Site icon Vistara News

RBI Report | ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸಬ್ಸಿಡಿಗಳಿಂದಾಗಿ ಅಭಿವೃದ್ಧಿಗೆ ವೆಚ್ಚ ಕುಂಠಿತ: ಆರ್‌ಬಿಐ ಎಚ್ಚರಿಕೆ

rbi

ಮುಂಬಯಿ: ಹಲವಾರು ರಾಜ್ಯಗಳಲ್ಲಿ ಸಬ್ಸಿಡಿಗಳು ಹೆಚ್ಚುತ್ತಿರುವುದಕ್ಕೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI Report ) ಕಳವಳ ವ್ಯಕ್ತಪಡಿಸಿದೆ.

ನಾನ್-ಮೆರಿಟ್ ಯೋಜನೆಗಳಿಗೆ ಸಬ್ಸಿಡಿ ವಿತರಿಸುವುದರಿಂದ ರಾಜ್ಯಗಳಿಗೆ ನಿಜವಾಗಿಯೂ ಅಗತ್ಯವಿರುವ ಅಭಿವೃದ್ಧಿ ಯೋಜನೆಗೆ ವೆಚ್ಚ ಕುಂಠಿತವಾಗುತ್ತಿದೆ ಎಂದು ಆರ್‌ಬಿಐ ಎಚ್ಚರಿಸಿದೆ.‌

ಮೂಲ ಶಿಕ್ಷಣದಂಥ ಮೆರಿಟ್‌ ಆಧಾರಿತ ಯೋಜನೆಗೆ ಸಬ್ಸಿಡಿ ನೀಡುವುದು ಸಕಾರಾತ್ಮಕ. ಆದರೆ ಬಹುತೇಕ ಸಬ್ಸಿಡಿಗಳು ನಾನ್-ಮೆರಿಟ್‌ ಆಗಿರುತ್ತವೆ ಎಂದು ವರದಿ ತಿಳಿಸಿದೆ. ಇಂಡಿಯಾ ರೇಟಿಂಗ್ಸ್‌ ಕಳೆದ ವರ್ಷ ಬಿಡುಗಡೆಗೊಳಿಸಿದ ವರದಿಯ ಪ್ರಕಾರ ಪಂಜಾಬ್‌, ಛತ್ತೀಸ್‌ ಗಢ, ರಾಜಸ್ಥಾನ, ಕರ್ನಾಟಕ, ಬಿಹಾರದಲ್ಲಿ 2019-2022 ರ ಅವಧಿಯಲ್ಲಿ ಹೆಚ್ಚು ಸಬ್ಸಿಡಿಗಳನ್ನು ಪ್ರಕಟಿಸಲಾಗಿದೆ.

ಸಬ್ಸಿಡಿಗಳಿಗೆ ರಾಜ್ಯಗಳ ವೆಚ್ಚವು 2021-2022 ಅವಧಿಯಲ್ಲಿ 11.1%ರಿಂದ 12.9%ಕ್ಕೆ ಏರಿಕೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ.

Exit mobile version