ಉದ್ಯೋಗಿಗಳು ಅನಾರೋಗ್ಯದಲ್ಲಿದ್ದಾಗ ತುರ್ತಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ನಿಮ್ಮ ಇಪಿಎಫ್ (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್) ಖಾತೆಯಿಂದ ಹಣ ಹಿಂತೆಗೆದುಕೊಳ್ಳಲು (Employee Provident Fund-EPF) ಅವಕಾಶ ಇದೆ. ಹಾಗೂ ಅದನ್ನು ಮತ್ತೆ ಖಾತೆಗೆ ಕಟ್ಟಬೇಕಿರುವುದಿಲ್ಲ. ಅಂಥ ಸಂದರ್ಭದಲ್ಲಿ ಇಪಿಎಫ್ ಖಾತೆಯಲ್ಲಿರುವ ನಿರ್ದಿಷ್ಟ ಪಾಲನ್ನು ಪಡೆಯಬಹುದು. ಇದು ಹೇಗೆ ಎಂಬುದನ್ನು ನೋಡೋಣ. ಉದ್ಯೋಗದಾತರು ಕೂಡ (employer) ಇಪಿಎಫ್ ಖಾತೆಗೆ ತಮ್ಮ ಪಾಲನ್ನು ಜಮೆ ಮಾಡುವುದರಿಂದ ಉದ್ಯೋಗಿಗಳಿಗೆ ಸೇವೆಯಲ್ಲಿ ಇರುವಾಗ ಮತ್ತು ಭವಿಷ್ಯದಲ್ಲಿ ನಿವೃತ್ತಿಯ ಬಳಿಕವೂ ಉಪಯೋಗವಾಗುತ್ತದೆ.
ಅನಾರೋಗ್ಯದ ನಿಮಿತ್ತ ಪಡೆದುಕೊಳ್ಳುವ ಚಿಕಿತ್ಸೆ, ವಿವಾಹ, ಶಿಕ್ಷಣ, ಗೃಹ ಸಾಲ,ಗೃಹ ನಿರ್ಮಾಣ ವೆಚ್ಚಕ್ಕೆ ಇಪಿಎಫ್‌ಒ ಸದಸ್ಯರು ತಮ್ಮ ಇಪಿಎಫ್ ಖಾತೆಯಿಂದ ಮುಂಗಡ ಪಡೆಯಬುದು.
ವೈದ್ಯಕೀಯ ಚಿಕಿತ್ಸೆಗೆ 1 ಲಕ್ಷ ರೂ.
ಉದ್ಯೋಗಿಗಳು ಅನಾರೋಗ್ಯದ ಸಂದರ್ಭ ತುರ್ತಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಇಪಿಎಫ್‌ಒದಿಂದ 1 ಲಕ್ಷ ರೂ. ತನಕ ಹಣವನ್ನು ಹಿಂಪಡೆಯಬಹುದು. ಈ ಹಿಂದೆ ಆಸ್ಪತ್ರೆಯಿಂದ ಅಂದಾಜು ವೆಚ್ಚ ಸೂಚಿಸಿದ ಬಳಿಕವಷ್ಟೇ ಹಿಂಪಡೆಯಲು ಸಾಧ್ಯವಾಗುತ್ತಿತ್ತು. ಆದರೆ ಬಳಿಕ ಆಸ್ಪತ್ರೆಯಿಂದ ಅಂದಾಜು ನೀಡದಿದ್ದರೂ, 1 ಲಕ್ಷ ರೂ. ತನಕ ವಿತ್ ಡ್ರಾ ಮಾಡಲು ಅನುಮತಿ ಕೊಡಲಾಯಿತು.
ಕನಿಷ್ಠ 6 ತಿಂಗಳಿನ ಮೂಲ ವೇತನ ಮತ್ತು ತುಟ್ಟಿಭತ್ಯೆಗೆ (basic wages and dearness allowance) ಸಮವಾಗುವಷ್ಟು ಮೊತ್ತವನ್ನು ಹಿಂಪಡೆಯಬಹುದು. ಆಸ್ಪತ್ರೆ ವೆಚ್ಚ, ಶಸ್ತ್ರಕ್ರಿಯೆ, ಟಿಬಿ, ಕುಷ್ಠರೋಗ, ಕ್ಯಾನ್ಸರ್, ಮಾನಸಿಕ ಅನಾರೋಗ್ಯ, ಹೃದಯ ಸಂಬಂಧಿತ ಕಾಯಿಲೆಯ ಚಿಕಿತ್ಸೆಗೆ ಈ ಹಣವನ್ನು ಬಳಸಬಹುದು.
ವೈದ್ಯಕೀಯ ಉದ್ದೇಶಕ್ಕೆ ಇಪಿಎಫ್ ಖಾತೆಯಿಂದ ಹಣ ಹಿಂತೆಗೆದುಕೊಳ್ಳುವ ವಿಧಾನ ಕೆಳಕಂಡಂತಿದೆ:
- ಇಪಿಎಫ್‌ಒದ ವೆಬ್ ಪೋರ್ಟಲ್‌ನಲ್ಲಿ ಈ ವಿಭಾಗಕ್ಕೆ ತೆರಳಿ e-SEWA. https://unifiedportal-mem.epfindia.gov.in/memberinterface/
- ನಿಮ್ಮ Universal Account Number (UAN) ಮತ್ತು ಪಾಸ್ ವರ್ಡ್ ದಾಖಲಿಸಿ. captcha ಕೋಡ್ ನಮೂದಿಸಿ ಲಾಗಿನ್ ಆಗಿ.
- ಬ್ಯಾಂಕ್ ಖಾತೆ ವಿವರಗಳನ್ನು ಹೊಸ ಪೇಜ್‌ನಲ್ಲಿ ಭರ್ತಿಗೊಳಿಸಿ. verify ಅನ್ನು ಸೆಲೆಕ್ಟ್ ಮಾಡಿರಿ. ಇದು ನಿಮ್ಮ ಪಿಎಫ್ ಖಾತೆಗೆ ಲಿಂಕ್ ಆಗುತ್ತದೆ. Yes ಅನ್ನು ಕ್ಲಿಕ್ ಮಾಡಿ.
- online service ಅನ್ನು ಕ್ಲಿಕ್ ಮಾಡಿ, Claim Form-31 ಅನ್ನು ಆಯ್ಕೆ ಮಾಡಿ.
- Proceed for online claim ಕ್ಲಿಕ್ಕಿಸಿ
ಉದ್ಯೋಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ಬಳಿಕ ಮೆಡಿಕಲ್ ಬಿಲ್‌ಗಳನ್ನು ಇಪಿಎಫ್‌ಒಗೆ 45 ದಿನಗಳೊಳಗೆ ಸಲ್ಲಿಸಿ ಪಿಎಫ್ ವಿತ್ ಡ್ರಾವಲ್ ಮಾಡಿಕೊಳ್ಳಬಹುದು.