ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್‌ನಲ್ಲಿ 50% ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಉದ್ದೇಶದೊಂದಿಗೆ ಸಾಮಾಹಿಕ ಉದ್ಯೋಗ ಕಡಿತಕ್ಕೆ ಚಾಲನೆ ನೀಡಿದ್ದ ಎಲಾನ್ ಮಸ್ಕ್, ಇದೀಗ ಕೆಲವು ಉದ್ಯೋಗಿಗಳಿಗೆ ಮತ್ತೆ ಕಚೇರಿಗೆ ದಯವಿಟ್ಟು ಬನ್ನಿ ಎಂದು ಮನವಿ ಮಾಡಿದ್ದಾರೆ. ತಪ್ಪಾಗಿ ವಜಾಗೊಳಿಸಿದ್ದು, (Twitter) ಮತ್ತೆ ಕಂಪನಿಗೆ ಸೇರಿಕೊಳ್ಳಿ ಎಂದು ಡಜನುಗಟ್ಟಲೆ ಉದ್ಯೋಗಿಗಳಿಗೆ ಕೋರಿದ್ದಾರೆ ಎಂದು ಬ್ಲೂಮ್ ಬರ್ಗ್ ವರದಿ ತಿಳಿಸಿದೆ.
ಕಳೆದ ಶುಕ್ರವಾರ 3,700 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಆರಂಭವಾಗಿತ್ತು. ಇ-ಮೇಲ್ ಮೂಲಕ ಸಂದೇಶ ರವಾನಿಸಲಾಗಿತ್ತು. ಹಲವಾರು ಉದ್ಯೋಗಿಗಳು ಈ ನಡೆಯನ್ನು ಖಂಡಿಸಿದ್ದರು. ಕೋರ್ಟ್ ಮೆಟ್ಟಿಲೇರಿದ್ದರು.
ಸಿಇಒ ಪರಾಗ್ ಅಗ್ರವಾಲ್, ಸಿಎಫ್‌ಒ ನೆಡ್ ಸೆಗಲ್ ಮತ್ತು ಇತರರನ್ನು ಮೊದಲ ಹಂತದಲ್ಲಿಯೇ ಸೇವೆಯಿಂದ ವಜಾಗೊಳಿಸಲಾಗಿತ್ತು.