ರಿಲಯನ್ಸ್ ಜಿಯೊದ 5ಜಿ ಸ್ಮಾರ್ಟ್‌ಫೋನ್ ದರ ಎಷ್ಟಿರಬಹುದು, ೫ಜಿ ಬಂದ ಬಳಿಕ 3ಜಿ ಮತ್ತು 4ಜಿ ಫೋನ್‌ಗಳು ಸರಿಯಾಗಿ ಕಾರ್ಯನಿರ್ವಹಿಸಲಿವೆಯೇ, 5ಜಿ ನೆಟ್ ವರ್ಕ್ ಸೇವೆಯನ್ನು ಈಗಿನ 4ಜಿ ಸ್ಮಾರ್ಟ್‌ವರ್ಕ್‌ನಲ್ಲಿಯೇ ಪಡೆಯಬಹುದೇ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ (ವಿಸ್ತಾರ 5G Info) ಉತ್ತರ!
ರಿಲಯನ್ಸ್ ಜಿಯೊದ ಬಹು ನಿರೀಕ್ಷಿತ 5ಜಿ ಸ್ಮಾರ್ಟ್‌ಫೋನ್ 8,000 ರೂ.ಗಳಿಂದ 12,000 ರೂ.ಗಳಿಗೆ ದೊರೆಯುವ ನಿರೀಕ್ಷೆ ಇದೆ. ರಿಲಯನ್ಸ್ ಜಿಯೊ ವಿಸ್ತೃತ ೫ಜಿ ಕವರೇಜ್ ಸಾಧಿಸಿದ ಬಳಿಕ ೪ಜಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಆಕರ್ಷಿಸಲು 8,000-12,000 ರೂ. ಒಳಗಿನ ದರದಲ್ಲಿ 5ಜಿ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್‌ನ ವರದಿ ತಿಳಿಸಿದೆ.
ರಿಲಯನ್ಸ್ ಜಿಯೊ ತನ್ನ ಜಿಯೊ ಫೋನ್ 4ಜಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದಾಗಲೀ ಇದೇ ಮಾದರಿಯ ಕಾರ್ಯತಂತ್ರವನ್ನು ಜಾರಿಗೊಳಿಸಿತ್ತು. ಇದರಿಂದ ಲಕ್ಷಾಂತರ ಮಂದಿ 2ಜಿ ಫೀಚರ್ ಫೋನ್ ಬಳಕೆದಾರರು 4ಜಿ ನೆಟ್ ವರ್ಕ್‌ಗೆ ಬದಲಾಗಿದ್ದರು. ೫ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ರಿಲಯನ್ಸ್ ಜಿಯೊ 88,078 ಕೋಟಿ ರೂ.ಗಳಿಗೆ ಸ್ಪೆಕ್ಟ್ರಮ್ ಖರೀದಿಸಿತ್ತು.
” ೫ಜಿ ಬಂದ ಬಳಿಕ ಈಗಿನ 3ಜಿ ನೆಟ್ ವರ್ಕ್ ಸರಿಯಾಗಿ ಕಾರ್ಯನಿರ್ವಹಿಸಲಿವೆ. 4ಜಿ ನೆಟ್ ವರ್ಕ್ ಮುಂದುವರಿಯಲಿದೆ. ಟೆಲಿಕಾಂ ಕಂಪನಿ ೩ಜಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದರೆ ಮಾತ್ರ ಕೆಲಸ ಮಾಡದು. 5ಜಿ ಸೇವೆಯನ್ನು 5ಜಿ ನೆಟ್ ವರ್ಕ್ ಹೊಂದಿರುವ ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರ ಪಡೆಯಬಹುದುʼ ಎಂದು ರಿಲಯನ್ಸ್ ಜಿಯೊ ತಿಳಿಸಿದೆ.
ಭಾರತದಲ್ಲಿ 5 ಕೋಟಿ 5ಜಿ ಸ್ಮಾರ್ಟ್‌ಫೋನ್‌ಗಳಿವೆ. ಈ ಸಂಖ್ಯೆ ಮತ್ತಷ್ಟು ವೃದ್ಧಿಸಲಿದೆ. ಹಲವು ಮಾದರಿಯ 5ಜಿ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.