Site icon Vistara News

Pakistan Crisis : ಪಾಕ್‌ಗೆ ಆಫ್ಘನ್‌, ಇರಾನ್‌, ರಷ್ಯಾ ಎದುರು ಕೈ ಚಾಚುವ ಸ್ಥಿತಿ!

Push for wheat in Pakistan

#image_title

ಕರಾಚಿ: ಪಾಕಿಸ್ತಾನವು (Pakistan Crisis) ಅಫಘಾನಿಸ್ತಾನ, ಇರಾನ್‌ ಮತ್ತು ರಷ್ಯಾದ ಜತೆ ಕೆಲವು ಸರಕುಗಳಿಗೆ ಬಾರ್ಟರ್‌ ಪದ್ಧತಿಯಲ್ಲಿ ಕೊಡುಕೊಳ್ಳುವಿಕೆ ವ್ಯವಹಾರ ನಡೆಸಲು ನಿರ್ಧರಿಸಿದೆ. ಇದರಲ್ಲಿ ಪೆಟ್ರೋಲಿಯಂ ಉತ್ಪನ್ನಗಳು, ನೈಸರ್ಗಿಕ ಅನಿಲ ಕೂಡ ಸೇರಿದೆ ಎಂದು ಪಾಕಿಸ್ತಾನದ ವಾಣಿಜ್ಯ ಇಲಾಖೆ ತಿಳಿಸಿದೆ. ಬಾರ್ಟರ್‌ ಪದ್ಧತಿಯಲ್ಲಿ (barter trade) ವ್ಯಾಪಾರ ಮಾಡುವಾಗ ಒಂದು ವಸ್ತುವಿಗೆ ಪ್ರತಿಯಾಗಿ ಮತ್ತೊಂದು ವಸ್ತುವನ್ನೇ ನೀಡಲಾಗುತ್ತದೆ. ಕರೆನ್ಸಿಯ ಚಲಾವಣೆ ಇರುವುದಿಲ್ಲ.

ಹಾಗಾದರೆ ಇದಕ್ಕೆ ಕಾರಣವೇನು? ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸಿ ದಿವಾಳಿಯಾಗಿದೆ. ವಿದೇಶಿ ವಿನಿಮಯ ಸಂಗ್ರಹ ಒಂದು ತಿಂಗಳಿನ ಖರ್ಚಿಗೂ ಸಾಲದು. ಹೀಗಾಗಿ ಸರ್ಕಾರ ಅಫಘಾನಿಸ್ತಾನ, ಇರಾನ್‌ ಮತ್ತು ರಷ್ಯಾಕ್ಕೆ ಕೆಲವು ಸರಕುಗಳನ್ನು ಕೊಟ್ಟು ಕೆಲವನ್ನು ಖರೀದಿಸಲು ನಿರ್ಧರಿಸಿದೆ. (business to business) ಹಣದುಬ್ಬರ 38%ಕ್ಕ ಏರಿಕೆಯಾಗಿರುವುದೂ ಮತ್ತೊಂದು ಕಾರಣವಾಗಿದೆ.

2023ರ ಜೂನ್‌ 1 ರಿಂದ ಈ ಬಾರ್ಟರ್‌ ಸಿಸ್ಟಮ್‌ ಶುರುವಾಗಿದೆ. ಖಾಸಗಿ ಕಂಪನಿಗಳೂ ಇದರಲ್ಲಿ ಭಾಗವಹಿಸಬಹುದು ಎಂದು ಪಾಕ್‌ ಸರ್ಕಾರ ಹೇಳಿದೆ. ರಷ್ಯಾ, ಇರಾನ್‌ನಿಂದ ತೈಲ ಖರೀದಿಸಲು ಡಾಲರ್‌ ಇಲ್ಲದಿದ್ದರೂ ನಡೆಯುತ್ತದೆ. ಅಪಘಾನಿಸ್ತಾನ ಜತೆಗಿನ ಪಾಕ್‌ ಗಡಿಯಲ್ಲಿ ಕರೆನ್ಸಿಯ ಕಳ್ಳಸಾಗಣೆ ನಡೆಯುತ್ತಿದೆ. ಇದನ್ನು ತಡೆಯಲು ಆಗದಿದ್ದರೂ, ಸರಕುಗಳ ಕಳ್ಳಸಾಗಣೆ ತಡೆಯಲು ಒಂದಷ್ಟು ಮಟ್ಟಿಗೆ ಸಾಧ್ಯವಾದೀತು ಎಂದು ಪಾಕ್‌ ಸರ್ಕಾರ ಭಾವಿಸಿದೆ. ಉದಾಹರಣೆಗೆ ಡೀಸೆಲ್‌ ಕಳ್ಳಸಾಗಣೆ ನಿಯಂತ್ರಿಸುವ ಉದ್ದೇಶ ಇದಕ್ಕಿದೆ.

ಕಳೆದ ಮೇ ತಿಂಗಳಿನಲ್ಲಿ ಪಾಕಿಸ್ತಾನದ ಪೆಟ್ರೋಲಿಯಂ ಡೀಲರ್‌ಗಳ ಅಸೋಸಿಯೇಶನ್‌, ಪಾಕ್‌ನಲ್ಲಿ ಮಾರಾಟವಾಗುತ್ತಿರುವ 38% ಡೀಸೆಲ್‌ ಇರಾನ್‌ನಿಂದ ಕಳ್ಳಸಾಗಣೆಯಾಗಿ ಬರುತ್ತಿರುವಂಥದ್ದು ಎಂದು ದೂರಿದ್ದರು. ಪಾಕಿಸ್ತಾನದಿಂದಲೂ ಗೋಧಿ, ರಸಗೊಬ್ಬರ ಅಫಘಾನಿಸ್ತಾನಕ್ಕೆ ಕಳ್ಳಸಾಗಣೆಯಾಗುತ್ತಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದಲ್ಲಿ ಹಣದುಬ್ಬರ 38% ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಶ್ರೀಲಂಕಾವನ್ನೂ ಹಿಂದಿಕ್ಕಿದೆ. ಶ್ರೀಲಂಕಾದಲ್ಲಿ ಹಣದುಬ್ಬರ 25.2%ಕ್ಕೆ ಇಳಿಕೆಯಾಗಿದೆ. (Pakistan inflation) ಈಗ ಏಷ್ಯಾದಲ್ಲಿಯೇ ಅತಿ ಹೆಚ್ಚು ಹಣದುಬ್ಬರ ಪಾಕಿಸ್ತಾನದಲ್ಲಿದೆ. ಭಾರತದಲ್ಲಿ ಹಣದುಬ್ಬರ 4.7% ಇದೆ. ಪಾಕಿಸ್ತಾನವು ಐಎಂಎಫ್‌ನ ಕಠಿಣ ಷರತ್ತುಗಳನ್ನು ಪೂರೈಸಲು ಹಿಂದೇಟು ಹಾಕುತ್ತಿದೆ. 1957ರಿಂದೀಚೆಗಿನ ಅವಧಿಯಲ್ಲಿಯೇ ಗರಿಷ್ಠ ಹಣದುಬ್ಬರವನ್ನು ಪಾಕಿಸ್ತಾನ ದಾಖಲಿಸಿದೆ.

2023ರ ಏಪ್ರಿಲ್‌ನಲ್ಲಿ ಪಾಕಿಸ್ತಾನವು ಹಣದುಬ್ಬರದಲ್ಲಿ ಶ್ರೀಲಂಕಾವನ್ನು ಹಿಂದಿಕ್ಕಿದೆ. ಪಾಕಿಸ್ತಾನಕ್ಕೆ ಈ ಹಿಂದೆ ಅಮೆರಿಕ, ಬಳಿಕ ಚೀನಾದಿಂದ ಹಣಕಾಸು ನೆರವು ಲಭಿಸುತ್ತಿತ್ತು. ಇದರೊಂದಿಗೆ ಪಾಕಿಸ್ತಾನ ತನ್ನನ್ನು ಭಾರತದ ಜತೆಗೆ ಹೋಲಿಸುತ್ತಿತ್ತು. ಆದರೆ ಈಗ ಪಾಕ್ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಭಾರತದಲ್ಲಿ ಹಣದುಬ್ಬರರ 4.7%ಕ್ಕೆ ಇಳಿದಿದೆ. ಆಹಾರ ಹಣದುಬ್ಬರ 3.8%ಕ್ಕೆ ತಗ್ಗಿದೆ. ಪಾಕಿಸ್ತಾನದಲ್ಲಿ ಆಹಾರ ಹಣದುಬ್ಬರ 48.7% ಕ್ಕೆ ಏರಿಕೆಯಾಗಿದೆ.

ಪಾಕಿಸ್ತಾನದ ನಾಯಕರು ಚೀನಾದಿಂದ ಹಣಕಾಸು ನೆರವಿನ ನಿರೀಕ್ಷೆಯಲ್ಲಿದ್ದಾರೆ. ಐಎಂಎಫ್‌ ಜತೆಗೆ ಮಾತುಕತೆ ಫಲಪ್ರದವಾಗದಿದ್ದರೆ, ಪಾಕಿಸ್ತಾನದ ಆರ್ಥಿಕತೆ ತೀವ್ರ ಬಿಗಡಾಯಿಸಲಿದೆ. ಕಳೆದ 12 ತಿಂಗಳಿನಲ್ಲಿ ಸರಾಸರಿ 29.16% ಹಣದುಬ್ಬರ ಇತ್ತು. ಹಣದುಬ್ಬರ ಜಿಗಿತದ ಪರಿಣಾಮ ಪಾಕಿಸ್ತಾನದಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಭಾರಿ ತೊಂದರೆಯಾಗಿದೆ. ಹಣಕಾಸು ನಿರ್ವಹಣೆಯ ಕೊರತೆಯ ಪರಿಣಾಮ ಭಾರಿ ಸವಾಲನ್ನು ಎದುರಿಸುವಂತಾಗಿದೆ. ಪಾಕಿಸ್ತಾನದಲ್ಲಿ ಕಳೆದ ಫೆಬ್ರವರಿಯಲ್ಲಿ ಪ್ರತಿ ಲೀಟರ್‌ ಹಾಲಿನ ದರ 210 ರೂ, ಕೋಳಿ ಮಾಂಸ ಕೆ.ಜಿ ದರ 700 ರೂ, ಪೆಟ್ರೋಲ್‌ ದರ ಲೀಟರ್‌ಗೆ 272 ರೂ, ಡೀಸೆಲ್‌ ದರ ಲೀಟರ್‌ಗೆ 282 ರೂ. ಇತ್ತು.

ಅರ್ಜೆಂಟೀನಾ ಎರಡನೇ ಸ್ಥಾನದಲ್ಲಿದ್ದು 21 ಸಲ ಐಎಂಎಫ್‌ನಿಂದ ಹಣಕಾಸು ನೆರವು ಯಾಚಿಸಿದೆ. ಆದರೆ ಭಾರತ ಕೇವಲ 7 ಸಲ ಐಎಂಎಫ್‌ ನೆರವು ಯಾಚಿಸಿತ್ತು. 1991ರಲ್ಲಿ ನರಸಿಂಹರಾವ್‌ ನೇತೃತ್ವದ ಸರ್ಕಾರ ಆರ್ಥಿಕ ಸುಧಾರಣಾ ನೀತಿಯನ್ನು ಜಾರಿಗೊಳಿಸಿದ ಬಳಿಕ ಒಂದು ಸಲವೂ ಐಎಂಎಫ್‌ ನೆರವನ್ನು ಬಯಸಿಲ್ಲ.

ಇದನ್ನೂ ಓದಿ: Indian fishermen: 198 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕಿಸ್ತಾನ, ಇನ್ನಿಬ್ಬರು ಅಲ್ಲೇ ಉಳಿದಿದ್ದೇಕೆ?

Exit mobile version