Indian airlines : ಭಾರತದ ಏರ್‌ಲೈನ್‌ಗಳಿಂದ 1,100ಕ್ಕೂ ಹೆಚ್ಚು ವಿಮಾನ ಖರೀದಿಗೆ ಆರ್ಡರ್ - Vistara News

ಪ್ರಮುಖ ಸುದ್ದಿ

Indian airlines : ಭಾರತದ ಏರ್‌ಲೈನ್‌ಗಳಿಂದ 1,100ಕ್ಕೂ ಹೆಚ್ಚು ವಿಮಾನ ಖರೀದಿಗೆ ಆರ್ಡರ್

ಭಾರತದ ಏರ್‌ಲೈನ್‌ಗಳು ಮುಂಬರುವ ದಿನಗಳಲ್ಲಿ ವ್ಯಾಪಕವಾಗಿ ತಮ್ಮ ವಹಿವಾಟು ವಿಸ್ತರಿಸಲು ಸಜ್ಜಾಗಿದ್ದು, 1,100ಕ್ಕೂ ಹೆಚ್ಚು ವಿಮಾನಗಳನ್ನು ಖರೀದಿಸಲು ಆರ್ಡರ್‌ (Indian airlines) ನೀಡಿರುವುದು ಇದಕ್ಕೆ ನಿದರ್ಶನವಾಗಿದೆ.

VISTARANEWS.COM


on

Air India Flight
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತದ ಏರ್‌ಲೈನ್‌ ಇಂಡಸ್ಟ್ರಿ ಮುಂಬರುವ ದಿನಗಳಲ್ಲಿ ಭಾರಿ ವಿಸ್ತರಣೆಗೆ ಸಾಕ್ಷಿಯಾಗಲಿದೆ. (Indian airlines) ದೇಶದ ಏರ್‌ಲೈನ್‌ ಸಂಸ್ಥೆಗಳು ಬರೋಬ್ಬರಿ 1,100 ಕ್ಕೂ ಹೆಚ್ಚು ವಿಮಾನಗಳನ್ನು ಖರೀದಿಸಲು ಸಜ್ಜಾಗಿವೆ. ಟಾಟಾ ಸಮೂಹದ ಏರ್‌ ಇಂಡಿಯಾ, ಏರ್‌ಬಸ್‌ ಮತ್ತು ಬೋಯಿಂಗ್‌ನಿಂದ 470 ವಿಮಾನಗಳನ್ನು ಖರೀದಿಸಲು ಆರ್ಡರ್‌ ನೀಡಿದೆ. ದೇಶದ ಅತಿ ದೊಡ್ಡ ಏರ್‌ಲೈನ್‌ ಇಂಡಿಗೊ 500 ವಿಮಾನಗಳನ್ನು ಖರೀದಿಸಲು ಆರ್ಡರ್‌ ಕೊಟ್ಟಿದೆ. ಆಕಾಶ ಏರ್‌ 72 ಬೋಯಿಂಗ್‌ ವಿಮಾನಗಳನ್ನು ಖರೀದಿಸಲಿದೆ.

ಗೋ ಏರ್‌ ಕೂಡ 72 ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದೆ. ಏರ್‌ ಇಂಡಿಯಾ, ಇಂಡಿಗೊ, ಆಕಾಶ ಏರ್‌, ಗೋ ಫಸ್ಟ್‌ ಮತ್ತು ಇತರ ಏರ್‌ಲೈನ್‌ಗಳು ಸೇರಿ ಕನಿಷ್ಠ 1,115 ವಿಮಾನಗಳಿಗೆ ಆರ್ಡರ್‌ಗಳನ್ನು ನೀಡಿವೆ. ಪ್ರಸ್ತುತ ದೇಶದಲ್ಲಿ 700 ವಾಣಿಜ್ಯೋದ್ದೇಶದ ವಿಮಾನಗಳು ಹಾರಾಟ ನಡೆಸುತ್ತಿವೆ. ಏರ್‌ಬಸ್‌ನ 470 ವಿಮಾನಗಳು ಮತ್ತು ಬೋಯಿಂಗ್‌ನ 159 ವಿಮಾನಗಳು ಇದರಲ್ಲಿವೆ.

ಏರ್‌ ಇಂಡಿಯಾ-ಬೋಯಿಂಗ್‌ ಡೀಲ್‌ನಿಂದ ಅಮೆರಿಕದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Bhavani Revanna: ಕಿಡ್ನಾಪ್‌ ಪ್ರಕರಣದಲ್ಲಿ ಭವಾನಿ ರೇವಣ್ಣರನ್ನು ಮರೆತೇ ಬಿಟ್ಟ ಎಸ್‌ಐಟಿ!

Bhavani Revanna: ಹೆಚ್.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಅವರನ್ನು ಎಸ್‌ಐಟಿ ಬಂಧನ ಮಾಡಿತ್ತು. ಆದರೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿ ವಾರವೇ ಕಳೆದಿದೆ. ಅಲ್ಲದೆ ಎಸ್‌ಐಟಿಯ ಎರಡು ನೊಟೀಸ್‌ಗಳಿಗೂ ಭವಾನಿ ಕ್ಯಾರೇ ಎಂದಿಲ್ಲ.

VISTARANEWS.COM


on

Bhavani Revanna
Koo

ಬೆಂಗಳೂರು: ಕೆ.ಆರ್‌ ನಗರದಲ್ಲಿ ಲೈಂಗಿಕ ದೌರ್ಜನ್ಯ (Physical Abuse) ಸಂತ್ರಸ್ತೆಯೊಬ್ಬರನ್ನು ಅಪಹರಣ (kidnap case) ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ  (Bhavani Revanna) ಒಂದು ವಾರದಿಂದ ತಲೆ ಮರೆಸಿಕೊಂಡಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ (SIT) ಅಧಿಕಾರಿಗಳು ಒಂದು ದಿನ ಮಾತ್ರ ಭವಾನಿ ಮನೆಯ ಮುಂದೆ ಪಹರೆ ಕಾದಿದ್ದು, ನಂತರ ಮರೆತೇ ಬಿಟ್ಟಂತಿದೆ.

ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರ ಬಂಧನ ಮಾಡಲು ಎಸ್‌ಐಟಿ ಬಲು ತರಾತುರಿಯಲ್ಲಿತ್ತು. ಅಗತ್ಯವಿಲ್ಲ ಎನಿಸಿದರೂ ರೇವಣ್ಣರನ್ನು ಕರೆದುಕೊಂಡು ಬಂದು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿ, ಜಾಮೀನು ದೊರೆಯದಂತೆ ತುಂಬಾ ಪ್ರಯತ್ನಿಸಿತ್ತು. ಈ ಪ್ರಕರಣದಲ್ಲಿ ರೇವಣ್ಣ ಅವರ ಪಾತ್ರ ಹೆಚ್ಚೇನೂ ಇಲ್ಲ ಎಂದು ತಿಳಿದಿದ್ದರೂ, ಹೆಚ್ಚಿನ ವಿಚಾರಣೆಗೆ ಹೆಚ್ಚಿನ ಸಮಯ ಕಸ್ಟಡಿಗೆ ಕೊಡುವಂತೆ ನ್ಯಾಯಾಲಯವನ್ನು ಕೋರಿತ್ತು. ಆದರೆ ಭವಾನಿ ವಿಷಯದಲ್ಲಿ ಅಂಥ ತರಾತುರಿಯನ್ನು ಎಸ್‌ಐಟಿ ತೋರಿಸಿಲ್ಲ.

ಹೆಚ್.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಅವರನ್ನು ಎಸ್‌ಐಟಿ ಬಂಧನ ಮಾಡಿತ್ತು. ಆದರೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿ ವಾರವೇ ಕಳೆದಿದೆ. ಅಲ್ಲದೆ ಎಸ್‌ಐಟಿಯ ಎರಡು ನೊಟೀಸ್‌ಗಳಿಗೂ ಭವಾನಿ ಕ್ಯಾರೇ ಎಂದಿಲ್ಲ. ಎರಡು ಸಲ ನೋಟೀಸ್‌ ನೀಡಿದ ಬಳಿಕ, ʼತನಿಖೆಗೆ ಬೇಕಿದ್ದರೆ ಹೊಳೆನರಸೀಪುರದ ಮನೆಗೆ ಬನ್ನಿʼ ಎಂದು ಉತ್ತರಿಸಿದ್ದರು. ಎಸ್‌ಐಟಿ ಟೀಮ್‌ ಅಲ್ಲಿಗೆ ತೆರಳಿದಾಗ ಅಲ್ಲಿಂದ ನಾಪತ್ತೆಯಾಗಿದ್ದರು. ಎಸ್‌ಐಟಿ ತಂಡ ಇಡೀ ದಿನ ಕಾದು ವಾಪಸಾಗಿತ್ತು. ಎಲ್ಲಿದ್ದಾರೆ ಎಂದು ಹುಡುಕುವ ಯತ್ನವನ್ನೂ ಎಸ್‌ಐಟಿ ಮಾಡಿದಂತಿಲ್ಲ.

ಇದೀಗ ಭವಾನಿ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪ್ರಜ್ವಲ್ ರೇವಣ್ಣ (Prajwal Revanna Case) ವಿದೇಶದಲ್ಲಿದ್ದ ಕಾರಣ ಒಂದು ತಿಂಗಳ ಕಾಲ ಬಂಧನ ಸಾಧ್ಯವಾಗಿಲಿಲ್ಲ. ಆದರೆ ಭವಾನಿ ರೇವಣ್ಣ ದೇಶದಲ್ಲಿಯೇ ತಲೆ ಮರೆಸಿಕೊಂಡಿದ್ದು, ಎಲ್ಲಿದ್ದಾರೆ ಎಂಬ ಸುಳಿವು ದೊರೆತಿಲ್ಲ. ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ಪಾತ್ರ ಇದೆ ಎಂಬುದಕ್ಕೆ ಹಲವು ದಾಖಲೆಗಳನ್ನು ಎಸ್‌ಐಟಿ ನ್ಯಾಯಾಲಯಕ್ಕೆ ನೀಡಿತ್ತು. ಆದರೆ ಬಂಧನ ಮಾಡದೇ ಇರುವ ಕುರಿತು ಕುತೂಹಲ ಹುಟ್ಟಿಕೊಂಡಿದೆ.

ಈಗಾಗಲೇ ಪ್ರಜ್ವಲ್‌ ಹಾಗೂ ರೇವಣ್ಣ ಬಂಧನದ ನಂತರ, ದೇವೇಗೌಡ ಕುಟುಂಬದ ಮೇಲೆ ದ್ವೇಷ ರಾಜಕಾರಣ ನಡೆಸಲಾಗುತ್ತಿದೆ ಎಂಬ ಅಭಿಪ್ರಾಯವನ್ನು ಹರಡಲು ಜೆಡಿಎಸ್‌ ಬಹುಪಾಲು ಯಶಸ್ವಿಯಾಗಿದೆ. ಭವಾನಿ ಬಂಧನ ಆದರೆ ಈ ಅಭಿಪ್ರಾಯಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಾಗುತ್ತದೆ ಎಂಬ ಕಾರಣದಿಂದ, ಭವಾನಿ ಬಂಧನಕ್ಕೆ ತಡೆ ಹಾಕಲು ಮೇಲಿನಿಂದಲೇ ಸೂಚನೆ ಬಂದಿದೆಯಾ? ಎಂದೂ ಕೂಡ ಮಾತನಾಡಿಕೊಳ್ಳಲಾಗುತ್ತಿದೆ.

ಮೂರು ಜಿಲ್ಲೆ, ನಾಲ್ಕು ತಂಡಗಳು

ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಭವಾನಿಯನ್ನು ವಶಕ್ಕೆ ಪಡೆಯಲು ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ ಐ ಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಪ್ರಜ್ವಲ್‌ಗೂ 41a ಅಡಿ ನೊಟೀಸ್ ನೀಡಿದ್ದ ಎಸ್ಐಟಿ ಆ ಬಳಿಕ ಬಂಧಿಸಿತ್ತು. ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಈಗ ಭವಾನಿ ರೇವಣ್ಣಗೂ ಅರೆಸ್ಟ್ ವಾರೆಂಟ್ ಜಾರಿ ಮಾಡುವ ಸಾಧ್ಯತೆ ಇದೆ. ತಾವೇ ಎಸ್ ಐ ಟಿ ಕಚೇರಿಗೆ ಬರುವುದಾಗಿ ಹೇಳಿದ್ದ ಭವಾನಿ ರೇವಣ್ಣ ಆ ಬಳಿಕ ಬರದೇ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದಾರೆ.

ಪೊಲೀಸರ ನಾಲ್ಕು ವಿಶೇಷ ತಂಡಗಳಿಂದ ಭವಾನಿ ರೇವಣ್ಣಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬೆಂಗಳೂರು, ಮೈಸೂರು, ಹಾಸನ ಈ ಮೂರು ಜಿಲ್ಲೆಗಳಲ್ಲಿ ಭವಾನಿ ರೇವಣ್ಣಗಾಗಿ ಮುಖ್ಯವಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಮೂರು ಜಿಲ್ಲೆಗಳಲ್ಲಿ ಮೂರು ಪೊಲೀಸ್ ತಂಡಗಳು ಬೀಡುಬಿಟ್ಟಿವೆ. ನಾಲ್ಕನೇ ಟೆಕ್ನಿಕಲ್ ತಂಡದಿಂದಲೂ ಭವಾನಿ ರೇವಣ್ಣ ಬಗ್ಗೆ ಟ್ರ್ಯಾಕಿಂಗ್ ನಡೆಯುತ್ತಿದೆ. ಈ ತಾಂತ್ರಿಕ ತಂಡ ಭವಾನಿ ರೇವಣ್ಣ ಅವರ ಮೊಬೈಲ್ ಟ್ರ್ಯಾಕ್ ಮಾಡುತ್ತಿದೆ. ಟವರ್ ಡಂಪ್ ಲೊಕೇಷನ್, ಸಿಡಿಆರ್ ಪರಿಶೀಲನೆ ನಡೆಸುತ್ತಿದೆ.

ಇದನ್ನೂ ಓದಿ: Bhavani Revanna: ಭವಾನಿ ರೇವಣ್ಣ ಕಣ್ಣಾಮುಚ್ಚಾಲೆ ಆಟ; ಎಸ್ ಐ ಟಿಗೆ ಅರೆಸ್ಟ್ ಮಾಡಿ ಜೈಲಿಗಟ್ಟುವ ಹಠ!

Continue Reading

ಉದ್ಯೋಗ

Job Alert: ರೈಲ್ವೆ ಇಲಾಖೆಯಲ್ಲಿನ 1,202 ಹುದ್ದೆಗಳಿಗೆ ಐಟಿಐ ಪಾಸಾದವರು ಆನ್‌ಲೈನ್‌ ಮೂಲಕ ಇಂದೇ ಅರ್ಜಿ ಸಲ್ಲಿಸಿ

Job Alert: ರೈಲ್ವೆ ಇಲಾಖೆ ಖಾಲಿ ಇರುವ ವಿವಿಧ 1,202 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಗ್ನೇಯ ರೈಲ್ವೆಯ ನೇಮಕಾತಿ ಕೋಶ ಖಾಲಿ ಇರುವ ಲೋಕೋ ಪೈಲಟ್‌ ಮತ್ತು ಟ್ರೈನ್ಸ್‌ ಮ್ಯಾನೇಜರ್‌ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ, ಐಟಿಐ, ಪದವಿ ತೇರ್ಗಡೆಯಾದವರನ್ನು ನೇಮಿಸಿಕೊಳ್ಳುತ್ತಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್‌ 12.

VISTARANEWS.COM


on

Job Alert
Koo

ನವದೆಹಲಿ: ಒಂದೊಳ್ಳೆ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕರ ಕನಸು. ಅದರಲ್ಲಿಯೂ ಹೆಚ್ಚಿನ ಯುವ ಜನತೆ ಸರ್ಕಾರಿ ಕೆಲಸ ಪಡೆಯಬೇಕು ಎನ್ನುವ ಆಕಾಂಕ್ಷೆ ಹೊತ್ತಿರುತ್ತಾರೆ. ಅಂತಹವರಿಗೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ರೈಲ್ವೆ ಇಲಾಖೆ ಖಾಲಿ ಇರುವ ವಿವಿಧ 1,202 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಗ್ನೇಯ ರೈಲ್ವೆಯ ನೇಮಕಾತಿ ಕೋಶ (South Eastern Railway Recruitment Cell) ಖಾಲಿ ಇರುವ ಲೋಕೋ ಪೈಲಟ್‌ ಮತ್ತು ಟ್ರೈನ್ಸ್‌ ಮ್ಯಾನೇಜರ್‌ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ, ಐಟಿಐ, ಪದವಿ ತೇರ್ಗಡೆಯಾದವರನ್ನು ನೇಮಿಸಿಕೊಳ್ಳುತ್ತಿದೆ (RRC SER Recruitment 2024). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್‌ 12 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಅಸಿಸ್ಟಂಟ್‌ ಲೋಕೋ ಪೈಲಟ್‌ – 827 ಮತ್ತು ಟ್ರೈನ್ಸ್‌ ಮ್ಯಾನೇಜರ್‌ (ಗೂಡ್ಸ್‌ ಗಾರ್ಡ್‌) – 375 ಹುದ್ದೆಗಳಿವೆ. ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಜತೆಗೆ ಐಟಿಐ ಪಾಸ್‌ ಮಾಡಿರಬೇಕು ಅಥವಾ ಅಂಗೀಕೃತ ಸಂಸ್ಥೆಯಿಂದ ಎಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಇನ್ನು ಟ್ರೈನ್ಸ್‌ ಮ್ಯಾನೇಜರ್‌ (ಗೂಡ್ಸ್‌ ಗಾರ್ಡ್‌) ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಎಂದು ಪ್ರಕಟಣೆ ತಿಳಿಸಿದೆ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 42 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಯಾರಿಗೂ ಅರ್ಜಿ ಶುಲ್ಕವಿಲ್ಲ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 5,200 ರೂ. – 20,200 ರೂ. ಮಾಸಿಕ ವೇತನ ದೊರೆಯಲಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ನೀವು ಅರ್ಜಿ ಸಲ್ಲಿಸಬೇಕಾದ ಹುದ್ದೆಯನ್ನು ಆಯ್ಕೆ ಮಾಡಿ ಅದರ ಮೇಲೆ ಕ್ಲಿಕ್‌ ಮಾಡಿ (South Eastern Railway Trains Manager (Goods Guard) ಅಥವಾ South Eastern Railway Assistant Loco Pilot (ALP))
  • ಪುಟದ ಕೆಳಗಡೆ ಕಾಣಿಸುವ Apply Now ಬಟನ್‌ ಆಯ್ಕೆ ಮಾಡಿ.
  • ನಿಮ್ಮ ಇಮೇಲ್‌ ಐಡಿ, ಫೋನ್‌ ನಂಬರ್‌ ಬಳಸಿ ಹೆಸರು ನೋಂದಾಯಿಸಿ.
  • ರಿಜಿಸ್ಟರ್‌ ನಂಬರ್‌, ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Sumbit ಬಟನ್‌ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಭಾರತೀಯ ವಾಯುಪಡೆಯಲ್ಲಿದೆ ಉದ್ಯೋಗಾವಕಾಶ; ದ್ವಿತೀಯ ಪಿಯು ಪಾಸಾದವರೂ ಅರ್ಜಿ ಸಲ್ಲಿಸಿ

Continue Reading

ಕ್ರೀಡೆ

Rohit Sharma: ಹಲವು ದಾಖಲೆಗಳ ಸರದಾರನಾದ ಹಿಟ್​ಮ್ಯಾನ್​ ರೋಹಿತ್​

Rohit Sharma:ಟಿ20 ಕ್ರಿಕೆಟ್​ನಲ್ಲಿ 4 ಸಾವಿರ ರನ್​ ಪೂರೈಸಿದ ದಾಖಲೆಯನ್ನು ಕೂಡ ರೋಹಿತ್(4026)​ ತಮ್ಮ ಹೆಸರಿಗೆ ಬರೆದರು. ಈ ಸಾಧನೆ ಮಾಡಿದ ವಿಶ್ವದ ದ್ವಿತೀಯ ಬ್ಯಾಟರ್​ ಎನಿಸಿಕೊಂಡರು. ದಾಖಲೆ ವಿರಾಟ್​ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 4038 ರನ್​ ಬಾರಿಸಿದ್ದಾರೆ. ಪಾಕಿಸ್ತಾನದ ಬಾಬರ್​ ಅಜಂ(4023) ಮೂರನೇ ಸ್ಥಾನದಲ್ಲಿದ್ದಾರೆ.

VISTARANEWS.COM


on

Rohit Sharma
Koo

ನ್ಯೂಯಾರ್ಕ್​: ಐರ್ಲೆಂಡ್​ ವಿರುದ್ಧ ಬುಧವಾರ ನಡೆದ ಟಿ20 ವಿಶ್ವಕಪ್(T20 World Cup 2024)​ ಪಂದ್ಯದಲ್ಲಿ ಟೀಮ್​ ಇಂಡಿಯಾದ ನಾಯಕ, ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ(Rohit Sharma) ಅವರು ಅರ್ಧಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವರ ದಾಖಲೆಯ ಪಟ್ಟಿ ಇಂತಿದೆ.

600 ಸಿಕ್ಸರ್​


ಐರ್ಲೆಂಡ್​ ವಿರುದ್ಧ ಮೂರು ಸಿಕ್ಸರ್​ಗಳನ್ನು ಬಾರಿಸುವ ಮೂಲಕ ರೋಹಿತ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 600 (ಏಕದಿನದಲ್ಲಿ 323, ಟಿ20ಯಲ್ಲಿ 193, ಟೆಸ್ಟ್​ನಲ್ಲಿ 84)​ ಸಿಕ್ಸರ್​ ಪೂರೈಸಿದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್​ ಎನಿಸಿಕೊಂಡರು. ಕ್ರಿಸ್​ ಗೇಲ್ 553 ಸಿಕ್ಸರ್​, ಶಾಹೀದ್​ ಅಫ್ರೀದಿ 476 ಸಿಕ್ಸರ್​ ಬಾರಿಸಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.

4 ಸಾವಿರ ರನ್​


ಟಿ20 ಕ್ರಿಕೆಟ್​ನಲ್ಲಿ 4 ಸಾವಿರ ರನ್​ ಪೂರೈಸಿದ ದಾಖಲೆಯನ್ನು ಕೂಡ ರೋಹಿತ್(4026)​ ತಮ್ಮ ಹೆಸರಿಗೆ ಬರೆದರು. ಈ ಸಾಧನೆ ಮಾಡಿದ ವಿಶ್ವದ ದ್ವಿತೀಯ ಬ್ಯಾಟರ್​ ಎನಿಸಿಕೊಂಡರು. ದಾಖಲೆ ವಿರಾಟ್​ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 4038 ರನ್​ ಬಾರಿಸಿದ್ದಾರೆ. ಪಾಕಿಸ್ತಾನದ ಬಾಬರ್​ ಅಜಂ(4023) ಮೂರನೇ ಸ್ಥಾನದಲ್ಲಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಸಾವಿರ ರನ್​


ಅರ್ಧಶತಕ ಬಾರಿಸುವ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್(1015)​ ಸಾವಿರ ರನ್​ ಪೂರೈಸಿದರು. ಈ ಸಾಧನೆ ಮಾಡಿದ ಮೂರನೇ ಹಾಗೂ 2ನೇ ಭಾರತೀಯ ಎನಿಸಿಕೊಂಡರು. ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(1142) ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(1016) ದ್ವಿತೀಯ ಸ್ಥಾನದಲ್ಲಿದ್ದಾರೆ. ರೋಹಿತ್​ ಮುಂದಿನ ಪಂದ್ಯದಲ್ಲಿ 2 ರನ್​ ಗಳಿಸಿದರೆ ಜಯವರ್ಧನೆ ದಾಖಲೆ ಪತನಗೊಳ್ಳಲಿದೆ.

ಇದನ್ನೂ ಓದಿ India vs Ireland: ರೋಹಿತ್​ ಅರ್ಧಶತಕ; ಐರ್ಲೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ​ ಗೆಲುವು

ಮೊದಲ ಅರ್ಧಶತಕ


ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅರ್ಧಶತಕ ಬಾರಿಸಿದ ಮೊದಲ ಟೀಮ್​ ಇಂಡಿಯಾ ನಾಯಕ ಎನ್ನುವ ಹಿರಿಮೆಗೂ ರೋಹಿತ್​ ಪಾತ್ರರಾದರು. ಐರ್ಲೆಂಡ್​ ವಿರುದ್ಧ ರೋಹಿತ್​ 3 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿ 52 ರನ್​ ಗಳಿಸಿದರು. ಇದು ಮಾತ್ರವಲ್ಲದೆ ರೋಹಿತ್​ ನಾಯಕತ್ವದಲ್ಲಿ ಭಾರತ ಅತಿ ಹೆಚ್ಚು ಟಿ20 ಪಂದ್ಯ ಗೆದ್ದ ದಾಖಲೆ ಬರೆಯಿತು.

ಪಂದ್ಯ ಗೆದ್ದ ಭಾರತ


ಹಾರ್ದಿಕ್​ ಪಾಂಡ್ಯ(3), ಜಸ್​ಪ್ರೀತ್​ ಬುಮ್ರಾ(2) ಅವರ ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿ, ನಾಯಕ ರೋಹಿತ್​ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಐರ್ಲೆಂಡ್(India vs Ireland)​ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿತು. ಈ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ (T20 World Cup 2024 ಶುಭಾರಂಭ ಕಂಡಿದೆ. ಭಾರತ ತನ್ನ ದ್ವಿತೀಯ ಪಂದ್ಯವನ್ನು ಜೂನ್​ 9 ರಂದು ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಇತ್ತಂಡಗಳ ಈ ಹೈವೋಲ್ಟೇಜ್​ ಪಂದ್ಯ ಕೂಡ ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ.

ಇಲ್ಲಿನ ನಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ನಾಯಕ ರೋಹಿತ್​ ಶರ್ಮಾ ಅವರ ಆಯ್ಕೆಯನ್ನು ಬೌಲರ್​ಗಳು ಸಮರ್ಥಿಸಿಕೊಂಡರು. ಹಾರ್ದಿಕ್​ ಪಾಂಡ್ಯ, ಅರ್ಶದೀಪ್​, ಜಸ್​ಪ್ರೀತ್ ಬುಮ್ರಾ, ಸಿರಾಜ್ ಮತ್ತು ಅಕ್ಷರ್​​ ಜಿದ್ದಿಗೆ ಬಿದ್ದವರಂತೆ ಬೌಲಿಂಗ್​ ದಾಳಿ ನಡೆಸಿ ವಿಕೆಟ್​ ಕಿತ್ತು ಪಾರಮ್ಯ ಮೆರೆದರು. ಭಾರತೀಯ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ಐರ್ಲೆಂಡ್​ ಕೇವಲ 96 ರನ್​ಗಳಿಗೆ ಸರ್ವಪತನ ಕಂಡಿತು. ಜವಾಬಿತ್ತ ಭಾರತ, ಈ ಸಣ್ಣ ಮೊತ್ತವನ್ನು 12.2 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 97 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

Continue Reading

ಪ್ರಮುಖ ಸುದ್ದಿ

HD Kumaraswamy: ಕೃಷಿ ಖಾತೆ ಬಯಸಿದ್ದ ಎಚ್‌ಡಿಕೆ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ತುಟಿ ಬಿಚ್ಚಲೇ ಇಲ್ಲ!

HD Kumaraswamy: ಮಾಧ್ಯಮದ ಮುಂದೆ ನೀಡಿದ್ದ ಹೇಳಿಕೆಗೂ, NDA ಸಭೆಯಲ್ಲಿ ಆದ ಬೆಳವಣಿಗೆಗೂ ಬಹಳಷ್ಟು ಅಂತರ ಕಂಡುಬಂದಿದೆ. NDA ಸಭೆಯಲ್ಲಿ ಮಂತ್ರಿ ಸ್ಥಾನದ ಬಗ್ಗೆ ಕುಮಾರಸ್ವಾಮಿ ತುಟಿ ಬಿಚ್ಚಲಿಲ್ಲ ಎನ್ನಲಾಗಿದೆ. ಮೊದಲು ಎನ್‌ಡಿಎ ಸರ್ಕಾರ ರಚನೆ ಆಗಲಿ, ಅದೇ ಸಂತೋಷ. ಬಳಿಕ ಮಂತ್ರಿ ಸ್ಥಾನದ ಬಗ್ಗೆ ನೋಡೋಣ ಎಂದಿದ್ದಾರೆ.

VISTARANEWS.COM


on

HD Kumaraswamy NDA government
Koo

ಬೆಂಗಳೂರು: ನೂತನ ಸರ್ಕಾರ ರಚನೆಯ (Central Government) ಕುರಿತು ನಿನ್ನೆ ನಡೆದ ಎನ್‌ಡಿಎ (NDA) ಮೈತ್ರಿ ಕೂಟದ ಸಭೆಯಲ್ಲಿ ಮಾಜಿ ಸಿಎಂ, ಜೆಡಿಎಸ್‌ (JDS) ನಾಯಕ ಎಚ್. ಡಿ ಕುಮಾರಸ್ವಾಮಿ (HD Kumaraswamy) ಭಾಗಿಯಾದರು. ಆದರೆ, ಸಭೆಗೆ ತೆರಳುವ ಮುನ್ನ ಕೇಂದ್ರ ಸಂಪುಟದಲ್ಲಿ ಕೃಷಿ ಖಾತೆ (Agriculture) ಪಡೆಯುವ ಬಗ್ಗೆ ಮನದ ಇಂಗಿತ ವ್ಯಕ್ತಪಡಿಸಿದ್ದ ಎಚ್‌ಡಿಕೆ, ಅಲ್ಲಿ ಈ ಕುರಿತು ಯಾವುದೇ ಮಾತನಾಡಲಿಲ್ಲ ಎಂದು ತಿಳಿದುಬಂದಿದೆ.

ದೆಹಲಿಗೆ ಬರುತ್ತಿದ್ದಂತೆ, ಮಾಧ್ಯಮದ ಮುಂದೆ ಕೃಷಿ ಖಾತೆ ಸಿಕ್ಕರೆ ತಾನು ನಿಭಾಯಿಸಬಲ್ಲೆ ಎಂದು ಮಾಜಿ ಸಿಎಂ ಹೇಳಿದ್ದರು. ಎಲ್ಲರ ಆಶಯವೂ ಅದೇ ಆಗಿದೆ, ನನಗೆ ಕೃಷಿ ಖಾತೆ ನೀಡಬೇಕು ಎಂಬುದಾಗಿದೆ. ನಾನು ಕೂಡ ಕೃಷಿ ಸಚಿವನಾಗಿ ಕರ್ತವ್ಯ ನಿಭಾಯಿಸಬಲ್ಲೆ ಎಂದಿದ್ದರು.

ಆದರೆ ಮಾಧ್ಯಮದ ಮುಂದೆ ನೀಡಿದ್ದ ಹೇಳಿಕೆಗೂ, NDA ಸಭೆಯಲ್ಲಿ ಆದ ಬೆಳವಣಿಗೆಗೂ ಬಹಳಷ್ಟು ಅಂತರ ಕಂಡುಬಂದಿದೆ. NDA ಸಭೆಯಲ್ಲಿ ಮಂತ್ರಿ ಸ್ಥಾನದ ಬಗ್ಗೆ ಕುಮಾರಸ್ವಾಮಿ ತುಟಿ ಬಿಚ್ಚಲಿಲ್ಲ ಎನ್ನಲಾಗಿದೆ. ಮೊದಲು ಎನ್‌ಡಿಎ ಸರ್ಕಾರ ರಚನೆ ಆಗಲಿ, ಅದೇ ಸಂತೋಷ. ಬಳಿಕ ಮಂತ್ರಿ ಸ್ಥಾನದ ಬಗ್ಗೆ ನೋಡೋಣ ಎಂದಿದ್ದಾರೆ.

ಸಭೆ ಕ್ಲುಪ್ತವಾಗಿ ಮುಗಿಯುತು. ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಮಾತಿಗೆ ಎಚ್‌ಡಿಕೆ ಸಹಮತ ವ್ಯಕ್ತಪಡಿಸಿದರು. ಎಲ್ಲರೂ ಎನ್‌ಡಿಎಗೆ ತಮ್ಮ ಸಹಕಾರ ವ್ಯಕ್ತಪಡಿಸಿದರು. ಮಿತ್ರಪಕ್ಷಗಳಿಂದ ಔಪಚಾರಿಕವಾಗಿ ಸಮ್ಮತಿ ಪತ್ರ ಪಡೆಯುವ ಪ್ರಕ್ರಿಯೆ ನಡೆದಿದ್ದು, ಇಂದು ರಾಷ್ಟ್ರಪತಿಯನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಎನ್‌ಡಿಎ ಸಭೆಯ ಬಳಿಕ ಬೆಂಗಳೂರಿಗೆ ತೆರಳುವ ಮೊದಲು ಎಚ್‌.ಡಿ.ಕುಮಾರಸ್ವಾಮಿ ಅವರು ಮಾತನಾಡಿದರು. “ಎನ್‌ಡಿಎ ಮಿತ್ರಪಕ್ಷಗಳ ಸಭೆ ನಡೆಯಿತು. ನರೇಂದ್ರ ಮೋದಿ ಅವರ ಬಳಿ ಯಾವುದೇ ಬೇಡಿಕೆ ಇಟ್ಟಿಲ್ಲ. ಹಾಗೊಂದು ವೇಳೆ, ನರೇಂದ್ರ ಮೋದಿ ಅವರು ಬಯಸಿದರೆ ನಾನು ಸಚಿವನಾಗಿ ಕಾರ್ಯನಿರ್ವಹಿಸಲು ಸಿದ್ಧನಿದ್ದೇನೆ” ಎಂಬುದಾಗಿ ಅವರು ಹೇಳಿದರು. ಕರ್ನಾಟಕದಲ್ಲಿ ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿ ಮಾಡಿಕೊಂಡಿರುವುದರಿಂದ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಕೂಡ ಸಹಕಾರಿಯಾಗಿದೆ. ಹಾಗಾಗಿ, ಕುಮಾರಸ್ವಾಮಿ ಅವರಿಗೆ ಮೋದಿ ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಎಲ್ಲ ಪಕ್ಷಗಳ ನಾಯಕರು ನರೇಂದ್ರ ಮೋದಿ (PM Narendra Modi) ಅವರಿಗೆ ಬೆಂಬಲ ಸೂಚಿಸಿದರು. ಮೈತ್ರಿಕೂಟದ ಸರ್ಕಾರ ರಚನೆಗೆ ಕುರಿತು ತೆಗೆದುಕೊಂಡ ಒಂದು ಸಾಲಿನ ನಿರ್ಣಯಕ್ಕೆ ಎಲ್ಲರೂ ಸಹಿ ಹಾಕಿದರು. ಖಾತೆ ಹಂಚಿಕೆ, ಯಾವ ಖಾತೆ ಯಾರಿಗೆ ನೀಡಬೇಕು ಎಂಬುದರ ಕುರಿತು ಆಮೇಲೆ ನೋಡಿಕೊಳ್ಳೋಣ. ಮೊದಲು ಸರ್ಕಾರ ರಚನೆಯಾಗಲಿ ಎಂಬುದಾಗಿ ಎಲ್ಲ ನಾಯಕರು ಮೋದಿ ಅವರಿಗೆ ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ.

‌ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆಯಿತು. ತೆಲುಗುದೇಶಂ ಪಕ್ಷದ (TDP), ಸಂಯುಕ್ತ ಜನತಾದಳದ ನಿತೀಶ್‌ ಕುಮಾರ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌, ಆರ್‌ಎಲ್‌ಡಿಯ ಜಯಂತ್‌ ಚೌಧರಿ, ಜನಸೇನಾ ಪಕ್ಷದ ಪವನ್‌ ಕಲ್ಯಾಣ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಎಲ್ಲರೂ ಒಗ್ಗೂಡಿ ಸರ್ಕಾರ ರಚಿಸುವುದು, ಒಗ್ಗಟ್ಟಿನಿಂದ ಇರುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: HD Kumaraswamy: ಮೋದಿ ಬಯಸಿದ್ರೆ ಮಂತ್ರಿಯಾಗಲು ರೆಡಿ; ಮನದಾಸೆ ತೆರೆದಿಟ್ಟ ಕುಮಾರಸ್ವಾಮಿ!

Continue Reading
Advertisement
Kannada New Movie cranberry babies movie On set
ಸ್ಯಾಂಡಲ್ ವುಡ್13 mins ago

Kannada New Movie: ಮಹಿಳಾ ಪ್ರಧಾನ ಮರ್ಡರ್ ಮಿಸ್ಟ್ರಿ “ಕ್ಯಾನ್ಬೆರಿ ಬೇಬೀಸ್”ಗೆ ಮುಹೂರ್ತ

Murder Case
ಬೆಳಗಾವಿ18 mins ago

Murder Case : ಸ್ನೇಹಿತರೇ ಕೊಲೆಗಾರರು; ಬರ್ತ್‌ ಡೇ ಪಾರ್ಟಿಗೆ ಹೋದ ಯುವಕನ ಬರ್ಬರ ಹತ್ಯೆ

Jasprit Bumrah
ಕ್ರೀಡೆ41 mins ago

Jasprit Bumrah: ಭುವನೇಶ್ವರ್​ ಕುಮಾರ್​ ವಿಶ್ವ ದಾಖಲೆ ಮುರಿದ ಜಸ್​ಪ್ರೀತ್​ ಬುಮ್ರಾ

prajwal revanna case bedsheet
ಕ್ರೈಂ46 mins ago

Prajwal Revanna Case: ಬೆಡ್‌ಶೀಟ್‌ ಮೇಲಿರುವ `ಕಲೆಗಳ ಮಾಲಿಕ ನಾನಲ್ಲ…’ ಎನ್ನುತ್ತಿರುವ ಪ್ರಜ್ವಲ್!

Electric airport taxis introduced at Kempegowda International Airport
ಬೆಂಗಳೂರು55 mins ago

Electric Airport Taxi : ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇನ್ಮುಂದೆ ಮಹಿಳೆಯರಿಗಾಗಿ ಗುಲಾಬಿ ಟ್ಯಾಕ್ಸಿ

Chandrababu Naidu
ದೇಶ60 mins ago

Chandrababu Naidu: ಆಂಧ್ರ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಮುಂದೂಡಿಕೆ

Rishta Laboni Shimana passes away
ಸಿನಿಮಾ1 hour ago

Rishta Laboni Shimana: ಚಿಕಿತ್ಸೆ ಫಲಕಾರಿಯಾಗದೆ ಖ್ಯಾತ ನಟಿ ರಿಶ್ತಾ ನಿಧನ

Bhavani Revanna
ಪ್ರಮುಖ ಸುದ್ದಿ2 hours ago

Bhavani Revanna: ಕಿಡ್ನಾಪ್‌ ಪ್ರಕರಣದಲ್ಲಿ ಭವಾನಿ ರೇವಣ್ಣರನ್ನು ಮರೆತೇ ಬಿಟ್ಟ ಎಸ್‌ಐಟಿ!

Aishwarya Arjun reception dates out
ಟಾಲಿವುಡ್2 hours ago

Aishwarya Arjun: ಅರ್ಜುನ್ ಸರ್ಜಾ ಪುತ್ರಿ ವಿವಾಹ; ಅದ್ಧೂರಿಯಾಗಿ ನಡೆಯಲಿದೆ ಆರತಕ್ಷತೆ ಕಾರ್ಯಕ್ರಮ

Indonesia Open
ಕ್ರೀಡೆ2 hours ago

Indonesia Open: ಮತ್ತೆ ಮುಂದುವರಿದ ಸಿಂಧು ವೈಫಲ್ಯ; ಇಂಡೋನೇಷ್ಯಾ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ7 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 weeks ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌