Site icon Vistara News

PhonePe : ಸುಲಭ ಸಾಲ, ಹಣಕಾಸು, ವಿಮೆ ಪಡೆಯಲು ಫೋನ್‌ಪೇಯಿಂದ ಹೊಸ ಅಗ್ರಿಗೇಟರ್‌ ಸರ್ವೀಸ್‌, ಏನಿದು?

phonepe

ಬೆಂಗಳೂರು: ಫೋನ್‌ಪೇ ತನ್ನ ಗ್ರಾಹಕರಿಗೆ ಅಕೌಂಟ್‌ ಅಗ್ರಿಗೇಟರ್‌ ಸರ್ವೀಸ್‌ ( account aggregator services-AA ) ಸೇವೆಯನ್ನು ಆರಂಭಿಸಿದೆ. ತನ್ನ ಅಧೀನದಲ್ಲಿರುವ ಫೋನ್‌ಪೇ ಟೆಕ್ನಾಲಜಿ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌ (PhonePe Technology Services Pvt Ltd ( PTSPL) ಮೂಲಕ ಈ ಸೇವೆಯನ್ನು ಫೋನ್‌ ಪೇ ನೀಡಲಿದೆ.

ಏನಿದು ಅಕೌಂಟ್‌ ಅಗ್ರಿಗೇಟರ್‌ ಸರ್ವೀಸ್, ಏನಿದರ ಅನುಕೂಲ? ಅಕೌಂಟ್‌ ಅಗ್ರಿಗೇಟರ್‌ ಸರ್ವೀಸ್‌ನಲ್ಲಿ ಫೋನ್‌ಪೇ ಗ್ರಾಹಕರು ತಮ್ಮ ಹಣಕಾಸು ವಿವರಗಳನ್ನು ಇತರ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆ, ವಿಮೆ ಕಂಪನಿ, ಇನ್ವೆಸ್ಟ್‌ಮೆಂಟ್‌ ಸಂಸ್ಥೆಗಳ ಜತೆ ಹಂಚುತ್ತಾರೆ. ಇದರಿಂದ ಗ್ರಾಹಕರು ತ್ವರಿತವಾಗಿ ಸಾಲ, ವಿಮೆ ಇತ್ಯಾದಿ ಹಣಕಾಸು ಸೇವೆಗಳನ್ನು ಪಡೆಯಬಹುದು. ಫೋನ್‌ಪೇ 100ಕ್ಕೂ ಹೆಚ್ಚು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಇದರಲ್ಲಿದೆ.

ಆರ್‌ಬಿಐ ಈ ಅಕೌಂಟ್‌ ಅಗ್ರಿಗೇಟರ್‌ ಸರ್ವೀಸ್‌ಗೆ ( Account aggregator) ಫ್ರೇಮ್‌ವರ್ಕ್‌ ಹಾಕಿಕೊಟ್ಟಿದೆ. ಇದರಿಂದ ಹಣಕಾಸು ಸಂಸ್ಥೆಗಳ ನಡುವೆ ಗ್ರಾಹಕರ ಡೇಟಾಗಳ ಸೀಮಾತೀತ ವಿನಿಮಯಕ್ಕೆ ಹಾದಿಯಾಗಲಿದೆ. ಗ್ರಾಹಕರಿಗೂ ಉತ್ತಮ ಹಣಕಾಸು ಸೇವೆ ಪಡೆಯಲು ಅವಕಾಶ ಉಂಟಾಗಿದೆ. ಈ ಸೇವೆಯನ್ನು ಆರ್‌ಬಿಐ ನಿಯಂತ್ರಿಸುತ್ತದೆ. ಎಎಗಳು ಗ್ರಾಹಕರ ಡೇಟಾವನ್ನು ಓದುವುದಿಲ್ಲ, ಮರು ಮಾರಾಟ ಮಾಡುವುದಿಲ್ಲ.

ಎಎ ಸೇವೆ ಪಡೆಯುವುದು ಹೇಗೆ? ಗ್ರಾಹಕರು ಫೋನ್‌ಪೇಯಲ್ಲಿ ಎಎ ಅಕೌಂಟ್‌ ಕ್ರಿಯೇಟ್‌ ಮಾಡಬೇಕಾಗುತ್ತದೆ. ಅಕೌಂಟ್‌ ಆದ ಬಳಿಕ ತಮ್ಮ ಫೈನಾನ್ಷಿಯಲ್‌ ಡೇಟಾಗಳನ್ನು ತಮ್ಮ ಒಪ್ಪಿಗೆಯ ಮೇರೆಗೆ ಗ್ರಾಹಕರು ಬ್ಯಾಂಕ್‌ಗಳ ಜತೆ ಹಂಚಬಹುದು. ಈ ವಿಧಾನದಿಂದ ಗ್ರಾಹಕರಿಗೆ ತಮ್ಮ ಫೈನಾನ್ಷಿಯಲ್‌ ಡೇಟಾಗಳ ಮೇಲೆ ನಿಯಂತ್ರಣ ಸಿಗಲಿದೆ.

ಹಣಕಾಸು ಸೇವೆಗಳನ್ನು ಪಡೆಯುವ ವಿಧಾನ ಕ್ರಾಂತಿಕಾರಕವಾಗಿ ಬದಲಾಗಲಿದೆ. ಡಿಜಿಟಲ್‌ ಸಂಪರ್ಕದ ಹೊಸ ಸಾಧ್ಯತೆ ಸೃಷ್ಟಿಯಾಗಲಿದೆ. ಗ್ರಾಹಕರು ಯಾವುದೇ ತಮ್ಮ ಡೇಟಾವನ್ನು ರದ್ದುಪಡಿಸಲೂ ಅವಕಾಶ ಇದೆ ಎಂದು ಪೋನ್‌ಪೇಯ ಸಹ ಸಂಸ್ಥಾಪಕ ರಾಹುಲ್‌ ಚಾರಿ ಹೇಳಿದ್ದಾರೆ.

ಇದನ್ನೂ ಓದಿ: Nothing Phone: ಐಫೋನ್ ಬೆನ್ನಲ್ಲೇ ಭಾರತದಲ್ಲಿ ಮತ್ತೊಂದು ಕಂಪನಿಯಿಂದ ಸ್ಮಾರ್ಟ್‌ಫೋನ್ ತಯಾರಿಕಾ ಘಟಕ

Exit mobile version