Site icon Vistara News

Price rises : ತೊಗರಿ ಮತ್ತು ಉದ್ದಿನ ದರ ಏರುವ ಭೀತಿ, ದಾಸ್ತಾನಿಗೆ ಮಿತಿ, ಪರಿಣಾಮವೇನು?

Tur dal

#image_title

ನವ ದೆಹಲಿ: ದೇಶದಲ್ಲಿ ಅಡುಗೆಮನೆಯ ಅವಶ್ಯಕ ಪದಾರ್ಥವಾದ (Price rises ) ತೊಗರಿ ಮತ್ತು ಉದ್ದಿನ ಬೇಳೆ ದರದಲ್ಲಿ ಏರಿಕೆ ಆಗಿರುವುದರಿಂದ ದಾಸ್ತಾನಿಗೆ ಮಿತಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ವಿಧಿಸಿದೆ. ( Govt caps tur and urad dal stock) ಹೋಲ್‌ಸೇಲ್‌ ವರ್ತಕರು ಮತ್ತು ರಿಟೇಲ್‌ ವ್ಯಾಪಾರಿಗಳು ತೊಗರಿ ಮತ್ತು ಉದ್ದಿನ ಬೇಳೆಯನ್ನು ನಿಗದಿತ ಮಿತಿಗಿಂತ ಹೆಚ್ಚು ದಾಸ್ತಾನು ಮಾಡುವಂತಿಲ್ಲ. ಈ ಆದೇಶ ತಕ್ಷಣ ಜಾರಿಯಾಗಿದ್ದು, ಅಕ್ಟೋಬರ್‌ 31ರ ತನಕ ಜಾರಿಯಲ್ಲಿರಲಿದೆ.

ಹೋಲ್‌ಸೇಲ್‌ ಅಥವಾ ಸಗಟು ವರ್ತಕರು 200 ಟನ್‌ನಷ್ಟು ತೊಗರಿ, ಉದ್ದು ದಾಸ್ತಾನು ಇಡಬಹುದು. ರಿಟೇಲ್‌ ವರ್ತಕರು 5 ಟನ್‌ ದಾಸ್ತಾನಿಡಬಹುದು. ಕೆಲದ ದಿನಗಳಿಂದ ತೊಗರಿ ಮತ್ತು ಉದ್ದಿನ ಮತ್ತು ತೊಗರಿ ದರ ಗಣನೀಯ ಏರಿಕೆಯಾಗಿದೆ. ಈ ವರ್ಷದ ಆರಂಭದಿಂದಲೂ ಏರುಗತಿಯಲ್ಲಿತ್ತು. ಮಾರುಕಟ್ಟೆಗೆ ಆವಕ ಕಡಿಮೆಯಾಗಿರುವುದು ಹಾಗೂ ದರ ಏರುಗತಿಯಲ್ಲಿದ್ದರೂ, ಮುಂದುವರಿದಿರುವ ಬೇಡಿಕೆಯ ಪರಿಣಾಮ ದರ ಏರುಗತಿಯಲ್ಲಿದೆ.

ಕೇಂದ್ರ ಸರ್ಕಾರ ಶೂನ್ಯ ಸುಂಕದಲ್ಲಿ ತೊಗರಿ ಮತ್ತು ಉದ್ದಿನ ಆಮದಿಗೆ 2024 ಮಾರ್ಚ್‌ ತನಕ ಅನುಮತಿ ನೀಡಿದೆ. ಇದರಿಂದ ಆಮದು ಸುಗಮವಾಗಲಿದ್ದು, ದರ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ವರ್ತಕರು 30 ದಿನಗಳೊಳಗೆ ಮಿತಿ ಬಗ್ಗೆ ವಿವರ ನೀಡಬೇಕಾಗುತ್ತದೆ.

ತೊಗರಿ ದರ ಪ್ರತಿ ಕೆ.ಜಿಗೆ 150 ರೂ.ಗೆ ಜಿಗಿತ

ಇತ್ತೀಚಿನ ಅಕಾಲಿಕ ಮಳೆಯ ಪರಿಣಾಮ ತೊಗರಿ ಬೆಳೆಯುವ ರಾಜ್ಯಗಳಲ್ಲಿ ಗಣನೀಯ ಬೆಳೆಹಾನಿ ಸಂಭವಿಸಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೊಗರಿ ದರಗಳು ಏರಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 110-115 ರೂ.ನಷ್ಟಿದ್ದ ತೊಗರಿ ದರ ಈಗ 145-150 ರೂ.ಗೆ ಜಿಗಿದಿದೆ. ರಿಟೇಲ್‌ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ತೊಗರಿ ದರ 165-170 ರೂ.ಗೆ ಏರಿದೆ. ಹೊಸ ಬೆಳೆ ಮಾರುಕಟ್ಟೆಗೆ ಬರಲು ಇನ್ನೂ 6-7 ತಿಂಗಳು ಕಾಯಬೇಕಾಗುತ್ತದೆ.

ಕೃಷಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ತೊಗರಿ ಬಿತ್ತನೆ ಪ್ರದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 4.6% ಇಳಿಕೆಯಾಗಿದೆ. ಉದ್ದಿನ ಬಿತ್ತನೆ ಪ್ರದೇಶದಲ್ಲಿ 2% ಇಳಿಕೆಯಾಗಿದೆ. ತೊಗರಿ ಬೆಳೆಯುವ ಪ್ರದೇಶಗಳಲ್ಲಿ ಭಾರಿ ಮಳೆಯಾಗಿರುವುದರಿಂದ ಈ ಸಲ ಸಮಸ್ಯೆಯಾಗಿದೆ. ಹೀಗಿದ್ದರೂ, ತೊಗರಿ ದಾಸ್ತಾನು ಸಮೃದ್ಧವಾಗಿದ್ದು, ಈ ಸಲ ಉತ್ಪಾದನೆಯಲ್ಲಿ ಸ್ವಲ್ಪ ವ್ಯತ್ಯಯ ಉಂಟಾದರೂ ತೊಂದರೆ ಆಗದು ಎಂದು ಮಾಹಾರಾಷ್ಟ್ರದ ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಆಗಸ್ಟ್-ಸೆಪ್ಟೆಂಬರ್‌ ವೇಳೆಗೆ ಆಫ್ರಿಕಾದಿಂದ 5 ಲಕ್ಷ ಟನ್‌ ಧಾನ್ಯ ಆಮದಾಗುವ ಸಾಧ್ಯತೆ ಇದೆ. ಉದ್ದಿನ ಬೆಳೆಯ ಉತ್ಪಾದನೆಯಲ್ಲಿ ಇಳಿಕೆಯಾದರೂ, ಆಮದು ಮೂಲಕ ಸರಿದೂಗಿಸಲಾಗುವುದು. ಹೋಗಾಗಿ ಪೂರೈಕೆಯ ಮೇಲೆ ಒತ್ತಡ ಉಂಟಾಗುವ ಸಾಧ್ಯತೆ ಇಲ್ಲ. ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಉದ್ದಿನ ಬೆಳೆ ಚೆನ್ನಾಗಿದೆ.

ಇದನ್ನೂ ಓದಿ: ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ಸಾಮಗ್ರಿಗಳ ದರ ಹೀಗಿದೆ: ಯಾವುದು ಅಗ್ಗ? ಯಾವುದು ದುಬಾರಿ? ಫುಲ್‌ ಡಿಟೇಲ್ಸ್

Exit mobile version