Money Guide : ಓಪನ್‌ ಎಂಡೆಡ್‌, ಕ್ಲೋಸ್ಡ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ ಎಂದರೇನು, ಯಾವುದು ಬೆಸ್ಟ್? - Vistara News

ವಾಣಿಜ್ಯ

Money Guide : ಓಪನ್‌ ಎಂಡೆಡ್‌, ಕ್ಲೋಸ್ಡ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ ಎಂದರೇನು, ಯಾವುದು ಬೆಸ್ಟ್?

ಮ್ಯೂಚುವಲ್‌ ಫಂಡ್‌ಗಳಲ್ಲಿ ಓಪನ್‌ ಎಂಡೆಡ್‌ ಮತ್ತು ಕ್ಲೋಸ್ಡ್‌ ಎಂಡೆಡ್‌ ( Money plus) ಎಂಬ ಎರಡು ವಿಧಗಳು ಇವೆ. ಇವುಗಳಲ್ಲಿ ಯಾವುದು ಬೆಸ್ಟ್?‌ ಇಲ್ಲಿದೆ ವಿವರ.

VISTARANEWS.COM


on

Mutual Fund
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮ್ಯೂಚುವಲ್‌ ಫಂಡ್‌ಗಳಲ್ಲಿ ಓಪನ್‌ ಎಂಡೆಡ್‌ ಮತ್ತು ಕ್ಲೋಸ್ಡ್‌ ಎಂಡೆಡ್‌ (Money Guide) ಎಂಬ ಎರಡು ವಿಧದ ಯೋಜನೆಗಳಿರುತ್ತವೆ. ಏನಿದು ಎನ್ನುತ್ತೀರಾ. ಇಲ್ಲಿದೆ ವಿವರ. ಮೊದಲಿಗೆ ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ ಎಂದರೇನು ಎಂಬುದನ್ನು ತಿಳಿಯೋಣ. ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ನೀವು ಯಾವುದೇ ಸಂದರ್ಭ ಖರೀದಿ ಅಥವಾ ಮಾರಾಟವನ್ನು ಮಾಡಬಹುದು. ಯಾವುದೇ ವೇಳೆ ಯುನಿಟ್‌ಗಳನ್ನು ಖರೀದಿ ಅಥವಾ ವಿಕ್ರಯಕ್ಕೆ ಸಾಧ್ಯವಿದೆ. ಇವುಗಳಿಗೆ ಯಾವುದೇ ಮೆಚ್ಯೂರಿಟಿ ಅವಧಿ ಇರುವುದಿಲ್ಲ. ನಿಮಗೆ ಬೇಕಾದಷ್ಟು ಸಮಯದ ತನಕ ಹೂಡಿಕೆಯನ್ನು ಮುಂದುವರಿಸಬಹುದು.

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಆರಂಭದಲ್ಲಿಯೇ ಸೂಕ್ತವಾದ ಆಯ್ಕೆಯನ್ನು ಮಾಡಿಕೊಳ್ಳಬೇಕು. ಓಪನ್‌ ಎಂಡೆಡ್‌ ಫಂಡ್‌ಗಳು ಸಾಮಾನ್ಯವಾಗಿ ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಿರುತ್ತದೆ. ಇದರಲ್ಲಿ ಲಿಕ್ವಿಡಿಟಿ ಹೆಚ್ಚು. ಹೂಡಿಕೆದಾರರು ನಿರಂರವಾಗಿ ಇನ್ವೆಸ್ಟ್‌ ಮಾಡುತ್ತಾ ಹೋಗಬಹುದು. ಇಎಲ್‌ಎಸ್‌ಎಸ್‌ ಫಂಡ್‌ಗಳು ಮತ್ತು ಸಲ್ಯೂಷನ್‌ ಓರಿಯೆಂಟೆಡ್‌ ಪ್ಲಾನ್‌ ( ಉದಾಹರಣೆಗೆ ಚಿಲ್ಡ್ರೆನ್ಸ್‌ ಫಂಡ್‌ ಅಥವಾ ರಿಟೈರ್‌ಮೆಂಟ್‌ ಫಂಡ್) ಹೊರತುಪಡಿಸಿ ಉಳಿದ ಬಹುತೇಕ ಎಲ್ಲ ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳಿಗೆ ಲಾಕ್‌ ಇನ್‌ ಪಿರೀಡ್‌ ಇರುವುದಿಲ್ಲ. ( Open ended mutual fund)‌

ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳಿಂದ ಹೂಡಿಕೆದಾರರು ಸಿಸ್ಟಮ್ಯಾಟಿಕ್‌ ಪ್ಲಾನ್‌ಗಳನ್ನು ಮಾಡಬಹುದು. ಇನ್ವೆಸ್ಟ್‌ ಮೆಂಟ್‌ ಮತ್ತು ವಿತ್‌ ಡ್ರಾವಲ್‌ ಆಯ್ಕೆಯ ಸ್ವಾತಂತ್ರ್ಯ ಇಲ್ಲಿ ಹೂಡಿಕೆದಾರರಿಗೆ ಹೆಚ್ಚು. ಹೂಡಿಕೆದಾರರು ಇಲ್ಲಿ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್‌ (SIP) , ಸಿಸ್ಟಮ್ಯಾಟಿಕ್‌ ವಿತ್‌ ಡ್ರಾವಲ್‌ ಪ್ಲಾನ್‌ (SWP) ಅಥವಾ ಸಿಸ್ಟಮ್ಯಾಟಿಕ್‌ ಟ್ರಾನ್ಸ್‌ಫರ್‌ ಪ್ಲಾನ್‌ (STP) ಅನ್ನು ಪಡೆಯಬಹುದು.

ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳ ಹಳೆಯ ಪರ್‌ ಫಾರ್ಮೆನ್ಸ್‌ನ ಟ್ರ್ಯಾಕ್‌ ರೆಕಾರ್ಡ್‌ಗಳು ಹೂಡಿಕೆದಾರರಿಗೆ ಸಿಗುತ್ತದೆ. ಹೀಗಾಗಿ ಹೂಡಿಕೆಯ ನಿರ್ಧಾರ ಕೈಗೊಳ್ಳಲು ಇದು ಸಹಕಾರಿಯಾಗುತ್ತದೆ. ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳಿಗೂ ಟ್ಯಾಕ್ಸ್‌ ಬೆನಿಫಿಟ್‌ ಸಿಗುತ್ತದೆ.

ಇದನ್ನೂ ಓದಿ: Money plus : ಆನ್‌ಲೈನ್‌ನಲ್ಲಿ ಎನ್‌ಪಿಎಸ್ ಅಕೌಂಟ್‌ ತೆರೆಯುವುದು ಹೇಗೆ?

ಕ್ಲೋಸ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ ( Close ended Mutual Fund) : ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಯ ಪ್ರಕಾರ ಕ್ಲೋಸ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳಿಗೆ ನಿಗದಿತ ಮೆಚ್ಯೂರಿಟಿ ಅವಧಿ ಇರುತ್ತದೆ. ಹೂಡಿಕೆದಾರರು ಈ ಮ್ಯೂಚುವಲ್‌ ಫಂಡ್‌ಗಳಲ್ಲಿ ನ್ಯೂ ಫಂಡ್‌ ಆಫರ್‌ (New Fund Offer – NFO) ಅವಧಿಯಲ್ಲಿ ಹೂಡಿಕೆ ಮಾಡಬಹುದು. ಅಸೆಟ್‌ ಮ್ಯಾನೇಜ್‌ ಮೆಂಟ್‌ ಕಂಪನಿಯು (AMC) ನ್ಯೂ ಫಂಡ್‌ ಆಫರ್‌ (NFO) ಮಾಡಿದ ಬಳಿಕ ಹೂಡಿಕೆದಾರರು ನಿಗದಿತ ದರದಲ್ಲಿ ಸ್ಕೀಮ್‌ನ ಯುನಿಟ್‌ಗಳನ್ನು ಖರೀದಿಸಬಹುದು. ಎನ್‌ಎಫ್‌ಒ ಅವಧಿ ಮುಗಿದ ಬಳಿಕ ಹೊಸ ಹೂಡಿಕೆದಾರರಿಗೆ ಹೂಡಿಕೆ ಮಾಡಲು ಆಗುವುದಿಲ್ಲ. ಸ್ಕೀಮ್‌ ಮೆಚ್ಯೂರ್‌ ಆಗುವುದಕ್ಕೆ ಮುನ್ನ ಹೂಡಿಕೆದಾರರಿಗೆ ಎಕ್ಸಿಟ್‌ ಆಗಲೂ ಆಗುವುದಿಲ್ಲ. ಮೆಚ್ಯೂರಿಟಿಯ ವೇಳೆ ಸ್ಕೀಮ್‌ ಅನ್ನು ವಿಸರ್ಜಿಸಲಾಗುತ್ತದೆ. ಹಣವನ್ನು ಹೂಡಿಕೆದಾರರಿಗೆ ಆ ದಿನದ ನೆಟ್‌ ಅಸೆಟ್‌ ವಾಲ್ಯೂ ಆಧರಿಸಿ ವಿತರಿಸಲಾಗುತ್ತದೆ. ಈ ಸ್ಕೀಮ್‌ಗಳಲ್ಲಿ ಅಸೆಟ್‌ ವಾಲ್ಯೂಯೇಶನ್‌ ದೃಷ್ಟಿಯಿಂದ ಸ್ಥಿರತೆ ಇರುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Union Budget 2024 : ಹೂಡಿಕೆಗಳನ್ನು ಉತ್ತೇಜಿಸಲು ‘ಏಂಜಲ್ ಟ್ಯಾಕ್ಸ್’ ರದ್ದು ಮಾಡಿದ ಕೇಂದ್ರ ಸರ್ಕಾರ

Union Budget 2024 : ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್​​ನಲ್ಲಿ ಪಿಂಚಣಿ ನಿಧಿಗಳ ಬೆಂಬಲಿತ ಸ್ಟಾರ್ಟ್​​ಅಪ್​ಗಳು ಮತ್ತು ಹೂಡಿಕೆಗಳಿಗೆ ನೀಡಲಾಗಿದ್ದ ತೆರಿಗೆ ಪ್ರೋತ್ಸಾಹವನ್ನು ಮಾರ್ಚ್ 2025 ರವರೆಗೆ ವಿಸ್ತರಿಸಲಾಗಿದೆ. ಈ ಕ್ರಮವು ತೆರಿಗೆ ಪರಿಹಾರ ಪಡೆಯುವ ಉದ್ದೇಶವನ್ನು ಹೊಂದಿತ್ತು.

VISTARANEWS.COM


on

Union Budget 2024
Koo

ಬೆಂಗಳೂರು: ಸ್ಟಾರ್ಟ್ಅಪ್ ಗಳಿಗೆ ಉತ್ತೇಜನ ನೀಡಲು ಹಾಗೂ ಹೂಡಿಕೆಗೆ ಬೆಂಂಬಲಿಸುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವರು ಮಂಡಿಸಿದ ಬಜೆಟ್​ನಲ್ಲಿ (Union Budget 2024) ಏಂಜೆಲ್ ತೆರಿಗೆಯನ್ನು ರದ್ದುಗೊಳಿಸಲಾಗಿದೆ. “ಸ್ಟಾರ್ಟ್ಅಪ್​​ಗಳಲ್ಲಿನ ಎಲ್ಲಾ ವರ್ಗದ ಹೂಡಿಕೆದಾರರಿಗೆ ಸರ್ಕಾರ ಏಂಜೆಲ್ ತೆರಿಗೆ ರದ್ದುಗೊಳಿಸುತ್ತದೆ” ಎಂದು ಹಣಕಾಸು ಸಚಿವರು ಬಜೆಟ್​ ಮಂಡನೆ ವೇಳೆ ಹೇಳಿದರು. ಈ ಮೂಲಕ ಹೊಸ ಉದ್ದಿಮೆಗಳನ್ನು ಬೆಂಬಲಿಸಲು ಸರ್ಕಾರ ಬದ್ಧ ಎಂದರು.

ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್​​ನಲ್ಲಿ ಪಿಂಚಣಿ ನಿಧಿಗಳ ಬೆಂಬಲಿತ ಸ್ಟಾರ್ಟ್​​ಅಪ್​ಗಳು ಮತ್ತು ಹೂಡಿಕೆಗಳಿಗೆ ನೀಡಲಾಗಿದ್ದ ತೆರಿಗೆ ಪ್ರೋತ್ಸಾಹವನ್ನು ಮಾರ್ಚ್ 2025 ರವರೆಗೆ ವಿಸ್ತರಿಸಲಾಗಿದೆ. ಈ ಕ್ರಮವು ತೆರಿಗೆ ಪರಿಹಾರ ಪಡೆಯುವ ಉದ್ದೇಶವನ್ನು ಹೊಂದಿತ್ತು.

ಆದಾಯ ತೆರಿಗೆ ಕಾಯ್ದೆಯಡಿ (ಐಟಿಎ) ಸೆಕ್ಷನ್ 56 (2) (VIB) ಏಂಜೆಲ್ ತೆರಿಗೆಯನ್ನು 2012 ರಲ್ಲಿ ಪರಿಚಯಿಸಲಾಗಿತ್ತು. ಇದು ಷೇರುಗಳ ವಿತರಣೆಯ ಮೂಲಕ ಪಟ್ಟಿ ಮಾಡದ ಕಂಪನಿಗಳು ಮಾಡಿದ ಹೂಡಿಕೆಗಳನ್ನು ಗುರಿಯಾಗಿಸಿಕೊಂಡಿದ್ದವು. ಕಂಪನಿಯ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಮೊತ್ತಕ್ಕೆ ಈ ತೆರಿಗೆ ವಿಧಿಸಲಾಗುತ್ತಿತ್ತು. ಅದನ್ನು “ಇತರ ಮೂಲಗಳಿಂದ ಬರುವ ಆದಾಯ” ಎಂದು ವರ್ಗೀಕರಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿತ್ತು. (ಉದಾಹರಣೆಗೆ, ಒಂದು ಕಂಪನಿಯ ಮೌಲ್ಯ 1 ಕೋಟಿ ಇದ್ದು, ಕಂಪನಿಯ ಮೇಲಿನ ಒಟ್ಟು ಹೂಡಿಕೆ 1.5 ಕೋಟಿ ರೂಪಾಯಿ ಇದ್ದರೆ ಹೆಚ್ಚುವರಿ 50 ಲಕ್ಷಕ್ಕೆ ತೆರಿಗೆ ಹಾಕಲಾಗುತ್ತಿತ್ತು. ಇದನ್ನು ಏಂಜಲ್ ಟ್ಯಾಕ್ಸ್ ಎಂದು ಕರೆಯಲಾಗುತ್ತಿತ್ತು.

ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ‘ಚೊಂಬು’ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್​

ಅಕ್ರಮ ಹಣ ವರ್ಗಾವಣೆ ಮತ್ತು ಲೆಕ್ಕವಿಲ್ಲದ ಹಣದ ಹರಿವಿಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸಲು 2012 ರ ಹಣಕಾಸು ಕಾಯ್ದೆಯಗೆ ಸೇರಿಸಲಾಗಿತ್ತು. ಆದಾಗ್ಯೂ, ಇದು ಸ್ಟಾರ್ಟ್ಅಪ್​ಗಳು ಮತ್ತು ಹೂಡಿಕೆದಾರರೊಳಗೆ ವಿವಾದಕ್ಕೆ ಕಾರಣವಾಯಿತು. ನಿಧಿಸಂಗ್ರಹಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಅಪಸ್ವರಕ್ಕೆ ಕಾರಣವಾಯಿತು.

ಆರ್ಥಿಕ ಪಂಡಿತರ ಪ್ರಕಾರ ಪ್ರಕಾರ, ಈ ತೆರಿಗೆ ತೆಗೆದುಹಾಕುವುದು ಸ್ಪಷ್ಟತೆ ಒದಗಿಸುವ ಮತ್ತು ವಿದೇಶಿ ಹೂಡಿಕೆಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸುವ ಮಹತ್ವದ ಕ್ರಮವಾಗಿದೆ ಎಂದು ಹೇಳಿದ್ದಾರೆ.

ಏಂಜೆಲ್ ತೆರಿಗೆಯನ್ನು ರದ್ದುಪಡಿಸುವುದು ಸ್ಟಾರ್ಟ್ಅಪ್ ಸಮುದಾಯಕ್ಕೆ ಸಕಾರಾತ್ಮಕ ಬೆಳವಣಿಗೆ. ಇದು ನಿಧಿಸಂಗ್ರಹಕ್ಕೆ ಹೆಚ್ಚು ಬೆಂಬಲ ಮತ್ತು ಕಡಿಮೆ ನಿರ್ಬಂಧಿತ ವಾತಾವರಣ ನಿವಾರಿಸುತ್ತದೆ. ಈ ಬದಲಾವಣೆಯೊಂದಿಗೆ, ಭಾರತದಲ್ಲಿ ನಾವೀನ್ಯತೆ ಮತ್ತು ಹೂಡಿಕೆಗೆ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ.

Continue Reading

ಪ್ರಮುಖ ಸುದ್ದಿ

Union Budget 2024 : ಕೇಂದ್ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ‘ಚೊಂಬು’ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್​

Union Budget 2024 : ಕೇಂದ್ರ ಸರ್ಕಾರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಬೆಂಗಳೂರಿನವರಾಗಿದ್ದು, ಕರ್ನಾಟಕಕ್ಕೆ ಏನನ್ನೂ ಕೊಟ್ಟಿಲ್ಲ. ತಮ್ಮ ಸರ್ಕಾರವನ್ನು ಉಳಿಸುವ ಸಲುವಾಗಿ ಅವರು ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಭರಪೂರ ಅನುದಾನ ನೀಡಿದ್ದಾರೆ.

VISTARANEWS.COM


on

Union Budget 2024
Koo

ಬೆಂಗಳೂರು: ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್​ನಲ್ಲಿ (Union Budget 2024) ಕರ್ನಾಟಕದ ಜನತೆಗೆ ‘ಚೊಂಬು’ ಕೊಟ್ಟಿದ್ದಾರೆ ಎಂಬುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ. ಬಜೆಟ್​ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅವರು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ಆಯ್ಕೆಯಾಗಿರುವ ಹೊರತಾಗಿಯೂ ತಮ್ಮ ರಾಜ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಬೆಂಗಳೂರಿನವರಾಗಿದ್ದು, ಕರ್ನಾಟಕಕ್ಕೆ ಏನನ್ನೂ ಕೊಟ್ಟಿಲ್ಲ. ತಮ್ಮ ಸರ್ಕಾರವನ್ನು ಉಳಿಸುವ ಸಲುವಾಗಿ ಅವರು ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಭರಪೂರ ಅನುದಾನ ನೀಡಿದ್ದಾರೆ. ಅವರು ತಮ್ಮ ಮೈತ್ರಿಯ ಬಗ್ಗೆ ಮಾತ್ರ ಕಾಳಜಿ ವಹಿಸಿದ್ದಾರೆ. ಹೀಗಾಗಿ ಇಂಡಿಯಾ ಮೈತ್ರಿಕೂಟ ಇರುವ ರಾಜ್ಯಗಳಿಗೆ ಅನ್ಯವಾಯವಾಗಿದೆ” ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ಜನರ ಬಗ್ಗೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದೆ. ಇದರ ಜೆತಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಬಜೆಟ್ ಅನ್ನು ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ‘ಕುರ್ಚಿ ಉಳಿಸುವ ಕಸರತ್ತು’ ಎಂದು ಹೇಳಿದ್ದಾರೆ.

ಜೆಟ್ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಈ ಕಲ್ಪನೆಯನ್ನು ಕಾಂಗ್ರೆಸ್ ಪ್ರಣಾಳಿಕೆಯ ನಕಲು ಎಂದು ಹೇಳಿದ್ದಾರೆ, ಚುನಾವಣಾ ಫಲಿತಾಂಶದ ನಂತರ ಹಣಕಾಸು ಸಚಿವರು ಕಾಂಗ್ರೆಸ್​ನ ಲೋಕಸಭಾ ಪ್ರಣಾಳಿಕೆಯನ್ನು ಓದಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯ 30ನೇ ಪುಟದಲ್ಲಿ ವಿವರಿಸಿರುವ ಉದ್ಯೋಗ-ಸಂಬಂಧಿತ ಪ್ರೋತ್ಸಾಹ ಧನವನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಟಿಎಂಸಿ ಹೇಳಿದ್ದೇನು?

ಪಶ್ಚಿಮ ಬಂಗಾಳದ ಪ್ರತಿವರ್ಷ ಪ್ರವಾಹವನ್ನು ಎದುರಿಸುತ್ತಿದ್ದರೂ ಪಶ್ಚಿಮ ಬಂಗಾಳಕ್ಕೆ ಪ್ರವಾಹ ಪರಿಹಾರ ಕಾರ್ಯಕ್ರಮವನ್ನು ಘೋಷಿಸಿಲ್ಲ. ಟಿಎಂಸಿ ಸಂಸದ ಸಾಕೇತ್ ಗೋಖಲೆ ಮಾತನಾಡಿ ಕೇಂದ್ರವು ಉದ್ದೇಶಪೂರ್ವಕವಾಗಿ ಬಂಗಾಳದ ಜನರನ್ನು ನಿರ್ಲಕ್ಷಿಸುತ್ತಿದೆ ಮತ್ತು ಹೊರಹಾಕುತ್ತಿದೆ ಎಂದು ಆರೋಪಿಸಿದರು.

ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ, ಮಾತನಾಡಿ, ಬಿಹಾರಕ್ಕೆ ನೆರವು ಅಗತ್ಯವಿತ್ತು. ಅದಕ್ಕೆ ಬೇಡಿಕೆಯೂ ಇತ್ತು.
ಆಂಧ್ರಪ್ರದೇಶಕ್ಕೂ ನೀಡಿರುವುದು ಸರಿಯಾಗಿದೆ. ಆದರೆ ತೆಲಂಗಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳಕ್ಕೆ ನೀವು ಏನು ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಪಂಜಾಬ್ ನಾಯಕರ ಪ್ರತಿಭಟನೆ

ಕೇಂದ್ರ ಬಜೆಟ್ 2024 ರಲ್ಲಿ ಕೇಂದ್ರ ಸರ್ಕಾರವು ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಪಂಜಾಬ್​​ ನಾಯಕರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ಪಂಜಾಬ್ ಕುರಿತು ತಾರತಮ್ಯ ನಿಲ್ಲಿಸಬೇಕು ಎಂದು ಆರೋಪಿಸಿದರು.

ಬಿಹಾರ, ಆಂಧ್ರ ದೊಡ್ಡ ಫಲಾನುಭವಿ

ನಿರ್ಮಲಾ ಸೀತಾರಾಮನ್ ಅವರು 2024-25ರ ಬಜೆಟ್​​ನಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಕ್ರಮವಾಗಿ 26,000 ಕೋಟಿ ಮತ್ತು 15,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಬಿಹಾರ ಮುಖ್ಯಮಂತ್ರಿ ನೇತೃತ್ವದ ಜನತಾದಳ (ಯುನೈಟೆಡ್) ಕೇಂದ್ರದಲ್ಲಿ ಬಿಜೆಪಿಯ ಪ್ರಮುಖ ಮಿತ್ರಪಕ್ಷಗಳಾಗಿವೆ. ಆಂಧ್ರಪ್ರದೇಶ ಮತ್ತು ಬಿಹಾರದ ರಾಜಕೀಯ ಪಕ್ಷಗಳು 2014 ರಿಂದ ರಾಜ್ಯದ ಅಭಿವೃದ್ಧಿಗಾಗಿ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸುತ್ತಿವೆ.

ಇದನ್ನೂ ಓದಿ: Union Budget 2024 : ಬಜೆಟ್​ನಲ್ಲಿ ದೊಡ್ಡ ಮೊತ್ತ ಮೀಸಲಾಗಿರುವುದು ಸಾಲದ ಬಡ್ಡಿ ಕಟ್ಟಲು!

ಹಿಮಾಚಲ, ಅಸ್ಸಾಂ, ಉತ್ತರಾಖಂಡಕ್ಕೆ ಪ್ರವಾಹ ಪರಿಹಾರ

ಹಲವಾರು ರಾಜ್ಯಗಳಲ್ಲಿ ಪ್ರವಾಹ ನಿಯಂತ್ರಣ ಕ್ರಮಗಳು ಮತ್ತು ನೀರಾವರಿ ಯೋಜನೆಗಳನ್ನು ಹೆಚ್ಚಿಸಲು. ಸಚಿವೆ ನಿರ್ಮಲಾ ಸೀತಾರಾಮನ್ 11,500 ಕೋಟಿ ರೂ.ಗಳ ಸಮಗ್ರ ಆರ್ಥಿಕ ಬೆಂಬಲ ಯೋಜನೆ ಘೋಷಿಸಿದ್ದಾರೆ. ಬಿಹಾರವು ಆಗಾಗ್ಗೆ ಪ್ರವಾಹದಿಂದ ಬಳಲುತ್ತಿದೆ. ಪ್ರತಿ ವರ್ಷ ಪ್ರವಾಹದಿಂದ ತತ್ತರಿಸುವ ಅಸ್ಸಾಂ, ಪ್ರವಾಹ ನಿರ್ವಹಣೆ ಮತ್ತು ಸಂಬಂಧಿತ ಯೋಜನೆಗಳಿಗೆ ನೆರವು ಪಡೆಯಲಿದೆ ಎಂದು ಹೇಳಿದ್ದಾರೆ.

ಕಂಗಾನಾ ಏನಂದರು?

ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿರುವ ಹಿಮಾಚಲ ಪ್ರದೇಶಕ್ಕೆ ಆರ್ಥಿಕ ನೆರವು ನೀಡಿರುವುದನ್ನು ಶ್ಲಾಘಿಸಿದ ಮಂಡಿ ಸಂಸದೆ ಕಂಗನಾ ರಣಾವತ್​​ , “ಹಿಮಾಚಲ ಪ್ರದೇಶಕ್ಕೆ ಪರಿಹಾರ ನಿಧಿಯ ಭರವಸೆ ನೀಡಲಾಗಿದೆ. ಬಜೆಟ್ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

Continue Reading

ದೇಶ

Union Budget 2024: ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಗುಡ್‌ನ್ಯೂಸ್‌! ಮೊಬೈಲ್‌ ಫೋನ್‌, ಚಾರ್ಜರ್‌ ಬೆಲೆ ಅಗ್ಗ

Union Budget 2024: ಮುಂದಿನ ದಿನಗಳಲ್ಲಿ ಟೆಕ್ ಮಾಡುಕಟ್ಟೆಯಲ್ಲಿ ಕೆಲವು ಅಭಿವೃದ್ಧಿ ಕಾಣಲಿದ್ದು, ಮೊಬೈಲ್​, ಚಾರ್ಜರ್ ಬೆಲೆ ಇಳಿಕೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು. ಕೇಂದ್ರದ ಈ ಬಾರಿಯ ಬಜೆಟ್​ನಲ್ಲಿ ಮೊಬೈಲ್‌ ಫೋನ್‌ ಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗುವುದು. ಮೊಬೈಲ್‌ ಫೋನ್, ಮೊಬೈಲ್‌ ಚಾರ್ಜರ್​ ಬೆಲೆ ಇಳಿಕೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದರು.

VISTARANEWS.COM


on

Union Budget 2024
Koo

ಹೊಸದಿಲ್ಲಿ: ಈ ಬಾರಿಯ ಕೇಂದ್ರ ಬಜೆಟ್‌(Union Budget 2024)ನಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗುಡ್​ ನ್ಯೂಸ್ ನೀಡಲಾಗಿದೆ. ಮೊಬೈಲ್ ಫೋನ್‌(Mobile Phones)ಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಅಲ್ಲದೇ ಮೊಬೈಲ್, ಚಾರ್ಜರ್​ ಬೆಲೆ ಮತ್ತಷ್ಟು ಅಗ್ಗ ಆಗಲಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌(Nirmala Seetharaman) ತಮ್ಮ ಬಜೆಟ್‌ ಭಾಷಣ(Budget Speech)ದಲ್ಲಿ ಹೇಳಿದ್ದಾರೆ. ಮೊಬೈಲ್ ಫೋನ್ ಮತ್ತು ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 15ಕ್ಕೆ ಇಳಿಸಲಾಗುವುದು. ಸರ್ಕಾರದ ಈ ಕ್ರಮದಿಂದಾಗಿ ಮೊಬೈಲ್ ಫೋನ್ ಮತ್ತು ಮೊಬೈಲ್ ಚಾರ್ಜರ್‌ಗಳ ಬೆಲೆ ಕಡಿಮೆಯಾಗಲಿದೆ ಎಂದು ಘೋಷಿಸಿದ್ದಾರೆ.

ಮುಂದಿನ ದಿನಗಳಲ್ಲಿ ಟೆಕ್ ಮಾಡುಕಟ್ಟೆಯಲ್ಲಿ ಕೆಲವು ಅಭಿವೃದ್ಧಿ ಕಾಣಲಿದ್ದು, ಮೊಬೈಲ್​, ಚಾರ್ಜರ್ ಬೆಲೆ ಇಳಿಕೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು. ಕೇಂದ್ರದ ಈ ಬಾರಿಯ ಬಜೆಟ್​ನಲ್ಲಿ ಮೊಬೈಲ್‌ ಫೋನ್‌ ಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗುವುದು. ಮೊಬೈಲ್‌ ಫೋನ್, ಮೊಬೈಲ್‌ ಚಾರ್ಜರ್​ ಬೆಲೆ ಇಳಿಕೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದರು.

ಇನ್ನು ಮೊಬೈಲ್, ಚಾರ್ಜರ್ ಬೆಲೆ ಇಳಿಕೆ ಮಾಡುತ್ತಿದ್ದಂತೆ, 6 ವರ್ಷಗಳಲ್ಲಿ ಮೊಬೈಲ್​ ಉತ್ಪಾದನೆ 3 ಪಟ್ಟು ಅಧಿಕವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಅಷ್ಟೇ ಅಲ್ಲದೇ ಮೊಬೈಲ್ ಬಿಡಿ ಭಾಗಗಳ ತೆರಿಗೆ ಕಡಿತ ಮಾಡಲಾಗುವುದು ಎಂದು ತಿಳಿಸಿದರು. ಜೊತೆಗೆ ಸೋಲಾರ್ ಸೆಲ್, ಸೋಲಾರ್ ಪ್ಯಾನೆಲ್‌ಗಳ ಬೆಲೆಯೂ ಇಳಿಕೆಯಾಗಲಿದೆ ಎಂದು ಹೇಳಿದರು. ಕಳೆದ ಹಲವು ವರ್ಷಗಳಿಂದ ಮೊಬೈಲ್ ಉದ್ಯಮವು ಪ್ರಬುದ್ಧವಾಗಿದೆ ಎಂದು ಹೇಳಿದರು. ಮೊಬೈಲ್ ಫೋನ್, PCBA ಮತ್ತು ಚಾರ್ಜರ್‌ನಲ್ಲಿ 15%ಕ್ಕೆ BCD ಕಡಿತವು ಭಾರತೀಯ ಮೊಬೈಲ್ ಫೋನ್ ಉತ್ಪಾದನಾ ಪರಿಸರ ವ್ಯವಸ್ಥೆಯ ದೇಶೀಯ ಉತ್ಪಾದನಾ ಸಾಮರ್ಥ್ಯದಲ್ಲಿ ವಿಶ್ವಾಸವನ್ನು ಹೊರಹಾಕುತ್ತದೆ. ಇದು M-SIPS, SPECS ಮತ್ತು PLI ಯೋಜನೆಗಳು BCD ಯಂತಹ ಪ್ರಮುಖ ಭಾಗಗಳಲ್ಲಿ ಅನೇಕ ಹಣಕಾಸಿನ ಮಧ್ಯಸ್ಥಿಕೆಗಳ ಮೂಲಕ ಲಾಭ ಪಡೆದಿದೆ.

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಹೇಗಿದೆ?

ಗುರುವಾರ ಬಿಡುಗಡೆಯಾದ ವರದಿಯ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ (Q2) ಸಾಧಾರಣ 1 ಶೇಕಡಾ ಬೆಳವಣಿಗೆಯನ್ನು ಕಂಡಿತು, ಒಟ್ಟು 36.4 ಮಿಲಿಯನ್ ಯುನಿಟ್‌ಗಳನ್ನು ರವಾನಿಸಲಾಗಿದೆ. Xiaomi ಆರು ತ್ರೈಮಾಸಿಕಗಳ ನಂತರ ಅಗ್ರ ಸ್ಥಾನವನ್ನು ಪಡೆದುಕೊಂಡಿತು, 6.7 ಮಿಲಿಯನ್ ಯುನಿಟ್‌ಗಳ ಮಾರಾಟದೊಂದಿಗೆ ಮಾರುಕಟ್ಟೆ ಶೇ.18ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ.

ಇನ್ನು ವಿವೋ ಮತ್ತು ಓಪ್ಪೋ ಮಾರಾಟ ಪ್ರಮಾಣ ನೋಡುವುದಾದರೆ Xiaomi ಮೊಬೈಲ್‌ ಫೋನ್‌ ನಂತರ ಅಗ್ರ ಸ್ಥಾನಗಳನ್ನು ಪಡೆದುಕೊಂಡಿವೆ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲಿಸ್ ಪ್ರಕಾರ, ಕೈಗೆಟುಕುವ ದರದಲ್ಲಿ 5G ಮೊಬೈಲ್‌ಗಳನ್ನು ಗ್ರಾಹಕರಿಗೆ ನೀಡುತ್ತಿರುವ ವೀವೋ 6.7 ಮಿಲಿಯನ್ ಯುನಿಟ್‌ಗಳ ಮಾರಾಟಟವಾಗಿದೆ. ಸ್ಯಾಮ್‌ಸಂಗ್ 6.1 ಮಿಲಿಯನ್ ಯುನಿಟ್‌ಗಳನ್ನು ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ. Realme ಮತ್ತು OPPO (OnePlus ಹೊರತುಪಡಿಸಿ) ಕ್ರಮವಾಗಿ 4.3 ಮಿಲಿಯನ್ ಮತ್ತು 4.2 ಮಿಲಿಯನ್ ಯೂನಿಟ್‌ಗಳ ಮಾರಾಟದೊಂದಿಗೆ ಐದನೇ ಸ್ಥಾನ ಗಿಟ್ಟಿಸಿಕೊಂಡಿವೆ

ಇದನ್ನೂ ಓದಿ:Union Budget 2024: 7 ಬಜೆಟ್‍ಗಳಲ್ಲಿ 7 ಬಣ್ಣದ ಸೀರೆ ಧರಿಸಿ ಮಿಂಚಿದ ನಿರ್ಮಲಾ ಸೀತಾರಾಮನ್!

Continue Reading

ಪ್ರಮುಖ ಸುದ್ದಿ

Union Budget 2024 : ಬಜೆಟ್​ನಲ್ಲಿ ದೊಡ್ಡ ಮೊತ್ತ ಮೀಸಲಾಗಿರುವುದು ಸಾಲದ ಬಡ್ಡಿ ಕಟ್ಟಲು!

Union Budget 2024: ಒಟ್ಟು ಬಜೆಟ್​ನಲ್ಲಿ ಬಡ್ಡಿ ಪಾವತಿಗಾಗಿ 11,62,940 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ವಿನಿಯೋಗಿಸಲಿದೆ. ಇದು ಬಜೆಟ್​ನ ಅತಿ ದೊಡ್ಡ ಭಾಗವಾಗಿದೆ. ಇನ್ನು ರಕ್ಷಣಾ ವಲಯಕ್ಕೆ 4,54,773 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಓದಿದ ಬಜೆಟ್​ನಲ್ಲಿದೆ. ಇನ್ನು ಸಬ್ಸಿಡಿ ಮೊತ್ತವು ಮೂರನೇ ಸ್ಥಾನವನ್ನು ಸಬ್ಸಿಡಿ ವಿತರಣೆ ಪಡೆದುಕೊಂಡಿದೆ.

VISTARANEWS.COM


on

Union Budget
Koo

ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಂಸತ್ತಿನಲ್ಲಿ ಕೇಂದ್ರ ಬಜೆಟ್ (Union Budget 2024) ಮಂಡಿಸಿದ್ದಾರೆ. ಆದರೆ ಈ ಬಜೆಟ್​ನಲ್ಲಿ ದೊಡ್ಡ ಮೊತ್ತವನ್ನು ಸಾಲಗಳ (Interest) ಮೇಲಿನ ಬಡ್ಡಿಗಳ ಪಾವತಿಗೆ ನಿಗದಿ ಮಾಡಲಾಗಿದೆ. ನಂತರದ ಸ್ಥಾನವನ್ನು ಮಿಲಿಟರಿ, ಸಬ್ಸಿಡಿ ಸೇರಿದಂತೆ ಇತರ ಯೋಜನೆಗಳಿಗೆ ವಿನಿಯೋಗಿಸಲಾಗುತ್ತದೆ. ಕೇಂದ್ರವು ತನ್ನ ಬಜೆಟ್​​ನ ಗಮನಾರ್ಹ ಭಾಗವನ್ನು ತೆರಿಗೆ ಆಡಳಿತ, ಜಿಎಸ್ಟಿ ಪರಿಹಾರ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವರ್ಗಾವಣೆಗೂ ಖರ್ಚು ಮಾಡುತ್ತದೆ ಎಂಬುದನ್ನೂ ಗಮನಿಸಬೇಕಾಗುತ್ತದೆ.

ಒಟ್ಟು ಬಜೆಟ್​ನಲ್ಲಿ ಬಡ್ಡಿ ಪಾವತಿಗಾಗಿ 11,62,940 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ವಿನಿಯೋಗಿಸಲಿದೆ. ಇದು ಬಜೆಟ್​ನ ಅತಿ ದೊಡ್ಡ ಭಾಗವಾಗಿದೆ. ಇನ್ನು ರಕ್ಷಣಾ ವಲಯಕ್ಕೆ 4,54,773 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಓದಿದ ಬಜೆಟ್​ನಲ್ಲಿದೆ. ಇನ್ನು ಸಬ್ಸಿಡಿ ಮೊತ್ತವು ಮೂರನೇ ಸ್ಥಾನವನ್ನು ಸಬ್ಸಿಡಿ ವಿತರಣೆ ಪಡೆದುಕೊಂಡಿದೆ. ಆಹಾರ ವಲಯದ ಸಬ್ಸಿಡಿಗಾಗಿ 2,05,250 ಕೋಟಿ ರೂಪಾಯಿ, ರಸಗೊಬ್ಬರ ಸಬ್ಸಿಡಿಗಅಗಿ 1,64,000 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ.

ಬಜೆಟ್​ನಲ್ಲಿ ಪೆಟ್ರೋಲಿಯಂಗಾಗಿ 11,925 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು ಗ್ರಾಮೀಣಾಭಿವೃದ್ಧಿಗಾಗಿ 2,65,808 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಸಾರಿಗೆಗೆ 5,44,128 ಕೋಟಿ ರೂಪಾಯಿ ಪ್ರಕಟಿಸಿದ್ದರೆ, ಪಿಂಚಣಿ ಮೊತ್ತಕ್ಕಾಗಿ 2,43,296 ಕೋಟಿ ರೂಪಾಯಿ ಕೊಡಲಾಗಿದೆ.

ಗೃಹ ವ್ಯವಹಾರಕ್ಕಾಗಿ 1,50,983 ಕೋಟಿ ರೂಪಾಯಿ ಕೊಟ್ಟಿದ್ದರೆ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗಾಗಿ 1,51,851 ಕೋಟಿ ರೂಪಾಯಿಗಳನ್ನು ನಿರ್ಮಲಾ ಸೀತರಾಮನ್ ಅವರು ನಿಗದಿ ಮಾಡಿದ್ದಾರೆ. ಶಿಕ್ಷಣಕ್ಕಾಗಿ 1,25,638 ಕೋಟಿ ರೂಪಾಯಿ ಹಾಗೂ ಐಟಿ ಮತ್ತು ಟೆಲಿಕಾಂ ವಲಯಕ್ಕೆ 1,16,342 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿಗದಿಯಾಗಿದೆ.

    2024-25ನೇ ಸಾಲಿನ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.9ಕ್ಕೆ ಅಂದಾಜಿಸಲಾಗಿದೆ. ಸಾಲಗಳನ್ನು ಹೊರತುಪಡಿಸಿ ಒಟ್ಟು ಆದಾಯವನ್ನು 32.07 ಲಕ್ಷ ಕೋಟಿ ರೂ.ಗೆ ಅಂದಾಜಿಸಲಾಗಿದ್ದು, ಒಟ್ಟು ವೆಚ್ಚವನ್ನು 48.21 ಲಕ್ಷ ಕೋಟಿ ರೂ.ಗೆ ಅಂದಾಜಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

    ವಿತ್ತೀಯ ಕೊರತೆ ಕಡಿಮೆ ಮಾಡುವ ಅಂದಾಜು

    2025-26ರ ಹಣಕಾಸು ವರ್ಷದ ವೇಳೆಗೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇಕಡಾ 4.5 ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ವಿತ್ತೀಯ ಕೊರತೆ ಎಂದರೆ ಸರ್ಕಾರವು ಗಳಿಸುವ ಮತ್ತು ಖರ್ಚು ಮಾಡುವ ನಡುವಿನ ಅಂತರವಾಗಿದೆ, ಇದು ಅದು ಎಷ್ಟು ಸಾಲ ಪಡೆಯಬೇಕಾಗಬಹುದು ಎಂಬುದನ್ನು ತೋರಿಸುತ್ತದೆ.

    ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್​ ನಮ್ಮ ರಾಹುಲ್ ಗಾಂಧಿ ಆಲೋಚನೆಗಳ ನಕಲು; ಕಾಂಗ್ರೆಸ್​ ಟೀಕೆ

    2021 ರಲ್ಲಿ ನಾನು ಘೋಷಿಸಿದ ಹಣಕಾಸಿನ ಬಲವರ್ಧನೆ ಮಾರ್ಗವು ನಮ್ಮ ಆರ್ಥಿಕತೆಗೆ ಉತ್ತಮವಾಗಿ ಪ್ರತಿಕ್ರಿಯಿಸಿದೆ. ಮುಂದಿನ ವರ್ಷ ಶೇಕಡಾ 4.5 ಕ್ಕಿಂತ ಕಡಿಮೆ ಕೊರತೆಯನ್ನು ತಲುಪುವ ಗುರಿ ಹೊಂದಿದ್ದೇವೆ ಎಂದು ಸೀತಾರಾಮನ್ ಹೇಳಿದರು. 2026-27 ರಿಂದ ಪ್ರತಿ ವರ್ಷ ವಿತ್ತೀಯ ಕೊರತೆಯನ್ನು ಉಳಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ಇದರಿಂದ ಕೇಂದ್ರ ಸರ್ಕಾರದ ಸಾಲವು ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

    ಮೂಲಸೌಕರ್ಯ ವೆಚ್ಚ ಗುರಿಯಲ್ಲಿ ಯಾವುದೇ ಬದಲಾವಣೆ ಇಲ್ಲ

    ಮಾರ್ಚ್ 2025 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಮೂಲಸೌಕರ್ಯಕ್ಕಾಗಿ ದಾಖಲೆಯ 11,11,000 ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಕೇಂದ್ರ ಘೋಷಿಸಿದೆ. ಈ ವೆಚ್ಚದ ಯೋಜನೆ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಫೆಬ್ರವರಿಯಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್​ನಷ್ಟೇ ಇದೆ. ಇದು ನಮ್ಮ ಜಿಡಿಪಿಯ (ಒಟ್ಟು ದೇಶೀಯ ಉತ್ಪನ್ನ) 3.4% ಆಗಿರುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸುವಾಗ ಹೇಳಿದ್ದಾರೆ.

    Continue Reading
    Advertisement
    Union Budget 2024
    ದೇಶ13 seconds ago

    Union Budget 2024 : ಹೂಡಿಕೆಗಳನ್ನು ಉತ್ತೇಜಿಸಲು ‘ಏಂಜಲ್ ಟ್ಯಾಕ್ಸ್’ ರದ್ದು ಮಾಡಿದ ಕೇಂದ್ರ ಸರ್ಕಾರ

    Viral Video
    Latest3 mins ago

    Viral Video: ಎರಡು ಮುಖ, ನಾಲ್ಕು ತೋಳು, ನಾಲ್ಕು ಕಾಲುಗಳ ಮಗು ಜನನ!

    Udupi News
    ಉಡುಪಿ7 mins ago

    Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

    ರಾಜಕೀಯ24 mins ago

    BJP Padayatra: ಮುಡಾ ಹಗರಣ ಖಂಡಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧಾರ

    Parashuram D
    ಕರ್ನಾಟಕ34 mins ago

    Parashuram D : ವಿಸ್ತಾರ ಮೀಡಿಯಾದ ನೂತನ ಜಿ.ಎಮ್ ಆಗಿ ಪರಶುರಾಮ ಡಿ

    Train Tragedy
    Latest39 mins ago

    Train Tragedy: ರೈಲ್ವೆ ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ತಂದೆ!

    Union Budget 2024
    ದೇಶ39 mins ago

    Union Budget 2024: ಬಜೆಟ್‌ನಲ್ಲಿ ಬಿಹಾರ, ಆಂಧ್ರಪ್ರದೇಶಕ್ಕೆ ಬಂಪರ್‌ ಕೊಡುಗೆ: ಇಲ್ಲಿದೆ ನಗೆಯುಕ್ಕಿಸುವ ಮೀಮ್ಸ್‌

    Protest by Congress alleged that MLA Sunil Kumar has built a fake Parashurama statue
    ಉಡುಪಿ41 mins ago

    Lakshmi Hebbalkar: ನಕಲಿ ಪರಶುರಾಮ ಪ್ರತಿಮೆ ಸ್ಥಾಪನೆ; ಎಸ್ಐಟಿ ತನಿಖೆಗೆ ಹೆಬ್ಬಾಳಕರ್ ಒತ್ತಾಯ

    Harshika Poonacha Bhuvann Ponnannaa shares opinion about marriage
    ಸ್ಯಾಂಡಲ್ ವುಡ್48 mins ago

    Harshika Poonacha: ಮದುವೆ ಆದ್ರೂ ಮಕ್ಕಳು ಬೇಡ ಅನ್ನೋರಿಗೆ ಮುಟ್ಟಿ ನೋಡ್ಕೊಳ್ಳೋ ಹಾಗೆ ಉತ್ತರ ಕೊಟ್ಟ ಹರ್ಷಿಕಾ ಪೂಣಚ್ಚ ದಂಪತಿ!

    Team India
    ಕ್ರೀಡೆ51 mins ago

    Team India: ನೂತನ ಕೋಚ್​ ಗಂಭೀರ್​ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ ಟೀಮ್​ ಇಂಡಿಯಾ ಆಟಗಾರರು

    Sharmitha Gowda in bikini
    ಕಿರುತೆರೆ10 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ9 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ9 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    galipata neetu
    ಕಿರುತೆರೆ8 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ10 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ10 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ9 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ7 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    varun
    ಕಿರುತೆರೆ8 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Kannada Serials
    ಕಿರುತೆರೆ10 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    Udupi News
    ಉಡುಪಿ7 mins ago

    Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

    murder case
    ರಾಮನಗರ4 hours ago

    Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

    karnataka Rain
    ಮಳೆ3 days ago

    Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

    karnataka Rain
    ಮಳೆ3 days ago

    Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

    karnataka Rain
    ಮಳೆ4 days ago

    Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

    Karnataka Rain
    ಮಳೆ4 days ago

    Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

    Karnataka Rain
    ಮಳೆ5 days ago

    Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

    Uttara Kannada Landslide
    ಮಳೆ5 days ago

    Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

    Karnataka Rain
    ಮಳೆ1 week ago

    Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

    karnataka Rain
    ಮಳೆ1 week ago

    Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

    ಟ್ರೆಂಡಿಂಗ್‌