ನವ ದೆಹಲಿ: ಏರ್‌ಲೈನ್‌ಗಳಿಂದಲೇ ಏರ್ ಟಿಕೆಟ್ ರದ್ದತಿ ಅಥವಾ ಬದಲಾವಣೆಗಳ ಪರಿಣಾಮ ತೊಂದರೆಗೀಡಾಗಿದ್ದ ಪ್ರಯಾಣಿಕರಿಗೆ ನಷ್ಟ ಪರಿಹಾರ ವಿತರಿಸುವಂತೆ ಏರ್ ಇಂಡಿಯಾ (Air India) ಸೇರಿ ದಂತೆ ಆರು ಏರ್‌ಲೈನ್‌ಗಳಿಗೆ ಅಮೆರಿಕದ ಸಾರಿಗೆ ಇಲಾಖೆ ಆದೇಶಿಸಿದೆ. ಇದರ ಪರಿಣಾಮ ಈ ಏರ್‌ಲೈನ್‌ಗಳು ಸಾವಿರಾರು ಪ್ರಯಾಣಿಕರಿಗೆ ರಿಫಂಡ್ ನೀಡಬೇಕಾಗಿದೆ.
ಏರ್ ಇಂಡಿಯಾ ಪ್ರಯಾಣಿಕರಿಗೆ ೧೨೧.೫ ದಶಲಕ್ಷ ಡಾಲರ್ ( 996 ಕೋಟಿ ರೂ.) ನಷ್ಟ ಪರಿಹಾರವನ್ನು ವಿತರಿಸಬೇಕು ಎಂದು ಸೂಚಿಸಲಾಗಿದೆ. ಫ್ರಂಟಿಯರ್ ಏರ್‌ಲೈನ್ಸ್, ಟಿಎಪಿ ಪೋರ್ಚುಗಲ್, ಅವಿಯಾಂಕಾ, ಇಸ್ರೇಲ್ ಏರ್‌ಲೈನ್ಸ್, ಏರೊಮೆಕ್ಸಿಕೊ ರಿಫಂಡ್ ನೀಡಬೇಕಾಗಿದೆ.
ಪ್ರಯಾಣಿಕರಿಗೆ ಒಟ್ಟು ೬೨೨ ದಶಲಕ್ಷ ಡಾಲರ್ ಪರಿಹಾರವನ್ನು (5,100 ಕೋಟಿ ರೂ.) ವಿತರಿಸುವಂತೆ ಅಮೆರಿಕದ ಸಾರಿಗೆ ಇಲಾಖೆ ಆರು ಏರ್ ಲೈನ್‌ಗಳಿಗೆ ಆದೇಶಿಸಿದೆ.
ಕೋವಿಡ್ -19 ಬಿಕ್ಕಟ್ಟಿನ ಸಂದರ್ಭ ಅನೇಕ ಮಂದಿ ಪ್ರಯಾಣಿಕರಿಗೆ ವಿಮಾನಯಾನ ರದ್ದಾಗಿ ಸಮಸ್ಯೆ ಉಂಟಾಗಿತ್ತು. ಜತೆಗೆ ರಿಫಂಡ್ ಸಲುವಾಗಿ ತಿಂಗಳುಗಟ್ಟಲೆ ಅಥವಾ ವರ್ಷದ ತನಕ ಕಾಯುವಂತಾಗಿತ್ತು.