ನವ ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 87,416 ಕೋಟಿ ರೂ. ಡಿವಿಡೆಂಡ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ಘೋಷಿಸಿದೆ. (RBI dividend) ಕಳೆದ ವರ್ಷಕ್ಕೆ ಹೋಲಿಸಿದರೆ (30,307 ಕೋಟಿ ರೂ.) ಡಿವಿಡೆಂಡ್ ಮೊತ್ತದಲ್ಲಿ ಮೂರು ಪಟ್ಟು ವೃದ್ಧಿಸಿದೆ. ಬ್ಯಾಂಕ್‌ಗಳಿಂದಲೂ 48,000 ಕೋಟಿ ರೂ. ಡಿವಿಡೆಂಡ್ ಸಿಗುವ ನಿರೀಕ್ಷೆ ಇದೆ.
ಇದನ್ನೂ ಓದಿ: 2000 Notes Withdrawn: 2 ಸಾವಿರ ರೂ. ನೋಟು ಹಿಂಪಡೆದ ಬೆನ್ನಲ್ಲೇ ಆರ್‌ಬಿಐ ಮಾರ್ಗಸೂಚಿ ಪ್ರಕಟ; ಇದರಲ್ಲೇನಿದೆ?
ವಿದೇಶಿ ವಿನಿಮಯ ಸಂಗ್ರಹ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದ ಆರ್‌ಬಿಐ ಭಾರಿ ಲಾಭ ಪಡೆದುಕೊಂಡಿರುವುದರಿಂದ ಹೆಚ್ಚಿನ ಡಿವಿಡೆಂಡ್ ನೀಡಲು ಸಾಧ್ಯವಾಗಿದೆ. ಡಾಲರ್‌ಗಳನ್ನು ಸೇಲ್ ಮಾಡುವ ಮೂಲಕ ಆರ್‌ಬಿಐ ಲಾಭ ಗಳಿಸಿತ್ತು.
ಸರ್ಕಾರಕ್ಕೆ ಸಾರ್ವಜನಿಕ ಬ್ಯಾಂಕ್‌ಗಳಿಂದ ಈ ವರ್ಷ ಡಿವಿಡೆಂಡ್ ಆದಾಯದಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ. ಎಸ್‌ಬಿಐ ಸಲ್ಲಿಸುವ ಡಿವಿಡೆಂಡ್‌ನಲ್ಲಿ 11.3% ಏರಿಕೆಯಾಗಲಿದೆ. ಇದರಿಂದ ಸರ್ಕಾರಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯ 5.9%ರೊಳಗೆ ನಿರ್ವಹಿಸಲು ಸಹಕಾರಿಯಾಗಲಿದೆ.
ಸಾರ್ವಜನಿಕ ಬ್ಯಾಂಕ್‌ಗಳು ಉತ್ತಮ ಲಾಭ ಗಳಿಸಿರುವುದು ಕೂಡ ಡಿವಿಡೆಂಡ್ ಏರಿಕೆಗೆ ಕಾರಣವಾಗಿದೆ. ಸಾರ್ವಜನಿಕ ವಲಯದ ತೈಲ ಕಂಪನಿಗಳೂ ಈ ಸಲ ಉತ್ತಮ ಡಿವಿಡೆಂಡ್ ನೀಡುವ ಸಾಧ್ಯತೆ ಇದೆ. ಬ್ಯಾಂಕ್‌ಗಳ ಬ್ಯಾಲೆನ್ಸ್ ಶೀಟ್ ಸ್ವಚ್ಛಗೊಳಿಸಿರುವುದರಿಂದ ವಸೂಲಾಗದ ಸಾಲ ಅಥವಾ ಅನುತ್ಪಾದಕ ಸಾಲದ ಪ್ರಮಾಣದಲ್ಲೂ ಇತ್ತೀಚಿನ ವರ್ಷಗಳಲ್ಲಿ ಇಳಿಕೆ ಆಗಿರುವುದನ್ನು ಗಮನಿಸಬಹುದು.