ಕಳೆದ ಕೆಲವು ತ್ರೈಮಾಸಿಕಗಳಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಗಣನೀಯವಾಗಿ ಏರಿಕೆಯಾಗಿದೆ. ಅಂಚೆ ಕಚೇರಿಯಲ್ಲಿ 2023ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 5 ವರ್ಷಗಳ ಅವಧಿಯ ಟೈಮ್ ಡಿಪಾಸಿಟ್‌ಗಳ ಬಡ್ಡಿ ದರ 7.5%ಕ್ಕೆ ಏರಿದೆ. (Post office time deposit) ಪ್ರಮುಖ ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳು 5 ವರ್ಷಗಳ ನಿಶ್ಚಿತ ಅವಧಿಯ ಠೇವಣಿಗೆ 7-7.25% ಬಡ್ಡಿ ನೀಡುತ್ತಿರುವ ಸಂದರ್ಭದಲ್ಲಿ ಅಂಚೆ ಕಚೇರಿಯಲ್ಲಿ ಇದೇ ಅವಧಿಗೆ 7.5% ಬಡ್ಡಿ ಸಿಗುತ್ತಿದೆ. ಇದನ್ನು ಸಣ್ಣ ಉಳಿತಾಯಗಾರರು ಗಮನಿಸಬೇಕು.
ಅಂಚೆ ಇಲಾಖೆಯ ಟೈಮ್ ಡಿಪಾಸಿಟ್‌ಗಳು (Post office time deposit) ಬ್ಯಾಂಕ್‌ಗಳ ಫಿಕ್ಸೆಡ್ ಡಿಪಾಸಿಟ್‌ಗಳನ್ನು ಹೋಲುತ್ತವೆ. ಇವುಗಳಲ್ಲಿ ನೀವು ಪೂರ್ವ ನಿಯೋಜಿತ ಅವಧಿ ಮತ್ತು ಬಡ್ಡಿಯನ್ನು ಪಡೆಯಬಹುದು.
5 ವರ್ಷಗಳ ಟೈಮ್ ಡಿಪಾಸಿಟ್ vs 5 ವರ್ಷಗಳ ಬ್ಯಾಂಕ್ ಎಫ್‌ಡಿ : 2023ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅಂಚೆ ಕಚೇರಿಯ ಟೈಮ್ ಡಿಪಾಸಿಟ್‌ಗೆ ನೀವು 7.5% ಬಡ್ಡಿ ಪಡೆಯಬಹುದು. ಬ್ಯಾಂಕ್‌ಗಳ ಪೈಕಿ ಡಿಸಿಬಿ ಬ್ಯಾಂಕ್ ಇದಕ್ಕಿಂತ 0.25% ಹೆಚುವರಿ ಇಂಟರೆಸ್ಟ್ ನೀಡುತ್ತದೆ. ಈ ನಡುವೆ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ 5 ವರ್ಷಗಳ ಡಿಪಾಸಿಟ್‌ಗಳಿಗೆ 7% ಬಡ್ಡಿ ನೀಡುತ್ತದೆ. ಇಂಡಸ್‌ಇಂಡ್ ಬ್ಯಾಂಕ್ 7.25% ಬಡ್ಡಿ ನೀಡುತ್ತದೆ. ಎಸ್‌ಬಿಐ 6.5% ಬಡ್ಡಿ ಕೊಡುತ್ತದೆ.
5 ವರ್ಷಗಳ ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್‌ಗಳಲ್ಲಿ ಬಡ್ಡಿಯನ್ನು ತ್ರೈಮಾಸಿಕ ಅವಧಿಗೆ ಲೆಕ್ಕ ಹಾಕಲಾಗುತ್ತದೆ. ಹಾಗೂ ವಾರ್ಷಿಕವಾಗಿ ನೀಡಲಾಗುತ್ತದೆ. ಈಗ ಅಂಚೆ ಕಚೇರಿಯ ಟೈಮ್ ಡಿಪಾಸಿಟ್ ಬಡ್ಡಿ ದರ ಹಾಗೂ ಸಾರ್ವಜನಿಕ, ಖಾಸಗಿ ಬ್ಯಾಂಕ್‌ಗಳ ಬಡ್ಡಿ ದರಗಳ ಹೋಲಿಕೆಯನ್ನು ನೋಡೋಣ.
ಯೋಜನೆ | ಬಡ್ಡಿ ದರ (%) |
5 ವರ್ಷಗಳ ಅಂಚೆ ಕಚೇರಿ ಟೈಮ್ ಡಿಪಾಸಿಟ್ | 7.5 |
ಬ್ಯಾಂಕ್ | 5 ವರ್ಷಗಳ ಅವಧಿಗೆ ಬಡ್ಡಿ ದರ (%) |
ಸಾರ್ವಜನಿಕ ಬ್ಯಾಂಕ್‌ಗಳು | |
ಬ್ಯಾಂಕ್ ಆಫ್ ಬರೋಡಾ | 6.5 |
ಬ್ಯಾಂಕ್ ಆಫ್ ಇಂಡಿಯಾ | 6 |
ಬ್ಯಾಂಕ್ ಆಫ್ ಮಹಾರಾಷ್ಟ್ರ | 5.75 |
ಕೆನರಾ ಬ್ಯಾಂಕ್ | 6.7 |
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ | 6.25 |
ಇಂಡಿಯನ್ ಬ್ಯಾಂಕ್ | 6.25 |
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ | 6.5 |
ಪಂಜಾಬ್ ನ್ಯಾಷನಲ್ ಬ್ಯಾಂಕ್ | 6.5 |
ಪಂಜಾಬ್ &ಸಿಂಧ್ ಬ್ಯಾಂಕ್ | 6.25 |
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | 6.5 |
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ | 6.7 |
ಖಾಸಗಿ ವಲಯದ ಬ್ಯಾಂಕ್‌ಗಳು | |
ಎಕ್ಸಿಸ್ ಬ್ಯಾಂಕ್ | 7 |
ಬಂಧನ್ ಬ್ಯಾಂಕ್ | 5.85 |
ಡಿಬಿಎಸ್ ಬ್ಯಾಂಕ್ | 6.5 |
ಡಿಸಿಬಿ ಬ್ಯಾಂಕ್ | 7.75 |
ಎಚ್‌ಡಿಎಫ್‌ಸಿ ಬ್ಯಾಂಕ್ | 7 |
ಐಸಿಐಸಿಐ ಬ್ಯಾಂಕ್ | 7 |
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ | 7 |
ಇಂಡಸ್‌ಇಂಡ್ ಬ್ಯಾಂಕ್ | 7.25 |
ಕೋಟಕ್ ಮಹೀಂದ್ರಾ ಬ್ಯಾಂಕ್ | 6.2 |
ಆನ್‌ಲೈನ್‌ನಲ್ಲಿ ಅಂಚೆ ಇಲಾಖೆ ಎಫ್‌ಡಿಯಲ್ಲಿ ಹೂಡಿಕೆ ಹೇಗೆ? ಅಂಚೆ ಕಚೇರಿಯ ಟೈಮ್ ಡಿಪಾಸಿಟ್ ಯೋಜನೆಯಲ್ಲಿ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಲು ಬಯಸುವುದಿದ್ದರೆ ಅಂಚೆ ಇಲಾಖೆಯ ಕಚೇರಿಯಲ್ಲಿ ಉಳಿತಾಯ ಖಾತೆ (savings account) ಹೊಂದಿರಬೇಕು. ಯಾವುದೇ ಸಾರ್ವಜನಿಕ, ಖಾಸಗಿ ಬ್ಯಾಂಕ್‌ನಲ್ಲಿ ಆನ್‌ಲೈನ್ ಮೂಲಕ ಎಫ್‌ಡಿ ಹೂಡಿಕೆ ಮಾಡಬಹುದು. 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.
ಅಂಚೆ ಕಚೇರಿಯ 5 ವರ್ಷಗಳ ಉಳಿತಾಯ ಯೋಜನೆಗಳಲ್ಲಿ ಕನಿಷ್ಠ 1000 ರೂ. ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಇದು ಹೂಡಿಕೆಗೆ ಸುರಕ್ಷಿತವಾಗಿದ್ದು, ಸರ್ಕಾರದ ಗ್ಯಾರಂಟಿ ಇರುತ್ತದೆ. ಬ್ಯಾಂಕ್‌ಗಳಲ್ಲಿ 5 ವರ್ಷದ ಫಿಕ್ಸೆಡ್ ಡಿಪಾಸಿಟ್‌ಗಳಲ್ಲಿ 1.5 ಲಕ್ಷ ರೂ. ತನಕ ತೆರಿಗೆ ಮುಕ್ತ ಹೂಡಿಕೆ ಮಾಡಬಹುದು.
5 ವರ್ಷಗಳ ಅಂಚೆ ಕಚೇರಿಯ ಐದು ವರ್ಷಗಳ ಟೈಮ್ ಡಿಪಾಸಿಟ್ ಯೋಜನೆಗಳಲ್ಲಿ ವಾರ್ಷಿಕ 40,000 ರೂ.ಗಿಂತ ಹೆಚ್ಚು ಬಡ್ಡಿ ಪಡೆದರೆ ಟಿಡಿಎಸ್ ಅನ್ವಯ. ಹಿರಿಯ ನಾಗರಿಕರಿಗೆ 50,000 ರೂ.ಗಳ ಮಿತಿ ಲಭ್ಯವಿದೆ.
ಬ್ಯಾಂಕ್ ಎಫ್‌ಡಿಗೆ ಹೋಲಿಸಿದರೆ ಟೆಕ್ನಿಕಲಿ ಅಂಚೆ ಕಚೇರಿ ಎಫ್‌ಡಿ ಯೋಜನೆಗಳು ಹೆಚ್ಚು ಸುರಕ್ಷಿತ. ಬ್ಯಾಂಕ್ ಠೇವಣಿಗೆ ಕೇವಲ 5 ಲಕ್ಷ ರೂ. ಮೊತ್ತಕ್ಕೆ ಮಾತ್ರ ವಿಮೆಯ ಕವರೇಜ್ ಸಿಗುತ್ತದೆ. ಮಾತ್ರವಲ್ಲದೆ ಈಗ ಅಂಚೆ ಇಲಾಖೆ ಎಫ್‌ಡಿ ಬಡ್ಡಿ ದರ ತುಸು ಹೆಚ್ಚು.