ತೀರಾ ಇತ್ತೀಚಿನವರೆಗೂ ಅಂಚೆ ಇಲಾಖೆಯ ಟರ್ಮ್ ಡೆಪಾಸಿಟ್‌ಗಳು (post office term deposit) ಬ್ಯಾಂಕ್‌ಗಳ ಎಫ್‌ಡಿಗಿಂತ (fixed deposit) ಕಡಿಮೆ ಬಡ್ಡಿ ದರವನ್ನು ನೀಡುತ್ತಿದ್ದವು. ಆದರೆ ಇದೀಗ ಮತ್ತೆ ಪೈಪೋಟಿ ನೀಡಲು ಆರಂಭಿಸಿವೆ. ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಸತತ ಎರಡನೇ ಬಾರಿಗೆ ಪರಿಷ್ಕರಿಸಿ ಏರಿಸಿರುವುದು ಇದಕ್ಕೆ ಕಾರಣವಾಗಿದೆ.
ಉದಾಹರಣೆಗೆ ಎರಡು ವರ್ಷ ಅವಧಿಯ ಅಂಚೆ ಕಚೇರಿಯ ಟರ್ಮ್ ಡೆಪಾಸಿಟ್ ಈಗ 6.5% ಬಡ್ಡಿ ನೀಡುತ್ತಿವೆ. ಇದು ಬಹುತೇಕ ಬ್ಯಾಂಕ್‌ಗಳ ಎಫ್‌ಡಿ ಬಡ್ಡಿಗೆ ಸಮವಾಗಿದೆ. 2022ರ ಮೇ ಬಳಿಕ ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಸರಣಿ ರೂಪದಲ್ಲಿ ರೆಪೊ ದರವನ್ನು ಏರಿಸಿತ್ತು. ಇದರ ಪರಿಣಾಮ ನಿಶ್ಚಿತ ಠೇವಣಿಗಳ ಬಡ್ಡ ದರ ಏರಿಕೆಯಾಗಿದೆ.
2022ರ ಮೇಯಿಂದ 2023ರ ಫೆಬ್ರವರಿ ನಡುವೆ ಹೊಸ ಠೇವಣಿಗಳಿಗೆ weighted average domestic term deposit rate (ರಿಟೇಲ್ ಮತ್ತು ಸಗಟು) 2.22%ರಷ್ಟು ಏರಿಕೆಯಾಗಿದೆ. ಸರ್ಕಾರವು ಸಣ್ಣ ಉಳಿತಾಯ ಯೋಜನೆಗೆ ಸಂಬಂಧಿಸಿ 2022-23ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕೆ 0.30% ತನಕ, 2022-23ರ ಜನವರಿ-ಮಾರ್ಚ್ ಅವಧಿಗೆ 1.10% ತನಕ ಏರಿಸಿದೆ.
ಈ ಏರಿಕೆಯ ಪರಿಣಾಮ ಇದೀಗ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಬ್ಯಾಂಕ್ ಎಫ್‌ಡಿಗಳ ಜತೆಗೆ ಪೈಪೋಟಿ ನೀಡುತ್ತಿವೆ. ಅಂಚೆ ಇಲಾಖೆಯಲ್ಲಿ 2 ವರ್ಷ ಅವಧಿಯ ಟರ್ಮ್ ಡೆಪಾಸಿಟ್ ಬಡ್ಡಿ ದರ 5.5%ರಿಂದ 7%ಕ್ಕೆ ಏರಿಕೆಯಾಗಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐನಲ್ಲಿ 2-3 ವರ್ಷದ ಠೇವಣಿಗೆ 7% ಬಡ್ಡಿ ಸಿಗುತ್ತದೆ. ಅಂದರೆ ಎರಡೂ ಕಡೆ ಸಮವಾಗಿದೆ.
ರೆಪೊ ದರ ಏರಿಕೆ ಪರಿಣಾಮ ಠೇವಣಿ ಬಡ್ಡಿ ಏರಿದ್ದರೂ, ಸಾಲದ ಬಡ್ಡಿ ದರ ಕೂಡ ಏರಿಕೆಯಾಗಿ ಸಾಲಗಾರರಿಗೆ ಹೊರೆಯಾಗಿರುವುದು ವಾಸ್ತವ. ಹೀಗಿದ್ದರೂ ಸಾಲದ ವಿತರಣೆ ಕೂಡ ಏರಿಕೆಯಾಗಿರುವುದು ಗಮನಾರ್ಹ.
ಅಂಚೆ ಇಲಾಖೆಯ ಉಳಿತಾಯ ಯೋಜನೆಗಳ ಪಟ್ಟಿ ಇಂತಿದೆ:
ಅಂಚೆ ಇಲಾಖೆಯ ಉಳಿತಾಯ ಖಾತೆ : ಬಡ್ಡಿ 4%
ನ್ಯಾಶನಲ್ ಸೇವಿಂಗ್ಸ್ ರಿಕರಿಂಗ್ ಡೆಪಾಸಿಟ್ (RD): 5 ವರ್ಷಕ್ಕೆ ಬಡ್ಡಿ 6.2%
ನ್ಯಾಶನಲ್ ಸೇವಿಂಗ್ಸ್ ಟೈಮ್ ಡಿಪಾಸಿಟ್ ಅಕೌಂಟ್: 7.7% ಬಡ್ಡಿ
ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ ಅಕೌಂಟ್ : ತ್ರೈಮಾಸಿಕ ಬಡ್ಡಿ 8.2% ಬಡ್ಡಿ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ : 7.1% ಬಡ್ಡಿ
ಸುಕನ್ಯಾ ಸಮೃದ್ಧಿ ಖಾತೆ: 8.0% ಬಡ್ಡಿ
ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್ : 7.7% ಬಡ್ಡಿ
ಕಿಸಾನ್ ವಿಕಾಸ ಪತ್ರ : 7.5% ಬಡ್ಡಿ
ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ : 7.5% ಬಡ್ಡಿ