Site icon Vistara News

Street vendors | 2023ರಲ್ಲಿ ಬೀದಿ ವ್ಯಾಪಾರಿಗಳಿಗೆ 3,000-5000 ರೂ. ಸಾಲ ವಿತರಣೆಗೆ ಆದ್ಯತೆ: ಕೇಂದ್ರ

street venders

ನವ ದೆಹಲಿ: ಕೇಂದ್ರ ಸರ್ಕಾರ 2023ರಲ್ಲಿ ಬೀದಿ ವ್ಯಾಪಾರಿಗಳಿಗೆ (Street vendors) ತಂತ್ರಜ್ಞಾನದ ನೆರವಿನ ಮೂಲಕ 3,000-5,000 ರೂ. ತನಕ ಕಿರು ಸಾಲ ನೀಡಲು ಆದ್ಯತೆ ನೀಡಲಿದೆ ಎಂದು ಕೇಂದ್ರ ಐಟಿ ಮತ್ತು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ಶನಿವಾರ ತಿಳಿಸಿದ್ದಾರೆ.

ಡಿಜಿಟಲ್‌ ಇಂಡಿಯಾ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 4ಜಿ ಮತ್ತು 5 ಜಿ ಸೇವೆಯ ವಿಸ್ತರಣೆಗೆ ಪ್ರಧಾನಿ ಮೋದಿ ಅವರು 52,000 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಡಿಜಿಟಲ್‌ ತಂತ್ರಜ್ಞಾನ ಪ್ರತಿಯೊಬ್ಬರಿಗೂ ಮುಟ್ಟಬೇಕು ಎಂಬುದು ಇದರ ಆಶಯ. ಈ ವರ್ಷ ಬೀದಿ ವ್ಯಾಪಾರಿಗಳಿಗೆ 3,000-5000 ರೂ.ಗಳ ಕಿರು ಸಾಲವನ್ನು ನೀಡಲು ಗಮನ ಹರಿಸಲಾಗುವುದು ಎಂದರು.

ಬೀದಿ ವ್ಯಾಪಾರಿಗಳಿಗೆ ಆತ್ಮನಿರ್ಭರ ನಿಧಿ (ಪಿಎಂ ಸ್ವಾನಿಧಿ -SVANidhi) ಯೋಜನೆಯನ್ನು 2020ರ ಜೂನ್‌ನಲ್ಲಿ ಆರಂಭಿಸಲಾಗಿತ್ತು. ಅಡಮಾನ ರಹಿತ ಸಾಲ ಇದಾಗಿದ್ದು, ಬೀದಿ ವ್ಯಾಪಾರಿಗಳಿಗೆ ಮೀಸಲಾಗಿದೆ. (https://pmsvanidhi.mohua.gov.in)

Exit mobile version