ನವ ದೆಹಲಿ: ಈ ವರ್ಷ ರಿಯಲ್ ಎಸ್ಟೇಟ್ ವಲಯದಲ್ಲಿ ನೇಮಕಾತಿ 55-60% ಏರಿಕೆಯಾಗುವ ನಿರೀಕ್ಷೆ ಇದೆ. ಡೆವಲಪರ್‌ಗಳು ಹೊಸ ಯೋಜನೆಗಳನ್ನು ಕೈಗೊಳ್ಳಲು ರೆಡಿಯಾಗುತ್ತಿದ್ದು, ವ್ಯಾಪಾರವೂ (Real estate) ಗಣನೀಯ ಸುಧಾರಿಸಿದೆ. ಹೀಗಾಗಿ ನೇಮಕಾತಿಯೂ ವೃದ್ಧಿಸಲಿದೆ.
ಡೆವಲಪರ್‌ಗಳಾದ ಗೋದ್ರೆಜ್ ಪ್ರಾಪರ್ಟೀಸ್, ಕೆ ರಹೇಜಾ ಗ್ರೂಪ್, ಡಿಎಲ್‌ಎಫ್, ಟಾಟಾ, ಮಹೀಂದ್ರಾದಿಂದ ನೇಮಕಾತಿ ಚಟುವಟಿಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2030ರ ವೇಳೆಗೆ ರಿಯಲ್ ಎಸ್ಟೇಟ್ ಉದ್ದಿಮೆ 1 ಲಕ್ಷ ಕೋಟಿ ಡಾಲರ್‌ಗೆ ( 80 ಲಕ್ಷ ಕೋಟಿ ರೂ.) ವೃದ್ಧಿಸುವ ಸಾಧ್ಯತೆ ಇದೆ. ಈ ವರ್ಷಾಂತ್ಯದ ವೇಳೆಗೆ ಅಂದಾಜು 46 ದಶಲಕ್ಷ ಚದರ ಅಡಿ (೪.೬ ಕೋಟಿ) ರಿಯಾಲ್ಟಿ ಪ್ರಾಪರ್ಟಿ ಗ್ರಾಹಕರಿಗೆ ವರ್ಗಾವಣೆಯಾಗುವ ನಿರೀಕ್ಷೆ ಇದೆ.