Site icon Vistara News

ಈ ವರ್ಷ ಇನ್ಫೋಸಿಸ್‌ನಿಂದ ಕ್ಯಾಂಪಸ್ ನೇಮಕಾತಿ ಇಲ್ಲ! ಎಂಜಿನಿಯರ್ಸ್‌ಗೆ ನಿರಾಸೆ

infosys

ನವದೆಹಲಿ: ಇನ್ಫೋಸಿಸ್ (Infosys) ಸೇರಬೇಕು ಎಂದುಕೊಂಡಿರುವ ಪ್ರಸಕ್ತ ಸಾಲಿನ ಎಂಜಿನಿಯರಿಂಗ್‌ ಪದವೀಧರರಿಗೆ (Engineering Garaduates) ನಿರಾಸೆ ಕಾದಿದೆ. ಯಾಕೆಂದರೆ, ಪ್ರಸಕ್ತ ವರ್ಷ ಕಂಪನಿಯು ಕ್ಯಾಂಪಸ್ ರಿಕ್ರುಟ್‌ಮೆಂಟ್ (Campus Recruitment) ‌ಪ್ರಕ್ರಿಯೆಯನ್ನು ಕೈ ಬಿಡಲು ನಿರ್ಧರಿಸಿದೆ. ಬೆಂಗಳೂರು ಪ್ರಧಾನ ಕಚೇರಿಯ ಐಟಿ ದೈತ್ಯದ ಮುಖ್ಯ ಹಣಕಾಸು ಅಧಿಕಾರಿ ನಿಲಂಜನ್ ರಾಯ್(Nilanjan Roy), ಎರಡನೇ ತ್ರೈಮಾಸಿಕ ಆದಾಯವನ್ನು ಮಾಹಿತಿಯ ಬೆನ್ನಲ್ಲೇ ಕಂಪನಿಯು ಪ್ರಸ್ತುತ ಗಮನಾರ್ಹವಾದ ಹೊಸ ಬೆಂಚ್ ಸಾಮರ್ಥ್ಯವನ್ನು ಹೊಂದಿದೆ. ಅದೇ ಫೋಸ್ ಅನ್ನು ಬಳಸಿಕೊಳ್ಳಲು ಯೋಜಿಸಿರುವುದರಿಂದ ಹೊಸದಾಗಿ ನೇಮಕ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದೆ.

ಕಳೆದ ವರ್ಷ ನಾವು 50,000 ಫ್ರೆಶರ್‌ಗಳನ್ನು ನೇಮಿಸಿಕೊಂಡಿದ್ದೇವೆ. ಈ ನೇಮಕವು ನಮ್ಮ ಅಗತ್ಯಕ್ಕಿಂತ ಹೆಚ್ಚಿನದ್ದಾಗಿದೆ. ಹಾಗಾಗಿ, ನಮ್ಮಲ್ಲಿ ಇನ್ನೂ ಗಮನಾರ್ಹವಾದ ಫ್ರೆಶರ್ ಬೆಂಚ್ ಸಾಮರ್ಥ್ಯವಿದೆ. ನಾವು ಸಹಜವಾಗಿ ಅವರಿಗೆ Gen AI, SAP ಇತ್ಯಾದಿಗಳಲ್ಲಿ ತರಬೇತಿ ನೀಡುತ್ತಿದ್ದೇವೆ. ಹಾಗಾಗಿ, ಈ ಬಾರಿ ಕ್ಯಾಂಪಸ್ ರಿಕ್ರುಮೆಂಟ್‌ಗೆ ಆದ್ಯತೆ ನೀಡುತ್ತಿಲ್ಲ. ಮೂರನೇ ತ್ರೈಮಾಸಿಕದಲ್ಲಿ ಈ ಬಗ್ಗೆ ಯೋಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.

2ನೇ ತ್ರೈಮಾಸಿಕದಲ್ಲಿ 6,212 ಕೋಟಿ ರೂ. ಲಾಭ ಗಳಿಸಿದ ಇನ್ಫೋಸಿಸ್

ಟಿಸಿಎಸ್ (TCS) ಬಳಿಕ ತಂತ್ರಜ್ಞಾನ ದೈತ್ಯ (IT Company) ಕಂಪನಿಯಾಗಿರುವ ಇನ್ಫೋಸಿಸ್ (Infosys) ಕೂಡ, ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಆದಾಯ ಮಾಹಿತಿಯನ್ನು ಬಹಿರಂಗ ಮಾಡಿತ್ತು. 2023ರ ಸೆಪ್ಟೆಂಬರ್‌ಕ್ಕೆ ಮುಕ್ತಾಯವ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ನಿವ್ವಳ ಲಾಭದಲ್ಲಿ (Net Profit) ಶೇ. 3.2 ಏರಿಕೆಯಾಗಿದೆ. ಅಂದರೆ, 6,212 ಕೋಟಿ ರೂ. ಲಾಭವನ್ನು ದಾಖಲಿಸಿದೆ. ಇದೇ ವೇಳೆ, ಆದಾಯವು 38,994 ಕೋಟಿ ರೂ ದಾಖಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.6.7ರಷ್ಟು ಏರಿಕೆಯಾಗಿದೆ. ಇನ್ನು ಕಳೆದ ವರ್ಷ ಇದೇ ಅವಧಿಯಲ್ಲಿ ಇನ್ಫೋಸಿಸ್ 6,021 ಕೋಟಿ ರೂಪಾಯಿ ನಿವ್ವಳ ಲಾಭವನ್ನ ಗಳಿಸಿತ್ತು(Infosys Q2 Results).

ಈ ಸುದ್ದಿಯನ್ನೂ ಓದಿ: Infosys : ಇನ್ಫೋಸಿಸ್‌ನಲ್ಲಿ ಈ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಆಯ್ಕೆಯೇ ರದ್ದು

ತ್ರೈಮಾಸಿಕ ಆಧಾರದ ಮೇಲೆ, ಬಿಎಸ್‌ಇ ಫೈಲಿಂಗ್ ಪ್ರಕಾರ, ಕಂಪನಿಯ ನಿವ್ವಳ ಲಾಭವು ಸೆಪ್ಟೆಂಬರ್ 2023 ತ್ರೈಮಾಸಿಕದಲ್ಲಿ 4.5 ಶೇಕಡಾ ಮತ್ತು ಅದರ ಆದಾಯವು 2.8 ಶೇಕಡಾ ಹೆಚ್ಚಾಗಿದೆ. ಇದೇ ವೇಳೆ, ಕಂಪನಿಯು ಪ್ರತಿ ಈಕ್ವಿಟಿ ಷೇರಿಗೆ 18 ರೂ. ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಇದು ಅಕ್ಟೋಬರ್ 25, 2023 ಅನ್ನು ಮಧ್ಯಂತರ ಲಾಭಾಂಶದ ದಾಖಲೆ ದಿನಾಂಕವಾಗಿ ಮತ್ತು ನವೆಂಬರ್ 6, 2023 ಅನ್ನು ಪಾವತಿ ದಿನಾಂಕವಾಗಿ ನಿಗದಿಪಡಿಸಿದೆ.

ತ್ರೈಮಾಸಿಕದಲ್ಲಿ ಅದರ ಕಾರ್ಯಾಚರಣೆಯ ಲಾಭಾಂಶವು ಅನುಕ್ರಮವಾಗಿ 40 ಬಿಪಿಎಸ್‌ನಿಂದ 21.2 ಶೇಕಡಾಕ್ಕೆ ಏರಿತು. ಈ ತ್ರೈಮಾಸಿಕದಲ್ಲಿ ಇನ್ಫೋಸಿಸ್ 7.7 ಶತಕೋಟಿ ಡಾಲರ್ ಡೀಲ್ ಪಡೆದುಕೊಂಡಿದ್ದು, ಒಟ್ಟು ನಿವ್ವಳ ಲಾಭದಲ್ಲಿ ಈ ಡೀಲ್ ಪ್ರಮಾಣವು ಶೇ.48ರಷ್ಟಿದೆ. ಇದೇ ವೇಳೆ, 3,36,294ರಷ್ಟಿದ್ದ ನೌಕರರ ಸಂಖ್ಯೆ ಈಗ 3,28,764ಕ್ಕೆ ಇಳಿಕೆಯಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version