Site icon Vistara News

Interest rate | ಇಂದು ಬೆಳಗ್ಗೆ 10 ಗಂಟೆಗೆ ಆರ್‌ಬಿಐ ಬಡ್ಡಿ ದರ ಘೋಷಣೆ ನಿರೀಕ್ಷೆ, ರೆಪೊ ದರ 6.15%-6.20%ಕ್ಕೆ ಏರಿಕೆ?

cash

ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರಗಳನ್ನು ಬೆಳಗ್ಗೆ 10 ಗಂಟೆಗೆ ಪ್ರಕಟಿಸುವ (Interest rate) ನಿರೀಕ್ಷೆ ಇದೆ.

ಈ ಹಿಂದೆ 0.50 % ಲೆಕ್ಕದಲ್ಲಿ ಬಡ್ಡಿ ದರವನ್ನು ಏರಿಸಿದ್ದ ಆರ್‌ಬಿಐ ಈ ಸಲ 0.25%-0.30% ರ ಮಟ್ಟದಲ್ಲಿ ಏರಿಕೆ ಮಾಡುವ ನಿರೀಕ್ಷೆ ಇದೆ. ವಿಶ್ವಾದ್ಯಂತ ಸೆಂಟ್ರಲ್‌ ಬ್ಯಾಂಕ್‌ಗಳು ಬೆಳವಣಿಗೆ ಮತ್ತು ಹಣದುಬ್ಬರದ ನಡುವೆ ಸಮತೋಲನ ಸಾಧಿಸಬೇಕಾದ ಸವಾಲುಗಳನ್ನು ಎದುರಿಸುತ್ತಿವೆ. ಈಗ ರೆಪೊ ದರ 5.90% ಇದೆ. 0.30 ಹೆಚ್ಚಿಸಿದರೆ 6.20%ಕ್ಕೆ ಏರಿಕೆಯಾಗಲಿದೆ.

ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ರಿಸರ್ವ್‌ ಬ್ಯಾಂಕ್‌ ಕಳೆದ ಜೂನ್‌ ಬಳಿಕ ಮೂರು ಸಲ ಬಡ್ಡಿ ದರವನ್ನು ಏರಿಸಿತ್ತು. ಪ್ರಸಕ್ತ ಸಾಲಿನ ಅಂತ್ಯದ ವೇಳೆಗೆ ರೆಪೊ ದರ 6.5%ಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ. ರೆಪೊ ದರ ಎಂದರೆ, ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಹಣಕ್ಕೆ ನೀಡುವ ಬಡ್ಡಿ ದರ. ಈ ಹಣವನ್ನು ಬ್ಯಾಂಕ್‌ಗಳು ಸಾಲದ ವಹಿವಾಟಿಗೆ ಬಳಸುತ್ತವೆ.

ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಬಡ್ಡಿ ದರ ಏರಿಸುವ ಸಾಧ್ಯತೆ ಇದೆ. ಎರಡನೆಯದಾಗಿ ಇದುವರೆಗಿನ ಬಡ್ಡಿ ದರ ಹೆಚ್ಚಳದಿಂದ ಅಭಿವೃದ್ಧಿಗೆ ತೊಡಕಾಗಿಲ್ಲ. ಹೀಗಾಗಿ ಬಡ್ಡಿ ದರ ಏರಿಕೆ ನಿರೀಕ್ಷಿಸಬಹುದು ಎನ್ನುತ್ತಾರೆ ತಜ್ಞರು. ಕಳೆದ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಜಿಡಿಪಿ ಮೌಲ್ಯ 75.02 ಲಕ್ಷ ಕೋಟಿ ರೂ. ಇದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 68.36 ಲಕ್ಷ ಕೋಟಿ ರೂ. ಇತ್ತು.

Exit mobile version