ನವ ದೆಹಲಿ: ಭಾರತದ ಏರ್‌ಲೈನ್ ಇಂಡಸ್ಟ್ರಿ ಮುಂಬರುವ ದಿನಗಳಲ್ಲಿ ಭಾರಿ ವಿಸ್ತರಣೆಗೆ ಸಾಕ್ಷಿಯಾಗಲಿದೆ. (Indian airlines) ದೇಶದ ಏರ್‌ಲೈನ್ ಸಂಸ್ಥೆಗಳು ಬರೋಬ್ಬರಿ 1,100 ಕ್ಕೂ ಹೆಚ್ಚು ವಿಮಾನಗಳನ್ನು ಖರೀದಿಸಲು ಸಜ್ಜಾಗಿವೆ. ಟಾಟಾ ಸಮೂಹದ ಏರ್ ಇಂಡಿಯಾ, ಏರ್‌ಬಸ್ ಮತ್ತು ಬೋಯಿಂಗ್‌ನಿಂದ 470 ವಿಮಾನಗಳನ್ನು ಖರೀದಿಸಲು ಆರ್ಡರ್ ನೀಡಿದೆ. ದೇಶದ ಅತಿ ದೊಡ್ಡ ಏರ್‌ಲೈನ್ ಇಂಡಿಗೊ 500 ವಿಮಾನಗಳನ್ನು ಖರೀದಿಸಲು ಆರ್ಡರ್ ಕೊಟ್ಟಿದೆ. ಆಕಾಶ ಏರ್ 72 ಬೋಯಿಂಗ್ ವಿಮಾನಗಳನ್ನು ಖರೀದಿಸಲಿದೆ.
ಗೋ ಏರ್ ಕೂಡ 72 ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದೆ. ಏರ್ ಇಂಡಿಯಾ, ಇಂಡಿಗೊ, ಆಕಾಶ ಏರ್, ಗೋ ಫಸ್ಟ್ ಮತ್ತು ಇತರ ಏರ್‌ಲೈನ್‌ಗಳು ಸೇರಿ ಕನಿಷ್ಠ 1,115 ವಿಮಾನಗಳಿಗೆ ಆರ್ಡರ್‌ಗಳನ್ನು ನೀಡಿವೆ. ಪ್ರಸ್ತುತ ದೇಶದಲ್ಲಿ 700 ವಾಣಿಜ್ಯೋದ್ದೇಶದ ವಿಮಾನಗಳು ಹಾರಾಟ ನಡೆಸುತ್ತಿವೆ. ಏರ್‌ಬಸ್‌ನ 470 ವಿಮಾನಗಳು ಮತ್ತು ಬೋಯಿಂಗ್‌ನ 159 ವಿಮಾನಗಳು ಇದರಲ್ಲಿವೆ.
ಏರ್ ಇಂಡಿಯಾ-ಬೋಯಿಂಗ್ ಡೀಲ್‌ನಿಂದ ಅಮೆರಿಕದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.