Site icon Vistara News

Muhammad Yunus: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞಗೆ ಜೈಲು ಶಿಕ್ಷೆ! ಕಾರ್ಮಿಕ ಕಾನೂನು ಉಲ್ಲಂಘನೆ ಆರೋಪ

Peace Nobel winner professor Muhammad Yunus face jail

ಢಾಕಾ: ನೊಬೆಲ್‌ ಶಾಂತಿ ಪುರಸ್ಕೃತ (nobel peace prize) ಅರ್ಥಶಾಸ್ತ್ರಜ್ಞ ಮೊಹಮ್ಮದ್ ಯೂನಸ್‌ (Muhammad Yunus) ಅವರಿಗೆ ಬಾಂಗ್ಲಾದೇಶದ (Bangla Desh) ಕೋರ್ಟ್ ಜೈಲು ಶಿಕ್ಷೆಯನ್ನು ವಿಧಿಸಿದೆ(simple imprisonment). ಕಾರ್ಮಿಕ ಕಾನೂನಗಳನ್ನು (labour laws ) ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಾಲಯವು ಸಾದಾ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ. “ಪ್ರೊಫೆಸರ್ ಯೂನಸ್ ಮತ್ತು ಅವರ ಮೂವರು ಗ್ರಾಮೀಣ ಟೆಲಿಕಾಂ (Grameen Telecom) ಸಹೋದ್ಯೋಗಿಗಳನ್ನು ಕಾರ್ಮಿಕ ಕಾನೂನಿನಡಿಯಲ್ಲಿ ದೋಷಾರೋಪಣೆ ಮಾಡಲಾಗಿದೆ ಮತ್ತು ಆರು ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಲಾಗಿದೆ” ಎಂದು ಪ್ರಾಸಿಕ್ಯೂಟರ್ ಖುರ್ಷಿದ್ ಆಲಂ ಖಾನ್ ತಿಳಿಸಿದ್ದಾರೆ. ಅಲ್ಲದೇ, ಅವರಿಗೆ ಕೂಡಲೇ ಜಾಮೀನು ಕೂಡ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

83 ವರ್ಷದ ಯೂನಸ್ ಅವರು ತಮ್ಮ ಮೈಕ್ರೋಫೈನಾನ್ಸ್ ಬ್ಯಾಂಕ್ ಮೂಲಕ ಲಕ್ಷಾಂತರ ಜನರನ್ನು ಬಡತನದಿಂದ ಮೇಲೇತ್ತುವ ಪ್ರಯತ್ನ ಮಾಡಿದ್ದಾರೆ. ಈ ಕಾರ್ಯಕ್ಕಾಗಿಯೇ ಅವರಿಗೆ 2006ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಲಭ್ಯವಾಗಿತ್ತು. ಇಷ್ಟಾಗಿಯೂ, ದೀರ್ಘ ಅವಧಿಯಿಂದ ಪ್ರಧಾನಿಯಾಗಿರುವ ಶೇಖ್ ಹಸೀನಾ ಅವರ ತಿರಸ್ಕಾರಕ್ಕೆ ಒಳಗಾಗಿದ್ದು, ಬಡವರ ರಕ್ತು ಹಿಂಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ಪ್ರಧಾನಿ ಶೇಖ್ ಹಸೀನಾ ಅವರು ಯೂನಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪನೆಯಲ್ಲಿ ನಿಲಕ್ಷ್ಯ ವಹಿಸಿ, ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ್ದಾರೆಂದು ಯೂನಸ್ ಮತ್ತು ಗ್ರಾಮೀಣ ಟೆಲೆಕಾಮ್‌ನ ಮೂವರು ಸಹೋದ್ಯೋದಿಗಳ ವಿರುದ್ಧ ದೋಷಾರೋಪ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಢಾಕಾ ಕಾರ್ಮಿಕ ನ್ಯಾಯಾಲಯವು ಅವರಿಗೆ ಆರು ತಿಂಗಳ ಸರಳ ಸೆರೆವಾಸ ಶಿಕ್ಷೆ ವಿಧಿಸಿತು ಮತ್ತು ನಾಲ್ವರು ತಕ್ಷಣವೇ ಮೇಲ್ಮನವಿ ಬಾಕಿ ಉಳಿದಿರುವಂತೆ ಜಾಮೀನು ಮಂಜೂರು ಮಾಡಿತು. ನ್ಯಾಯಾಲಯದ ಹೊರಗೆ, ಯೂನಸ್‌ ಪರವಾಗಿ ಬೆಂಬಲ ಪ್ರದರ್ಶನ ಕೂಡ ನಡೆಯಿತು.

2006ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸಿದ ಪ್ರೊಫೆಸರ್ ಮೊಹಮ್ಮದ್ ಯೂನಸ್ ಅವರು ಬಡತನ ನಿರ್ಮೂಲನೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ನೀಡಿದ ಕೊಡುಗೆಗಳಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.

ಪ್ರೊಫೆಸರ್ ಯೂನಸ್ ಅವರು ಗ್ರಾಮೀಣ ಬ್ಯಾಂಕ್ ಸ್ಥಾಪನೆಯ ಮೂಲಕ ಬಂಡವಾಳಶಾಹಿಯನ್ನು ಸಾಮಾಜಿಕ ಜವಾಬ್ದಾರಿಯೊಂದಿಗೆ ವಿನೂತನವಾಗಿ ಸಂಯೋಜಿಸಿದ್ದಾರೆ. ಈ ಮೈಕ್ರೋಕ್ರೆಡಿಟ್ ಸಂಸ್ಥೆಯು ಬಡವರನ್ನು ಸ್ವಯಂ ಉದ್ಯೋಗಕ್ಕಾಗಿ ಸಶಕ್ತಗೊಳಿಸಲು ಸಾಧಾರಣ ಪ್ರಮಾಣದ ದುಡಿಯುವ ಬಂಡವಾಳವನ್ನು ಒದಗಿಸುತ್ತದೆ. ಬಾಂಗ್ಲಾದೇಶದ 82,072ಕ್ಕೂ ಹೆಚ್ಚು ಹಳ್ಳಿಗಳಲ್ಲಿ 75 ಲಕ್ಷ ಗ್ರಾಹಕರಿಗೆ ಇದರಿಂದ ಲಾಭವಾಗಿದೆ. ಈ ಪೈಕಿ ಶೇ.97ರಷ್ಟು ಮಹಿಳೆಯರಿದ್ದಾರೆ.

ಈ ಸುದ್ದಿಯನ್ನೂ ಓದಿ: MS Dhoni : ಧೋನಿ ವಿರುದ್ಧ ಫಿಕ್ಸಿಂಗ್ ಆರೋಪ ಮಾಡಿದ ಐಪಿಎಸ್ ಅಧಿಕಾರಿಗೆ ಜೈಲು ಶಿಕ್ಷೆ

Exit mobile version