ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿಗೆ ತಮ್ಮ ವಿರುದ್ಧದ ಗಡಿಪಾರು ಕೇಸ್ ವಿರುದ್ಧ ಬ್ರಿಟನ್ನಿನ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಲಂಡನ್ ಹೈಕೋರ್ಟ್ ಅನುಮತಿಯನ್ನು ನಿರಾಕರಿಸಿದೆ. (Nirav Modi) ಇದರಿಂದಾಗಿ ನೀರವ್ ಮೋದಿಗೆ ಮತ್ತೊಂದು ಹಿನ್ನಡೆಯಾಗಿದೆ.
ಭಾರತಕ್ಕೆ ನೀರವ್ ಮೋದಿಯನ್ನು ಗಡಿಪಾರು ಮಾಡಿದರೆ, ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಆತನ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿ ಇಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದರು. ನೀರವ್ ಮೋದಿ 2018ರಲ್ಲಿ ಭಾರತದಿಂದ ಪಲಾಯನ ಮಾಡಿದ್ದ. ಬಳಿಕ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಬಯಲಾಗಿತ್ತು. 2019ರಲ್ಲಿ ನೀರವ್ ಮೋದಿಯನ್ನು ಲಂಡನ್‌ನಲ್ಲಿ ಬಂಧಿಸಲಾಗಿತ್ತು.
ಭಾರತಕ್ಕೆ ಗಡಿಪಾರಾದ ಬಳಿಕ ಮುಂಬಯಿನ ಅರ್ಥರ್ ರಸ್ತೆಯ ಕಾರಾಗೃಹದಲ್ಲಿ ನೀರವ್ ಮೋದಿ ಸುರಕ್ಷಿತವಾಗಿ ಇರಬಹುದು ಎಂದು ನ್ಯಾಯಾಧೀಶ ಜೆರ್ಮಿ ಸ್ಟುವರ್ಟ್ ಸ್ಮಿತ್ ಹೇಳಿದರು.