Site icon Vistara News

Mukesh Ambani: ಅಮೆರಿಕದಲ್ಲಿರುವ ಅಪಾರ್ಟ್‌ಮೆಂಟ್‌ ಮಾರಿದ ಮುಕೇಶ್‌ ಅಂಬಾನಿ; ರೇಟ್‌ ಕೇಳಿದರೆ ಅಚ್ಚರಿ

Mukesh Ambani Sells His US Condo

Mukesh Ambani sells luxury condo in Manhattan’s West Village for 9 Million Dollors

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ (RIL), ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರು ಅಮೆರಿಕದಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ ಮಾರಾಟ ಮಾಡಿದ್ದಾರೆ. ನ್ಯೂಯಾರ್ಕ್‌ ಸಿಟಿಯ ಮ್ಯಾನ್ಹಟನ್‌ ಬಳಿಯ ವೆಸ್ಟ್‌ ವಿಲೇಜ್‌ನಲ್ಲಿರುವ ಅಪಾರ್ಟ್‌ಮೆಂಟ್‌ಅನ್ನು ಮುಕೇಶ್‌ ಅಂಬಾನಿ (Mukesh Ambani) ಅವರು 74.52 ಕೋಟಿ ರೂ.ಗೆ (9 ದಶಲಕ್ಷ ಡಾಲರ್)‌ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸುಪಿರಿಯರ್‌ ಇಂಕ್‌ 17 ಮಹಡಿಗಳುಳ್ಳ ಬೃಹತ್‌ ಅಪಾರ್ಟ್‌ಮೆಂಟ್‌ ಆಗಿದ್ದು, ಇದರ ನಾಲ್ಕನೇ ಮಹಡಿಯಲ್ಲಿ ಮುಕೇಶ್‌ ಅಂಬಾನಿ ಅವರು ಅಪಾರ್ಟ್‌ಮೆಂಟ್‌ ಹೊಂದಿದ್ದರು. ಆದರೆ, ಈಗ ಅದನ್ನು ಅವರು ಮಾರಾಟ ಮಾಡಿದ್ದಾರೆ. ಮುಂಬೈನಲ್ಲಿ ಐಷಾರಾಮಿ ನಿವಾಸದಲ್ಲಿ ನೆಲೆಸಿರುವ ಅಂಬಾನಿ ಅವರು ಜಗತ್ತಿನ ಹಲವೆಡೆ ಆಸ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅಮೆರಿಕದಲ್ಲಿರುವ ಅಪಾರ್ಟ್‌ಮೆಂಟ್‌ ಮಾರಾಟ ಮಾಡಲು ನಿಖರ ಕಾರಣ ತಿಳಿದುಬಂದಿಲ್ಲ.

ಹೇಗಿದೆ ಅಪಾರ್ಟ್‌ಮೆಂಟ್?‌

ಐಷಾರಾಮಿ, ಅತ್ಯುತ್ತಮ ಆರ್ಟಿಟೆಕ್ಚರ್‌ ಸೇರಿ ಹಲವು ದೃಷ್ಟಿಯಿಂದ ಸುಪಿರಿಯರ್‌ ಇಂಕ್‌ ಅಪಾರ್ಟ್‌ಮೆಂಟ್‌ ಖ್ಯಾತಿ ಗಳಿಸಿದೆ. ಇದು ಪರಿಸರ ಸ್ನೇಹಿ (Eco Friendly) ಎಂದು ಕೂಡ ಎನಿಸಿದೆ. ಮುಕೇಶ್‌ ಅಂಬಾನಿ ಅವರ ಫ್ಲ್ಯಾಟ್‌ ಎರಡು ಬೆಡ್‌ ರೂಮ್‌, ಒಂದು ಶೆಫ್‌ ಕಿಚನ್‌, 10 ಅಡಿ ಎತ್ತರದ ಸೀಲಿಂಗ್ಸ್‌, ಯಾವುದೇ ಗದ್ದಲ, ಗಲಾಟೆಯಾದರೂ ಕೇಳಿಸದ Noise Proof ಕಿಟಕಿಗಳು ಸೇರಿ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ: Priyanka Chopra: ನೀತಾ ಮುಕೇಶ್​ ಅಂಬಾನಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಿಯಾಂಕಾ-ನಿಕ್‌ ಮಿಂಚಿದ್ದು ಹೀಗೆ!

1919ರಿಂದಲೂ ವಸತಿ ನಿರ್ಮಾಣ ಸೇರಿ ಹಲವು ಉದ್ಯಮಗಳಲ್ಲಿ ಸುಪಿರಿಯರ್‌ ಇನ್‌ ಫ್ಯಾಕ್ಟರಿ ಛಾಪು ಮೂಡಿಸಿದೆ. ಈ ಕಂಪನಿಯ ಅಪಾರ್ಟ್‌ಮೆಂಟ್‌ನಲ್ಲಿ ರೆಸಿಡೆಂಟ್ಸ್‌ ಲಾಂಜ್‌, ಜಿಮ್‌, ಯೋಗ ರೂಮ್‌, ಮಕ್ಕಳು ಆಟವಾಡಲು ಪ್ಲೇ ರೂಮ್‌, ಬೈಕ್‌ ರೂಮ್‌ ಸೇರಿ ಹಲವು ಸವಲತ್ತುಗಳನ್ನು ಹೊಂದಿದೆ. ಇದರಲ್ಲಿ ಹಾಲಿವುಡ್‌ ಖ್ಯಾತ ನಟಿ ಹಿಲರ್‌ ಸ್ವ್ಯಾಂಕ್‌ ಸೇರಿ ಹಲವು ಸೆಲೆಬ್ರಿಟಿಗಳು, ಉದ್ಯಮಿಗಳು ವಾಸಿಸುತ್ತಿದ್ದಾರೆ.

Exit mobile version