ಹೆಚ್ಚು. ಹೂಡಿಕೆದಾರರು ಇಲ್ಲಿ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್‌ (SIP) , ಸಿಸ್ಟಮ್ಯಾಟಿಕ್‌ ವಿತ್‌ ಡ್ರಾವಲ್‌ ಪ್ಲಾನ್‌ (SWP) ಅಥವಾ ಸಿಸ್ಟಮ್ಯಾಟಿಕ್‌ ಟ್ರಾನ್ಸ್‌ಫರ್‌ ಪ್ಲಾನ್‌ (STP) ಅನ್ನು ಪಡೆಯಬಹುದು.

ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳ ಹಳೆಯ ಪರ್‌ ಫಾರ್ಮೆನ್ಸ್‌ನ ಟ್ರ್ಯಾಕ್‌ ರೆಕಾರ್ಡ್‌ಗಳು ಹೂಡಿಕೆದಾರರಿಗೆ ಸಿಗುತ್ತದೆ. ಹೀಗಾಗಿ ಹೂಡಿಕೆಯ ನಿರ್ಧಾರ ಕೈಗೊಳ್ಳಲು ಇದು ಸಹಕಾರಿಯಾಗುತ್ತದೆ. ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳಿಗೂ ಟ್ಯಾಕ್ಸ್‌ ಬೆನಿಫಿಟ್‌ ಸಿಗುತ್ತದೆ.

ಇದನ್ನೂ ಓದಿ: Money plus : ಆನ್‌ಲೈನ್‌ನಲ್ಲಿ ಎನ್‌ಪಿಎಸ್ ಅಕೌಂಟ್‌ ತೆರೆಯುವುದು ಹೇಗೆ?

ಕ್ಲೋಸ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ ( Close ended Mutual Fund) : ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಯ ಪ್ರಕಾರ ಕ್ಲೋಸ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳಿಗೆ ನಿಗದಿತ ಮೆಚ್ಯೂರಿಟಿ ಅವಧಿ ಇರುತ್ತದೆ. ಹೂಡಿಕೆದಾರರು ಈ ಮ್ಯೂಚುವಲ್‌ ಫಂಡ್‌ಗಳಲ್ಲಿ ನ್ಯೂ ಫಂಡ್‌ ಆಫರ್‌ (New Fund Offer – NFO) ಅವಧಿಯಲ್ಲಿ ಹೂಡಿಕೆ ಮಾಡಬಹುದು. ಅಸೆಟ್‌ ಮ್ಯಾನೇಜ್‌ ಮೆಂಟ್‌ ಕಂಪನಿಯು (AMC) ನ್ಯೂ ಫಂಡ್‌ ಆಫರ್‌ (NFO) ಮಾಡಿದ ಬಳಿಕ ಹೂಡಿಕೆದಾರರು ನಿಗದಿತ ದರದಲ್ಲಿ ಸ್ಕೀಮ್‌ನ ಯುನಿಟ್‌ಗಳನ್ನು ಖರೀದಿಸಬಹುದು. ಎನ್‌ಎಫ್‌ಒ ಅವಧಿ ಮುಗಿದ ಬಳಿಕ ಹೊಸ ಹೂಡಿಕೆದಾರರಿಗೆ ಹೂಡಿಕೆ ಮಾಡಲು ಆಗುವುದಿಲ್ಲ. ಸ್ಕೀಮ್‌ ಮೆಚ್ಯೂರ್‌ ಆಗುವುದಕ್ಕೆ ಮುನ್ನ ಹೂಡಿಕೆದಾರರಿಗೆ ಎಕ್ಸಿಟ್‌ ಆಗಲೂ ಆಗುವುದಿಲ್ಲ. ಮೆಚ್ಯೂರಿಟಿಯ ವೇಳೆ ಸ್ಕೀಮ್‌ ಅನ್ನು ವಿಸರ್ಜಿಸಲಾಗುತ್ತದೆ. ಹಣವನ್ನು ಹೂಡಿಕೆದಾರರಿಗೆ ಆ ದಿನದ ನೆಟ್‌ ಅಸೆಟ್‌ ವಾಲ್ಯೂ ಆಧರಿಸಿ ವಿತರಿಸಲಾಗುತ್ತದೆ. ಈ ಸ್ಕೀಮ್‌ಗಳಲ್ಲಿ ಅಸೆಟ್‌ ವಾಲ್ಯೂಯೇಶನ್‌ ದೃಷ್ಟಿಯಿಂದ ಸ್ಥಿರತೆ ಇರುತ್ತದೆ.

Exit mobile version