Site icon Vistara News

Railways income : ರೈಲ್ವೆಗೆ ಸರಕು ಸಾಗಣೆಯಿಂದ 1.30 ಲಕ್ಷ ಕೋಟಿ ರೂ. ಆದಾಯ

railway

railway

ನವ ದೆಹಲಿ: ಭಾರತೀಯ ರೈಲ್ವೆ 2022-23ರಲ್ಲಿ ಮೊದಲ 10 ತಿಂಗಳುಗಳಲ್ಲಿ ಸರಕು ಸಾಗಣೆಯಿಂದ 1.30 ಲಕ್ಷ ಕೋಟಿ ರೂ. ಆದಾಯವನ್ನು ಗಳಿಸಿದೆ ಎಂದು ಇಲಾಖೆ ತಿಳಿಸಿದೆ. 2021-22ರ ಇದೇ ಅವಧಿಯ (Railways income) ಆದಾಯ ಗಳಿಕೆಯನ್ನು ಮೀರಿದೆ. 16% ಹೆಚ್ಚಳ ದಾಖಲಿಸಿದೆ. ೨೦೨೨ ಏಪ್ರಿಲ್‌ನಿಂದ 2023 ಜನವರಿ ನಡುವೆ 124 ಕೋಟಿ ಟನ್‌ ಸರಕು ಸಾಗಣೆಯಾಗಿದೆ. ರೈಲ್ವೆ 135,387 ಕೋಟಿ ರೂ. ಆದಾಯವನ್ನು ಗಳಿಸಿದೆ. ಇದಕ್ಕೂ ಹಿಂದಿನ ಸಾಲಿನ ಇದೇ ಅವಧಿಯಲ್ಲಿ 117212 ಕೋಟಿ ರೂ. ಆದಾಯ ಗಳಿಸಿತ್ತು ಎಂದು ರೈಲ್ವೆ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

ರೈಲ್ವೆ ಕಳೆದ 2022 ಏಪ್ರಿಲ್-ಡಿಸೆಂಬರ್‌ ಅವಧಿಯಲ್ಲಿ ಅನ್‌ ರಿಸರ್ವಡ್‌ ಪ್ಯಾಸೆಂಜರ್‌ ವಿಭಾಗದಲ್ಲಿ 10430 ಕೋಟಿ ರೂ. ಆದಾಯ ಗಳಿಸಿತ್ತು. 2021ರ ಇದೇ ಅವಧಿಗೆ ಹೋಲಿಸಿದರೆ 381% ಹೆಚ್ಚು. ಆಗ 2169 ಕೋಟಿ ರೂ. ಆದಾಯ ಗಳಿಸಿತ್ತು.

೨೦೨೩-೨೪ರ ಬಜೆಟ್‌ ನಲ್ಲಿ ರೈಲ್ವೆ ಬಜೆಟ್‌ಗೆ 2.4 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ. ಇದು ಇದುವರೆಗಿನ ಗರಿಷ್ಠ ಪ್ರಮಾಣವಾಗಿದೆ. ರೈಲ್ವೆಗೆ ಸರ್ಕಾರದ ಬಂಡವಾಳ ವೆಚ್ಚ ಗಣನೀಯ ಏರಿಕೆಯಾಗಿರುವುದನ್ನು ಇದು ಬಿಂಬಿಸಿದೆ. ದೇಶದ ಸಾರಿಗೆ ವ್ಯವಸ್ಥೆಯಲ್ಲಿ ರೈಲ್ವೆ ಗಣನೀಯ ಪಾತ್ರ ವಹಿಸುತ್ತದೆ.

Exit mobile version