Site icon Vistara News

Business Guide : ಎಷ್ಟೋ ಸಲ ಸಿಂಪಲ್ಲಾಗಿ ಮಾತನಾಡುವುದೇ ಅತಿ ದೊಡ್ಡ ಸಾಹಸ

business

ಎಷ್ಟೋ ಸಲ ನಾವು ಗಮನಿಸಿರುವುದಿಲ್ಲ, ಆದರೆ ಒಂದು ಮಾತಿನಿಂದಲೇ ಬದಲಾವಣೆ ಶುರುವಾಗಿ ಬಿಡುತ್ತದೆ! ಅಂದಹಾಗೆ ನಾವು ಬೇರೆಯವರೊಡನೆ (Business Guide) ಮಾತನಾಡುವ ಸಂಭಾಷಣೆಗಳು ( Personality development ) ನಾವು ಹೇಗೆ ಅವರೊಡನೆ ಹೃದಯಪೂರ್ವಕವಾಗಿ ಸ್ಪಂದಿಸುತ್ತಿದ್ದೇವೆ ಎಂಬುದನ್ನು ಆಧರಿಸಿದೆ. ನಾವು ಯಾವಾಗಲೂ ಅಂತರಂಗದ ಸಂಭಾಷಣೆ ಅಥವಾ ಬಹಿರಂಗದ ಮಾತುಕತೆಯ ಮೂಲಕ ಸಂವಹನ ನಡೆಸುತ್ತೇವೆ. ಆದರೆ ಅವುಗಳು ಎಷ್ಟು ಮೌಲ್ಯಯುತವಾಗಿರುತ್ತವೆ? ನಾವು ಅನೇಕ ಮಂದಿ ಸಕಾರಾತ್ಮಕ ನಡೆ ನುಡಿಗಳಿಂದ ತಮ್ಮ ಬದುಕಿನಲ್ಲಿ ಪರಿವರ್ತನೆಯನ್ನು ಕಂಡವರನ್ನು ಕಾಣಬಹುದು. ಬದಲಾವಣೆಯೇ ನಕಾರಾತ್ಮಕ ಎಂಬ ಸುಸ್ತು ಹೊಡೆಸುವ ಮಾತುಗಳನ್ನು , ಟೀಕೆಗಳನ್ನು ಅವರೂ ಕೇಳಿರುತ್ತಾರೆ. ಆದರೆ ಅದರಿಂದ ಅವರ ಮೇಲೇನೂ ಪ್ರಭಾವ ಬೀರುವುದಿಲ್ಲ. ಅವರು ಕ್ಷುಲ್ಲಕ ಹರಟೆಗೆ ಕಾಲ ಹರಣ ಮಾಡಿರುವುದಿಲ್ಲ. ಅವರ ಫೋಕಸ್‌ ಅವರ ಕೆಲಸದ ಮೇಲಿರುತ್ತದೆಯೇ ಹೊರತು ವಿಚಲಿತಗೊಳಿಸುವುದಿಲ್ಲ. ನಾವು ನಮ್ಮ ಸಂಭಾಷಣೆಗಳು ಸೃಷ್ಟಿಸುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಎನ್ನುತ್ತಾರೆ ಡೇವಿಡ್‌ ಎಲ್‌ ಕೋರ್ಪಡಿರ್.

ನಾವು ಯಾರ ಜತೆಗೂ ಮಾತನಾಡುವಾಗ ಒಂದು ಅಂಶವನ್ನು ಮರೆಯಬಾರದು. ಮಾತುಕತೆ ಅರ್ಥಪೂರ್ಣವಾಗಿರಬೇಕು. ಉತ್ಪಾದಕವಾಗಿರಬೇಕು. ಸಂಬಂಧಗಳನ್ನು ಬಲಪಡಿಸುವಂತಿರಬೇಕು. ಭವಿಷ್ಯದಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಇರಬೇಕು. ನೀವು ಮುಕ್ತ ಮನಸ್ಸಿನಿಂದ ನಿಮ್ಮ ಕ್ರಿಯೇಟಿವಿಟಿಯ ಅಚ್ಚರಿಯನ್ನು ಹಂಚಿದಾಗ, ಪ್ರತಿಯೊಂದು ಸಂಭಾಷಣೆಯೂ ಹೊಸತನದಿಂದ ಕೂಡಿರುತ್ತದೆ. ‌

ಅಮೆರಿಕ ಮೂಲದ ವೀಸಾ ಕ್ರೆಡಿಟ್‌ ಕಾರ್ಡ್‌ ಅಸೋಸಿಯೇಶನ್‌ನ ಸ್ಥಾಪಕ, ಉದ್ಯಮಿ ಡೀ ವಾರ್ಡ್‌ ಹಾಕ್‌ ಅವರು ಕಳೆದ ಅರ್ಧ ಶತಮಾನದಲ್ಲೇ ಹೊಸ ಆವಿಷ್ಕಾರದ ಮತ್ತು ಯಶಸ್ವಿ ಕಂಪನಿಯಾದ ವೀಸಾ ಕಾರ್ಡ್‌ ಕಂಪನಿಯನ್ನು ಸ್ಥಾಪಿಸಿದ್ದರು. ಈಗ 569 ಶತಕೋಟಿ ಡಾಲರ್‌ ಮಾರುಕಟ್ಟೆ ಮೌಲ್ಯವನ್ನು ಒಳಗೊಂಡಿದೆ. ಡೀ ವಾರ್ಡ್‌ ಹುಕ್‌ ಅವರು ಸಿಇಒ ಆಗಿದ್ದಾಗ ವೀಸಾ ಕಾರ್ಪೊರೇಷನ್‌ನ ಆದಾಯ 10,000 ಪರ್ಸೆಂಟ್‌ ಹೆಚ್ಚಳವಾಗಿತ್ತು. ಹಾಗಾದರೆ ಡೀ ವಾರ್ಡ್‌ ಹುಕ್‌ ಯಶಸ್ಸಿನ ಸೀಕ್ರೆಟ್ಸ್‌ ಏನಿತ್ತು?

ಇದನ್ನೂ ಓದಿ: Money plus : ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ನಲ್ಲಿ ಯಾಕೆ ಹೂಡಬೇಕು?

ಆತ ಧೈರ್ಯಶಾಲಿಯಾಗಿದ್ದ. ಆತನಿಗೆ ದಣಿವು ಎಂಬುದೇ ಇರಲಿಲ್ಲ. ಆತ ಅದ್ಭುತ ರೀತಿಯಲ್ಲಿ ವಿಷಯಗಳನ್ನು ಕಲಿಯುತ್ತಿದ್ದ. ಮನೆಯಲ್ಲಿ 8,000 ಕ್ಕೂ ಹೆಚ್ಚು ಪುಸ್ತಕಗಳ ಲೈಬ್ರೆರಿಯನ್ನು ಹೊಂದಿದ್ದ. ಸ್ವಲ್ಪ ಸಮಯ ಸಿಕ್ಕಿದರೂ ಈ ಲೈಬ್ರೆರಿಯಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಸಂಕೀರ್ಣ ಕೃತಿಗಳನ್ನು ಓದುತ್ತಿದ್ದ. ಪ್ರತಿ ಪುಸ್ತಕದಲ್ಲೂ ಆತ ಓದಿದ್ದಕ್ಕೆ ಸಾಕ್ಷಿಯಾಗಿ ಅಂಡರ್‌ ಲೈನ್‌, ಟಿಪ್ಪಣಿಗಳು ಇರುತ್ತಿತ್ತು. ಕಲಿಕೆಯ ಕಡೆಗಿನ ಅತ್ಯಾಸಕ್ತಿ ಆತನ ಶಕ್ತಿಯಾಗಿತ್ತು. ಗ್ಲೋಬಲ್‌ ಫೈನಾನ್ಸ್‌, ಸಂಧಾನ, ಭವಿಷ್ಯದ ಡಿಜಿಟಲ್‌ ಟೆಕ್ನಾಲಜಿ ಬಗ್ಗೆ ಅಪಾರ ತಿಳಿದುಕೊಂಡಿದ್ದ. ಮುಖ್ಯವಾಗಿ ಸಂಭಾಷಣೆಯ ಕಲೆಯಲ್ಲಿ ನಿಷ್ಣಾತನಾಗಿದ್ದ.

ಒಂದು ಕಂಪನಿಯ ನಾಯಕತ್ವದಲ್ಲಿ ಸೋಲು-ಗೆಲುವನ್ನು ನಿರ್ಣಯಿಸುವಲ್ಲಿ ಸಂಭಾಷಣೆಯ ಕಲೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಅದು ಸ್ಪಷ್ಟ ಹಾಗೂ ಪ್ರಾಯೋಗಿಕವಾಗಿರಬೇಕು. ಕಾರ್ಪೊರೇಟ್‌ ಸಂಸ್ಕೃತಿ, ಸ್ಟ್ರಾಟಜಿ ರಚನೆ, ಸಂಘಟನೆ, ಮ್ಯಾನೇಜ್‌ಮೆಂಟ್‌ ಬದಲಾವಣೆ, ಬ್ರಾಂಡ್‌, ಜಾಂಯಿಂಟ್‌ ವೆಂಚರಿಂಗ್‌ನಲ್ಲಿ ಮಾತುಗಾರಿಕೆ ಪ್ರಮುಖವಾಗುತ್ತದೆ.

Exit mobile version