ರಿಲಾಯನ್ಸ್ ಇಂಡಸ್ಟ್ರೀಸ್ (Reliance Industries) ಮಾಲೀಕ ಮತ್ತು ಭಾರತದ ಶ್ರೀಮಂತ ವ್ಯಕ್ತಿ (India’s richest man) ಮುಕೇಶ್ ಅಂಬಾನಿ (Mukesh Ambani) ಅವರು ಧರಿಸುವ, ಬಳಸುವ ಪ್ರತಿಯೊಂದು ವಸ್ತುವಿನ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಪತ್ನಿ ನೀತಾ ಅಂಬಾನಿ (nita ambani) ಅವರೊಂದಿಗೆ ಪಾಲ್ಗೊಂಡಿದ್ದ ಮುಕೇಶ್ ಅಂಬಾನಿ ಅವರ ಕೈಯಲ್ಲಿದ್ದ ಫೋನ್ (Mukesh Ambani Mobile) ಎಲ್ಲರ ಗಮನ ಸೆಳೆದಿತ್ತು.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾಗಿ ಸುಮಾರು ಎಂಟು ತಿಂಗಳಾಗುತ್ತ ಬಂದರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಲೆಬ್ರಿಟಿಗಳು, ವಿಐಪಿಗಳು ಎಲ್ಲರ ಗಮನ ಸೆಳೆದಿರುವುದು ಇನ್ನೂ ಚರ್ಚೆಯಾಗುತ್ತಲೇ ಇದೆ. ಮುಕೇಶ್ ಅಂಬಾನಿ ಕೂಡ ತಮ್ಮ ಕುಟುಂಬದೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದಿದ್ದು ಅವರು ಬಳಸುತ್ತಿದ್ದ ಫೋನ್.
ಅದ್ಧೂರಿ ಸಮಾರಂಭದಲ್ಲಿ ಮುಖೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಅವರೊಂದಿಗೆ ಕಾಣಿಸಿಕೊಂಡರು. ಅವರ ಕೈಯಲ್ಲಿದ್ದ ಸ್ಮಾರ್ಟ್ ಫೋನ್ ಎಲ್ಲರ ಗಮನ ಸೆಳೆಯಲು ಹಲವು ಕಾರಣಗಳಿವೆ. ಮುಕೇಶ್ ಅಂಬಾನಿ ಇತ್ತೀಚಿನ ಆಪಲ್ ಐಫೋನ್ ಅನ್ನು ಬಳಸುತ್ತಿದ್ದಾರೆ. ಐಫೋನ್ 15 ಪ್ರೊ ಮ್ಯಾಕ್ಸ್ ಕೇವಲ ಸಾಮಾನ್ಯ ಐಫೋನ್ ಅಲ್ಲ. ಇದು ಐಫೋನ್ 15 ಸರಣಿಯ ಅತ್ಯಂತ ದುಬಾರಿ ಮಾದರಿಯಾಗಿದೆ. ಈ ಫೋನ್‌ನ 256 GB ಮಾದರಿಯು ಸುಮಾರು 1.50 ಲಕ್ಷ ರೂ. ನದ್ದಾಗಿದೆ. 1 ಟಿಬಿ ಸ್ಟೋರೇಜ್ ರೂಪಾಂತರದ ಬೆಲೆ ಅಂದಾಜು 2 ಲಕ್ಷ ರೂ.
ನೀತಾ ಅಂಬಾನಿ ಫೋನ್
ನೀತಾ ಅಂಬಾನಿ ಕೂಡ ಅದೇ ಮಾದರಿಯ ಐಫೋನ್ ಅನ್ನು ಬಳಸುತ್ತಿದ್ದಾರೆ. ಅನೇಕ ಇತರ ಪ್ರಮುಖ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ಈ ಫೋನ್ ಅನ್ನು ಅದರ ಅಸಾಧಾರಣ ವೈಶಿಷ್ಟ್ಯಗಳಿಗಾಗಿ ಆದ್ಯತೆ ನೀಡುತ್ತಾರೆ. ಐಫೋನ್ 15 ಪ್ರೊ ಮ್ಯಾಕ್ಸ್ ಅತ್ಯುತ್ತಮ ಕೆಮರಾ, ನೀರಿನ ಪ್ರತಿರೋಧ ಮತ್ತು ಅತ್ಯಂತ ಗಟ್ಟಿಮುಟ್ಟಾದ ವಿನ್ಯಾಸವನ್ನು ಹೊಂದಿದೆ. ಇದರ ವಿನ್ಯಾಸ ಮತ್ತು ವೈಶಿಷ್ಟ್ಯಗಳು ಉನ್ನತ ದರ್ಜೆಯದ್ದಾಗಿದ್ದು, ಪ್ರೀಮಿಯಂ ನೋಟ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಪ್ರತಿಯೊಂದು ಅಂಶದಲ್ಲೂ ಈ ಫೋನ್ ಮಾರುಕಟ್ಟೆಯಲ್ಲಿನ ಇತರ ಸ್ಮಾರ್ಟ್‌ಫೋನ್‌ಗಳನ್ನು ಮೀರಿಸುತ್ತದೆ.
ಐಫೋನ್ 15 ಪ್ರೊ ಮ್ಯಾಕ್ಸ್ ನ ವೈಶಿಷ್ಟ್ಯಗಳು ಏನೇನು?
ಐಫೋನ್ 15 ಪ್ರೊ ಮ್ಯಾಕ್ಸ್ ಅಸಾಧಾರಣವಾದ ಫೋಟೋ ಮತ್ತು ವಿಡಿಯೋ ಗುಣಮಟ್ಟವನ್ನು ನೀಡುವ ಉನ್ನತ ಆಫ್ ಲೈನ್ ಕೆಮೆರಾವನ್ನು ಒಳಗೊಂಡಿದೆ.
ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!
ಈ ಫೋನ್ ಜಲ ನಿರೋಧಕವಾಗಿದೆ (ವಾಟರ್ ಪ್ರೂಫ್) ಮತ್ತು ಬಲಿಷ್ಠ ಸಾಮಗ್ರಿಗಳಿಂದ ನಿರ್ಮಿಸಲಾಗಿದೆ. ಇದು ಯಾವುದೇ ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುತ್ತದೆ.
ಐಫೋನ್ 15 ಪ್ರೊ ಮ್ಯಾಕ್ಸ್ ನ ನಯವಾದ ಮತ್ತು ಪ್ರೀಮಿಯಂ ವಿನ್ಯಾಸವು ಅದನ್ನು ಸೊಗಸಾದ ಆಯ್ಕೆಯನ್ನಾಗಿ ಮಾಡುತ್ತದೆ. ಹಲವು ಸುಧಾರಿತ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ಒಳಗೊಂಡಿದೆ. 256ಜಿಬಿ ಮತ್ತು 1 ಟಿಬಿ ಸೇರಿದಂತೆ ಮಲ್ಟಿ ಸ್ಟೋರೇಜ್ ರೂಪಾಂತರಗಳಲ್ಲಿ ಇದು ಲಭ್ಯವಿದೆ.