Site icon Vistara News

RBI Report | ಭಾರತದ ಕರೆಂಟ್‌ ಅಕೌಂಟ್‌ ಡಿಫಿಸಿಟ್‌ 2.98 ಲಕ್ಷ ಕೋಟಿ ರೂ.ಗೆ ಏರಿಕೆ, ಜಿಡಿಪಿಯ 4.4%ಕ್ಕೆ ಜಿಗಿತ,

cash

ಮುಂಬಯಿ: ಭಾರತದ ಆಮದು ಮತ್ತು ರಫ್ತಿನ ನಡುವೆ ಉಂಟಾಗಿರುವ ಭಾರಿ ಅಂತರದ ಪರಿಣಾಮ ಕರೆಂಟ್‌ ಅಕೌಂಟ್‌ ಡಿಫಿಸಿಟ್‌ (current account deficit) ಕೂಡ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಜಿಡಿಪಿಯ 4.4%ಕ್ಕೆ ಏರಿಕೆಯಾಗಿದೆ.

ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಕರೆಂಟ್‌ ಅಕೌಂಟ್‌ ಡಿಫಿಸಿಟ್‌ ೩೬.೪ ಶತಕೋಟಿ ಡಾಲರ್‌ಗೆ ( 2.98 ಲಕ್ಷ ಕೋಟಿ ರೂ.) ವೃದ್ಧಿಸಿದೆ ಎಂದು ಆರ್‌ಬಿಐ ಗುರುವಾರ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.

ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕರೆಂಟ್‌ ಅಕೌಂಟ್‌ ಡಿಫಿಸಿಟ್ ೧೮.೨ ಶತಕೋಟಿ ಡಾಲರ್‌ ಇತ್ತು. ( 1.49 ಲಕ್ಷ ಕೋಟಿ ರೂ.) ಹೀಗಿದ್ದರೂ, 2022ರ ಜುಲೈ ಬಳಿಕ ವಿದೇಶಿ ನೇರ ಬಂಡವಾಳ ಹೂಡಿಕೆಯ ಒಳಹರಿವಿನಲ್ಲಿ ಏರಿಕೆ ಉಂಟಾಗಿರುವುದರಿಂದ ಸಿಎಡಿ ಕೊರತೆಯನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ಆರ್‌ಬಿಐ ವರದಿ ತಿಳಿಸಿದೆ.

ಏನಿದು ಕರೆಂಟ್‌ ಅಕೌಂಟ್‌ ಡಿಫಿಸಿಟ್:‌ ದೇಶ ಆಮದು ಮಾಡಿಕೊಳ್ಳುವ ಎಲ್ಲ ಬಗೆಯ ಸರಕು, ಸೇವೆ ಮತ್ತು ಹಣಕಾಸು ವ್ಯವಹೃಗಳ ಆದಾಯಗಳು ದೇಶದ ರಫ್ತು ಮೌಲ್ಯಕ್ಕಿಂತ ಹೆಚ್ಚಾದಾಗ ಉಂಟಾಗುವ ವ್ಯತ್ಯಾಸವೇ ಕರೆಂಟ್‌ ಅಕೌಂಟ್‌ ಡಿಫಿಸಿಟ್.

Exit mobile version