Site icon Vistara News

Reliance AGM | ರಿಲಯನ್ಸ್‌ನಿಂದ 1.88 ಲಕ್ಷ ಕೋಟಿ ರೂ. ತೆರಿಗೆ ಸಲ್ಲಿಕೆ, ದೇಶದಲ್ಲೇ ಗರಿಷ್ಠ

ril

ಮುಂಬಯಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಕಳೆದ ೨೦೨೧-೨೨ರಲ್ಲಿ ಸರ್ಕಾರದ ಬೊಕ್ಕಸಕ್ಕೆ ೧.೮೮ ಲಕ್ಷ ಕೋಟಿ ರೂ. (೧,೮೮,೦೧೨ ಕೋಟಿ ರೂ.) ತೆರಿಗೆಯನ್ನು ಸಲ್ಲಿಸಿದೆ. ಇದರಲ್ಲಿ ನೇರ ಮತ್ತು ಪರೋಕ್ಷ ತೆರಿಗೆಗಳಿದ್ದು, ೩೮.೮% ಏರಿಕೆಯಾಗಿದೆ. (Reliance AGM) ದೇಶದಲ್ಲೇ ಅತಿ ಹೆಚ್ಚು ತೆರಿಗೆ ಸಲ್ಲಿಸಿದ ಕಂಪನಿಯಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಂದುವರಿದಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ತಿಳಿಸಿದ್ದಾರೆ.

ರಿಲಯನ್ಸ್‌ ಗ್ರೂಪ್‌ನ ವಾರ್ಷಿಕ ಮಹಾಸಭೆಯಲ್ಲಿ ಬಿಸಿನೆಸ್‌ ಮತ್ತು ಹಣಕಾಸು ವರದಿಯನ್ನು ಪ್ರಸ್ತುತ ಪಡಿಸಿದ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು, ರಿಲಯನ್ಸ್‌ನ ರಫ್ತು ೨೦೨೧-೨೨ರಲ್ಲಿ ೭೫% ಹೆಚ್ಚಳವಾಗಿದೆ. ಇದರ ಮೊತ್ತ ೨.೫೦ ಲಕ್ಷ ಕೋಟಿ ರೂ.ಗಳಾಗಿದೆ. ಭಾರತದ ಸರಕುಗಳ ರಫ್ತಿನಲ್ಲಿ ೮.೪ ಪಾಲು ರಿಲಯನ್ಸ್‌ ಇಂಡಸ್ಟ್ರಿಗೆ ಸಲ್ಲುತ್ತದೆ ಎಂದು ಮುಕೇಶ್‌ ಅಂಬಾನಿ ತಿಳಿಸಿದರು.‌

ಇದನ್ನೂ ಓದಿ:Reliance AGM | 5ಜಿಗಾಗಿ ಟೆಕ್ ದೈತ್ಯ ಕಂಪನಿಗಳ ಜತೆ ಟೈಅಪ್, ಅಗ್ಗದ ದರದಲ್ಲಿ 5ಜಿ ಫೋನ್: ರಿಲಯನ್ಸ್

ರಿಲಯನ್ಸ್‌ ಇಂಡಸ್ಟ್ರೀಸ್‌ನಿಂದ ೨೦೨೧-೨೨ರಲ್ಲಿ ೨.೩೨ ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿದೆ ಎಂದು ತಿಳಿಸಿದರು.

ಕೋವಿಡ್-‌೧೯ ಬಿಕ್ಕಟ್ಟು ಜಗತ್ತಿನ ಬಹುತೇಕ ಕಡೆಗಳಲ್ಲಿ ಬಹುಪಾಲು ಅಂತ್ಯವಾಗಿದೆ. ಹೀಗಿದ್ದರೂ, ಅನಿಶ್ಚಿತತೆ ಮುಂದುವರಿದಿದೆ. ರಾಜಕೀಯ ವಿಪ್ಲವಗಳು ಕಾಡುತ್ತಿವೆ. ಹೆಚ್ಚುತ್ತಿರುವ ಇಂಧನ, ಆಹಾರ ಮತ್ತು ರಸಗೊಬ್ಬರ ದರಗಳು ಬಿಕ್ಕಟ್ಟು ಸೃಷ್ಟಿಸಿವೆ. ಅಧಿಕ ಹಣದುಬ್ಬರ ಮತ್ತು ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆಗಳು ಜಗತ್ತಿನ ನಾನಾ ಭಾಗಗಳನ್ನು ಕಾಡುತ್ತಿವೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ಸಶಕ್ತವಾಗಿ ಮುಂದುವರಿಯುತ್ತಿದೆ ಎಂದು ಮುಕೇಶ್‌ ಅಂಬಾನಿಯವರು ಹೇಳಿದರು.

ಇದನ್ನೂ ಓದಿ: Reliance AGM | ರಿಲಯನ್ಸ್‌ ಇಂಡಸ್ಟ್ರೀಸ್‌ನಿಂದ ದೀಪಾವಳಿಗೆ 5G ಸೇವೆ ಆರಂಭ

Exit mobile version