PhonePe : ಸುಲಭ ಸಾಲ, ಹಣಕಾಸು, ವಿಮೆ ಪಡೆಯಲು ಫೋನ್‌ಪೇಯಿಂದ ಹೊಸ ಅಗ್ರಿಗೇಟರ್‌ ಸರ್ವೀಸ್‌, ಏನಿದು? - Vistara News

ಪ್ರಮುಖ ಸುದ್ದಿ

PhonePe : ಸುಲಭ ಸಾಲ, ಹಣಕಾಸು, ವಿಮೆ ಪಡೆಯಲು ಫೋನ್‌ಪೇಯಿಂದ ಹೊಸ ಅಗ್ರಿಗೇಟರ್‌ ಸರ್ವೀಸ್‌, ಏನಿದು?

PhonePe ಫೋನ್‌ ಪೇ ತನ್ನ ಗ್ರಾಹಕರಿಗೆ ನೂತನ ಅಕೌಂಟ್‌ ಅಗ್ರಿಗೇಟರ್‌ ಸರ್ವೀಸ್‌ ಶುರು ಮಾಡಿದೆ. ಏನಿದು? ಇದರ ಲಾಭವೇನು? ಇಲ್ಲಿದೆ ವಿವರ,

VISTARANEWS.COM


on

phonepe
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಫೋನ್‌ಪೇ ತನ್ನ ಗ್ರಾಹಕರಿಗೆ ಅಕೌಂಟ್‌ ಅಗ್ರಿಗೇಟರ್‌ ಸರ್ವೀಸ್‌ ( account aggregator services-AA ) ಸೇವೆಯನ್ನು ಆರಂಭಿಸಿದೆ. ತನ್ನ ಅಧೀನದಲ್ಲಿರುವ ಫೋನ್‌ಪೇ ಟೆಕ್ನಾಲಜಿ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌ (PhonePe Technology Services Pvt Ltd ( PTSPL) ಮೂಲಕ ಈ ಸೇವೆಯನ್ನು ಫೋನ್‌ ಪೇ ನೀಡಲಿದೆ.

ಏನಿದು ಅಕೌಂಟ್‌ ಅಗ್ರಿಗೇಟರ್‌ ಸರ್ವೀಸ್, ಏನಿದರ ಅನುಕೂಲ? ಅಕೌಂಟ್‌ ಅಗ್ರಿಗೇಟರ್‌ ಸರ್ವೀಸ್‌ನಲ್ಲಿ ಫೋನ್‌ಪೇ ಗ್ರಾಹಕರು ತಮ್ಮ ಹಣಕಾಸು ವಿವರಗಳನ್ನು ಇತರ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆ, ವಿಮೆ ಕಂಪನಿ, ಇನ್ವೆಸ್ಟ್‌ಮೆಂಟ್‌ ಸಂಸ್ಥೆಗಳ ಜತೆ ಹಂಚುತ್ತಾರೆ. ಇದರಿಂದ ಗ್ರಾಹಕರು ತ್ವರಿತವಾಗಿ ಸಾಲ, ವಿಮೆ ಇತ್ಯಾದಿ ಹಣಕಾಸು ಸೇವೆಗಳನ್ನು ಪಡೆಯಬಹುದು. ಫೋನ್‌ಪೇ 100ಕ್ಕೂ ಹೆಚ್ಚು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಇದರಲ್ಲಿದೆ.

ಆರ್‌ಬಿಐ ಈ ಅಕೌಂಟ್‌ ಅಗ್ರಿಗೇಟರ್‌ ಸರ್ವೀಸ್‌ಗೆ ( Account aggregator) ಫ್ರೇಮ್‌ವರ್ಕ್‌ ಹಾಕಿಕೊಟ್ಟಿದೆ. ಇದರಿಂದ ಹಣಕಾಸು ಸಂಸ್ಥೆಗಳ ನಡುವೆ ಗ್ರಾಹಕರ ಡೇಟಾಗಳ ಸೀಮಾತೀತ ವಿನಿಮಯಕ್ಕೆ ಹಾದಿಯಾಗಲಿದೆ. ಗ್ರಾಹಕರಿಗೂ ಉತ್ತಮ ಹಣಕಾಸು ಸೇವೆ ಪಡೆಯಲು ಅವಕಾಶ ಉಂಟಾಗಿದೆ. ಈ ಸೇವೆಯನ್ನು ಆರ್‌ಬಿಐ ನಿಯಂತ್ರಿಸುತ್ತದೆ. ಎಎಗಳು ಗ್ರಾಹಕರ ಡೇಟಾವನ್ನು ಓದುವುದಿಲ್ಲ, ಮರು ಮಾರಾಟ ಮಾಡುವುದಿಲ್ಲ.

ಎಎ ಸೇವೆ ಪಡೆಯುವುದು ಹೇಗೆ? ಗ್ರಾಹಕರು ಫೋನ್‌ಪೇಯಲ್ಲಿ ಎಎ ಅಕೌಂಟ್‌ ಕ್ರಿಯೇಟ್‌ ಮಾಡಬೇಕಾಗುತ್ತದೆ. ಅಕೌಂಟ್‌ ಆದ ಬಳಿಕ ತಮ್ಮ ಫೈನಾನ್ಷಿಯಲ್‌ ಡೇಟಾಗಳನ್ನು ತಮ್ಮ ಒಪ್ಪಿಗೆಯ ಮೇರೆಗೆ ಗ್ರಾಹಕರು ಬ್ಯಾಂಕ್‌ಗಳ ಜತೆ ಹಂಚಬಹುದು. ಈ ವಿಧಾನದಿಂದ ಗ್ರಾಹಕರಿಗೆ ತಮ್ಮ ಫೈನಾನ್ಷಿಯಲ್‌ ಡೇಟಾಗಳ ಮೇಲೆ ನಿಯಂತ್ರಣ ಸಿಗಲಿದೆ.

ಹಣಕಾಸು ಸೇವೆಗಳನ್ನು ಪಡೆಯುವ ವಿಧಾನ ಕ್ರಾಂತಿಕಾರಕವಾಗಿ ಬದಲಾಗಲಿದೆ. ಡಿಜಿಟಲ್‌ ಸಂಪರ್ಕದ ಹೊಸ ಸಾಧ್ಯತೆ ಸೃಷ್ಟಿಯಾಗಲಿದೆ. ಗ್ರಾಹಕರು ಯಾವುದೇ ತಮ್ಮ ಡೇಟಾವನ್ನು ರದ್ದುಪಡಿಸಲೂ ಅವಕಾಶ ಇದೆ ಎಂದು ಪೋನ್‌ಪೇಯ ಸಹ ಸಂಸ್ಥಾಪಕ ರಾಹುಲ್‌ ಚಾರಿ ಹೇಳಿದ್ದಾರೆ.

ಇದನ್ನೂ ಓದಿ: Nothing Phone: ಐಫೋನ್ ಬೆನ್ನಲ್ಲೇ ಭಾರತದಲ್ಲಿ ಮತ್ತೊಂದು ಕಂಪನಿಯಿಂದ ಸ್ಮಾರ್ಟ್‌ಫೋನ್ ತಯಾರಿಕಾ ಘಟಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Boat Capsize: ಕಾಶ್ಮೀರದಲ್ಲಿ ಮುಳುಗಿದ ದೋಣಿ; ಶಾಲಾ ಮಕ್ಕಳು ಸೇರಿ ಹಲವರು ಜಲಸಮಾಧಿ ಶಂಕೆ

Boat Capsize: ಜಮ್ಮು-ಕಾಶ್ಮೀರದ ಜೇಲಂ ನದಿಯಲ್ಲಿ ಮಂಗಳವಾರ ಬೆಳಗ್ಗೆ ದೋಣಿ ದುರಂತ ಸಂಭವಿಸಿದೆ. ಮಕ್ಕಳು, ಮಹಿಳೆಯರು ಸೇರಿ ಹಲವರು ಮಂದಿ ದೋಣಿಯಲ್ಲಿ ಸಂಚರಿಸುವಾಗ ಅದು ಮಗುಚಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ರಕ್ಷಣಾ ಕಾರ್ಯಾಚರಣೆಯು ಭರದಿಂದ ಸಾಗಿದೆ.

VISTARANEWS.COM


on

Boat Capsize
Koo

ಶ್ರೀನಗರ: ಜಮ್ಮು-ಕಾಶ್ಮೀರದ (Jammu Kashmir) ಜೇಲಂ ನದಿಯಲ್ಲಿ (Jhelum River) ಮಂಗಳವಾರ (ಏಪ್ರಿಲ್‌ 16) ಬೆಳಗ್ಗೆ ದೋಣಿಯೊಂದು ಮುಳುಗಿದ್ದು (Boat Capsize), ಶಾಲಾ ಮಕ್ಕಳು ಸೇರಿ ಹಲವರು ಮಂದಿ ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಮಕ್ಕಳು ಸೇರಿ ಹಲವರು ಮಂದಿ ಸಂಚರಿಸುತ್ತಿದ್ದರು. ಇದೇ ವೇಳೆ ದೋಣಿಯು ಮಗುಚಿದೆ. ಹಲವು ಮಂದಿ ನೀರಿನಲ್ಲಿ ಮುಳುಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜೇಲಂ ನದಿಯು ಉಕ್ಕಿ ಹರಿಯುತ್ತಿದೆ. ಶಾಲಾ ಮಕ್ಕಳು ಸೇರಿ ಹಲವರು ಇದ್ದ ದೋಣಿಯು ತುಂಬಿದ ನದಿಯಲ್ಲಿ ಶ್ರೀನಗರದ ಗಂಡ್ಬಾಲ್‌ನಿಂದ ಬಟ್ವಾರದವರೆಗೆ ಚಲಿಸುತ್ತಿತ್ತು. ಇದೇ ವೇಳೆ ಹಡಗು ಮಗುಚಿದೆ.

ಅಗತ್ಯಕ್ಕಿಂತ ಹೆಚ್ಚಿನ ಜನ ದೋಣಿಯಲ್ಲಿದ್ದ ಕಾರಣ ದುರಂತ ಸಂಭವಿಸಿದೆಯೋ, ನೀರಿನ ಸೆಳವಿಗೆ ಸಿಲುಕಿ ಮಗುಚಿದೆಯೋ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಜಮ್ಮು-ಕಾಶ್ಮೀರ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣೆಗೆ ಸ್ಥಳೀಯರೂ ನೆರವು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಜೇಲಂ ನದಿಯಲ್ಲಿ ಸಂಚರಿಸುತ್ತಿದ್ದ ದೋಣಿಯಲ್ಲಿ ಎಷ್ಟು ಜನ ಇದ್ದರು? ಇದರಲ್ಲಿ ಶಾಲಾ ಮಕ್ಕಳು ಎಷ್ಟು ಎಂಬುದು ಸೇರಿ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಳೆದ ಕೆಲ ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತಿದ್ದರೂ, ಇದುವರೆಗೆ ಒಬ್ಬರೂ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ಶಾಲಾ ಮಕ್ಕಳು ಪೋಷಕರು ಹೆಚ್ಚಿನ ಆತಂಕಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ಹಡಗು ಮುಳುಗಿ 94 ಜನರ ದುರ್ಮರಣ, 26 ಮಂದಿ ನಾಪತ್ತೆ; ಕಾಲರಾ ಭೀತಿ ತೆಗೆಯಿತು ಪ್ರಾಣ!

Continue Reading

ಪ್ರಮುಖ ಸುದ್ದಿ

Right To Sleep: ನಿದ್ದೆ ಮನುಷ್ಯನ ಹಕ್ಕು, ಯಾರೂ ಕಸಿಯುವಂತಿಲ್ಲ ಎಂದು ಹೈಕೋರ್ಟ್‌ ಆದೇಶ!

Right To Sleep: ಮಹಾರಾಷ್ಟ್ರದಲ್ಲಿ ಇ.ಡಿ ಅಧಿಕಾರಿಗಳು ಅಕ್ರಮವಾಗಿ ಹಣ ವರ್ಗಾವಣೆ ತಡೆ (PMLA) ಕಾಯ್ದೆ ಅಡಿಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿ, ರಾತ್ರಿಯಿಡೀ ವಿಚಾರಣೆ ನಡೆಸಿದ್ದರು. ನನ್ನ ನಿದ್ದೆಗೆ ಭಂಗವುಂಟಾಗಿದೆ, ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂಬುದಾಗಿ ಆರೋಪಿಯು ಕೋರ್ಟ್‌ ಮೊರೆ ಹೋಗಿದ್ದರು. ಹಾಗಾಗಿ ನ್ಯಾಯಾಲಯವು, ನಿದ್ದೆಯ ಮಹತ್ವವನ್ನು ತಿಳಿಸಿ, ವಿಚಾರಣೆ, ದಾಳಿಗೆ ಸಮಯ ನಿಗದಿ ಮಾಡಿಕೊಳ್ಳಿ ಎಂಬುದಾಗಿ ಇ.ಡಿ ಅಧಿಕಾರಿಗಳಿಗೆ ಸೂಚಿಸಿದೆ. ಕೋರ್ಟ್‌ ಸೂಚನೆಯ ಸಾರಾಂಶ ಇಲ್ಲಿದೆ.

VISTARANEWS.COM


on

Right To Sleep
Koo

ಮುಂಬೈ: ‘ನಿದ್ದೆಯೇ ಬುದ್ಧಿಯ ಮೂಲ’ ಎನ್ನುತ್ತಾರೆ. ಬೆಳಗ್ಗೆ 2 ಗಂಟೆ ಬೇಗ ಎದ್ದರೆ ದಿನವಿಡೀ ಆಕಳಿಕೆ, ಬೇಸರ, ಕೆಲಸದಲ್ಲಿ ನಿರಾಸಕ್ತಿ ಮೂಡುತ್ತದೆ. ಸತತವಾಗಿ ನಿದ್ದೆ (Sleeping) ಇಲ್ಲದಿದ್ದರೆ ಮನುಷ್ಯ ಹುಚ್ಚನಾಗುತ್ತಾನೆ ಎಂದು ಕೂಡ ಹೇಳುತ್ತಾರೆ. ಈಗ ಬಾಂಬೆ ಹೈಕೋರ್ಟ್‌ (Bombay High Court) ಕೂಡ ಇದನ್ನೇ ಉಚ್ಚರಿಸಿದೆ. “ನಿದ್ದೆ ಮನುಷ್ಯನ ಹಕ್ಕು (Right To Sleep) ಹಾಗೂ ಮೂಲಭೂತ ಅವಶ್ಯಕತೆಯಾಗಿದೆ. ಯಾರೂ ಇದನ್ನು ಕಸಿಯಬಾರದು” ಎಂಬುದಾಗಿ ಅರ್ಜಿಯೊಂದರ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಯೊಬ್ಬರನ್ನು ರಾತ್ರಿಯಿಡೀ ವಿಚಾರಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಹಾಗೂ ಮಂಜೂಷ ದೇಶಪಾಂಡೆ ಅವರು ಈ ಮೇಲಿನಂತೆ ಆದೇಶ ಹೊರಡಿಸಿದ್ದಾರೆ. “ಇ.ಡಿ ಅಧಿಕಾರಿಗಳು ಯಾರನ್ನೇ ಆಗಲಿ ವಿಚಾರಣೆ ನಡೆಸಲು, ಸಮನ್ಸ್‌ ನೀಡಲು, ಅವರ ಮನೆಗೆ ದಾಳಿ ನಡೆಸಿ ಪರಿಶೀಲನೆ ಮಾಡಲು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ನಿಯಮಿತ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು” ಎಂದು ಕೂಡ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

“ನಿದ್ದೆ ಮನುಷ್ಯನ ಹಕ್ಕಾಗಿದೆ. ಅದೊಂದು ಸಾಮಾನ್ಯ ಅವಶ್ಯಕತೆಯಾಗಿದೆ. ಯಾರಾದರೂ ಮನುಷ್ಯನ ನಿದ್ದೆಯ ಹಕ್ಕನ್ನು ಕಸಿದುಕೊಂಡರೆ, ಆತನ ನಿದ್ದೆಗೆ ಭಂಗ ಮಾಡಿದರೆ ಅದು ಮನುಷ್ಯನ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅದರಲ್ಲೂ, ಇ.ಡಿ ಅಧಿಕಾರಿಗಳು ಹೊತ್ತಲ್ಲದ ಹೊತ್ತಲ್ಲಿ ದಾಳಿ ನಡೆಸಿ, ವಿಚಾರಣೆ ಮಾಡಿದರೆ ಖಂಡಿತವಾಗಿಯೂ ಅವರ ನಿದ್ದೆಗೆ ಭಂಗವುಂಟಾಗುತ್ತದೆ. ಯಾವುದೇ ವ್ಯಕ್ತಿಗೆ ಸರಿಯಾದ ನಿದ್ದೆ ಇಲ್ಲದಿದ್ದರೆ ಆತನ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.

ಏನಿದು ಪ್ರಕರಣ?

ಮಹಾರಾಷ್ಟ್ರದ ಗಾಂಧಿಧಾಮ ನಿವಾಸಿಯಾದ ರಾಮ್‌ ಕೋಟುಮಲ್‌ (64) ಎಂಬುವರನ್ನು ಇ.ಡಿ ಅಧಿಕಾರಿಗಳು 2023ರ ಆಗಸ್ಟ್‌ನಲ್ಲಿ ಬಂಧಿಸಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಅವರನ್ನು ಬಂಧಿಸಿದ್ದರು. ಇ.ಡಿ ಅಧಿಕಾರಿಗಳು ರಾತ್ರಿಯಿಡೀ ಅವರನ್ನು ವಿಚಾರಣೆ ನಡೆಸಿದ್ದರು. ಆರೋಪಿಯು ಶೌಚಾಲಯಕ್ಕೆ ಹೋದರೆ, ಅಲ್ಲಿಯೂ ಅವರಿಗೆ ತೊಂದರೆ ಕೊಟ್ಟಿದ್ದರು. ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ರಾಮ್‌ ಕೋಟುಮಲ್‌ ಅವರ ಬಂಧನವೇ ಕಾನೂನುಬಾಹಿರವಾಗಿದೆ ಎಂಬುದಾಗಿ ಅವರ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದರು. ಆಗ ನ್ಯಾಯಾಲಯವು ಇ.ಡಿ ಅಧಿಕಾರಿಗಳಿಗೆ ಸಮಯ ನಿಗದಿಪಡಿಸಿಕೊಳ್ಳುವಂತೆ ಸೂಚಿಸಿತ್ತು.

ಇದನ್ನೂ ಓದಿ: Robbery Case : ನಿದ್ದೆಗೆ ಜಾರಿದ ಮಾಲೀಕನ ಕೈ-ಕಾಲು ಕಟ್ಟಿ, ಮನೆಯನ್ನೇ ಲೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್‌!

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

ನನ್ನ ದೇಶ ನನ್ನ ದನಿ ಅಂಕಣ: ಅಪಾರ ಅನುಭವದ ಜೈಶಂಕರ್ ತಮ್ಮ “THE INDIA WAY” ಕೃತಿಯಲ್ಲಿ ಅಂತಾರಾಷ್ಟ್ರೀಯ ಜಗತ್ತಿನ ಅನೇಕ ಆಯಾಮಗಳ ಬಗೆಗೆ ಅದ್ಭುತವಾದ ವ್ಯಾಖ್ಯಾನ ನೀಡುತ್ತಾರೆ. ಇದು ಈಗ ಕನ್ನಡದಲ್ಲೂ ಲಭ್ಯವಿದೆ.

VISTARANEWS.COM


on

s jaishankar book the india way
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಪರಂಪರೆಯನ್ನು, ನಮ್ಮ ಶಾಸ್ತ್ರಗ್ರಂಥಗಳನ್ನು, ನಮ್ಮ ಆರ್ಷ ಚಿಂತನೆಯನ್ನು ನಾವು ಮರೆತೇಬಿಟ್ಟಿದ್ದೇವೆ. ಸಾಮುದಾಯಿಕವಾಗಿ ಸೂಕ್ತವಾಗಿ ಗೌರವಿಸುವುದೂ ಹಿನ್ನೆಲೆಗೆ ಸರಿದಿದೆ. ಯಾರಾದರೂ ನೆನಪು ಮಾಡಿದರೂ, ಉಲ್ಲೇಖಿಸಿದರೂ “ಬಿಡ್ರೀ, obsolete – old – outdated ವಿಚಾರಗಳನ್ನು ಒದರಬೇಡ್ರೀ” ಎಂದು ಝಾಡಿಸುತ್ತೇವೆ. ಹೌದು. ನಮ್ಮ “ಆಧುನಿಕ” ಶಿಕ್ಷಣ ವ್ಯವಸ್ಥೆಯು, ಭಾರತೀಯರಾದ ನಮ್ಮ ಮನೋಭೂಮಿಕೆಯನ್ನು ರೂಪಿಸಿರುವುದೇ ಹಾಗೆ. ಯಾರಾದರೂ ಅಂತಾರಾಷ್ಟ್ರೀಯ ರಾಜಕೀಯದ ಬಗೆಗೆ, ವಿಶ್ವ ಮಾರುಕಟ್ಟೆಯ ಬಗೆಗೆ, ಭಾರತೀಯ ಅರ್ಥ ವ್ಯವಸ್ಥೆಯ ಬಗೆಗೆ ಮಾತನಾಡುವಾಗ, ಅಪ್ಪಿತಪ್ಪಿ ಯಾರಾದರೂ “ಚತುರ್ವಿಧ ಪುರುಷಾರ್ಥ”ಗಳನ್ನು ಉಲ್ಲೇಖಿಸಿದರೆ, ಧರ್ಮ – ಅರ್ಥ – ಕಾಮ – ಮೋಕ್ಷಗಳಿಗೆ ನಮ್ಮ ಪೂರ್ವಿಕರು ಸಮಾನ ಮಹತ್ತ್ವ ನೀಡಿದ್ದರು, ಎಂದರೆ ಸೇರಿದವರು ಗಹಗಹಿಸಿ ನಗಬಹುದು. ಮೂರ್ನಾಲ್ಕು ದಶಕಗಳ ಹಿಂದೆ ವಿಜೃಂಭಿಸುತ್ತಿದ್ದ ಸಮಾಜವಾದಿ ಹಿನ್ನೆಲೆಯ ಕೆಲವು ಸಂಪಾದಕರೋ ಪತ್ರಕರ್ತರೋ ಈಗ ಇದ್ದಿದ್ದರೆ, ಉಲ್ಲೇಖಿಸಿದವರು “Get lost” “Get out” ಎಂದು ಅನ್ನಿಸಿಕೊಳ್ಳಬೇಕಾಗಿತ್ತೋ ಏನೋ!

ಕಾಲ ಬದಲಾಗಿದೆ, ಬಿಡಿ. 2014ರ ಅನಂತರ ತುಂಬ ತುಂಬ ಬದಲಾಗುತ್ತಲೂ ಇದೆ.

ಹಿಂದೊಮ್ಮೆ ವಾಜಪೇಯಿ ಅವರು ಹೇಳಿದ್ದರು, ನಾವು ಇತಿಹಾಸ ಬದಲಿಸಬಹುದು, ಆದರೆ, ಭೂಗೋಳವನ್ನು (Geography) ಬದಲಿಸಲಾರೆವು ಎಂದು. ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ದೇಶಗಳಂತಹ ಮಗ್ಗುಲ ಮುಳ್ಳುಗಳು ಆ ಉದ್ಗಾರಕ್ಕೆ ಕಾರಣವಾಗಿದ್ದವು. ಹಿಂದೂ ಸಮಾಜ ಎಚ್ಚೆತ್ತುಕೊಂಡರೆ, of course, ಜಡತ್ವವನ್ನು ಮೈಕೊಡವಿಕೊಂಡು ಎದ್ದರೆ ಅಸಾಧ್ಯವೂ ಸಾಧ್ಯವಾದೀತು.

ರಾಷ್ಟ್ರೀಯ ಅರ್ಥವ್ಯವಸ್ಥೆಯಿರಲಿ, ಅಂತಾರಾಷ್ಟ್ರೀಯ ಅರ್ಥವ್ಯವಸ್ಥೆಯಿರಲಿ, ಅರ್ಥ ಮಾಡಿಕೊಳ್ಳಲು ನಾವು ಸಾಮಾನು ಸರಂಜಾಮು ಸಾಗಿಸುವ ಹಡಗುಗಳನ್ನು, ಕಾರ್ಗೋ (cargo) ವಿಮಾನಗಳನ್ನು, ಗೂಡ್ಸ್ ಗಾಡಿಗಳನ್ನು, ದೊಡ್ಡ ದೊಡ್ಡ ಹೆದ್ದಾರಿಗಳನ್ನು ಒಂದಿಷ್ಟು ವಿಚಕ್ಷಣೆಯಿಂದ ನೋಡಬೇಕು. ತೈಲ ಸಾಗಣೆಯ ಹಡಗುಗಳನ್ನೂ, ಕಲ್ಲಿದ್ದಲು ಸಾಗಿಸುವ ರೈಲು ಗಾಡಿಗಳನ್ನೂ ಗಮನಿಸಬೇಕು. ಆಗ ಮನುಕುಲದ ಎಂಟು ಶತಕೋಟಿ ಮಾನವಜೀವಿಗಳ ಅಗತ್ಯಗಳನ್ನು ಪೂರೈಸುವ ವಿಶಾಲ ಅರ್ಥವ್ಯವಸ್ಥೆಯ ಸ್ಥೂಲ ನೋಟ ದೊರೆಯುತ್ತದೆ. ಈ ವ್ಯವಸ್ಥೆ ನಮ್ಮ ನರಮಂಡಲದಂತೆ. ಅರೆಕ್ಷಣವೂ ಸಹ ಈ ವ್ಯವಸ್ಥೆಯಿಲ್ಲದೆ ಮನುಷ್ಯ ಬದುಕಲಾರ. ಇತಿಹಾಸದ ಹಿನ್ನೋಟದಲ್ಲಿ ಸಾವಿರಾರು ವರ್ಷಗಳ ಹಿಂದೆ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತದ್ದೇ ಸಿಂಹಪಾಲು. ಅಂದಿನ ಸಿಲ್ಕ್ ರೂಟ್, ಸಾರ್ಥಗಳು, ಯೂರೋಪಿನಲ್ಲಿಯೂ ಹೆಸರು ಮಾಡಿದ್ದ ನಮ್ಮ ಸಿದ್ಧವಸ್ತುಗಳು, ಬಟ್ಟೆಗಳು ಎಲ್ಲವೂ ಜಗತ್ತಿನ ಆರ್ಥಿಕತೆಯ ಬಹು-ಆಯಾಮಗಳನ್ನು ನೆನಪಿಸುತ್ತವೆ. ಭಾರತ ಇದ್ದುದೇ ಹಾಗೆ. ಅಧ್ಯಾತ್ಮ – ಅರ್ಥ ವ್ಯವಸ್ಥೆ ಎರಡರಲ್ಲಿಯೂ ನಾವು ಔನ್ನತ್ಯ ಸಾಧಿಸಿದ್ದೆವು. ಶತ್ರುಗಳನ್ನು – ಪಾಶವೀ ರಿಲಿಜನ್ನುಗಳನ್ನು ಅರ್ಥ ಮಾಡಿಕೊಳ್ಳದೇ, ಶತಶತಮಾನಗಳ ಕಾಲ ಗುಲಾಮರಾಗಿಬಿಟ್ಟೆವು, ದರಿದ್ರರಾಗಿಬಿಟ್ಟೆವು, ಕಿಂಕರ್ತವ್ಯಮೂಢರಾಗಿಬಿಟ್ಟೆವು.

ಅರ್ಥ ವ್ಯವಸ್ಥೆ ಅಷ್ಟೇ ಅಲ್ಲ, ಜಗತ್ತಿನ ಅಂತಾರಾಷ್ಟ್ರೀಯ ಸಂಬಂಧಗಳು ತೀರಾ ತೀರಾ ಸಂಕೀರ್ಣ. ಅಂತಾರಾಷ್ಟ್ರೀಯ ಸ್ತರದಲ್ಲಿ ಕಳೆದ ನೂರು ವರ್ಷಗಳ ಭಾರತದ ಇತಿಹಾಸವನ್ನು ಗಮನಿಸಿದರೆ, ನಾವು ಉಳಿದಿರುವುದೇ ಹೆಚ್ಚು ಎಂಬುದು ಸ್ಪಷ್ಟವಾಗಿಬಿಡುತ್ತದೆ. ಐವತ್ತು ವರ್ಷಗಳ ಹಿಂದೆ, ಬ್ರಿಟಿಷರ ಪ್ರೀತಿಪಾತ್ರ ಪಕ್ಷವು ಅಧಿಕಾರದಲ್ಲಿದ್ದಾಗ, ಸಂಸತ್ತಿನಲ್ಲಿ ಅಕ್ಷರಶಃ ನೂರಾರು ಜನ ಸಂಸತ್ ಸದಸ್ಯರು CIA – KGB ಸಂಸ್ಥೆಗಳ Pay Rollನಲ್ಲಿದ್ದರಂತೆ. ಅವರಿಗೆ regular ಆಗಿ ವಿದೇಶೀ ಹಣ ಬರುತ್ತಿತ್ತು. ಕೆಲವು ವರ್ಷಗಳ ಹಿಂದೆ, ಈ ಗೂಢಚಾರೀ ಸಂಸ್ಥೆಗಳ ದಾಖಲೆಗಳು ಬಯಲಾದಾಗ (De-classification) ವಿಷಯ ತಿಳಿದ ನಾವೆಲ್ಲಾ ಚೇತರಿಸಿಕೊಳ್ಳಲು ಬಹಳ ಕಾಲವೇ ಹಿಡಿಯಿತು.

ಬಹಳ ವರ್ಷಗಳ ಕಾಲ ನಮ್ಮ ದೇಶದ ವಿದೇಶಾಂಗ ಮಂತ್ರಿಗಳು ಅಕ್ಷರಶಃ ಜೋಕರ್‌ಗಳಾಗಿಬಿಟ್ಟಿದ್ದರು. ತೈಲ ರಾಷ್ಟ್ರಗಳ ಮುಂದೆಹೋಗಿ, ಹಲ್ಲು ಗಿಂಜುತ್ತಿದ್ದರು, ಕರೆಯದಿದ್ದರೂ ಹೋಗಿ ಥೂ ಎನ್ನಿಸಿಕೊಂಡು ಬರುತ್ತಿದ್ದರು. ಅವರೆಲ್ಲಾ ಅಮೆರಿಕಾ ಇಲ್ಲವೇ ಸೋವಿಯತ್ ಒಕ್ಕೂಟದ ಆಜ್ಞಾನುವರ್ತಿಯಾಗಿರುವುದೇ ವಿದೇಶಾಂಗ ನೀತಿ ಎಂದುಕೊಂಡುಬಿಟ್ಟಿದ್ದರು. ಎರಡೂ ಶಕ್ತಿಕೇಂದ್ರದವರಿಂದ ಭಾರತ ಒದೆ ತಿಂದಿದ್ದೇ ಹೆಚ್ಚು. ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳೂ, ಲೇಖಕರೂ, ಚಿಂತಕರೂ ಆಗಿದ್ದ ಆರ್.ಎನ್.ಕುಲಕರ್ಣಿಯವರು ವಿಷಾದದಿಂದ “ನಮ್ಮ ದೇಶಕ್ಕೆ ವಿದೇಶಾಂಗ ನೀತಿ ಎಂಬುದೇ ಇಲ್ಲ” ಎಂದಿದ್ದರು. ಹಲವಾರು ದೇಶಗಳಲ್ಲಿ ವಿದೇಶಾಂಗ ಇಲಾಖೆಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿ, ಕಟು-ಸತ್ಯಗಳನ್ನು ಕಂಡಿದ್ದ ಅವರಿಗೆ ಅಂದಿನ ಗೊಂದಲದ ವಿದೇಶಾಂಗ ನೀತಿ (?) ಭ್ರಮನಿರಸನ ಉಂಟುಮಾಡಿತ್ತು.

ಮೋದಿ ಸರ್ಕಾರದ ಪ್ರಥಮ ವಿದೇಶಾಂಗ ಮಂತ್ರಿಯಾಗಿ ಸುಷ್ಮಾ ಅದ್ಭುತವಾಗಿ ಕಾರ್ಯನಿರ್ವಹಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅನಂತರ ಉತ್ತರಾಧಿಕಾರಿ ಯಾರು ಎಂಬುದು ದೇಶಕ್ಕೆ ಚಿಂತೆಯ ಸಂಗತಿಯಾಗಿತ್ತು. ರಾಜಕಾರಣಿಗಳನ್ನು ಮಾತ್ರವೇ ವಿದೇಶಾಂಗ ಮಂತ್ರಿ ಸ್ಥಾನದಲ್ಲಿ ಕಲ್ಪಿಸಿಕೊಳ್ಳುತ್ತಿದ್ದವರಿಗೆ IFS ಅಧಿಕಾರಿಯೊಬ್ಬರು ಅತಿ-ಮಹತ್ತ್ವದ ಆ ಸ್ಥಾನಕ್ಕೆ ಆಯ್ಕೆ ಆಗಬಹುದು, ಎಂದು ಬಹಳ ಜನ ಪತ್ರಕರ್ತರೇ ಊಹಿಸಿರಲಿಲ್ಲ. ಇನ್ನು ಬಹುಪಾಲು ಕಾಂಗ್ರೆಸ್ ಆಡಳಿತದಲ್ಲಿಯೇ ವಿದೇಶಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಜೈಶಂಕರ್ ಅಂತಹವರು, ಬೇರೆಯೇ ಕಾರ್ಯಶೈಲಿಯ ಮೋದಿ ತಂಡದಲ್ಲಿ, ಸುಷ್ಮಾ ಅವರಿಗೆ ಸಮರ್ಥ ಉತ್ತರಾಧಿಕಾರಿಯಾಗಿ ಯಶಸ್ಸು ಪಡೆಯಬಲ್ಲರೇ ಎಂಬ ಸಂದೇಹ ಇದ್ದುದೂ ನಿಜವೇ.

S jaishankar

ಯುದ್ಧಗಳು, ಅಂಟುರೋಗಗಳು, ಬದಲಾಗುವ ದೇಶ-ದೇಶಗಳ ನಡುವಿನ ಸಂಬಂಧಗಳು, ಔಷಧಿ – ಶಸ್ತ್ರಾಸ್ತ್ರಗಳನ್ನು ತಯಾರಿಸುವವರ ಕಟ್-ಥ್ರೋಟ್ ರಾಜಕೀಯಗಳ ನಡುವೆ ದೇಶವೊಂದರ ಪ್ರಧಾನಮಂತ್ರಿ – ವಿದೇಶಾಂಗ ಮಂತ್ರಿಗಳ ಪಾತ್ರ ಯಾವಾಗಲೂ ಕಷ್ಟತಮವಾದುದೇ, ಸಂಕೀರ್ಣವಾದುದೇ. ತುಂಬ ಯೋಚಿಸಿ ಇಟ್ಟ ಹೆಜ್ಜೆಯೂ ಕೆಲವೊಮ್ಮೆ ಮುಜುಗರಕ್ಕೆ ಕಾರಣವಾಗುತ್ತದೆ. ಭೂಕಂಪಕ್ಕೆ ತುತ್ತಾದ ಟರ್ಕಿ ದೇಶಕ್ಕೆ ತ್ವರಿತ ಸಹಾಯ ಹಸ್ತ ಚಾಚಿದ ಮತ್ತು ತುರ್ತು ಅಗತ್ಯಗಳನ್ನು ಪೂರೈಸಿದ ಭಾರತಕ್ಕೆ, ಕೆಲವೇ ದಿನಗಳಲ್ಲಿ ಆ ಜಿಹಾದೀ ಟರ್ಕಿ ದೇಶವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ದ್ರೋಹ ಬಗೆಯಿತು. ಮಾಲ್ಡೀವ್ಸ್ ನಂತಹ ಜಿರಳೆ ಗಾತ್ರದ ದೇಶವು ಭಾರತಕ್ಕೆ ಸೆಡ್ಡು ಹೊಡೆಯುತ್ತದೆ, ಸವಾಲು ಹಾಕುತ್ತದೆ, ಅವಮಾನ ಮಾಡುತ್ತದೆ. ಇಂತಹ ನೂರೆಂಟು ಅಪಸವ್ಯಗಳು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಇರುವಂತಹುವೇ! ಈ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆಯನ್ನು ನಿಭಾಯಿಸುವುದು ಸರಳವೂ ಅಲ್ಲ, ಸುಲಭವೂ ಅಲ್ಲ.

ಅಪಾರ ಅನುಭವದ ಜೈಶಂಕರ್ ತಮ್ಮ “THE INDIA WAY” ಕೃತಿಯಲ್ಲಿ ಅಂತಾರಾಷ್ಟ್ರೀಯ ಜಗತ್ತಿನ ಅನೇಕ ಆಯಾಮಗಳ ಬಗೆಗೆ ಅದ್ಭುತವಾದ ವ್ಯಾಖ್ಯಾನ ನೀಡುತ್ತಾರೆ. ಅಮೆರಿಕದಂತಹ ದೇಶದ ಸ್ಥಾನಮಾನದ ಬಗೆಗೆ, ನಮ್ಮ ದೇಶದ ಕಾರ್ಯತಂತ್ರ ಸಂಸ್ಕೃತಿಯ ಬಗೆಗೆ, ಭಾರತದ ಮೇಲಿರುವ ಗತಕಾಲದ ಭಾರದ ಬಗೆಗೆ, ಜಾಗತಿಕ ಮಟ್ಟದಲ್ಲಿ ತಡವಾಗಿಯಾದರೂ ದೊರೆತಿರುವ – ದೊರೆಯುತ್ತಿರುವ ಅವಕಾಶಗಳ ಬಗೆಗೆ, ಅಂತಾರಾಷ್ಟ್ರೀಯ ಶಕ್ತಿಗಳ ಹೊಸ ಸಮೀಕರಣದ ಬಗೆಗೆ, ತುಂಬಾ ಮೌಲಿಕವಾದ ಬರೆಹವನ್ನು ನೀಡಿದ್ದಾರೆ. ಈ ಅಂತಾರಾಷ್ಟ್ರೀಯ ಸಂಗತಿಗಳ ಜಗತ್ತೇ ಹೀಗೆ, ದೇಶದೊಳಗಿನ ರಾಜಕಾರಣದ ಒಳಹೂರಣವನ್ನು ಬಗೆದು – ತೆಗೆದು ಬರೆದಂತೆ ಅಲ್ಲವೇ ಅಲ್ಲ. ಪ್ರತಿಯೊಂದು ಸಾಲಿಗೂ ಪ್ರತಿಯೊಂದು ಸಂಗತಿಗೂ, ಬಹು-ಆಯಾಮದ ಮುಖಗಳಿರುತ್ತವೆ, ಅಷ್ಟೇ ಅಲ್ಲ, ವೈಫಲ್ಯದ ವಿಸಂಗತಿಗಳೂ ಇರುತ್ತವೆ. ಏನೇ ನಿರ್ಧಾರ ತೆಗೆದುಕೊಂಡರೂ, ಅನಂತರ ಹೇಗೆ ವಿಶ್ಲೇಷಿಸಿದರೂ ಪ್ರತಿಯೊಂದಕ್ಕೂ ಕೊಂಕು ತೆಗೆಯುವ ಟೀಕಾಕಾರರೂ ಇರುತ್ತಾರೆ.

ವಿದೇಶಾಂಗ ವ್ಯವಹಾರ ಇರುವುದೇ ಹಾಗೆ.

ಜೈಶಂಕರ್ ತಮ್ಮ ಕಾರ್ಯನಿರ್ವಹಣೆಯಲ್ಲಿ ಯಶಸ್ಸು ಪಡೆದಂತೆಯೇ, ಈ ಕೃತಿ ರಚನೆಯಲ್ಲಿಯೂ ಔನ್ನತ್ಯ ಸಾಧಿಸಿದ್ದಾರೆ. ವಿಶೇಷವೆಂದರೆ ಕ್ಲಿಷ್ಟವೂ ಸಂಕೀರ್ಣವೂ, ಮುಖ್ಯವಾಗಿ ತುಂಬಾ ತಾಂತ್ರಿಕವೂ ಆದ ಇಂತಹ ಕೃತಿಗಳನ್ನು ಸಮರ್ಪಕವಾಗಿ ಕನ್ನಡಕ್ಕೆ ಭಾಷಾಂತರಿಸುವುದು ಬಹಳ ದೊಡ್ಡ ಸವಾಲಿನ ಕೆಲಸ. ಸಾಮಾನ್ಯ ಅನುವಾದವನ್ನು ಮೀರಿದ, ಇಂತಹ ರಾಜತಾಂತ್ರಿಕ ಮತ್ತು ವಿದೇಶಾಂಗ ಮಗ್ಗುಲುಗಳ ಗ್ರಂಥವೊಂದನ್ನು ಬಿ.ಎಸ್.ಜಯಪ್ರಕಾಶ ನಾರಾಯಣ ತುಂಬಾ ಚೆನ್ನಾಗಿ ಕನ್ನಡಕ್ಕೆ ತಂದಿದ್ದಾರೆ. ಮೂಲ ಇಂಗ್ಲಿಷ್ ಮತ್ತು ಕನ್ನಡಾನುವಾದದ ಎರಡೂ ಪಠ್ಯಗಳನ್ನು ಜೊತೆಜೊತೆಯಲ್ಲಿಯೇ ನೋಡಿದಾಗ, ಗಮನಿಸಿದಾಗ, ಹೋಲಿಸಿದಾಗ ಜಯಪ್ರಕಾಶರ ಶ್ರಮ ಎಂತಹುದು ಎಂಬುದು ತಿಳಿಯುತ್ತದೆ. ನಿಜಕ್ಕೂ JP ಅಭಿನಂದನೀಯರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಆ ಕರಾಳ ದಿನಗಳನ್ನು ನೆನಪಿಸಿ ಅಂತರಂಗ ಕಲಕುವ ಬುಗುರಿ

“…..ನಾವು ದೇಶಗಳ ಗಡಿ ಮತ್ತು ಸಾಂಪ್ರದಾಯಿಕ ಮಾದರಿಯ ರಾಜಕಾರಣದ ಆಚೆಗೆ ಕೂಡ ಮಾತನಾಡುತ್ತಿದ್ದೇವೆ. ಅಧಿಕಾರವನ್ನು ವ್ಯಾಖ್ಯಾನಿಸುತ್ತಿದ್ದ ಸಂಗತಿಗಳಾಗಲೀ, ರಾಷ್ಟ್ರೀಯ ನಿಲುವನ್ನು ನಿರ್ಧರಿಸುತ್ತಿದ್ದ ಸಂಗತಿಗಳಾಗಲೀ, ಈಗ ಹಿಂದಿನಂತೆಯೇ ಉಳಿದಿಲ್ಲ. ಅವುಗಳ ಜಾಗದಲ್ಲಿ ತಂತ್ರಜ್ಞಾನ, ಸಂಪರ್ಕ ಸೌಲಭ್ಯ ಮತ್ತು ವಾಣಿಜ್ಯ ವಹಿವಾಟುಗಳು ಮುನ್ನೆಲೆಗೆ ಬಂದಿವೆ. ನಿರ್ಬಂಧಿತವೂ ಅಂತರವಲಂಬಿತವೂ ಆಗಿರುವ ಸದ್ಯದ ಜಗತ್ತಿನಲ್ಲಿ ನಮಗೆ ಎದುರಾಗುವ ಸ್ಪರ್ಧೆಯನ್ನು ನಾವು ಹೆಚ್ಚು ಜಾಣ್ಮೆಯಿಂದ ಎದುರಿಸಬೇಕು. ಬಹುಧ್ರುವೀಯ ವ್ಯವಸ್ಥೆಯು ದುರ್ಬಲವಾಗುತ್ತಿದ್ದಂತೆಯೇ, ಜಾಗತಿಕ ಒಳಿತು ಎನ್ನುವುದು ಕೂಡ ಹೆಚ್ಚು ವಿವಾದಾಸ್ಪದವಾಗಿದೆ. ಒಂದು “ಆರ್ಕ್ಟಿಕ್ ಪ್ಯಾಸೇಜ್”ಅನ್ನು ತೆರೆಯುವ ಮೂಲಕ ಹವಾಮಾನ ಬದಲಾವಣೆಯಂತಹ ವಿಚಾರ ಕೂಡ ಜಾಗತಿಕ ರಾಜಕಾರಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಇಷ್ಟೇ ಅಲ್ಲ, ಎಲ್ಲರ ನಿರೀಕ್ಷೆಯನ್ನು ಮೀರಿ ಕರೋನಾ ಸಾಂಕ್ರಾಮಿಕ ಕೂಡ ಇಲ್ಲಿ “ವೈಲ್ಡ್ ಕಾರ್ಡ್” ಆಗಿ ಹೊರಹೊಮ್ಮಿದೆ. ಚುಟುಕಾಗಿ ಹೇಳುವುದಾದರೆ, ಬದಲಾವಣೆಗಳು ಹಿಂದೆಂದೂ ಇಲ್ಲದಂತಹ ರೀತಿಯಲ್ಲಿ ಅಭೂತಪೂರ್ವವಾಗಿ ಸಂಭವಿಸುತ್ತಿವೆ……” (“ಭಾರತ ಪಥ” ಪುಟ ೧೧೮).

20ನೆಯ ಶತಮಾನದ ಪರಿಪ್ರೇಕ್ಷ್ಯದಲ್ಲಿ, ವಿದೇಶಾಂಗ – ಆರ್ಥಿಕ – ಅಂತಾರಾಷ್ಟ್ರೀಯ ಆಯಾಮಗಳ ಭಾರತೇತಿಹಾಸದ ಒಂದು ಮಹತ್ತ್ವದ ಚಿತ್ರ ನೀಡುವಲ್ಲಿ ಜೈಶಂಕರ್ ಯಶಸ್ವಿಯಾಗಿದ್ದಾರೆ ಮತ್ತು ಒಂದು ರೀತಿಯಲ್ಲಿ ಇತಿಹಾಸಕಾರರೂ ಆಗಿಬಿಟ್ಟಿದ್ದಾರೆ.

“ಭಾರತ ಪಥ” ನಾವೆಲ್ಲ ಗಮನಿಸಲೇಬೇಕಾದ ಕೃತಿಗಳಲ್ಲೊಂದು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ವಾರಾಣಸಿಯ ನಂದಿ ಮುಖ ಮಾಡಿದ ಕಡೆಗೆ ಶಿವ ಬರಲು ಇನ್ನೆಷ್ಟು ಕಾಯಬೇಕು?

Continue Reading

ಕ್ರೀಡೆ

IPL 2024: 6 ಸೋಲು ಕಂಡರೂ ಆರ್​ಸಿಬಿಯ ಪ್ಲೇ ಆಫ್ ಆಸೆ ಇನ್ನೂ ಜೀವಂತ

IPL 2024: ತಂಡದದಲ್ಲಿ ಸ್ಟಾರ್​ ಆಟಗಾರರಿದ್ದರೂ ಕೂಡ ಯಾರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವಿರಾಟ್​ ಕೊಹ್ಲಿ, ದಿನೇಶ್​ ಕಾರ್ತಿಕ್​ ಮಾತ್ರ ತಂಡದ ನಂಬಿಕಸ್ಥ ಆಟಗಾರರಾಗಿದ್ದಾರೆ. ಆರ್​ಸಿಬಿ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾದರೆ ಬೌಲಿಂಗ್‌ನಲ್ಲಿ ಎಡವುತ್ತಿದೆ. ಬೌಲಿಂಗ್‌ನಲ್ಲಿ ಯಶಸ್ವಿಯಾದರೆ, ಬ್ಯಾಟಿಂಗ್‌ನಲ್ಲಿ ಪಲ್ಟಿ ಹೊಡೆಯುತ್ತಿದೆ.

VISTARANEWS.COM


on

IPL 2024
Koo

ಬೆಂಗಳೂರು: ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ(IPL 2024) ಆರ್​ಸಿಬಿ(Royal Challengers Bengaluru) ತಂಡ ಕಪ್​ ಗೆಲ್ಲದಿದ್ದರೂ ಕೂಡ ಇಷ್ಟೊಂದು ಕಳಪೆ ಮಟ್ಟದ ಆಟವಾಡಿರಲಿಲ್ಲ. ಈ ಬಾರಿ ಆಡಿದ 7 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಗೆಲುವು ಕಂಡಿದೆ. ದುರಾದೃಷ್ಟವಶಾತ್‌ ಈ ಬಾರಿ ತವರಿನಲ್ಲೇ ಅತ್ಯಧಿಕ ಪಂದ್ಯ ಸೋತ ಅವಮಾನಕ್ಕೆ ಸಿಲುಕಿದೆ.

ಟೂರ್ನಿ ಆರಂಭಕ್ಕೂ ಮುನ್ನ ವಿರಾಟ್​ ಕೊಹ್ಲಿ ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಹೇಳುವು ಮೂಲಕ ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಇದೀಗ ಸತತ ಸೋಲಿನಿಂದ ಸಾಮಾಜಿಕ ಜಾಲತಾಣದಲ್ಲಿ ಮುಗಿದು ಹೋದ ಅಧ್ಯಾಯ ಅಂತ ಅಭಿಮಾನಿಗಳು ವ್ಯಂಗ್ಯವಾಗಿ ಹೇಳತೊಡಗಿದ್ದಾರೆ. ಆರ್​ಸಿಬಿ ಮೇಲೆ ಸ್ವತಃ ಅಭಿಮಾನಿಗಳೇ ವಿಶ್ವಾಸ ಕಳೆದುಕೊಂಡಿದ್ದಾರೆ. ಕೊನೆಯ ಸ್ಥಾನದಲ್ಲಿದ್ದರೂ ಆರ್​ಸಿಬಿಗೆ ಇನ್ನೂ ಪ್ಲೇ ಆಫ್​ ಬಾಗಿಲು ತೆರೆದೇ ಇದೆ.

ಪ್ಲೇ ಆಫ್ ಆಸೆ ಜೀವಂತ

ಸದ್ಯದ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ.

ಇದನ್ನೂ ಓದಿ IPL 2024 Points Table: ಸೋಲಿನ ಮೂಲಕ ಕೊನೆಯ ಸ್ಥಾನದಲ್ಲೇ ಉಳಿದ ಆರ್​ಸಿಬಿ

ತಂಡದದಲ್ಲಿ ಸ್ಟಾರ್​ ಆಟಗಾರರಿದ್ದರೂ ಕೂಡ ಯಾರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವಿರಾಟ್​ ಕೊಹ್ಲಿ, ದಿನೇಶ್​ ಕಾರ್ತಿಕ್​ ಮಾತ್ರ ತಂಡದ ನಂಬಿಕಸ್ಥ ಆಟಗಾರರಾಗಿದ್ದಾರೆ. ಆರ್​ಸಿಬಿ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾದರೆ ಬೌಲಿಂಗ್‌ನಲ್ಲಿ ಎಡವುತ್ತಿದೆ. ಬೌಲಿಂಗ್‌ನಲ್ಲಿ ಯಶಸ್ವಿಯಾದರೆ, ಬ್ಯಾಟಿಂಗ್‌ನಲ್ಲಿ ಪಲ್ಟಿ ಹೊಡೆಯುತ್ತಿದೆ. ಬೌಲಿಂಗ್‌ ಪಡೆಯಂತೂ ಸಂಪೂರ್ಣ ಮೊನಚು ಕಳೆದುಕೊಂಡಿದೆ. ಇದು, ಸಹಜವಾಗಿ ಆರ್‌ಸಿಬಿಯನ್ನು ಸೋಲಿನ ಸುಳಿಗೆ ತಳ್ಳಿದೆ. ಒಟ್ಟಿನಲ್ಲಿ ಸಂಘಟನಾತ್ಮಕ ಹೋರಾಟವೇ ಬರುತ್ತಿಲ್ಲ. 

ಹೈದರಾಬಾದ್​ ವಿರುದ್ಧ ಸೋಲು


ಸೋಮವಾರ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಆತಿಥೇಯ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಎಸ್​ಆರ್​ಎಚ್​ ತಂಡ ವಿಶ್ವ ದಾಖಲೆಯ 287 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆರ್​ಸಿಬಿ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 262 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಆರ್​ಸಿಬಿ ಪರ ಒನ್​ ಮ್ಯಾನ್ ಆರ್ಮಿ ರೀತಿ ಹೋರಾಟ ಸಂಘಟಿಸಿದ ವಿಕೆಟ್​ ಕೀಪರ್ ಬ್ಯಾಟರ್​ ದಿನೇಶ್ ಕಾರ್ತಿಕ್​ 35 ಎಸೆತಗಳಲ್ಲಿ 83 ರನ್ ಬಾರಿಸಿದರು.

Continue Reading
Advertisement
Boat Capsize
ದೇಶ9 mins ago

Boat Capsize: ಕಾಶ್ಮೀರದಲ್ಲಿ ಮುಳುಗಿದ ದೋಣಿ; ಶಾಲಾ ಮಕ್ಕಳು ಸೇರಿ ಹಲವರು ಜಲಸಮಾಧಿ ಶಂಕೆ

IPL 2024
ಕ್ರಿಕೆಟ್13 mins ago

IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ

IPL 2024
ಕ್ರಿಕೆಟ್42 mins ago

IPL 2024: ವಿಶ್ರಾಂತಿ ಬಯಸಿದ ಗ್ಲೆನ್ ಮ್ಯಾಕ್ಸ್​ವೆಲ್​; ಮುಂದಿನ ಪಂದ್ಯಗಳಿಗೆ ಅಲಭ್ಯ

elephant death in dubare camp
ಕೊಡಗು44 mins ago

Elephant Death: ಕ್ಯೂಟ್‌ ಆಗಿ ಆಟವಾಡುತ್ತಿದ್ದ ತಬ್ಬಲಿ ಮರಿಯಾನೆಗೆ ಕೊನೆಗೂ ಸಿಗಲಿಲ್ಲ ತಾಯಿ

Right To Sleep
ಪ್ರಮುಖ ಸುದ್ದಿ44 mins ago

Right To Sleep: ನಿದ್ದೆ ಮನುಷ್ಯನ ಹಕ್ಕು, ಯಾರೂ ಕಸಿಯುವಂತಿಲ್ಲ ಎಂದು ಹೈಕೋರ್ಟ್‌ ಆದೇಶ!

s jaishankar book the india way
ಅಂಕಣ1 hour ago

ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

IPL 2024
ಕ್ರೀಡೆ1 hour ago

IPL 2024: 6 ಸೋಲು ಕಂಡರೂ ಆರ್​ಸಿಬಿಯ ಪ್ಲೇ ಆಫ್ ಆಸೆ ಇನ್ನೂ ಜೀವಂತ

elon musk
ವಿದೇಶ1 hour ago

Elon Musk: 14 ಸಾವಿರ ‘ಮೈಗಳ್ಳ’ ನೌಕರರನ್ನು ವಜಾಗೊಳಿಸಿದ ಎಲಾನ್ ಮಸ್ಕ್;‌ ಇನ್ನೊಂದು ಕಾರಣವೂ ಇದೆ!

IPL 2024 Points Table
ಕ್ರಿಕೆಟ್2 hours ago

IPL 2024 Points Table: ಸೋಲಿನ ಮೂಲಕ ಕೊನೆಯ ಸ್ಥಾನದಲ್ಲೇ ಉಳಿದ ಆರ್​ಸಿಬಿ

Viral Video
ವೈರಲ್ ನ್ಯೂಸ್2 hours ago

Viral Video: ಐಎಎಸ್‌ ಅಧಿಕಾರಿಯ ಡೆಸ್ಕ್‌ ಮೇಲೆಯೇ ಕುಣಿದು ಕುಪ್ಪಳಿಸಿದ ಮಗ; ಪರ-ವಿರೋಧ ಚರ್ಚೆ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ5 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 202422 hours ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ2 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ3 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ4 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌