Site icon Vistara News

China economy | ಚೀನಾದಲ್ಲಿ ಕಾರ್ಖಾನೆಗಳಿಗೆ ಜನವರಿ-ನವೆಂಬರ್‌ ಅವಧಿಯಲ್ಲಿ ಲಾಭ 3.6% ಇಳಿಕೆ

china

ನವ ದೆಹಲಿ: ಚೀನಾದ ಉದ್ದಿಮೆಗಳಲ್ಲಿ ಕಳೆದ ಜನವರಿ-ನವೆಂಬರ್‌ ಅವಧಿಯಲ್ಲಿ (China economy) ಲಾಭಾಂಶ 3.6% ಇಳಿಕೆಯಾಗಿದೆ.

ಮೊದಲ ಹತ್ತು ತಿಂಗಳಲ್ಲಿ ಉದ್ಯಮ ವಲಯದ ಲಾಭ ಕುಸಿದಿರುವುದನ್ನು ನ್ಯಾಶನಲ್‌ ಬ್ಯೂರೊ ಆಫ್‌ ಸ್ಟಾಟಿಸ್ಟಿಕ್ಸ್‌ (NBS) ತಿಳಿಸಿದೆ.

ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಚೀನಾದಲ್ಲಿ ಕೋವಿಡ್-‌19 ಸೋಂಕಿನ ಪ್ರಕರಣಗಳು ಮತ್ತೆ ವೃದ್ಧಿಸಿತ್ತಿರುವ ಬಗ್ಗೆ ವರದಿಯಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಆರ್ಥಿಕತೆಗೆ ಮತ್ತಷ್ಟು ಹೊಡೆತ ಬೀಳುವ ಆತಂಕ ಸೃಷ್ಟಿಯಾಗಿದೆ.

ಕಂಪನಿಗಳ ಸ್ಥಳಾಂತರ: ಕೋವಿಡ್‌ ಕೇಸ್‌ಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಚೀನಾದಿಂದ ಕಂಪನಿಗಳು ನಿರ್ಗಮಿಸುತ್ತಿವೆ. ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರವಾಗುತ್ತಿವೆ. ಕಳೆದ ನಾಲ್ಕು ದಶಕಗಳಿಂದ ಚೀನಾ ಜಗತ್ತಿನ ಕಾರ್ಖಾನೆ ಎನ್ನಿಸಿತ್ತು. ಈಗ ಈ ಖ್ಯಾತಿ ಕಳೆದುಕೊಳ್ಳುವ ಭೀತಿ ಉಂಟಾಗಿದೆ.

Exit mobile version