Site icon Vistara News

ವಿಸ್ತಾರ Explainer | ಪಿಎಂ ಜನ್‌ ಧನ್‌ ಯೋಜನೆಗೆ 8 ವರ್ಷ, ಖಾತೆಗಳ ಸಂಖ್ಯೆ 46 ಕೋಟಿಗೂ ಹೆಚ್ಚು

PMJDY

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೆಚ್ಚಿನ ರಾಷ್ಟ್ರೀಯ ಯೋಜನೆಗಳಲ್ಲೊಂದು ಪ್ರಧಾನ ಮಂತ್ರಿ ಜನ್‌ ಧನ್‌ ಯೋಜನೆ. (PMJDY) ಈ ಹಣಕಾಸು ಸೇರ್ಪಡೆ ಯೋಜನೆಗೆ ೮ ವರ್ಷಗಳು ಭರ್ತಿಯಾಗಿವೆ. ದೇಶದ ಎಲ್ಲ ಕುಟುಂಬಗಳಿಗೂ ಬ್ಯಾಂಕ್‌ ಖಾತೆ ಮತ್ತು ಬ್ಯಾಂಕಿಂಗ್‌ ಸೌಲಭ್ಯಗಳು ದೊರೆಯಬೇಕು (ವಿಸ್ತಾರ Explainer) ಎಂಬುದು ಈ ಜನ್‌ಧನ್‌ ಯೋಜನೆಯ ಉದ್ದೇಶ. ೨೦೧೪ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು. ಇದು ಬಡವರಿಗೆ ವರದಾನವಾಗಲಿದೆ ಎಂದಿದ್ದರು.

46.30 ಕೋಟಿ ಖಾತೆ, ೧.೭೨ ಲಕ್ಷ ಕೋಟಿ ರೂ. ಬ್ಯಾಲೆನ್ಸ್

ಪಿಎಂ ಜನ್‌-ಧನ್‌ ಯೋಜನೆಯ (PMJDY) ಲಾಭಗಳು:

ಬಡವರಿಗೂ ಬ್ಯಾಂಕಿಂಗ್‌, ಓವರ್‌ ಡ್ರಾಫ್ಟ್ ಸೌಲಭ್ಯ

ಜನ್‌ ಧನ್‌ ಖಾತೆಯಿಂದ ಬಡವರಿಗೂ ಬ್ಯಾಂಕಿಂಗ್‌ ಸೌಲಭ್ಯಗಳು ಕೈಗೆಟಕುವಂತಾಗಿದೆ. ಭಾರಿ ಬಡ್ಡಿ, ಚಕ್ರ ಬಡ್ಡಿಗೆ ಸಾಲ ಕೊಟ್ಟು ತೊಂದರೆಗೆ ಸಿಲುಕಿಸುವವರ ಹಿಡಿತದಿಂದ ಮುಕ್ತಿ ಪಡೆಯಲು ಅನುಕೂಲಕರವಾಗಿದೆ. ಏಕೆಂದರೆ ಜನ್‌ ಧನ್‌ ಖಾತೆಯಲ್ಲಿ ೧೦,೦೦೦ ರೂ.ಗಳ ಓವರ್‌ ಡ್ರಾಫ್ಟ್‌ ಕೂಡ ಲಭ್ಯವಿದೆ. ಓವರ್‌ ಡ್ರಾಫ್ಟ್‌ ಸೌಲಭ್ಯದಲ್ಲಿ ಖಾತೆದಾರರು ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್‌ ಇದ್ದರೂ ೧೦,೦೦೦ ರೂ. ತನಕ ಹಣ ಪಡೆಯಬಹುದು. ಆದರೆ ಅದಕ್ಕೆ ನಿಗದಿತ ಬಡ್ಡಿ ಇರುತ್ತದೆ. ಖಾತೆದಾರರಿಗೆ ರುಪೇ ಡೆಬಿಟ್‌ ಕಾರ್ಡ್‌ ಮತ್ತು ೧ ಲಕ್ಷ ರೂ. ತನಕ ಅಪಘಾತ ವಿಮೆ ಸಿಗುತ್ತದೆ. ಕೋವಿಡ್-‌೧೯ ಸಂದರ್ಭ ಹಣಕಾಸು ನೆರವು, ಪಿಎಂ-ಕಿಸಾನ್‌, ನರೇಗಾ ವೇತನ ವಿತರಣೆ, ವಿಮೆ ಮತ್ತು ಆರೋಗ್ಯ ವಿಮೆ ವಿತರಣೆಗೆ ಪಿಎಂಜೆಡಿವೈ ಸಹಕಾರಿಯಾಗಿದೆ.

p

ಹಣಕಾಸು ಸೇರ್ಪಡೆಯ ನಿಟ್ಟಿನಲ್ಲಿ ಜನ್‌ ಧನ್‌ ಖಾತೆ ಬಹ ದೊಡ್ಡ ಕೊಡುಗೆ ನೀಡಿದೆ. ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲೂ ಈ ಖಾತೆಗಳು ನೆರವಾಗಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಜನ್‌ ಧನ್‌ ಯೋಜನೆಯನ್ನು ಟೀಕಿಸಿತ್ತು. ಖಾತೆಗಳು ತೆರೆದರೆ ಸಾಲದು, ಅದರಲ್ಲಿ ಜನ ದುಡ್ಡು ಇಡಬೇಕಲ್ಲವೇ ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಟೀಕಿಸಿದ್ದರು. ಆದರೆ ಈಗ ಈ ಯೋಜನೆಯ ಅಂಕಿ ಅಂಶಗಳು ಇದರ ಜನಪ್ರಿಯತೆಯನ್ನೂ ಬಿಂಬಿಸಿದೆ.

Exit mobile version