Site icon Vistara News

Twitter | ಪರಾಗ್, ವಿಜಯಾಗೆ ಎಲಾನ್ ಮಸ್ಕ್ ಗೇಟ್‌ಪಾಸ್, ನೇಟಿಜನ್ಸ್‌ ಫುಲ್ ಟೈಮ್ ಪಾಸ್!

Twitter

ಬೆಂಗಳೂರು: ಟ್ವಿಟರ್ (Twitter) ಅನ್ನು ಖರೀದಿಸುತ್ತಿದ್ದಂತೆ ಮಾಡಿದ ಮೊದಲ ಕೆಲಸವೇ ಅದರ ಸಿಇಒ ಪರಾಗ್ ಅಗ್ರವಾಲ್ ಅವರನ್ನು ಕೆಲಸದಿಂದ ಕಿತ್ತು ಹಾಕಿದರು. ಬಳಿಕ ಕಂಪನಿಯು ಲೀಗಲ್ ಟೀಂ ಹೆಡ್ ವಿಜಯಾ ಗಡ್ಡೆ ಅವರು ಸೇರಿದಂತೆ ಟಾಪ್ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದಾರೆ! ಕಳೆದ ವರ್ಷವಷ್ಟೇ ಪರಾಗ್ ಅಗ್ರವಾಲ್ ಅವರು ಟ್ವಿಟರ್ ಸಿಇಒ ಆಗಿದ್ದರು. ಇದಕ್ಕೂ ಮೊದಲು ಜಾಕ್ ಡೋರ್ಸೆ ಅವರು ಆ ಸ್ಥಾನದಲ್ಲಿದ್ದರು. ಪರಾಗ್ ಅಗ್ರವಾಲ್ ಅವರು 10 ವರ್ಷದ ಹಿಂದೆ ಟ್ವಿಟರ್ ಸೇರಿದ್ದರು. ಆಗ ಕಂಪನಿಯಲ್ಲಿ ಸಾವಿರ ಉದ್ಯೋಗಿಗಳು ಇರಲಿಲ್ಲ! ಮತ್ತೊಂದೆಡೆ, ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ನಿಷೇಧ ಮಾಡಲು ಮುಂದಾದವರ ಪೈಕಿ ವಿಜಯಾ ಗಡ್ಡೆ ಮುಂಚೂಣಿಯಲ್ಲಿದ್ದರು. ಆಕೆಗೂ ಗೇಟ್‌ಪಾಸ್ ಸಿಕ್ಕಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಟ್ವಿಟರ್‌ನಲ್ಲೇ ಅನೇಕ ಡೋನಾಲ್ಡ್ ಟ್ರಂಪ್, ಎಲಾನ್ ಮಸ್ಕ್ ಅವರನ್ನು ಆಡಿಕೊಳ್ಳುವ ಅನೇಕ ಜೋಕ್ಸ್, ಮೀಮ್‌ಗಳನ್ನು ಹರಿ ಬಿಡುತ್ತಿದ್ದಾರೆ. ಅವುಗಳನ್ನು ನೋಡೋಣ ಬನ್ನಿ.

Exit mobile version