Post office time deposit : ಬ್ಯಾಂಕ್‌ ಎಫ್‌ಡಿಗಿಂತ ಹೆಚ್ಚು ಬಡ್ಡಿ ನೀಡುವ ಅಂಚೆ ಕಚೇರಿಯ ಡಿಪಾಸಿಟ್‌ ಸ್ಕೀಮ್ Vistara News

ಮನಿ-ಗೈಡ್

Post office time deposit : ಬ್ಯಾಂಕ್‌ ಎಫ್‌ಡಿಗಿಂತ ಹೆಚ್ಚು ಬಡ್ಡಿ ನೀಡುವ ಅಂಚೆ ಕಚೇರಿಯ ಡಿಪಾಸಿಟ್‌ ಸ್ಕೀಮ್

Post office time deposit ಬ್ಯಾಂಕ್‌ಗಳ ನಿಶ್ಚಿತ ಠೇವಣಿಗಿಂತ ಹೆಚ್ಚು ಬಡ್ಡಿ ದರವನ್ನು ಅಂಚೆ ಇಲಾಖೆಯ ಡಿಪಾಸಿಟ್‌ ಯೋಜನೆ ನೀಡುತ್ತದೆ. ವಿವರ ಇಲ್ಲಿದೆ.

VISTARANEWS.COM


on

post office
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಳೆದ ಕೆಲವು ತ್ರೈಮಾಸಿಕಗಳಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಗಣನೀಯವಾಗಿ ಏರಿಕೆಯಾಗಿದೆ. ಅಂಚೆ ಕಚೇರಿಯಲ್ಲಿ 2023ರ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ 5 ವರ್ಷಗಳ ಅವಧಿಯ ಟೈಮ್‌ ಡಿಪಾಸಿಟ್‌ಗಳ ಬಡ್ಡಿ ದರ 7.5%ಕ್ಕೆ ಏರಿದೆ. (Post office time deposit) ಪ್ರಮುಖ ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳು 5 ವರ್ಷಗಳ ನಿಶ್ಚಿತ ಅವಧಿಯ ಠೇವಣಿಗೆ 7-7.25% ಬಡ್ಡಿ ನೀಡುತ್ತಿರುವ ಸಂದರ್ಭದಲ್ಲಿ ಅಂಚೆ ಕಚೇರಿಯಲ್ಲಿ ಇದೇ ಅವಧಿಗೆ 7.5% ಬಡ್ಡಿ ಸಿಗುತ್ತಿದೆ. ಇದನ್ನು ಸಣ್ಣ ಉಳಿತಾಯಗಾರರು ಗಮನಿಸಬೇಕು.

ಅಂಚೆ ಇಲಾಖೆಯ ಟೈಮ್‌ ಡಿಪಾಸಿಟ್‌ಗಳು (Post office time deposit) ಬ್ಯಾಂಕ್‌ಗಳ ಫಿಕ್ಸೆಡ್‌ ಡಿಪಾಸಿಟ್‌ಗಳನ್ನು ಹೋಲುತ್ತವೆ. ಇವುಗಳಲ್ಲಿ ನೀವು ಪೂರ್ವ ನಿಯೋಜಿತ ಅವಧಿ ಮತ್ತು ಬಡ್ಡಿಯನ್ನು ಪಡೆಯಬಹುದು.

5 ವರ್ಷಗಳ ಟೈಮ್‌ ಡಿಪಾಸಿಟ್‌ vs 5 ವರ್ಷಗಳ ಬ್ಯಾಂಕ್‌ ಎಫ್‌ಡಿ : 2023ರ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಅಂಚೆ ಕಚೇರಿಯ ಟೈಮ್‌ ಡಿಪಾಸಿಟ್‌ಗೆ ನೀವು 7.5% ಬಡ್ಡಿ ಪಡೆಯಬಹುದು. ಬ್ಯಾಂಕ್‌ಗಳ ಪೈಕಿ ಡಿಸಿಬಿ ಬ್ಯಾಂಕ್‌ ಇದಕ್ಕಿಂತ 0.25% ಹೆಚುವರಿ ಇಂಟರೆಸ್ಟ್‌ ನೀಡುತ್ತದೆ. ಈ ನಡುವೆ ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌ ಮತ್ತು ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ 5 ವರ್ಷಗಳ ಡಿಪಾಸಿಟ್‌ಗಳಿಗೆ 7% ಬಡ್ಡಿ ನೀಡುತ್ತದೆ. ಇಂಡಸ್‌ಇಂಡ್‌ ಬ್ಯಾಂಕ್‌ 7.25% ಬಡ್ಡಿ ನೀಡುತ್ತದೆ. ಎಸ್‌ಬಿಐ 6.5% ಬಡ್ಡಿ ಕೊಡುತ್ತದೆ.

5 ವರ್ಷಗಳ ಪೋಸ್ಟ್‌ ಆಫೀಸ್‌ ಟೈಮ್‌ ಡಿಪಾಸಿಟ್‌ಗಳಲ್ಲಿ ಬಡ್ಡಿಯನ್ನು ತ್ರೈಮಾಸಿಕ ಅವಧಿಗೆ ಲೆಕ್ಕ ಹಾಕಲಾಗುತ್ತದೆ. ಹಾಗೂ ವಾರ್ಷಿಕವಾಗಿ ನೀಡಲಾಗುತ್ತದೆ. ಈಗ ಅಂಚೆ ಕಚೇರಿಯ ಟೈಮ್‌ ಡಿಪಾಸಿಟ್‌ ಬಡ್ಡಿ ದರ ಹಾಗೂ ಸಾರ್ವಜನಿಕ, ಖಾಸಗಿ ಬ್ಯಾಂಕ್‌ಗಳ ಬಡ್ಡಿ ದರಗಳ ಹೋಲಿಕೆಯನ್ನು ನೋಡೋಣ.

ಯೋಜನೆಬಡ್ಡಿ ದರ (%)
5 ವರ್ಷಗಳ ಅಂಚೆ ಕಚೇರಿ ಟೈಮ್‌ ಡಿಪಾಸಿಟ್7.5
ಬ್ಯಾಂಕ್‌5 ವರ್ಷಗಳ ಅವಧಿಗೆ ಬಡ್ಡಿ ದರ (%)
ಸಾರ್ವಜನಿಕ ಬ್ಯಾಂಕ್‌ಗಳು
ಬ್ಯಾಂಕ್‌ ಆಫ್‌ ಬರೋಡಾ6.5
ಬ್ಯಾಂಕ್‌ ಆಫ್‌ ಇಂಡಿಯಾ6
ಬ್ಯಾಂಕ್‌ ಆಫ್‌ ಮಹಾರಾಷ್ಟ್ರ5.75
ಕೆನರಾ ಬ್ಯಾಂಕ್6.7
ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ 6.25
ಇಂಡಿಯನ್‌ ಬ್ಯಾಂಕ್6.25
ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್6.5
ಪಂಜಾಬ್‌ ನ್ಯಾಷನಲ್‌ ಬ್ಯಾಂಕ್6.5
ಪಂಜಾಬ್‌ &ಸಿಂಧ್‌ ಬ್ಯಾಂಕ್6.25
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ6.5
ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ6.7
ಖಾಸಗಿ ವಲಯದ ಬ್ಯಾಂಕ್‌ಗಳು
ಎಕ್ಸಿಸ್‌ ಬ್ಯಾಂಕ್‌7
ಬಂಧನ್‌ ಬ್ಯಾಂಕ್‌5.85
ಡಿಬಿಎಸ್‌ ಬ್ಯಾಂಕ್‌6.5
ಡಿಸಿಬಿ ಬ್ಯಾಂಕ್‌7.75
ಎಚ್‌ಡಿಎಫ್‌ಸಿ ಬ್ಯಾಂಕ್7
ಐಸಿಐಸಿಐ ಬ್ಯಾಂಕ್7
ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌7
ಇಂಡಸ್‌ಇಂಡ್‌ ಬ್ಯಾಂಕ್‌7.25
ಕೋಟಕ್‌ ಮಹೀಂದ್ರಾ ಬ್ಯಾಂಕ್‌6.2

ಆನ್‌ಲೈನ್‌ನಲ್ಲಿ ಅಂಚೆ ಇಲಾಖೆ ಎಫ್‌ಡಿಯಲ್ಲಿ ಹೂಡಿಕೆ ಹೇಗೆ? ಅಂಚೆ ಕಚೇರಿಯ ಟೈಮ್‌ ಡಿಪಾಸಿಟ್‌ ಯೋಜನೆಯಲ್ಲಿ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಲು ಬಯಸುವುದಿದ್ದರೆ ಅಂಚೆ ಇಲಾಖೆಯ ಕಚೇರಿಯಲ್ಲಿ ಉಳಿತಾಯ ಖಾತೆ (savings account) ಹೊಂದಿರಬೇಕು. ಯಾವುದೇ ಸಾರ್ವಜನಿಕ, ಖಾಸಗಿ ಬ್ಯಾಂಕ್‌ನಲ್ಲಿ ಆನ್‌ಲೈನ್‌ ಮೂಲಕ ಎಫ್‌ಡಿ ಹೂಡಿಕೆ ಮಾಡಬಹುದು. 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.

ಅಂಚೆ ಕಚೇರಿಯ 5 ವರ್ಷಗಳ ಉಳಿತಾಯ ಯೋಜನೆಗಳಲ್ಲಿ ಕನಿಷ್ಠ 1000 ರೂ. ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಇದು ಹೂಡಿಕೆಗೆ ಸುರಕ್ಷಿತವಾಗಿದ್ದು, ಸರ್ಕಾರದ ಗ್ಯಾರಂಟಿ ಇರುತ್ತದೆ. ಬ್ಯಾಂಕ್‌ಗಳಲ್ಲಿ 5 ವರ್ಷದ ಫಿಕ್ಸೆಡ್‌ ಡಿಪಾಸಿಟ್‌ಗಳಲ್ಲಿ 1.5 ಲಕ್ಷ ರೂ. ತನಕ ತೆರಿಗೆ ಮುಕ್ತ ಹೂಡಿಕೆ ಮಾಡಬಹುದು.

5 ವರ್ಷಗಳ ಅಂಚೆ ಕಚೇರಿಯ ಐದು ವರ್ಷಗಳ ಟೈಮ್‌ ಡಿಪಾಸಿಟ್‌ ಯೋಜನೆಗಳಲ್ಲಿ ವಾರ್ಷಿಕ 40,000 ರೂ.ಗಿಂತ ಹೆಚ್ಚು ಬಡ್ಡಿ ಪಡೆದರೆ ಟಿಡಿಎಸ್‌ ಅನ್ವಯ. ಹಿರಿಯ ನಾಗರಿಕರಿಗೆ 50,000 ರೂ.ಗಳ ಮಿತಿ ಲಭ್ಯವಿದೆ.

ಬ್ಯಾಂಕ್‌ ಎಫ್‌ಡಿಗೆ ಹೋಲಿಸಿದರೆ ಟೆಕ್ನಿಕಲಿ ಅಂಚೆ ಕಚೇರಿ ಎಫ್‌ಡಿ ಯೋಜನೆಗಳು ಹೆಚ್ಚು ಸುರಕ್ಷಿತ. ಬ್ಯಾಂಕ್‌ ಠೇವಣಿಗೆ ಕೇವಲ 5 ಲಕ್ಷ ರೂ. ಮೊತ್ತಕ್ಕೆ ಮಾತ್ರ ವಿಮೆಯ ಕವರೇಜ್‌ ಸಿಗುತ್ತದೆ. ಮಾತ್ರವಲ್ಲದೆ ಈಗ ಅಂಚೆ ಇಲಾಖೆ ಎಫ್‌ಡಿ ಬಡ್ಡಿ ದರ ತುಸು ಹೆಚ್ಚು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಆಧಾರ್‌ ಅಪ್‌ಡೇಟ್‌ನಿಂದ ಎಫ್‌ಡಿ ಹೂಡಿಕೆವರೆಗೆ; ತಿಂಗಳಾಂತ್ಯಕ್ಕೆ ಮುಗಿಸಲೇಬೇಕಾದ ಕೆಲಸಗಳಿವು

Money Guide: ವರ್ಷದ ಕೊನೆಗೆ ಬಂದು ನಿಂತಿದ್ದೇವೆ. ಡಿಸೆಂಬರ್‌ 31ರೊಳಗೆ ಕೆಲವೊಂದು ಕರ್ತವ್ಯಗಳನ್ನು ಮಾಡಿ ಮುಗಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಆ ಕುರಿತಾದ ವಿವರ ಇಲ್ಲಿದೆ.

VISTARANEWS.COM


on

december
Koo

ಬೆಂಗಳೂರು: ವರ್ಷಾಂತ್ಯದ ಡಿಸೆಂಬರ್‌ ಮಾಸಕ್ಕೆ ಕಾಲಿಟ್ಟಿದ್ದೇವೆ. ಕೇಂದ್ರ ಸರ್ಕಾರ ಸೂಚಿಸಿದ ಒಂದಷ್ಟು ಕೆಲಸಗಳನ್ನು ಈ ತಿಂಗಳಾಂತ್ಯಕ್ಕೆ ಮಾಡಿ ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ದಂಡ ಬೀಳಲಿದೆ. ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಹಿಡಿದು ಬ್ಯಾಂಕ್‌ ಲಾಕರ್‌ ಒಪ್ಪಂದ ನವೀಕರಣದವರೆಗೆ ಹಲವು ವಿಚಾರಗಳಿಗೆ ಕೇಂದ್ರ ಡಿಸೆಂಬರ್‌ 31ರ ವರೆಗೆ ಗಡುವು ನೀಡಿದೆ. ಅವಧಿ ಮೀರಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವ ಜತೆಗೆ ಬಳಿಕ ಅದಕ್ಕಾಗಿ ಓಡಾಡುವ ಸಂಧಿಗ್ಥತೆಯೂ ಎದುರಾಗಬಹುದು. ಹೀಗಾಗಿ ಯಾವೆಲ್ಲ ಕರ್ತವ್ಯಗಳನ್ನು ಶೀಘ್ರ ಮುಗಿಸಬೇಕು ಎನ್ನುವುದನ್ನು ಮನಿಗೈಡ್‌ (Money Guide) ವಿವರಿಸಲಿದೆ.

ಆಧಾರ್‌ ಕಾರ್ಡ್‌ ನವೀಕರಣ

ಪ್ರಸ್ತುತ ಆಧಾರ್‌ ಕಾರ್ಡ್‌ ಪ್ರಮುಖ ದಾಖಲೆಯಾಗಿ ಬದಲಾಗಿದೆ. ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆಯುವುದರಿಂದ ಹಿಡಿದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರೆಗೆ ಆಧಾರ್‌ ಕಾರ್ಡ್‌ ಬೇಕೇ ಬೇಕು. ಈ ಹಿಂದೆ ಸರ್ಕಾರ ಆಧಾರ್‌ ಕಾರ್ಡ್‌ ಮಾಡಿಸಿ 10 ವರ್ಷ ಪೂರೈಸಿದವರು ನವೀಕರಣ ಮಾಡಿಸಬೇಕು ಎಂದು ಸೂಚಿಸಿತ್ತು. ಯೂನಿಕ್‌ ಐಡೆಂಟಿಫಿಕೇಷನ್‌ ಅಥಾರಟಿ ಆಫ್‌ ಇಂಡಿಯಾ (Unique Identification Authority of India-UIDAI) ಉಚಿತವಾಗಿ ಆಧಾರ್‌ ಕಾರ್ಡ್‌ ನವೀಕರಿಸುವ ದಿನಾಂಕವನ್ನು 2023ರ ಡಿಸೆಂಬರ್‌ 31ರ ವರೆಗೂ ವಿಸ್ತರಿಸಿದೆ. ಈ ಅವಧಿಯಲ್ಲಿ ವಿಳಾಸ, ಫೋನ್ ಸಂಖ್ಯೆ, ಇಮೇಲ್ ವಿವರಗಳನ್ನು ಉಚಿತವಾಗಿ ನವೀಕರಿಸಬಹುದು ಎಂದು ಸೂಚಿಸಿತ್ತು. 2023ರ ಡಿಸೆಂಬರ್ 31ರ ನಂತರ ನೀವು ನವೀಕರಣಕ್ಕಾಗಿ ಶುಲ್ಕ ಪಾವತಿಸಬೇಕಾಗುತ್ತದೆ.

ಬ್ಯಾಂಕ್‌ ಲಾಕರ್‌ ಒಪ್ಪಂದದ ನವೀಕರಣ

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಈಗಿನ ಸೇಫ್‌ ಡಿಪಾಸಿಟ್‌ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಿಕೊಳ್ಳಲು ಬ್ಯಾಂಕ್‌ಗಳಿಗೆ (Bank locker agreement) ನೀಡಿದ್ದ ಗಡುವನ್ನು 2023ರ ಡಿಸೆಂಬರ್‌ 31ರ ತನಕ ವಿಸ್ತರಿಸಿತ್ತು. ಆರ್‌ಬಿಐ ಈ ಹಿಂದೆ 2021ರ ಆಗಸ್ಟ್‌ 18ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ, 2023ರ ಜನವರಿ 1ರೊಳಗೆ ಈಗಿನ ಸೇಫ್‌ ಡಿಪಾಸಿಟ್‌ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಬೇಕು ಎಂದು ಬ್ಯಾಂಕ್‌ಗಳಿಗೆ ಸೂಚಿಸಿತ್ತು. ಬಳಿಕ ಡಿಸೆಂಬರ್‌ 31ರ ತನಕ ನವೀಕರಿಸಿಕೊಳ್ಳಲು ಕಾಲಾವಕಾಶ ವಿಸ್ತರಿಸಿತ್ತು. ಹೊಸ ಲಾಕರ್ ಒಪ್ಪಂದಗಳು ಕೆಲವು ಪ್ರಮುಖ ಬದಲಾವಣೆಗಳನ್ನು ಹೊಂದಿದೆ. ಉದಾಹರಣೆಗೆ ಲಾಕರ್‌ ನಷ್ಟ ಅಥವಾ ಹಾನಿಯ ಸಂದರ್ಭದಲ್ಲಿ ಬ್ಯಾಂಕ್‌ಗಳು ಪಾವತಿಸಬೇಕಾದ ಪರಿಹಾರದ ಮೊತ್ತ ಹೆಚ್ಚಳ ಇತ್ಯಾದಿ.

ಡಿಮ್ಯಾಟ್ ಖಾತೆಗಳಿಗೆ ನಾಮನಿರ್ದೇಶನ ಸಲ್ಲಿಕೆ

ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ (SEBI) ಡಿಮ್ಯಾಟ್ ಖಾತೆಗಳಿಗೆ ನಾಮನಿರ್ದೇಶನ ಅರ್ಜಿಗಳನ್ನು ಸಲ್ಲಿಸುವ ಗಡುವನ್ನು ಡಿಸೆಂಬರ್ 31, 2023ರ ವರೆಗೆ ವಿಸ್ತರಿಸಿದೆ. ನಾಮನಿರ್ದೇಶನ ಅರ್ಜಿಯು ಮರಣದ ನಂತರ ಡಿಮ್ಯಾಟ್ ಸೆಕ್ಯುರಿಟಿಗಳನ್ನು ಯಾರು ಪಡೆಯಬೇಕು ಎಂಬುದನ್ನು ನಿರ್ಧರಿಸಲು ನೆರವಾಗುತ್ತದೆ.

ಇದನ್ನೂ ಓದಿ: Money Guide: 1.5 ಲಕ್ಷ ರೂ. ಹೂಡಿಕೆ ಮಾಡಿ 2.27 ಕೋಟಿ ರೂ. ಗಳಿಸಿ! ಯಾವುದು ಈ ಸ್ಕೀಂ?

ವಿಶೇಷ ಸ್ಥಿರ ಠೇವಣಿ(ಫಿಕ್ಸ್‌ಡ್‌ ಡೆಪಾಸಿಟ್‌)ಗಳಲ್ಲಿ ಹೂಡಿಕೆ

ಕೆಲವು ಬ್ಯಾಂಕ್‌ಗಳು 2023ರ ಡಿಸೆಂಬರ್‌ವರೆಗೆ ಹೆಚ್ಚಿನ ಬಡ್ಡಿದರಗಳೊಂದಿಗೆ ವಿಶೇಷ ಸ್ಥಿರ ಠೇವಣಿಗಳನ್ನು ನೀಡುತ್ತಿವೆ. ಅದಾಗ್ಯೂ ಈ ಠೇವಣಿಗಳಲ್ಲಿ ಹೂಡಿಕೆ ಮಾಡಲು ಗಡುವು ಇದೆ. ಉದಾಹರಣೆಗೆ ಇಂಡಿಯನ್ ಬ್ಯಾಂಕ್‌ನ ʼಇಂಡ್ ಸೂಪರ್ 400ʼ ಮತ್ತು ʼಇಂಡ್ ಸುಪ್ರೀಂ 300 ಡೇಸ್ʼ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 31, 2023. ಜತೆಗೆ ಎಸ್‌ಬಿಐಯ ಅಮೃತ್ ಕಲಾಶ್ ಯೋಜನೆ ಕೂಡ ಡಿಸೆಂಬರ್ ಕೊನೆಯ ದಿನಕ್ಕೆ ಕೊನೆಯಾಗಲಿದೆ. ಈ ವರ್ಷದ ಫೆಬ್ರವರಿಯಲ್ಲಿ ಎಸ್‌ಬಿಐ ಪರಿಚಯಿಸಿದ್ದ ಅಮೃತ್‌ ಕಲಾಶ್‌ ಯೋಜನೆ ಆಗಸ್ಟ್‌ನಲ್ಲಿ ಮುಕ್ತಾಯವಾಗಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಬಳಿಕ ದಿನಾಂಕವನ್ನು ಬ್ಯಾಂಕ್‌ ವಿಸ್ತರಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಮನಿ-ಗೈಡ್

Money Guide: ನಿಷ್ಕ್ರಿಯ ಪೋಸ್ಟ್‌ ಆಫೀಸ್‌ ಸೇವಿಂಗ್‌ ಅಕೌಂಟ್‌ ಹೀಗೆ ಸಕ್ರಿಯಗೊಳಿಸಿ…

Money Guide: ನಿಮ್ಮ ಪೋಸ್ಟ್‌ ಆಫೀಸ್‌ ಸೇವಿಂಗ್‌ ಅಕೌಂಟ್‌ ನಿಷ್ಕ್ರೀಯವಾಗಿದ್ದರೆ ಚಿಂತೆ ಬಿಡಿ. ಅದನ್ನು ಸುಲಭವಾಗಿ ಸಕ್ರೀಯಗೊಳಿಸುವ ವಿಧಾನದ ವಿವರ ಇಲ್ಲಿದೆ.

VISTARANEWS.COM


on

post office new
Koo

ಬೆಂಗಳೂರು: ಮೊದಲೆಲ್ಲ ಅಂಚೆ ಕಚೇರಿ ಎಂದರೆ ಥಟ್ಟನೆ ನೆನಪಿಗೆ ಬರುತ್ತಿದ್ದುದು ಪತ್ರ ವ್ಯವಹಾರ. ಆದರೀಗ ಅಂಚೆ ಕಚೇರಿಗಳು ಬ್ಯಾಂಕ್‌ಗಳಾಗಿಯೂ ಮಾರ್ಪಾಡಾಗಿವೆ. ಉಳಿತಾಯ ಎಂದಾಗ ಈಗ ಬ್ಯಾಂಕ್‌ ಜತೆಗೆ ಅಂಚೆ ಕಚೇರಿಯೂ ನೆನಪಿಗೆ ಬರುತ್ತದೆ. ಯಾಕೆಂದರೆ ಪೋಸ್ಟ್‌ ಆಫೀಸ್‌ ಬ್ಯಾಂಕ್‌ಗಳಲ್ಲಿ (Post Office Schemes) ಉಳಿತಾಯ ಯೋಜನೆಗಳಿಗೆ ಆಕರ್ಷಕ ಬಡ್ಡಿಯೂ (Interest) ಸಿಗುವುದರಿಂದ ಹೆಚ್ಚಿನ ಜನರು ಪೋಸ್ಟ್‌ ಆಫೀಸ್‌ ಉಳಿತಾಯ ಯೋಜನೆಗಳ (Saving Schemes) ಮೂಲಕ ಲಾಭ ಗಳಿಸುತ್ತಿದ್ದಾರೆ. ಇಂದಿನ ಮನಿಗೈಡ್‌ (Money Guide)ನಲ್ಲಿ ಪೋಸ್ಟ್‌ ಆಫೀಸ್‌ನ ನಿಷ್ಕ್ರಿಯ ಖಾತೆಯನ್ನು ಹೇಗೆ ಪುನಃ ಸಕ್ರೀಯಗೊಳಿಸುವುದು ಎನ್ನುವುದನ್ನು ನೋಡೋಣ.

ಯಾವಾಗ ನಿಷ್ಕ್ರಿಯವಾಗುತ್ತದೆ?

ನಿರ್ದಿಷ್ಟ ಅವಧಿಯವರೆಗೆ ಖಾತೆಯಲ್ಲಿ ಯಾವುದೇ ಚಟುವಟಿಕೆ ಇಲ್ಲದಿದ್ದಾಗ ಅಂಚೆ ಕಚೇರಿಯಲ್ಲಿ ಖಾತೆಯನ್ನು ನಿಷ್ಕ್ರೀಯವೆಂದು ಪರಿಗಣಿಸಲಾಗುತ್ತದೆ. ಅಂದರೆ ಸತತ ಮೂರು ಹಣಕಾಸು ವರ್ಷಗಳ ಅವಧಿಯಲ್ಲಿ ಖಾತೆಯಲ್ಲಿ ಯಾವುದೇ ಠೇವಣಿ ಹೂಡಿಕೆ ಅಥವಾ ವಿತ್‌ಡ್ರಾ ನಡೆಯದಿದ್ದರೆ ಆ ಖಾತೆಯನ್ನು ಸುಪ್ತ (ನಿಷ್ಕ್ರಿಯ) ಎಂದು ಕರೆಯಲಾಗುತ್ತದೆ.

ಪುನಃ ಸಕ್ರಿಯಗೊಳಿಸಲು ಸಾಧ್ಯವೇ?

ಖಂಡಿತ ಸಾಧ್ಯವಿದೆ. ಕೆಲವೊಂದು ಡಾಕ್ಯುಮೆಂಟ್‌ ಸಲ್ಲಿಸುವ ಮೂಲಕ ಖಾತೆಯನ್ನು ಮತ್ತೆ ಚಾಲ್ತಿಗೆ ತರಬಹುದು. ಹೊಸ ಕೆವೈಸಿ ದಾಖಲೆಗಳು ಮತ್ತು ಪಾಸ್‌ಬುಕ್‌ನೊಂದಿಗೆ ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ನಿಮ್ಮ ಪೋಸ್ಟ್‌ ಆಫೀಸ್‌ನ ಖಾತೆ ಮತ್ತೆ ಕಾರ್ಯ ನಿರ್ವಹಿಸಲಿದೆ.

ಖಾತೆ ತೆರೆಯುವುದು ಸುಲಭ

ಪೋಸ್ಟ್‌ ಆಫೀಸ್‌ನ ಖಾತೆಯ ಮುಖ್ಯ ಅನುಕೂಲವೆಂದರೆ ಇಲ್ಲಿ ಅಕೌಂಟ್‌ ತೆರೆಯುವುದು ಬಹಳ ಸುಲಭ.  ಅಗತ್ಯ ದಾಖಲೆ ನೀಡಿ, ಕೇವಲ 500 ರೂ. ಡೆಪಾಸಿಟ್‌ ಮಾಡಿದರೆ ಉಳಿತಾಯ ಖಾತೆ ತೆರೆಯಲಾಗುತ್ತದೆ. ಇನ್ನು ಚೆಕ್‌ಬುಕ್‌, ಎಟಿಎಂ ಕಾರ್ಡ್‌, ಇ-ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳೂ ಇವೆ. ವರ್ಷಕ್ಕೆ ಶೇ. 4ರಷ್ಟು ಬಡ್ಡಿಯೂ ಸಿಗುತ್ತದೆ.

ಯಾರೆಲ್ಲ ತೆರೆಯಬಹುದು?

  • ವಯಸ್ಕರು (18 ವರ್ಷ ಪ್ರಾಯ ಪೂರ್ತಿಯಾದವರು)
  • ಅಪ್ರಾಪ್ತ ವಯಸ್ಕರ ಪರವಾಗಿ ಪೋಷಕರು
  • ಮಾನಸಿಕ ಅಸ್ವಸ್ಥರ ಪರವಾಗಿ ಪಾಲಕರು

ಠೇವಣಿ ಮತ್ತು ವಿತ್‌ಡ್ರಾ ವಿವರ

  • ಕನಿಷ್ಠ ಹೂಡಿಕೆ ಮೊತ್ತ 500 ರೂ.
  • ಕನಿಷ್ಠ ವಿತ್‌ಡ್ರಾ ಮೊತ್ತ 50 ರೂ.
  • ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ
  • ಕನಿಷ್ಠ ಬ್ಯಾಲೆನ್ಸ್ 500 ರೂ. ಇರಲೇ ಬೇಕು.
  • ಖಾತೆಯ ಬ್ಯಾಲೆನ್ಸ್ ಶೂನ್ಯವಾದರೆ ಖಾತೆ ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ.

ಇದನ್ನೂ ಓದಿ: Money Guide: 1.5 ಲಕ್ಷ ರೂ. ಹೂಡಿಕೆ ಮಾಡಿ 2.27 ಕೋಟಿ ರೂ. ಗಳಿಸಿ! ಯಾವುದು ಈ ಸ್ಕೀಂ?

ಬಡ್ಡಿದರ

  • ತಿಂಗಳ 10ನೇ ತಾರೀಕಿನಿಂದ ತಿಂಗಳ ಅಂತ್ಯದವರೆಗೆ ಕನಿಷ್ಠ ಬ್ಯಾಲೆನ್ಸ್ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ.
  • 10ನೇ ತಾರೀಕಿನಿಂದ ಕೊನೆಯ ದಿನದ ನಡುವಿನ ಬ್ಯಾಲೆನ್ಸ್ 500 ರೂ.ಗಿಂತ ಕಡಿಮೆಯಿದ್ದರೆ ಯಾವುದೇ ಬಡ್ಡಿ ಲಭಿಸುವುದಿಲ್ಲ
  • ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಹಣಕಾಸು ಸಚಿವಾಲಯ ಸೂಚಿಸಿದ ಬಡ್ಡಿದರವನ್ನು ಖಾತೆಗೆ ಜಮಾ ಮಾಡಲಾಗುತ್ತದೆ
  • ಖಾತೆಯನ್ನು ಮುಚ್ಚುವ ಸಮಯದಲ್ಲಿ, ಖಾತೆಯನ್ನು ಮುಚ್ಚಿದ ಹಿಂದಿನ ತಿಂಗಳವರೆಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ.

ಆರ್‌ಡಿ ಖಾತೆ

ಪೋಸ್ಟ್‌ ಆಫೀಸ್‌ನಲ್ಲಿ ಆರ್‌ಡಿ (Recurring Deposit) ಖಾತೆ ತೆಗೆಯುವುದು ಉಳಿತಾಯ ಖಾತೆ ತೆರೆದಷ್ಟೇ ಸುಲಭ. ಪೋಸ್ಟ್‌ ಆಫೀಸ್‌ನಲ್ಲಿ ಉಳಿತಾಯ ಖಾತೆ ಹೊಂದಿದವರು ಆರ್‌ಡಿ ಮಾಡಬಹುದಾಗಿದೆ. ಐದು ವರ್ಷದ ಅವಧಿಗೆ ಮಾಸಿಕ ಇಂತಿಷ್ಟು ಹಣ ಕಟ್ಟುತ್ತ ಹೋದರೆ ಐದು ವರ್ಷಕ್ಕೆ ಶೇ. 6.2ರಷ್ಟು ಬಡ್ಡಿಯ ಲಾಭ ದೊರೆಯಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಮನಿ-ಗೈಡ್

Term Insurance : 1 ಸಾವಿರಕ್ಕೆ 1 ಕೋಟಿ ಇನ್ಷೂರೆನ್ಸ್!‌ ಫುಲ್‌ ಡಿಟೇಲ್ಸ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್‌

ವಿಸ್ತಾರ ಮನಿ ಪ್ಲಸ್‌ನಲ್ಲಿ ಇತ್ತೀಚೆಗೆ ಪ್ರಸಾರವಾದ ಟರ್ಮ್‌ ಇನ್ಷೂರೆನ್ಸ್‌ ಕುರಿತ ಜನಪ್ರಿಯ ವಿಡಿಯೊದ ಎರಡನೇ ಕಂತು ಇಲ್ಲಿದೆ. ಟರ್ಮ್‌ ವಿಮೆ ಕುರಿತ ವೀಕ್ಷಕರ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

All in one insurence policy
Koo

ಬೆಂಗಳೂರು: ವಿಸ್ತಾರ ಮನಿ ಪ್ಲಸ್‌ನಲ್ಲಿ ( Vistara money plus) ಇತ್ತೀಚೆಗೆ ಒಂದು ವಿಡಿಯೊ ಪ್ರಸಾರವಾಗಿತ್ತು. 1 ಸಾವಿರ ರೂಪಾಯಿಗೆ 1 ಕೋಟಿ ರೂ. ಇನ್ಷೂರೆನ್ಸ್‌ ಪಡೆಯುವುದು ಹೇಗೆ ಎಂಬುದು (Term Insurance) ಅದಾಗಿತ್ತು. ಲಕ್ಷಾಂತರ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ವಿಡಿಯೊ ಸಂಚಲನ ಮೂಡಿಸಿತ್ತು. 200ಕ್ಕೂ ಹೆಚ್ಚು ಮಂದಿ ಮತ್ತಷ್ಟು ಮಾಹಿತಿಯನ್ನು ಬಯಸಿದ್ದರು. ಕಮೆಂಟ್‌ ಬಾಕ್ಸ್‌ನಲ್ಲಿ ವೀಕ್ಷಕರು ಟೈಪಿಸಿದ ಪ್ರಮುಖ 12 ಪ್ರಶ್ನೆಗಳಿಗೆ ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್‌ ಎಡಿಟರ್‌ ಶರತ್‌ ಎಂ.ಎಸ್‌ ಅವರು ಉತ್ತರಿಸಿದ್ದಾರೆ. ಹಾಗಾದರೆ ವೀಕ್ಷಕರ ಪ್ರಶ್ನೆಗಳು ಯಾವುದಾಗಿತ್ತು ? ಉತ್ತರವೇನು ? ಇಲ್ಲಿದೆ ವಿವರ.

ಟರ್ಮ್‌ ಇನ್ಷೂರೆನ್ಸ್‌ ನಲ್ಲಿ ಯಾವೆಲ್ಲಾ ರೀತಿಯ ಸಾವುಗಳಿಗೆ ಕವರೇಜ್‌ ಸಿಗುತ್ತದೆ? ಯಾವುದಕ್ಕೆ ಸಿಗಲ್ಲ? ಟರ್ಮ್‌ ಇನ್ಷೂರೆನ್ಸ್‌ ರೈಡರ್ಸ್‌ ಅಗತ್ಯವೇ? ಟರ್ಮ್‌ ಇನ್ಷೂರೆನ್ಸ್‌ ಪಡೆಯಲು ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಎಷ್ಟು? ಟರ್ಮ್‌ ಇನ್ಷೂರೆನ್ಸ್‌ ಪಡೆಯಲು ಕನಿಷ್ಠ ವಿದ್ಯಾರ್ಹತೆ ಏನು? ಟರ್ಮ್‌ ಇನ್ಷೂರೆನ್ಸ್‌ ಪಡೆಯಲು ವ್ಯಕ್ತಿಯ ಆರ್ಥಿಕ ಸ್ಥಿತಿ ಎಷ್ಟು ಮುಖ್ಯವಾಗುತ್ತದೆ? ಟರ್ಮ್‌ ಇನ್ಷೂರೆನ್ಸ್‌ ಪಡೆಯುವಾಗ ಆರೋಗ್ಯ ಪರೀಕ್ಷೆ ಎಷ್ಟು ಮುಖ್ಯವಾಗುತ್ತದೆ? ನಾವು ಮಾಡುವ ಉದ್ಯೋಗ ಎಷ್ಟು ಮುಖ್ಯವಾಗುತ್ತದೆ? ಭಾರತೀಯ ಪ್ರಜೆಯಾಗಿರಬೇಕೆ? ಯಾವೆಲ್ಲ ದಾಖಲೆಗಳು ಬೇಕು? ರಿಟರ್ನ್‌ ಆನ್‌ ಪ್ರೀಮಿಯಂ ಪಾಲಿಸಿ ಅಥವಾ ನಾನ್‌ ರಿಟರ್ನೆಬಲ್‌ ಪಾಲಿಸಿ ಖರೀದಿಸುವುದು ಸೂಕ್ತವೇ? ಕೊನೆಯದಾಗಿ ಟರ್ಮ್‌ ಇನ್ಷೂರೆನ್ಸ್‌ ಕ್ಲೇಮ್‌ ಪ್ರಕ್ರಿಯೆ ಹೇಗೆ?

ಮೊದಲಿಗೆ ಟರ್ಮ್‌ ಇನ್ಷೂರೆನ್ಸ್‌ ನಲ್ಲಿ ಯಾವೆಲ್ಲಾ ರೀತಿಯ ಸಾವುಗಳಿಗೆ ಕವರೇಜ್‌ ಸಿಗುತ್ತದೆ?

ಟರ್ಮ್‌ ಇನ್ಷೂರೆನ್ಸ್‌ನಲ್ಲಿ ಎಲ್ಲ ರೀತಿಯ ಸಾವುಗಳಿಗೆ ವಿಮೆ ಪರಿಹಾರ ಸಿಗುತ್ತದೆಯೇ ಎಂದು ಕೇಳಿದ್ದಾರೆ. ಆತ್ಮಹತ್ಯೆ ಮಾಡಿದರೆ ಸಿಗುತ್ತದೆಯೇ ಎಂದು ಕೆಲವರು ಕೇಳುತ್ತಾರೆ. ಈ ವಿಷಯವನ್ನು ಎರಡು ಭಾಗಗಳಲ್ಲಿ ಚರ್ಚಿಸೋಣ. ಮೊದಲನೆಯದಾಗಿ ಯಾವ ರೀತಿಯ ಸಾವಿಗೆ ಟರ್ಮ್‌ ಇನ್ಷೂರೆನ್ಸ್‌ನಲ್ಲಿ ವಿಮೆ ಪರಿಹಾರ ಸಿಗುತ್ತದೆ? ಸಹಜ ಸಾವು. ಒಬ್ಬ ವ್ಯಕ್ತಿ ಮೂವತ್ತನೇ ವಯಸ್ಸಿನಲ್ಲಿ ಟರ್ಮ್‌ ಇನ್ಷೂರೆನ್ಸ್‌ ತೆಗೆದುಕೊಂಡಿರುತ್ತಾನೆ. 65 ನೇ ವಯಸ್ಸಿನ ತನಕ 1 ಕೋಟಿ ರೂ. ಕವರೇಜ್‌ ಇರುವ ವಿಮೆ ಇದಾಗಿರುತ್ತದೆ. ಆತ ತನ್ನ 63ನೇ ವಯಸ್ಸಿಗೆ ಸಹಜ ಸಾವಿಗೀಡಾಗುತ್ತಾನೆ. ಆಗ ಅವರ ನಾಮಿನಿಗೆ 1 ಕೋಟಿ ರೂ. ಟರ್ಮ್‌ ಇನ್ಶೂರೆನ್ಸ್‌ ಸಿಗುತ್ತದೆ. ಅನಾರೋಗ್ಯದಿಂದ ಅಥವಾ ಅಪಘಾತದಿಂದ ಸತ್ತರೂ ಒಂದು ಕೋಟಿ ರೂ. ಇನ್ಶೂರೆನ್ಸ್‌ ಲಭಿಸುತ್ತದೆ. ಹೃದಯಾಘಾತ, ಅಪಘಾತ, ವಯೋ ಸಹಜ ಸಾವು, ಗಂಭೀರ ಅನಾರೋಗ್ಯದಿಂದ ಉಂಟಾದ ಮರಣಕ್ಕೂ ಟರ್ಮ್‌ ಇನ್ಶೂರೆನ್ಸ್‌ ಕವರೇಜ್‌ ಸಿಗುತ್ತದೆ.

ಟರ್ಮ್‌ ಇನ್ಷೂರೆನ್ಸ್‌ ಯಾವ ರೀತಿಯ ಸಾವಿಗೆ ಲಭಿಸುವುದಿಲ್ಲ? ಬಹಳ ಜನ ಸುಸೈಡ್‌ ಮಾಡಿದರೆ ಸಿಗುತ್ತದೆಯೇ ಎಂದು ಕೇಳಿದ್ದಾರೆ.

ಇದನ್ನೂ ಓದಿ: ಬರ್ತ್ ಡೇಟ್ ತಪ್ಪಾಗಿದ್ದಕ್ಕೆ 5 ಕೋಟಿ ರೂ. ವಿಮೆ ಪಾವತಿಗೆ ನಿರಾಕರಣೆ! 4 ಕೋಟಿ ಬಡ್ಡಿ ಸೇರಿಸಿ 9 ಕೋಟಿ ರೂ. ನೀಡಲು ಆಯೋಗ ಆದೇಶ!

ಆದರೆ ಗಮನಿಸಿ, ಯಾವುದೇ ವಿಮೆ ಕಂಪನಿ ನೀವು ಚೆನ್ನಾಗಿ ಬದುಕಿ, ಬಾಳಿ, ಅನಿವಾರ್ಯ ಸಂದರ್ಭದಲ್ಲಿ ವಿಪತ್ತು ಸಂಭವಿಸಿದಾಗ ವಿಮೆ ಕವರೇಜ್‌ ಕೊಡುತ್ತದೆಯೇ ಹೊರತು, ಸುಸೈಡ್‌ ಮಾಡಿದರೆ ವಿಮೆ ಕವರೇಜ್‌ ಸಿಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಆತ್ಮಹತ್ಯೆಯ ಕಾರಣಗಳನ್ನು ಗಮನಿಸಿ, ವಿಮೆ ಕಂಪನಿ ತನ್ನ ವಿವೇಚನೆಯನ್ನು ಬಳಸಿಕೊಳ್ಳಬಹುದು. ಆದರೆ ಬಹುತೇಕ ಕಂಪನಿಗಳು ಸುಸೈಡ್‌ಗೆ ವಿಮೆ ಕವರೇಜ್‌ ಕೊಡುವುದಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿದರೆ ವಿಮೆ ಸಿಗುತ್ತದೆ ಎಂಬ ಭ್ರಮೆಯನ್ನು ಇಟ್ಟುಕೊಳ್ಳುವುದು ಬೇಡ.

ಮದ್ಯಪಾನ ಮಾಡಿ ವಾಹನ ಚಾಲನೆಯಿಂದ ಅಪಘಾತವಾಗಿ ವ್ಯಕ್ತಿ ಸಾವಿಗೀಡಾದರೆ, ಅಂಥವರಿಗೆ ವಿಮೆ ಪರಿಹಾರ ಸಿಗುವುದಿಲ್ಲ. ಅತಿಯಾದ ಡ್ರಗ್ಸ್‌ ಸೇವಿಸಿ ಮೃತಪಟ್ಟರೆ ಕೂಡ ಸಿಗದು. ಇರುವ ಕಾಯಿಲೆಯನ್ನು ಮುಚ್ಚಿಟ್ಟರೆ ವಿಮೆ ಪರಿಹಾರ ಸಿಗದು. ಆದರೆ ಈ ಸಾಧ್ಯತೆ ಕಡಿಮೆ. ಏಕೆಂದರೆ ಟರ್ಮ್‌ ವಿಮೆ ಕೊಡುವುದಕ್ಕೆ ಮುನ್ನ ಆರೋಗ್ಯ ತಪಾಸಣೆ ಮಾಡುತ್ತಾರೆ. ಪ್ರೆಗ್ನೆನ್ಸಿ ವೇಳೆ ತಾಯಿ ಸಾವಿಗೀಡಾದರೆ ಬಹುಪಾಲು ಕಂಪನಿಗಳು ವಿಮೆ ಕವರೇಜ್‌ ಕೊಡುವುದಿಲ್ಲ. ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಸಿಗುವುದಿಲ್ಲ. ಪಾಲಿಸಿ ಹಣಕ್ಕಾಗಿ ಪಾಲಿಸಿದಾರರನ್ನು ಕೊಂದರೆ ಕವರೇಜ್‌ ಸಿಗುವುದಿಲ್ಲ. ಬಂಗಿ ಜಂಪ್‌ , ಮೋಟಾರ್‌ ಸ್ಪೋರ್ಟ್ಸ್‌ ಇತ್ಯಾದಿ ಅಡ್ವೆಂಚರ್‌ ಸ್ಪೋರ್ಟ್ಸ್‌ಗೆ ಬಹುತೇಕ ಕಂಪನಿಗಳು ವಿಮೆ ಕವರೇಜ್‌ ನೀಡುವುದಿಲ್ಲ. ಪ್ರಾಕೃತಿಕ ವಿಕೋಪಗಳಿಂದ ಮೃತಪಟ್ಟರೆ (ಉದಾಹರಣೆಗೆ ಗುಡ್ಡ ಕುಸಿತ, ಭೂಕಂಪ, ನೆರೆ ಇತ್ಯಾದಿ) ಟರ್ಮ್‌ ಇನ್ಷೂರೆನ್ಸ್‌ ಸಿಗುವುದಿಲ್ಲ. ಸ್ವಯಂ ಹಾನಿ ಮಾಡಿಕೊಂಡರೆ ಸಿಗಲ್ಲ. ಏಕೆಂದರೆ ಇವುಗಳೆಲ್ಲ ಅನಿರೀಕ್ಷಿತ. ಉದಾಹರಣೆಗೆ ಭೂಕಂಪ ಸಂಭವಿಸಿ ಲಕ್ಷಾಂತರ ಜನ ಒಟ್ಟಿಗೆ ಮೃತಪಟ್ಟರೆ, ಹಾಗೂ ಅವರಿಗೆಲ್ಲ ವಿಮೆ ಪರಿಹಾರ ಕೊಡಬೇಕು ಎಂದರೆ, ವಿಮೆ ಕಂಪನಿಗಳೇ ದಿವಾಳಿಯಾಗಬಹುದು.

ಟರ್ಮ್‌ ಇನ್ಷೂರೆನ್ಸ್‌ ರೈಡರ್ಸ್‌ ಎಂದರೇನು? ಜನ ಸಾಮಾನ್ಯರಿಗೆ ಅಗತ್ಯವೇ?

ಟರ್ಮ್‌ ಇನ್ಷೂರೆನ್ಸ್‌ ಜತೆಗೆ ಹೆಚ್ಚುವರಿ ವಿಮೆ ಕವರೇಜ್‌ ಅನ್ನು ಪಡೆಯಲು ಇನ್ಷೂರೆನ್ಸ್‌ ರೈಡರ್ಸ್‌ ಪಡೆಯಬಹುದು. ಆಕ್ಸಿಡೆಂಟಲ್ ಡೆತ್‌ ಬೆನಿಫಿಟ್‌ ರೈಡರ್ ಅನ್ನು ಪಡೆದರೆ ಅನುಕೂಲ. ಉದಾಹರಣೆಗೆ ಯಾರಾದರೂ ಒಬ್ಬ ವ್ಯಕ್ತಿ 50 ಲಕ್ಷ ರೂ. ಟರ್ಮ್‌ ಇನ್ಷೂರೆನ್ಸ್‌ ಪಡೆದಿರುತ್ತಾನೆ. ಅದರ ಜತೆಗೆ 50 ಲಕ್ಷ ‌ ಆಕ್ಸಿಡೆಂಟಲ್ ಬೆನಿಫಿಟ್‌ ರೈಡರ್‌ ಪಡೆದಿದ್ದಾರೆ ಎಂದಿಟ್ಟುಕೊಳ್ಳಿ. ಆ ವ್ಯಕ್ತಿ ಅಪಘಾತದಿಂದ ಮೃತಪಟ್ಟರೆ, ಆತನ ಕುಟುಂಬಕ್ಕೆ 50 ಲಕ್ಷ ರೂ. ಟರ್ಮ್‌ ಇನ್ಷೂರೆನ್ಸ್‌ ಹಾಗೂ ಅಪಘಾತದಿಂದ ಮೃತಪಟ್ಟಿದ್ದಕ್ಕೆ ಹೆಚ್ಚುವರಿ 50 ಲಕ್ಷ ರೂ. ಸಿಗುತ್ತದೆ. ಆಕ್ಸಿಡೆಂಟಲ್‌ ಡೆತ್ ಬೆನಿಫಿಟ್‌ ಕವರೇಜ್‌ ಪಡೆಯಲು ಹೆಚ್ಚಿನ ಪ್ರೀಮಿಯಂ ಕಟ್ಟಬೇಕಾಗಿರುವುದಿಲ್ಲ. ಟರ್ಮ್‌ ವಿಮೆ ತೆಗೆದುಕೊಳ್ಳುವವರು ಒಂದೆರಡು ಸಾವಿರ ರೂ. ವೆಚ್ಚವಾದರೂ ಆಕ್ಸಿಡೆಂಟಲ್‌ ಡೆತ್‌ ಕವರೇಜ್‌ ಪಡೆಯುವುದು ಸೂಕ್ತ.

ಒಬ್ಬ 25 ವರ್ಷ ವಯಸ್ಸಿನ ಯುವಕ ಟರ್ಮ್‌ ಇನ್ಷೂರೆನ್ಸ್‌ ತೆಗೆದುಕೊಂಡಿದ್ದಾನೆ ಎಂದಿಟ್ಟುಕೊಳ್ಳಿ. ವರ್ಷಕ್ಕೆ 13 ಸಾವಿರ ರೂ. ಟರ್ಮ್‌ ಇನ್ಷೂರೆನ್ಸ್‌ ಪ್ರೀಮಿಯಂ ಕಟ್ಟುತ್ತಿದ್ದಾನೆ ಎಂದು ಭಾವಿಸಿ. ವರ್ಷಕ್ಕೆ 3ರಿಂದ 3.5 ಸಾವಿರ ರೂ. ರೈಡರ್‌ ತೆಗೆದುಕೊಂಡರೆ ಅನುಕೂಲಕರ.

ಕ್ರಿಟಿಕಲ್‌ ಇಲ್‌ನೆಸ್‌ ರೈಡರ್‌ :

ಸಾಮಾನ್ಯ ಟರ್ಮ್‌ ಇನ್ಷೂರೆನ್ಸ್‌ ಜತೆಗೆ ಹೆಚ್ಚುವರಿಯಾಗಿ ತೆಗೆದುಕೊಳ್ಳಬಹುದಾದ ವಿಮೆಯಿದು. ಕ್ರಿಟಿಕಲ್‌ ಇಲ್‌ ನೆಸ್‌ ರೈಡರ್‌ ಹೇಗೆ ಉಪಯುಕ್ತ ಎಂಬುದನ್ನು ನೋಡೋಣ. ಯಾರಿಗಾದರೂ ವಯಸ್ಸಾದ ಬಳಿಕ ಕ್ಯಾನ್ಸರ್‌, ಹೃದಯದ ಸಮಸ್ಯೆ ಇತ್ಯಾದಿ ಕಾಯಿಲೆಗಳು ಬರಬಹುದು. ಆಗ ಆರ್ಥಿಕ ನೆರವಿಗೆ ಈ ಹೆಚ್ಚುವರಿ ವಿಮೆ ಪಡೆಯಬಹುದು. ಇದು ದುಬಾರಿಯಾದ್ದರಿಂದ ಆರ್ಥಿಕತೆ ಗಮನಿಸಿ ಪಡೆಯಿರಿ.

ಆಕ್ಸಿಡೆಂಟಲ್‌ ಪರ್ಮನೆಂಟ್‌ ಡಿಸೆಬಲಿಟಿ ಬೆನಿಫಿಟ್‌ ರೈಡರ್:

ಒಬ್ಬ ವ್ಯಕ್ತಿ ಅಫಘಾತಕ್ಕೀಡಾಗಿ ಜೀವನೋಪಾಯಕ್ಕೆ ಕುತ್ತು ಉಂಟಾದರೆ, ಶಾಶ್ವತ ಅಂಗ ವೈಕಲ್ಯಕ್ಕೀಡಾದರೆ ಆಗ ಈ ವಿಮೆ ನೆರವಿಗೆ ಬರುತ್ತದೆ. ಅಪಘಾತಕ್ಕೀಡಾದ ಮೇಲೆ 10-15 ವರ್ಷ ತನಕ ಈ ರೈಡರ್‌ ಸಿಗುತ್ತದೆ.

ಟರ್ಮ್‌ ಇನ್ಷೂರೆನ್ಸ್‌ ಪಡೆಯಲು ಕನಿಷ್ಠ ವಯಸ್ಸು ಎಷ್ಟು? ಹಿರಿಯರಿಗೆ ಸಿಗುತ್ತಾ?

18 ವರ್ಷ ಮೇಲ್ಪಟ್ಟವರು ಟರ್ಮ್‌ ಇನ್ಷೂರೆನ್ಸ್‌ ಪಡೆಯಬಹುದು. ಗರಿಷ್ಠ ವರ್ಷ 65 ವರ್ಷ. ಆದರೆ ಟರ್ಮ್‌ ಇನ್ಷೂರೆನ್ಸ್‌ನಲ್ಲಿ ಕಿರಿಯ ವಯಸ್ಸಿನಲ್ಲಿ ಇದ್ದಾಗ ಕಡಿಮೆ ಪ್ರೀಮಿಯಂ ಹಾಗೂ ವಯಸ್ಸಾಗುತ್ತಾ ಹೆಚ್ಚು ಪ್ರೀಮಿಯಂ ಕೊಡಬೇಕಾಗುತ್ತದೆ. ಉದಾಹರಣೆಗೆ 65 ವರ್ಷದ ವ್ಯಕ್ತಿ 75 ವರ್ಷದ ತನಕ ಅನ್ವಯಿಸುವ 10 ವರ್ಷಗಳ ಅವಧಿಗೆ ಟರ್ಮ್‌ ಇನ್ಷೂರೆನ್ಸ್‌ ತೆಗೆದುಕೊಳ್ಳಬೇಕಿದ್ದರೆ ತಿಂಗಳಿಗೆ 5,596 ರೂ. ಕಟ್ಟಬೇಕು. ಆದರೆ 25 ವರ್ಷದ ವ್ಯಕ್ತಿ 75 ವರ್ಷಕ್ಕೆ ಟರ್ಮ್‌ ಇನ್ಷೂರೆನ್ಸ್‌ ತೆಗೆದುಕೊಳ್ಳಲು ತಿಂಗಳಿಗೆ 629 ರೂ. ಪ್ರೀಮಿಯಂ ಸಾಕಾಗುತ್ತದೆ. ಹೀಗಾಗಿ ವಯಸ್ಸನ್ನು ಆಧರಿಸಿ ಪ್ರೀಮಿಯಂ ದುಬಾರಿಯಾಗುತ್ತದೆ. ವಯಸ್ಸಾದ ಮೇಲೆ ಆರೋಗ್ಯ ಸ್ಥಿತಿ ಕೂಡ ಕುಸಿಯಬಹುದು. ಆರ್ಥಿಕ ಪರಿಸ್ಥಿತಿ, ಆರೋಗ್ಯ ಗಮನಿಸಿ ಟರ್ಮ್‌ ಇನ್ಷೂರೆನ್ಸ್‌ ಸಿಗುತ್ತದೆ.

ಟರ್ಮ್‌ ಇನ್ಷೂರೆನ್ಸ್‌ ಪಡೆಯಲು ವಿದ್ಯಾರ್ಹತೆ ಬೇಕೆ? ಇದಕ್ಕೆ ನಿಗದಿತ ನಿಯಮಗಳು ಇಲ್ಲ. ಆದರೆ ಬಹುತೇಕ ವಿಮೆ ಕಂಪನಿಗಳು ಡಿಗ್ರಿಯನ್ನು ಪರಿಗಣಿಸುತ್ತವೆ. ಕೆಲ ಕಂಪನಿಗಳು ಪಿಯುಸಿಯನ್ನು ಹಾಗೂ ಎಸ್ಸೆಸ್ಸೆಲ್ಸಿಯನ್ನು ಪರಿಗಣಿಸುತ್ತವೆ. 20-25 ಲಕ್ಷ ರೂ.ಗೆ ಶೈಕ್ಷಣಿಕ ಅರ್ಹತೆ ಅಷ್ಟಾಗಿ ಪರಿಗಣನೆಯಾಗುವುದಿಲ್ಲ. ಆದರೆ ಒಂದು-ಎರಡು ಕೋಟಿ ರೂ. ವಿಮೆ ಬೇಕಿದ್ದರೆ, ಶೈಕ್ಷಣಿಕ ಮಟ್ಟ ಕೂಡ ಒಂದು ಮಾನದಂಡವಾಗಿರುತ್ತದೆ. ನಿಮ್ಮ ಆದಾಯ, ಸ್ಥಿರ ಆದಾಯ, ಶಾರೀರಿಕ ಆರೋಗ್ಯ ಎಲ್ಲವನ್ನೂ ಕಂಪನಿ ಗಮನಿಸುತ್ತದೆ. ಬಿಸಿನೆಸ್‌ ಮಾಡುವವರು ತಮ್ಮ ಆದಾಯದ ಮೂಲವನ್ನು ಖಾತರಿಪಡಿಸಬೇಕಾಗುತ್ತದೆ.

ಆರೋಗ್ಯ ಪರೀಕ್ಷೆ ಎಷ್ಟು ಮುಖ್ಯ?

ಟರ್ಮ್‌ ಇನ್ಷೂರೆನ್ಸ್‌ನಲ್ಲಿ ಪಡೆಯುವವರಿಗೆ ವಯಸ್ಸು ಕಿರಿದಾಗಿದ್ದು, ಪ್ರೀಮಿಯಂ ಕೂಡ ಕಡಿಮೆಯಾಗಿದ್ದಾಗ, ವಿಮೆ ಕಂಪನಿಗಳು ಅಷ್ಟಾಗಿ ಆರೋಗ್ಯ ತಪಾಸಣೆಯನ್ನು ಕೇಳುವುದಿಲ್ಲ. ಕೆಲವರು ಟೆಲಿಫೋನ್‌ ಮೂಲಕ ಕೇಳಿಕೊಳ್ಳುತ್ತಾರೆ. ಕೆಲವರು ಮೆಡಿಕಲ್‌ ರಿಪೋರ್ಟ್‌ ಕೇಳುತ್ತಾರೆ. ಕೆಲವರು ತೂಕ, ಎತ್ತರ, ಲಿಪಿಡ್‌ ಪ್ರೊಫೈಲ್‌, ಬಾಡಿ ಮಾಸ್‌ ಇಂಡೆಕ್ಸ್‌, ಬಿಪಿ, ಹೃದಯ ಬಡಿತ ಎಲ್ಲವನ್ನೂ ಚೆಕ್‌ ಮಾಡ್ತಾರೆ. ಅನಾರೋಗ್ಯ ಇದ್ದರೆ ಅದನ್ನು ಗಮನಕ್ಕೆ ತಂದರೆ ಪ್ರೀಮಿಯಂ ಹೆಚ್ಚಿಸಿ ವಿಮೆ ಕವರೇಜ್‌ ಕೊಡುತ್ತವೆ.

ಉದ್ಯೋಗ ಪರಿಗಣನೆಯಾಗುತ್ತದೆಯೇ?

ವಿಮೆ ಕಂಪನಿಗಳು ಸಾಮಾನ್ಯವಾಗಿ ಸೇನೆಯಲ್ಲಿ ಇರುವವರಿಗೆ ವಿಮೆ ಕವರೇಜ್‌ ನೀಡುವುದಿಲ್ಲ. ಮೈನಿಂಗ್‌ , ಅಡ್ವೆಂಚರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡುವವರಿಗೆ ಕೊಡುವುದಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ಸೇನೆ, ಮೈನಿಂಗ್‌ನಲ್ಲಿ ಇರುವವರಿಗೆ ಕೊಡುತ್ತವೆ. ಏಕೆಂದರೆ ಇಲ್ಲಿ ಸಾಮಾನ್ಯವಾಗಿ ರಿಸ್ಕ್‌ ಹೆಚ್ಚು ಇರುತ್ತದೆ.

ಭಾರತೀಯರಿಗೆ ಮಾತ್ರವೇ? ಐಆರ್‌ಡಿಎ ಪ್ರಕಾರ ವಿಮೆ ಮಾಡುವಾಗ ಭಾರತೀಯ ಪ್ರಜೆಯಾಗಿರಬೇಕು. ಪ್ಯಾನ್‌ ಕಾರ್ಡ್‌, ಆಧಾರ್‌, ಬರ್ತ್‌ ಸರ್ಟಿಫಿಕೇಟ್‌, ಬೇಸಿಕ್‌ ಕೆವೈಸಿ ದಾಖಲಾತಿಗಳು ಸಾಕಾಗುತ್ತದೆ.

ರಿಟರ್ನ್‌ ಆನ್‌ ಪ್ರೀಮಿಯಂ ಎಂದರೇನು? ಟರ್ಮ್‌ ಇನ್ಷೂರೆನ್ಸ್‌ನಲ್ಲಿ ಹಾಕಿದ ದುಡ್ಡು ವಾಪಸ್‌ ಬರಲ್ಲ. ಆದರೂ ರಿಟರ್ನ್‌ ಆನ್‌ ಪ್ರೀಮಿಯಂ ಆಫರ್‌ ನೀಡುವ ಕಂಪನಿಗಳು ಇವೆ. ಅಂದರೆ ನೀವು ಕಟ್ಟಿದ ಪ್ರೀಮಿಯಂ ಅನ್ನು ಕಂಪನಿ ವಾಪಸ್‌ ಕೊಡುವುದು. ಕಂಪನಿಗಳು ಇಂಥ ಆಫರ್‌ನಲ್ಲಿ ಪ್ರೀಮಿಯಂ ದುಬಾರಿಯಾಗುತ್ತದೆ. 50 ಲಕ್ಷ ಕವರೇಜ್‌ಗೆ 10 ಸಾವಿರ ರೂ. ಪ್ರೀಮಿಯಂ ಬದಲಿಗೆ 20 ಸಾವಿರ ರೂ. ಸಂಗ್ರಹಿಸುತ್ತಾರೆ. ಅದನ್ನು ಇನ್ವೆಸ್ಟ್‌ ಮಾಡಿ ಬರುವ ಲಾಭದಲ್ಲಿ ಒಂದಷ್ಟು ಪಾಲನ್ನು ಹಿಂತಿರುಗಿಸುತ್ತಾರೆ.

ಕ್ಲೇಮ್‌ ಸೆಟ್ಲ್‌ ಮೆಂಟ್ ರೇಶಿಯೊ ಎಷ್ಟಿದ್ದರೆ ಬೆಸ್ಟ್?

ಕ್ಲೇಮ್‌ ಸೆಟ್ಲ್‌ ಮೆಂಟ್ ರೇಶಿಯೊ 98-99% ಇರುವ ವಿಮೆ ಕಂಪನಿಗಳ ವಿಮೆ ಖರೀದಿಸುವುದು ಸೂಕ್ತ.‌ ಐಆರ್‌ಡಿಎ ವೆಬ್‌ ಸೈಟ್‌ನಲ್ಲಿ ಈ ವಿವರ ಪಡೆಯಬಹುದು. ಟರ್ಮ್‌ ಇನ್ಷೂರೆನ್ಸ್‌ ತೆಗೆದುಕೊಂಡಿದ್ದರೆ, ಕುಟುಂಬದ ಸದಸ್ಯರಿಗೆ ತಿಳಿಸಬೇಕು. ಪಾಲಿಸಿದಾರ ಮೃತಪಟ್ಟಾಗ ನಾಮಿನಿಯೇ ವಿಮೆ ಕಂಪನಿಗೆ ತಿಳಿಸಬೇಕೆಂದೇನಿಲ್ಲ. ಆನ್‌ಲೈನ್‌ ಮೂಲಕವೂ ಕ್ಲೇಮ್‌ ಸೆಟ್ಲ್‌ ಮೆಂಟ್‌ ಮಾಡಬಹುದು. ಇಲ್ಲಿ ಮುಖ್ಯವಾಗಿ ಜೀವ ಹಾನಿಯಾಗಿದೆ ಎಂಬುದನ್ನು ಆದಷ್ಟು ಬೇಗ ಕಂಪನಿಗೆ ತಿಳಿಸಬೇಕು. ಒಂದೊಂದು ಕಂಪನಿಯ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಬೇಕು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್‌ ಮೂಲಕ ತಿಳಿಸಿ

Continue Reading

ಮನಿ-ಗೈಡ್

Money Guide: ಎಲ್ಐಸಿಯ ಈ ಪಾಲಿಸಿಯಿಂದ ಜೀವನ ಪರ್ಯಂತ ಆದಾಯ; ಏನಿದರ ವೈಶಿಷ್ಟ್ಯ?

Money Guide: ದೇಶದ ಅತಿದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ ಹೊಸ ಯೋಜನೆಯೊಂದನ್ನು ಪರಿಚಯಿಸಿದ್ದು, ಅದರ ವಿವರ ಇಲ್ಲಿದೆ.

VISTARANEWS.COM


on

insurence
Koo

ಬೆಂಗಳೂರು: ಜೀವನದಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು. ಹೀಗಾಗಿ ವಿಮೆ ಮಾಡಿಸುವುದು ಪ್ರಸ್ತುತ ಆಯ್ಕೆಯಲ್ಲ, ಅನಿವಾರ್ಯ ಎಂದು ತಜ್ಞರು ಹೇಳುತ್ತಾರೆ. ಉದ್ಯೋಗಕ್ಕೆ ಸೇರಿದ ಆರಂಭದಿಂದಲೇ ಇನ್ಶೂರೆನ್ಸ್‌ ಮಾಡಿಸುವುದುನ್ನು ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ. ದೇಶದಲ್ಲಿ ಇಂದು ಬೇರೆ ಬೇರೆ ಕಂಪನಿಗಳು ಆಕರ್ಷಕ ಕೊಡುಗೆಗಳೊಂದಿಗೆ ಇನ್ಶೂರೆನ್ಸ್‌ ನೀಡುತ್ತವೆ. ಅದರಲ್ಲೂ ದೇಶದ ಅತಿದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (LIC) ಕಾಲ ಕಾಲಕ್ಕೆ ಉತ್ತಮ ಯೋಜನೆಗಳನ್ನು ಪರಿಚಯಿಸುತ್ತಿದೆ. ಇದೀಗ ಅಂತಹ ಯೋಜನೆಯೊಂದನ್ನು ಜಾರಿಗೆ ತಂದಿದೆ. ಹೊಸ ಯೋಜನೆಗೆ ಜೀವನ್ ಉತ್ಸವ್ ಪ್ಲಾನ್ (LIC Jeevan Utsav) ಎಂಬ ಹೆಸರಿಡಲಾಗಿದ್ದು, ಅದರಲ್ಲಿನ ವೈಶಿಷ್ಟ್ಯಗಳ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಜೀವನ್ ಉತ್ಸವ್ ಪ್ಲಾನ್ ಅನ್ನು ನವೆಂಬರ್ 29ರಂದು ಬಿಡುಗಡೆ ಮಾಡಲಾಗಿದೆ. ಇದು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಯೋಜನೆ. ಆಯ್ದ ಪ್ರೀಮಿಯಂ ಪಾವತಿಸುವ ಅವಧಿಯ ಆಧಾರದ ಮೇಲೆ, ನಿರ್ದಿಷ್ಟ ವರ್ಷಗಳ ನಂತರ ವಾರ್ಷಿಕವಾಗಿ ವಿಮಾ ಮೊತ್ತದ 10% ಅನ್ನು ಮರುಪಾವತಿಸಲಾಗುತ್ತದೆ. ಈ ಯೋಜನೆಯು ಪಾಲಿಸಿದಾರರ ಜೀವಿತಾವಧಿಗೆ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ ಎಂಬುದು ಪ್ಲಸ್ ಪಾಯಿಂಟ್.

2 ಆಯ್ಕೆಗಳಿವೆ

ರೆಗ್ಯುಲರ್ ಇನ್‌ಕಮ್‌ ಬೆನಿಫಿಟ್‌ (Regular Income Benefit) ಮತ್ತು ಫ್ಲೆಕ್ಸಿ ಇನ್‌ಕಮ್‌ ಬೆನಿಫಿಟ್‌ (Flexi Income Benefit) ಎಂಬ ಎರಡು ಆಯ್ಕೆಗಳಲ್ಲಿ ಈ ಪಾಲಿಸಿ ಲಭ್ಯ. ಈ ಎರಡೂ ಆಯ್ಕೆಗಳಲ್ಲಿ ನಿರ್ದಿಷ್ಟ ಮೊತ್ತವನ್ನು ನಿಯಮಿತವಾಗಿ ನಿಮಗೆ ಲಭಿಸುತ್ತದೆ ಎಂದು ಸಂಸ್ಥೆ ಹೇಳಿದೆ.

ಕನಿಷ್ಠ, ಗರಿಷ್ಠ ಮೊತ್ತ

ಕನಿಷ್ಠ ಮೂಲ ವಿಮಾ ಮೊತ್ತ 5,00,000 ರೂ. ಗರಿಷ್ಠ ಮೂಲ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ ಎಂದು ಎಲ್‌ಐಸಿ ತಿಳಿಸಿದೆ. ಈ ಪಾಲಿಸಿಯು 5ರಿಂದ 16 ವರ್ಷಗಳ ಸೀಮಿತ ಪ್ರೀಮಿಯಂ ಪಾವತಿಸುವ ಅವಧಿಯನ್ನು ಹೊಂದಿದ್ದು, ಜೀವಿತಾವಧಿಯ ಆದಾಯವನ್ನು ನೀಡುತ್ತದೆ.

ಅನುಕೂಲಗಳೇನು?

ರೆಗ್ಯುಲರ್ ಇನ್‌ಕಮ್‌ ಬೆನಿಫಿಟ್‌: ಎಲ್ಲ ಪ್ರೀಮಿಯಂ ಪಾವತಿಸಿದ್ದರೆ ಪ್ರತಿ ಪಾಲಿಸಿ ವರ್ಷದ ಕೊನೆಯಲ್ಲಿ ಮೂಲ ವಿಮಾ ಮೊತ್ತದ ಶೇ. 10ಕ್ಕೆ ಸಮಾನವಾದ ನಿಯಮಿತ ಆದಾಯ ಲಭಿಸಲಿದೆ. ಉದಾಹರಣೆಗೆ 5 ವರ್ಷದ ಪ್ಲಾನ್‌ ಖರೀದಿಸಿದ್ದರೆ 11ನೇ ವರ್ಷದಿಂದ ಜೀವನ ಪರ್ಯಂತ (100 ವರ್ಷದವರೆಗೆ) ನಿಯಮಿತ ಆದಾಯ ಲಭಿಸಲಿದೆ.

ಫ್ಲೆಕ್ಸಿ ಇನ್‌ಕಮ್‌ ಬೆನಿಫಿಟ್‌: ಕನಿಷ್ಠ ಗ್ಯಾರಂಟಿ ಮೊತ್ತದ ಶೇ. 10ರಷ್ಟು ಹಣವನ್ನು ಪ್ರತೀ ಪಾಲಿಸಿ ವರ್ಷದ ಕೊನೆಗೆ ನಿಮಗೆ ಕೊಡಲಾಗುತ್ತದೆ. ಉದಾಹರಣೆಗೆ ನೀವು 30ನೇ ವಯಸ್ಸಿನಲ್ಲಿ 5 ವರ್ಷದ ಪ್ಲಾನ್‌ ಖರೀದಿಸಿದ್ದರೆ 41ನೇ ವಯಸ್ಸಿನಿಂದ ಆದಾಯ ಲಭಿಸಲು ಆರಂಭವಾಗುತ್ತದೆ. ಒಂದು ವೇಳೆ 41ನೇ ವಯಸ್ಸಿನಲ್ಲಿ ಆದಾಯ ಬೇಡ ಎಂದಿದ್ದರೆ ಆ ಮೊತ್ತಕ್ಕೆ ವಾರ್ಷಿಕ ಶೇ. 5.5 ಬಡ್ಡಿ ವಿಧಿಸಲಾಗುತ್ತದೆ. ಬಳಿಕ ಯಾವಾಗ ಬೇಕಾದರೂ ಹಿಂಪಡೆಯಬಹುದು.

ಕ್ರಿಟಿಕಲ್‌ ಇಲ್‌ನೆಸ್‌ ರೈಡರ್‌

ಈ ಆಪ್ಶನ್‌ ಆಯ್ಕೆ ಮಾಡಿಕೊಂಡರೆ ಎಲ್‌ಐಸಿ ಸೂಚಿಸಿದ 15 ಕಾಯಿಲೆಗೆ ಹಣ ಲಭಿಸಲಿದೆ. ಉದಾಹರಣೆಗೆ ಪಾಲಿಸಿದಾತನಿಗೆ ಕಾಯಿಲೆ ಕಾಣಿಸಿಕೊಂಡು 35 ವರ್ಷ ಅಥವಾ ಆತನಿಗೆ 70 ವರ್ಷ ತುಂಬುವವರೆಗೆ ಅನುಕೂಲ ಲಭಿಸಲಿದೆ.

ಇದನ್ನೂ ಓದಿ: Money Guide: ಪರ್ಸನಲ್‌ ಲೋನ್‌ ಬಿಡಿ, ಕಡಿಮೆ ಬಡ್ಡಿದರದ ಈ ಸಾಲಗಳಿವೆ ನೋಡಿ!

Continue Reading
Advertisement
lokayukta raid in channakeshava
ಕರ್ನಾಟಕ9 mins ago

Lokayukta Raid: ರಾಜ್ಯದೆಲ್ಲೆಡೆ ಲೋಕಾಯುಕ್ತ ದಾಳಿ, ಅಧಿಕಾರಿಗಳಿಗೆ ಶಾಕ್‌, ಬೆಸ್ಕಾಂ ಇಇ ಮನೆಯಲ್ಲಿ ಕೋಟಿ ಕೋಟಿ ಪತ್ತೆ

David Warner
ಕ್ರಿಕೆಟ್18 mins ago

David Warner: ಮೋಸಗಾರನಿಗೆ ವಿದಾಯ ಪಂದ್ಯದ ಅಗತ್ಯವಿಲ್ಲ; ಮಿಚೆಲ್​ ಜಾನ್ಸನ್

sadghuru with students
ಅಂಕಣ1 hour ago

Prerane Column : ವಿದ್ಯಾಭ್ಯಾಸ ಎಂದರೆ ದುಡ್ಡು ಮಾಡುವ ದಂಧೆಯ ಅಡಿಪಾಯವೇ?

ಕರ್ನಾಟಕ1 hour ago

ವಿಜಯಪುರ ಗೋದಾಮು ದುರಂತ: ಮೃತರ ಸಂಖ್ಯೆ 7ಕ್ಕೆ, ಇನ್ನೂ ನಾಲ್ಕು ಶವ ಸಿಕ್ಕಿಲ್ಲ

cm siddaramaih respect captain pranjal
ಕರ್ನಾಟಕ2 hours ago

CM Siddaramaiah: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 50 ಲಕ್ಷ ರೂ. ಪರಿಹಾರ

Canara Bank Ammembala Subbarao Pai
ಅಂಕಣ2 hours ago

Raja Marga Column: ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

CBSE Board Exam 2024 and many more changes proposed implemented in this year
ದೇಶ2 hours ago

ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಘೋಷಿಸಿದ ಪ್ರಮುಖ ಬದಲಾವಣೆಗಳೇನು?

Saurav Gangly
ಕ್ರಿಕೆಟ್2 hours ago

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Physical Education Teacher
ಉದ್ಯೋಗ2 hours ago

Teachers Recruitment : ಪ್ರಾಥಮಿಕ ಶಾಲೆಯಲ್ಲಿ 2120 ದೈಹಿಕ ಶಿಕ್ಷಕರ ಹುದ್ದೆ ಭರ್ತಿಗೆ ತೀರ್ಮಾನ

sufi
ಅಂಕಣ2 hours ago

ನನ್ನ ದೇಶ ನನ್ನ ದನಿ ಅಂಕಣ: ಸಯ್ಯಿದ್ ರಿಜ್ವಿ ಸ್ವತಃ ಹೇಳಿದ ಸೂಫಿಗಳ ನಿಜ ಕಥನ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌