Site icon Vistara News

PAN-Aadhaar Link : ಈಗ ಪ್ಯಾನ್-ಆಧಾರ್‌ ಲಿಂಕ್‌ ಮಾಡಲು ಎಷ್ಟು ದಂಡ ನೀಡಬೇಕು?

Pan Aadhaar link

#image_title

ಕೇಂದ್ರ ಸರ್ಕಾರವು ಪ್ಯಾನ್‌ ಮತ್ತು ಆಧಾರ್‌ ಲಿಂಕ್‌ ಮಾಡುವ ವಿಚಾರದಲ್ಲಿ ಗಡುವನ್ನು 2023ರ ಜೂನ್‌ 30ಕ್ಕೆ ವಿಸ್ತರಿಸಿದೆ. ಹೀಗಿದ್ದರೂ, ಈ ಎರಡು ದಾಖಲೆಗಳನ್ನು ಲಿಂಕ್‌ ಮಾಡಲು ದಂಡವನ್ನು ಕಟ್ಟಬೇಕಾಗುತ್ತದೆ. 2022ರ ಮಾರ್ಚ್‌ 31 ತನಕ ಪ್ಯಾನ್- ಆಧಾರ್‌ ಲಿಂಕ್‌ ಉಚಿತವಾಗಿತ್ತು. (PAN-Aadhaar Link) ಬಳಿಕ ಸರ್ಕಾರ 2023ರ ಮಾರ್ಚ್‌ 31 ತನಕ, ಅಂದರೆ ಒಂದು ವರ್ಷ ವಿಸ್ತರಿಸಿತು. ಆದರೆ 1,000 ರೂ. ದಂಡವನ್ನೂ ವಿಧಿಸಿತು. ಈಗ ದಂಡವನ್ನು ಮುಂದುವರಿಸಲಾಗಿದೆ.

1,000 ರೂ. ದಂಡ:

ನೀವು ಹೊಸತಾಗಿ ಪ್ಯಾನ್‌ ಕಾರ್ಡ್‌ ಮಾಡಬಹುದು. ಇದಕ್ಕಾಗಿ 1,000 ರೂ. ದಂಡ ನೀಡಬೇಕಾಗಿಲ್ಲ. ಆದರೆ ಈಗಾಗಲೇ ಪ್ಯಾನ್‌ ಕಾರ್ಡನ್ನು ಬ್ಯಾಂಕ್‌, ಐಟಿ ರಿಟರ್ನ್ಸ್‌ ಇತ್ಯಾದಿಗೆ ಬಳಸಿದ್ದರೆ, ಹೊಸ ಪ್ಯಾನ್‌ ಕಾರ್ಡ್‌ ಮಾಡುವುದು ಸೂಕ್ತವಲ್ಲ. ಆದ್ದರಿಂದ 1,000 ರೂ. ದಂಡವನ್ನು ಕೊಟ್ಟು ಪ್ಯಾನ್ – ಆಧಾರ್‌ ಲಿಂಕ್‌ ಮಾಡುವುದು ಉತ್ತಮ ಎನ್ನುತ್ತಾರೆ ಬೆಂಗಳೂರಿನ ಚಾರ್ಟರ್ಡ್‌ ಅಕೌಂಟೆಂಟ್‌ ವಿಜಯ್‌ ಸಾಗರ್‌ ಶೆಣೈ. (PAN-Aadhaar Linking)‌ 2023ರ ಜೂನ್‌ 30 ರೊಳಗೆ ಆಧಾರ್-ಪ್ಯಾನ್‌ ಲಿಂಕ್‌ ಮಾಡದಿದ್ದರೆ ನಿಷ್ಕ್ರಿಯ ಎನ್ನಿಸಲಿದೆ. ನಿಷ್ಕ್ರಿಯ ಪ್ಯಾನ್‌ ಕಾರ್ಡ್‌ ಅನ್ನು 1,000 ರೂ. ಶುಲ್ಕ ಕೊಟ್ಟು 30 ದಿನಗಳೊಳಗೆ ಸಕ್ರಿಯಗೊಳಿಸಬಹುದು.

SMS ಮೂಲಕ PAN ಮತ್ತು Aadhaar ಲಿಂಕ್‌ ಮಾಡುವುದು ಹೇಗೆ?

1. UIDPAN < 12- ಅಂಕಿಗಳ ಆಧಾರ್ ><10- ಅಂಕಿಗಳ ಪ್ಯಾನ್‌ >

2. ಈ ಎಸ್ಸೆಮ್ಮೆಸ್‌ ಅನ್ನು ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆ ಬಳಸಿ, 56161 ಅಥವಾ 567678 ಕ್ಕೆ ಕಳಿಸಿ.

ಪ್ಯಾನ್-ಆಧಾರ್‌ ಲಿಂಕ್‌ ಹೇಗೆ?

ಯಾರು ಆಧಾರ್-ಪ್ಯಾನ್‌ ಲಿಂಕ್‌ ಮಾಡಬೇಕು?

ಆದಾಯ ತೆರಿಗೆ ಕಾಯಿದೆಯ 139ಎಎ ಸೆಕ್ಷನ್‌ ಪ್ರಕಾರ 2017ರ ಜುಲೈ1ಕ್ಕೆ ಹಾಗೂ ಬಳಿಕ ಪ್ಯಾನ್‌ ಕಾರ್ಡ್‌ ಗಳಿಸಿದ ಪ್ರತಿಯೊಬ್ಬರೂ ಆಧಾರ್-ಪ್ಯಾನ್‌ ಲಿಂಕ್‌ ಮಾಡಬೇಕು. ಆದರೆ ಇಲ್ಲಿ ಕೆಲವರಿಗೆ ಇದು ಕಡ್ಡಾಯವಲ್ಲ. ಈ ವಿನಾಯಿತಿಯು ಅಸ್ಸಾಂ, ಜಮ್ಮು ಕಾಶ್ಮೀರ, ಮೇಘಾಲಯದ ನಿವಾಸಿಗಳಿಗೆ ಅನ್ವಯವಾಗುತ್ತದೆ. ಭಾರತದ ನಾಗರಿಕರಲ್ಲದವರು, 80 ವರ್ಷ ಮೀರಿದವರು ವಿನಾಯಿತಿ ಪಡೆದಿದ್ದಾರೆ.

Exit mobile version