ಮಂಗಳೂರು: ನವ ಮಂಗಳೂರು ಬಂದರು ಪರಿಸರಸ್ನೇಹಿಯಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಕೇಂದ್ರ ಸಚಿವ ಸರ್ಬಾನಂದ್ ಸೋನಾವಾಲಾ ಹೇಳಿದರು.
ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನವಮಂಗಳೂರು ಬಂದರು ಮತ್ತು ಎಂಆರ್‌ಪಿಎಲ್‌ನ ಒಟ್ಟು ೩,೮೦೦ ಕೋಟಿ ರೂ.ಗಳ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಂದರು ೧೦೦% ಸೌರಶಕ್ತಿಯ ವಿದ್ಯುತ್ ಅನ್ನು ಬಳಸುತ್ತಿದೆ. ಆಧುನೀಕರಣ ಮತ್ತು ಡಿಜಿಟಲೀಕರಣಕ್ಕೆ ಬಂದರು ಒಳಗಾಗಿದೆ. ಮಳೆ ನೀರಿನ ಸಂಗ್ರಹ ವ್ಯವಸ್ಥೆಯನ್ನು ಹೊಂದಿದೆ. ಸರಕು ಸಾಗಣೆ ಮತ್ತು ನಿರ್ವಹಣೆಯ ಸಾಮರ್ಥ್ಯ ವೃದ್ಧಿಸುತ್ತಿದೆ ಎಂದು ವಿವರಿಸಿದರು.
ಸಾಗರಮಾಲಾ ಯೋಜನೆಯಲ್ಲಿ ಕೂಡ ಕರ್ನಾಟಕದ ಪಾಲುದಾರಿಕೆ ದೊಡ್ಡದು. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕೂಡ ರಾಜ್ಯ ಗಣನೀಯ ಕೊಡುಗೆ ನೀಡುತ್ತಿದೆ ಎಂದರು.