Reliance AGM | 5ಜಿಗಾಗಿ ಟೆಕ್ ದೈತ್ಯ ಕಂಪನಿಗಳ ಜತೆ ಟೈಅಪ್, ಅಗ್ಗದ ದರದಲ್ಲಿ 5ಜಿ ಫೋನ್: ರಿಲಯನ್ಸ್ - Vistara News

ಗ್ಯಾಜೆಟ್ಸ್

Reliance AGM | 5ಜಿಗಾಗಿ ಟೆಕ್ ದೈತ್ಯ ಕಂಪನಿಗಳ ಜತೆ ಟೈಅಪ್, ಅಗ್ಗದ ದರದಲ್ಲಿ 5ಜಿ ಫೋನ್: ರಿಲಯನ್ಸ್

5ಜಿ ಸೇವೆ ತ್ವರಿತಗೊಳಿಸಲು ಟೆಕ್ ದೈತ್ಯ ಕಂಪನಿಗಳ ಜತೆ ರಿಲಯನ್ಸ್ ಟೈಅಪ್. ಶೀಘ್ರವೇ ಅಗ್ಗದ 5ಜಿ ಫೋನುಗಳ ಉತ್ಪಾದನೆ ಎಂದು ಮುಕೇಶ್ ಅಂಬಾನಿ, ರಿಲಯನ್ಸ್ ಇಂಡ್‌ಸ್ಟ್ರೀಸ್ ವಾರ್ಷಿಕ ಸಭೆ(Reliance AGM)ಯಲ್ಲಿ ತಿಳಿಸಿದ್ದಾರೆ.

VISTARANEWS.COM


on

mukesh ambani
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ದೀಪಾವಳಿ ಹಬ್ಬದ ಹೊತ್ತಿಗೆ ದೇಶದಲ್ಲಿ 5ಜಿ ತಂತ್ರಜ್ಞಾನ ಸೇವೆಯನ್ನು ಒದಗಿಸಲು ಮುಂದಾಗಿರುವ ರಿಲಯನ್ಸ್ ಕಂಪನಿ, ಇದಕ್ಕಾಗಿ ಟೆಕ್ ದೈತ್ಯ ಕಂಪನಿಗಳೊಂದಿಗೆ ಜಂಟಿ ಸಹಭಾಗಿತ್ವವನ್ನು ಪ್ರಕಟಿಸಿದೆ. ಈಗಾಗಲೇ ಮೆಟಾವರ್ಸ್‌ಗೆ ಸಂಬಂಧಿಸಿದಂತೆ, ಜಿಯೋ ಮತ್ತು ಮೆಟಾ ನಡುವೆ ಒಪ್ಪಂದ ಏರ್ಪಟ್ಟಿದೆ. ಅದೇ ರೀತಿ, ಗೂಗಲ್, ಮೈಕ್ರೋಸಾಫ್ಟ್, ಇಂಟೆಲ್ ಕಂಪನಿಗಳೊಂದಿಗೆ ಟೈ ಅಪ್ ಮಾಡಿಕೊಳ್ಳುತ್ತಿದೆ. ಈ ವಿಷಯವನ್ನು ರಿಲಯನ್ಸ್ ಇಂಡ್‌ಸ್ಟ್ರೀಸ್ ಚೇರ್ಮನ್ ಮುಕೇಶ್ ಅಂಬಾನಿ ಅವರು ರಿಲಯನ್ಸ್ ವಾರ್ಷಿಕ ಸಭೆ(Reliance AGM)ಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಗೊತ್ತಿರುವಂತೆ ರಿಲಯನ್ಸ್, ಮೆಟಾವರ್ಸ್‌ಗೆ ಸಂಬಂಧಿಸಿದಂತೆ ಮೆಟಾ ಜತೆ ಕೈಜೋಡಿಸಿದೆ. ಅದೇ ರೀತಿ, ಕ್ಲೌಡ್‌ಗೆ ಗೂಗಲ್ ಜತೆ, ಕ್ಲೌಡ್ ಕಂಪ್ಯೂಟಿಂಗ್‌ಗಾಗಿ ಮೈಕ್ರೋ ಸಾಫ್ಟ್ ಜತೆ, ಇನ್ಫ್ರಾಸ್ಟ್ರಕ್ಚರ್, ಕಂಪ್ಯೂಟಿಂಗ್ ಮತ್ತು 5ಜಿ ಎಡ್ಜ್ ಕಂಪ್ಯೂಟಿಂಗ್‌ಗಾಗಿ ಇಂಟೆಲ್ ಜತೆ ಟೈ ರಿಲಯನ್ಸ್ ಟೈ ಅಪ್ ಮಾಡಿಕೊಳ್ಳಲಿದೆ ಎಂದು ರಿಲಯನ್ಸ್ ಇಂಡ್‌ಸ್ಟ್ರೀಸ್ ಚೇರ್ಮನ್ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಭಾರತದಲ್ಲಿ 5ಜಿ ಪರಿಹಾರಗಳಿಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ಕ್ವಾಲ್‌ಕಾಮ್ ಜತೆಗೂ ಪಾರ್ಟರ್ನರ್‌ಶಿಪ್ ಮಾಡಿಕೊಳ್ಳಲಿದೆ ಎಂದೂ ಅವರು ತಿಳಿಸಿದ್ದಾರೆ. ನಮ್ಮ ‘ಮೇಡ್ ಇನ್ ಇಂಡಿಯಾ’ 5G ಸಹಯೋಗದಲ್ಲಿ ಮೆಟಾ, ಗೂಗಲ್, ಮೈಕ್ರೋಸಾಫ್ಟ್, ಎರಿಕ್ಸನ್, ನೋಕಿಯಾ, ಸ್ಯಾಮ್‌ಸಂಗ್, ಸಿಸ್ಕೋದಂತಹ ವಿಶ್ವದ ಪ್ರಮುಖ ಟೆಕ್ ಕಂಪನಿಗಳನ್ನು ನಮ್ಮ ಪಾಲುದಾರರನ್ನಾಗಿ ಹೊಂದಲು ನಾವು ಸವಲತ್ತು ಪಡೆದಿದ್ದೇವೆ. ಇಂದು, ನಾನು ಕ್ವಾಲ್ಕಾಮ್‌ನೊಂದಿಗೆ ಉತ್ತೇಜಕ ಪಾಲುದಾರಿಕೆಯನ್ನು ಪ್ರಕಟಿಸುತ್ತಿದ್ದೇನೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಕೈಗೆಟುಕುವ ದರದಲ್ಲಿ 5ಜಿ ಫೋನ್
ರಿಲಯನ್ಸ್ ಕಂಪನಿಯ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅಂಬಾನಿ ಅವರು, ಕೈಗೆಟುಕುವ ದರದಲ್ಲಿ 5ಜಿ ಫೋನುಗಳನ್ನು ತಯಾರಿಸುವ ಸಂಬಂಧ ರಿಲಯನ್ಸ್ ಗೂಗಲ್ ಜತೆ ಸಹಭಾಗಿತ್ವ ಮಾಡಿಕೊಂಡಿದೆ. ಭಾರತೀಯ ಮಾರುಕಟ್ಟೆಗೆ ಅಗ್ಗದ ಬೆಲೆ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಸಂಬಂಧ ಗೂಗಲ್ ಜತೆಗೂಡಿ ಕೆಲಸ ಮಾಡುತ್ತಿರುವುದಾಗಿ ಅವರು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ | WhatsApp JioMart | ಇನ್ನು ವಾಟ್ಸ್ಆ್ಯಪ್‌ನಿಂದಲೇ ತರಕಾರಿ, ಹಣ್ಣು ಖರೀದಿಸಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

YouTube channels: ಅತಿ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಟಾಪ್‌ 10 ಯುಟ್ಯೂಬ್‌ ಚಾನೆಲ್‌ಗಳಿವು!

ಲಕ್ಷಾಂತರ ಯುಟ್ಯೂಬ್ ಚಾನೆಲ್ ಗಳಿದ್ದು ಇದರಲ್ಲಿ ಅತೀ ಹೆಚ್ಚು ಚಂದಾದಾರನ್ನು ಹೊಂದಿರುವ ಮೊದಲ ಹತ್ತು ಯು ಟ್ಯೂಬ್ ಚಾನೆಲ್ ಗಳು (YouTube channels) ಯಾವುದು ಗೊತ್ತೇ? ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಹತ್ತು ಯುಟ್ಯೂಬ್‌ ಚಾನೆಲ್‌ಗಳ ವಿವರ ಇಲ್ಲಿದೆ.

VISTARANEWS.COM


on

By

YouTube channels
Koo

ಲಕ್ಷಾಂತರ ಯೂಟ್ಯೂಬ್ ಚಾನೆಲ್‌ಗಳಿದ್ದು (YouTube channels) ಇದರಲ್ಲಿ ಮಿಸ್ಟರ್ ಬೀಸ್ಟ್ (MrBeast) 267 ಮಿಲಿಯನ್ ಚಂದಾದಾರರನ್ನು (subscribers) ಹೊಂದಿದ್ದು, ಅತೀ ಹೆಚ್ಚು ಸಬ್ ಸ್ಕ್ರೈಬ್ ಆಗಿರುವ ಯುಟ್ಯೂಬ್ ಚಾನೆಲ್ ಎಂಬ ಖ್ಯಾತಿಯನ್ನು ಪಡೆದಿದೆ. ಟಿ-ಸಿರೀಸ್‌ಅನ್ನು (T-Series) ಕೆಳಗಿಳಿಸಿ ಮಿಸ್ಟರ್ ಬೀಸ್ಟ್ ಮೊದಲ ಸ್ಥಾನವನ್ನು ಪಡೆದಿದೆ.

ಯು ಟ್ಯೂಬ್‌ನಲ್ಲಿ ಟಿ-ಸಿರೀಸ್ 266 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಇದರ ಬಳಿಕ ಕೊಕೊಮೆಲನ್ – ನರ್ಸರಿ ರೈಮ್ಸ್ (Cocomelon – Nursery Rhymes) 176 ಮಿಲಿಯನ್, ಎಸ್ ಇಟಿ ಇಂಡಿಯಾ (SET India) 173 ಮಿಲಿಯನ್, ಕಿಡ್ಸ್ ಡಯಾನಾ ಶೋ (Kids Diana Show) 122 ಮಿಲಿಯನ್, ವ್ಲಾಡ್ ಮತ್ತು ನಿಕಿ (Vlad and Niki) 118 ಮಿಲಿಯನ್, ಲೈಕ್ ನಾಸ್ತ್ಯ (Like Nastya) 116 ಮಿಲಿಯನ್, ಪ್ಯೂಡಿಪಿ (Pewdiepie) 111 ಮಿಲಿಯನ್, ಝೀ ಸಂಗೀತ ಕಂಪೆನಿ (Zee Music Company) 107 ಮಿಲಿಯನ್ ಮತ್ತು WWE 102 ಮಿಲಿಯನ್ ಚಂದಾದಾರನ್ನು ಹೊಂದಿದೆ.

ಮಿಸ್ಟರ್ ಬೀಸ್ಟ್ ಭಾನುವಾರ ಟಿ-ಸರಣಿಯನ್ನು ಮೀರಿಸಿ ಅತಿ ಹೆಚ್ಚು ಚಂದಾದಾರರಾಗಿರುವ ಯೂಟ್ಯೂಬರ್ ಆಗಿ ಹೊರಹೊಮ್ಮಿದೆ. 26 ವರ್ಷದ ಮಿಸ್ಟರ್ ಬೀಸ್ಟ್ ಅವರ ನಿಜವಾದ ಹೆಸರು ಜೇಮ್ಸ್ ಸ್ಟೀಫನ್. ತಮ್ಮ ಸಾಧನೆಯನ್ನು ಕೊಂಡಾಡುತ್ತಾ ಮಿಸ್ಟರ್ ಬೀಸ್ಟ್ ಹೀಗೆ ಬರೆದಿದ್ದಾರೆ: ಆರು ವರ್ಷಗಳ ಅನಂತರ ನಾವು ಅಂತಿಮವಾಗಿ ಪ್ಯೂಡಿಪಿಯ (PewDiePie) ಮೇಲೆ ಸೇಡು ತೀರಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಮಿಸ್ಟರ್ ಬೀಸ್ಟ್ ಈ ವಾರದ ಆರಂಭದಲ್ಲೇ 2018ರ ಟಿ-ಸೀರೀಸ್‌ನೊಂದಿಗೆ ಚಂದಾದಾರರನ್ನು ಹೆಚ್ಚಿಸುವ ಪೈಪೋಟಿಗೆ ಇಳಿದಿತ್ತು. ಈ ಸಮಯದಲ್ಲಿ PewDiePie ಗೆ ಸಹಾಯ ಮಾಡುವ ಕುರಿತು ಅವರು ಹೇಳಿದ್ದರು. ಜಾನ್ ಯೂಶೈ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಮಿಸ್ಟರ್ ಬೀಸ್ಟ್ ಜೇಮ್ಸ್ ಸ್ಟೀಫನ್ ಅವರು, ಇದು ಅಮೆರಿಕ ಮತ್ತು ಭಾರತದ ವಿರುದ್ಧ ನಡೆದ ಯುದ್ಧ ಎಂದು ನಾನು ಭಾವಿಸುವುದಿಲ್ಲ. ಪ್ರಾರಂಭದಲ್ಲಿ ಇದು ಮೊದಲು ಸ್ವಲ್ಪ ಜನಾಂಗೀಯತೆ ರೂಪವನ್ನು ಪಡೆಯಿತು. ಅಲ್ಲದೇ ಇದು ಭಾರತ ವಿರುದ್ಧ ಅಮೆರಿಕ ಚರ್ಚೆಯಾಗಿ ಬದಲಾಗಬಹುದೆಂಬ ಭಯವಿತ್ತು ಎಂದರು.

ಇದನ್ನೂ ಓದಿ: YouTube New Feature: ನಿಮ್ಮಿಷ್ಟದ ಹಾಡು ಗುನುಗಿದ್ರೂ ಸಾಕು ಯುಟ್ಯೂಬ್ ಆ ಹಾಡನ್ನು ಹೆಕ್ಕಿ ತೆಗೆಯುತ್ತದೆ!

ಚಾನಲ್‌ಗೆ ಇನ್ನೂ ಹೆಚ್ಚು ಚಂದಾದಾರರಾಗಲು ಬಯಸುತ್ತಿದ್ದಾರೆ. ನನಗೆ ಸಹಾಯ ಮಾಡುವ ಬಹಳಷ್ಟು ಜನರಿದ್ದಾರೆ. ನಾನು ಇದರೊಂದಿಗೆ ಬದುಕುತ್ತೇನೆ ಮತ್ತು ಉಸಿರಾಡುತ್ತೇನೆ. ನಾನು ಇದರ ಸೃಷ್ಟಿಕರ್ತ ಎಂದು ಅವರು ಹೇಳಿದರು.

ಹೆಚ್ಚಿನ ಯೂಟ್ಯೂಬ್ ಚಾನೆಲ್ ಸೃಷ್ಟಿಕರ್ತರೇ ನನ್ನ ಚಾನೆಲ್‌ಗೆ ಹೆಚ್ಚು ಚಂದಾದಾರರಾಗಿರುವುದು ಸಂತೋಷವಾಗಿದೆ ಎಂದು ನಾನು ಭಾವಿಸುತ್ತೇನೆ. T-ಸಿರೀಸ್‌ ಅನ್ನು ನಾಕ್ ಮಾಡುತ್ತಿಲ್ಲ. ಯಾಕೆಂದರೆ ಅವರು ನನಗಿಂತ ಸಾವಿರ ಪಟ್ಟು ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದಾರೆ ಎಂದು ತಿಳಿಸಿದರು.

Continue Reading

ಗ್ಯಾಜೆಟ್ಸ್

WhatsApp Features: ವಾಟ್ಸ್ ಆ್ಯಪ್ ನಲ್ಲಿರುವ ಈ 7 ವಿಶೇಷ ಫೀಚರ್ ಗಳ ಬಗ್ಗೆ ಗೊತ್ತೇ? ನೀವೂ ಬಳಸಿ

ಸಂದೇಶ ಕಳುಹಿಸುವಲ್ಲಿ ಬಹುತೇಕ ಮಂದಿಯ ಮೆಚ್ಚಿನ ಆಪ್ ಎನಿಸಿರುವ ವಾಟ್ಸ್ ಆಪ್ ನಲ್ಲಿ (WhatsApp Features) ಹಲವು ವೈಶಿಷ್ಟ್ಯಗಳಿವೆ. ಇದನ್ನು ಹೆಚ್ಚಿನವರು ಬಳಸಿರಲಿಕ್ಕಿಲ್ಲ. ಆದರೆ ಇವುಗಳಿಂದ ಹೊಸ ಅನುಭವವಂತೂ ಸಿಗುವುದು. ಸಾಕಷ್ಟು ಪ್ರಯೋಜನಕಾರಿಯಾಗಿರುವ ಇದನ್ನು ಉಪಯೋಗಿಸಿಕೊಳ್ಳಲು ಸೆಟ್ಟಿಂಗ್ ನಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕು ಅಷ್ಟೇ. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

WhatsApp Features
Koo

ಸಂದೇಶಗಳನ್ನು (messaging) ಕಳುಹಿಸುವ ಆ್ಯಪ್ ಗಳ (Apps) ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ವಾಟ್ಸ್ ಆ್ಯಪ್ (WhatsApp Features) ಅನ್ನು ವಿಶ್ವದಾದ್ಯಂತ ಕೋಟ್ಯಂತರ ಜನರು ಬಳಸುತ್ತಿದ್ದಾರೆ. ನಿರಂತರ ಹೊಸತನವನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿರುವ ಈ ಆಪ್ ಗ್ರಾಹಕ ಸ್ನೇಹಿ ಎಂದೆನಿಸಿಕೊಂಡಿದೆ.

ಕೇವಲ ಸಂದೇಶ ಕಳುಹಿಸಲು, ಕರೆ ಮಾಡಲು, ಸ್ಟೇಟಸ್ ಹಂಚಿಕೊಳ್ಳಲು ಸೀಮಿತ ಎಂದೆನಿಸುವ ವಾಟ್ಸ್ ಆಪ್ ನಲ್ಲಿ ಇನ್ನೂ ಹಲವಾರು ವೈಶಿಷ್ಟ್ಯಗಳಿವೆ. ಇದರ ಇಂಟರ್ಫೇಸ್ ಅಡಿಯಲ್ಲಿ ಹಲವು ‘ಗುಪ್ತ ರತ್ನ’ಗಳಿವೆ. ಇದು ನಿಮ್ಮ ಊಹೆಗೂ ಮೀರಿ ವಾಟ್ಸ್ ಆಪ್ ಬಳಕೆಯ ಅನುಭವವನ್ನು ಹೆಚ್ಚಿಸುತ್ತದೆ. ಅವುಗಳು ಯಾವುದು ಎಂಬ ವಿವರ ಇಲ್ಲಿದೆ.

ಟೋನ್ ಸೆಟ್ಟಿಂಗ್

ಮೆಸೇಜ್ ಸ್ವೀಕರಿಸುವಾಗ ಸಾಮಾನ್ಯ ಟೋನ್ ನಿಂದ ಬೇಸತ್ತಿದ್ದೀರೆ ವೈಯಕ್ತಿಕ ಸಂಪರ್ಕ ಅಥವಾ ಗುಂಪುಗಳಿಗಾಗಿ ಟೋನ್ ಗಳನ್ನು ಸೆಟ್ ಮಾಡಲು ವಾಟ್ಸ್ ಆಪ್ ಅನುಮತಿಸುತ್ತದೆ. ಚಾಟ್ ಅನ್ನು ಸರಳವಾಗಿ ತೆರೆದು, ಸಂಪರ್ಕದ ಹೆಸರು ಅಥವಾ ಗುಂಪಿನ ಶೀರ್ಷಿಕೆಯ ಮೇಲೆ ಟ್ಯಾಪ್ ಮಾಡಿ. “ಕಸ್ಟಮ್ ನೋಟಿಫಿಕೇಶನ್ ” ಆಯ್ಕೆ ಮಾಡಿ ಮತ್ತು ಆದ್ಯತೆಯ ಟೋನ್ ಅನ್ನು ಸೆಟ್ ಮಾಡಿ. ಈಗ ಪರದೆಯನ್ನು ನೋಡದೆಯೇ ಯಾರು ನಿಮಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂಬುದನ್ನು ತಕ್ಷಣ ತಿಳಿದುಕೊಳ್ಳಬಹುದು.

ಸುಲಭ ಪ್ರವೇಶಕ್ಕಾಗಿ ಸ್ಟಾರ್

ಚಾಟ್‌ ಗಳು ಸಾಕಷ್ಟು ಇದ್ದಾಗ ಪ್ರಮುಖ ಸಂದೇಶ ಮಧ್ಯೆ ಕಳೆದು ಹೋಗುತ್ತದೆ. ಅಗತ್ಯವಿದ್ದಾಗ ಎಷ್ಟು ಹುಡುಕಿದರೂ ಸಿಗುವುದಿಲ್ಲ. WhatsApp ನ “Starred Messages” ವೈಶಿಷ್ಟ್ಯದಲ್ಲಿ ಸ್ಕ್ರೋಲಿಂಗ್‌ಗೆ ವಿದಾಯ ಹೇಳಿ. ಸಂದೇಶವನ್ನು ದೀರ್ಘವಾಗಿ ಒತ್ತಿ ಸ್ಟಾರ್ ಐಕಾನ್ ಅನ್ನು ಟ್ಯಾಪ್ ಮಾಡಿ. ಅನಂತರ ಸುಲಭವಾಗಿ ಈ ಸಂದೇಶಗಳನ್ನು ಮರುಪಡೆಯಲು ನಕ್ಷತ್ರ ಹಾಕಿದ ಸಂದೇಶಗಳ ಫೋಲ್ಡರ್‌ ನಲ್ಲಿ ಅದನ್ನು ಉಳಿಸಲಾಗುತ್ತದೆ.


ಹಿಡನ್ ಚಾಟ್ ಆರ್ಕೈವ್

ಕೆಲವು ಚಾಟ್‌ಗಳನ್ನು ಮರೆ ಮಾಚಬೇಕಾದರೆ WhatsApp ನ “ಆರ್ಕೈವ್ ಚಾಟ್” ವೈಶಿಷ್ಟ್ಯವು ಸಂಭಾಷಣೆಗಳನ್ನು ಅಳಿಸದೆಯೇ ಗೌಪ್ಯವಾಗಿ ಇಡುತ್ತದೆ. ಚಾಟ್‌ನಲ್ಲಿ ಎಡಕ್ಕೆ ಸ್ವೈಪ್ ಮಾಡಿ, “ಆರ್ಕೈವ್” ಟ್ಯಾಪ್ ಮಾಡಿ ಮತ್ತು ಅದು ನಿಮ್ಮ ಮುಖ್ಯ ಚಾಟ್ ಪಟ್ಟಿಯಿಂದ ಕಣ್ಮರೆಯಾಗುತ್ತದೆ. ನಿಮ್ಮ ಖಾಸಗಿ ಸಂಭಾಷಣೆಗಳನ್ನು ಖಾಸಗಿಯಾಗಿ ಇರಿಸುತ್ತದೆ. ಆರ್ಕೈವ್ ಮಾಡಿದ ಚಾಟ್‌ಗಳನ್ನು ಪ್ರವೇಶಿಸಲು, ನಿಮ್ಮ ಚಾಟ್ ಪಟ್ಟಿಯ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ ಅಥವಾ ಅವುಗಳನ್ನು ಹುಡುಕಿ.

ಗ್ರೂಪ್ ಚಾಟ್‌ ಗಳ ಮ್ಯೂಟ್

ಗ್ರೂಪ್ ಚಾಟ್‌ಗಳು ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುತ್ತದೆ. ಯಾಕೆಂದರೆ ಇದರಲ್ಲಿ ಸಾಕಷ್ಟು ಸಂದೇಶಗಳು ನಿರಂತರವಾಗಿ ಬರುತ್ತಿರುತ್ತದೆ. ಇಂತಹ ಗುಂಪುಗಳನ್ನು ಮ್ಯೂಟ್ ಮಾಡಲು WhatsApp ಅನುಮತಿಸುತ್ತದೆ. ಗುಂಪು ಚಾಟ್ ತೆರೆಯಿರಿ ಗುಂಪಿನ ಹೆಸರಿನ ಮೇಲೆ ಟ್ಯಾಪ್ ಮಾಡಿ, “ಅಧಿಸೂಚನೆಗಳನ್ನು ಮ್ಯೂಟ್ ಮಾಡಿ” ಆಯ್ಕೆ ಮಾಡಿ ಮತ್ತು ಬಯಸಿದ ಅವಧಿಯನ್ನು ಸೆಟ್ ಮಾಡಿಕೊಳ್ಳಿ. ಇದರಲ್ಲಿ 8 ಗಂಟೆಗಳು, 1 ವಾರ ಅಥವಾ 1 ವರ್ಷ ಮ್ಯೂಟ್ ಮಾಡುವ ಅವಕಾಶವಿರುತ್ತದೆ.

ಬ್ಲೂ ಟಿಕ್ ಇಲ್ಲದೆ ಸಂದೇಶಗಳನ್ನು ಓದಿ

ಬ್ಲೂ ಟಿಕ್‌ಗಳು ಸಂದೇಶ ಓದಿದ್ದಾರೆ ಎನ್ನುವ ಕುರುಹು ಕೊಡುತ್ತದೆ. ಇದು ಕೆಲವರಿಗೆ ಆತಂಕವನ್ನು ಉಂಟುಮಾಡಬಹುದು. ಸಂದೇಶಗಳನ್ನು ಓದಿ ರಿಪ್ಲೈ ಮಾಡಿಲ್ಲ ಎನ್ನುವ ಬೇಸರವನ್ನು ಮಾಡಬಹುದು. ಆದರೆ ಬ್ಲೂ ಟಿಕ್ ಇಲ್ಲದೆಯೂ ನೀವು ಅಜ್ಞಾತವಾಗಿ ಸಂದೇಶಗಳನ್ನು ಓದಬಹುದು. ಇದಕ್ಕಾಗಿ ಸೆಟ್ಟಿಂಗ್‌ಗಳು- ಖಾತೆ- ಗೌಪ್ಯತೆಗೆ ಹೋಗುವ ಮೂಲಕ ರೀಡ್ ರಿಸಿಪ್ಟ್ ಅನ್ನು ನಿಷ್ಕ್ರಿಯಗೊಳಿಸಿ.

ಇದನ್ನೂ ಓದಿ: WhatsApp Update : ವಾಯ್ಸ್ ನೋಟ್ ಅವಧಿ ಹೆಚ್ಚಿಸಲಿದೆ ವಾಟ್ಸ್ಆ್ಯಪ್; ವಿಸ್ತರಣೆ ಅವಧಿ ಎಷ್ಟು ಗೊತ್ತೇ?

ಚಾಟ್‌ಗಳಿಗಾಗಿ ವೈಯಕ್ತಿಕ ವಾಲ್‌ಪೇಪರ್‌

ವೈಯಕ್ತಿಕ ಸಂಭಾಷಣೆಗಳಿಗಾಗಿ ಕಸ್ಟಮ್ ವಾಲ್‌ಪೇಪರ್‌ಗಳನ್ನು ಹೊಂದಿಸುವ ಮೂಲಕ ನಿಮ್ಮ ಚಾಟ್‌ಗಳಿಗೆ ವೈಯಕ್ತಿಕ ಸ್ಪರ್ಶವನ್ನು ನೀಡಬಹುದು. ಚಾಟ್ ತೆರೆಯಿರಿ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ, “ವಾಲ್‌ಪೇಪರ್” ಆಯ್ಕೆ ಮಾಡಿ ಮತ್ತು WhatsApp ನ ಅಂತರ್ನಿರ್ಮಿತ ಆಯ್ಕೆಗಳಿಂದ ಆಯ್ಕೆ ಮಾಡಿ ಅಥವಾ ಸ್ವಂತ ಹಿನ್ನೆಲೆ ಚಿತ್ರವನ್ನು ಹೊಂದಿಸಿ. ಇದು ನಿಮ್ಮ ಚಾಟ್‌ ಗಳಿಗೆ ವಿಶೇಷತೆಯನ್ನು ಒದಗಿಸುತ್ತದೆ.

ಬ್ರಾಡ್‌ಕಾಸ್ಟ್ ಪಟ್ಟಿಗಳು

ಒಂದೇ ಸಂದೇಶವನ್ನು ಅನೇಕ ಸಂಪರ್ಕಗಳಿಗೆ ಕಳುಹಿಸುವುದು ಬೇಸರದ ಸಂಗತಿಯಾಗಿದೆ. ಆದರೆ WhatsApp ನ ಪ್ರಸಾರ ಪಟ್ಟಿ ಈ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡುವ ಮೂಲಕ ಪ್ರಸಾರ ಪಟ್ಟಿಯನ್ನು ರಚಿಸಿ, “ಹೊಸ ಪ್ರಸಾರ” ಆಯ್ಕೆ ಮಾಡಿ ಮತ್ತು ನಿಮ್ಮ ಸಂಪರ್ಕ ಪಟ್ಟಿಯಿಂದ ಸ್ವೀಕರಿಸುವವರನ್ನು ಆಯ್ಕೆ ಮಾಡಿ. ಈಗ, ಗುಂಪು ಚಾಟ್‌ನೊಂದಿಗೆ ಪ್ರತಿಯೊಬ್ಬರ ಇನ್‌ಬಾಕ್ಸ್‌ಗಳನ್ನು ಅಸ್ತವ್ಯಸ್ತಗೊಳಿಸದೆ ಸಾಮೂಹಿಕ ಸಂದೇಶಗಳನ್ನು ಕಳುಹಿಸಬಹುದು.

Continue Reading

ಮನಿ ಗೈಡ್

Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆದಾರರು ಹೆಚ್ಚಾಗಿದ್ದು, ಅಂತೆಯೇ ವಂಚಕರ ದಾಳಿಯೂ ಹೆಚ್ಚಾಗಿದೆ. ಇದು ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಂತಹ ವಂಚನೆಗಳನ್ನು ತಡೆಗಟ್ಟಲು ಬಳಕೆಯ ಸುರಕ್ಷಿತ ವಿಧಾನಗಳನ್ನು ಬಳಸುವುದೊಂದೇ ದಾರಿ. ಅದಕ್ಕಾಗಿ ಇಲ್ಲಿದೆ ಕ್ರೆಡಿಟ್ ಕಾರ್ಡ್‌ (Credit Card Safety Tips) ಕೆಲವು ಟಿಪ್ಸ್. ಕ್ರೆಡಿಟ್ ಕಾರ್ಡ್ ವಂಚನೆಗಳಿಂದ ಪಾರಾಗಲು ಈ ಟಿಪ್ಸ್ ಬಳಸಿ.

VISTARANEWS.COM


on

By

Credit Card Safety Tips
Koo

ಪಾವತಿಗೆ (payment) ಕ್ರೆಡಿಟ್ ಕಾರ್ಡ್‌ಗಳ ಬಳಕೆ (Credit Card Safety Tips) ಇಂದು ಸಾಮಾನ್ಯವಾಗಿದೆ. ಇದರಿಂದ ಸಾಕಷ್ಟು ಪ್ರಯೋಜನಗಳು ಇದ್ದರೂ ಅಪಾಯವೂ (risk) ಅಷ್ಟೇ ಇದೆ. ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಗಳ ಜನಪ್ರಿಯತೆಯು ವಂಚನೆಯಲ್ಲಿ ( fraud) ಏರಿಕೆಗೂ ಕಾರಣವಾಗಿದೆ. ಹೀಗಾಗಿ ಎಲ್ಲ ಕಡೆ ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವಾಗ ಎಚ್ಚರದಿಂದ ಇರುವುದೊಂದೇ ದಾರಿ.

ವಿಶ್ವದಾದ್ಯಂತ ಸಾವಿರಾರು ಮಂದಿ ಇಂದು ಕ್ರೆಡಿಟ್ ಕಾರ್ಡ್ ವಂಚಕರ ಪಾಲಿಗೆ ತುತ್ತಾಗಿದ್ದಾರೆ. ಇಂತಹ ವಂಚನೆಗಳನ್ನು ಮಾಡಲು ಪ್ರತಿದಿನ ವಂಚಕರು ಹೊಸಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಅನಧಿಕೃತ ವಹಿವಾಟು, ಮಾಹಿತಿ ಕಳ್ಳತನ, ಉಳಿತಾಯದ ಖಾತೆಯಿಂದ ಹಣ ಕಳವು ಸೇರಿದಂತೆ ವಂಚನೆಯ ಕೃತ್ಯಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಅರಿವು ಮತ್ತು ಜಾಗರೂಕತೆಯ ಅಗತ್ಯ. ಅದಕ್ಕಾಗಿ ಇಲ್ಲಿದೆ ಕೆಲವು ಸಲಹೆಗಳು.

1. ವಹಿವಾಟನ್ನು ಅಪೂರ್ಣಗೊಳಿಸಬೇಡಿ

ಕ್ರೆಡಿಟ್ ಕಾರ್ಡ್ ಬಳಸಿ ವಹಿವಾಟು ನಡೆಸುವಾಗ ಸ್ಥಳದಿಂದ ಹೊರಡುವ ಮೊದಲು ವಹಿವಾಟು ಪೂರ್ಣಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕ್ರೆಡಿಟ್ ಕಾರ್ಡ್‌ನ ಎರಡೂ ಬದಿಗಳ ಫೋಟೋಕಾಪಿಗಳನ್ನು ಯಾರಿಗೂ ನೀಡಬೇಡಿ. ಯಾರಾದರೂ ನಿಮ್ಮ ಕಾರ್ಡ್ ಮಾಹಿತಿಯನ್ನು ಹೊಂದಿದ್ದರೆ, ಅವರು ಆನ್‌ಲೈನ್ ವಹಿವಾಟುಗಳಿಗಾಗಿ ನಿಮ್ಮ ಕಾರ್ಡ್‌ನ ಹಿಂಭಾಗದಲ್ಲಿ ಮುದ್ರಿಸಲಾದ ಕಾರ್ಡ್ ಪರಿಶೀಲನೆ ಮೌಲ್ಯವನ್ನು (CVV) ಬಳಸಬಹುದು ಎಚ್ಚರ. ಇದಕ್ಕಾಗಿ ಪ್ರತಿ ವಹಿವಾಟಿಗೂ ಒಟಿಪಿ ಬಳಸಲು ಮೊದಲೇ ಸೆಟ್ಟಿಂಗ್ ಮಾಡಿಕೊಳ್ಳಿ.


2. ಖಾತೆಗಳನ್ನು ಪರಿಶೀಲಿಸುತ್ತಿರಿ

ಅನಧಿಕೃತ ಚಟುವಟಿಕೆ ಕಾರ್ಡ್ ಸ್ಟೇಟ್ ಮೆಂಟ್ ಮತ್ತು ವಹಿವಾಟುಗಳನ್ನು ಪರಿಶೀಲಿಸುವ ಮೂಲಕ ಖಾತೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ. ಬ್ಯಾಂಕ್ ಅನುಮತಿಯೊಂದಿಗೆ ವಹಿವಾಟುಗಳಿಗಾಗಿ ನೈಜ-ಸಮಯದ ಅಧಿಸೂಚನೆಗಳನ್ನು ಸಕ್ರಿಯಗೊಳಿಸಿ. ಇದು ಅನುಮಾನಾಸ್ಪದ ಚಟುವಟಿಕೆಯನ್ನು ಗುರುತಿಸಲು ಮತ್ತು ತಕ್ಷಣವೇ ಬ್ಯಾಂಕ್‌ ಅನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ.

3. ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಿ

ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಅಥವಾ ಹೊಸ ಕ್ರೆಡಿಟ್ ಕಾರ್ಡ್ ಅನ್ನು ಸ್ವೀಕರಿಸಿದ್ದರೆ ಆರ್ ಬಿ ಐ ಕ್ರೆಡಿಟ್ ಕಾರ್ಡ್ ಅನ್ನು ಸ್ವೀಕರಿಸಿದ 30 ದಿನಗಳಲ್ಲಿ ಸಕ್ರಿಯಗೊಳಿಸುತ್ತದೆ. ಭದ್ರತಾ ದೃಷ್ಟಿಯಿಂದ ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸುವಿಕೆಯು ಪ್ರಾಮುಖ್ಯತೆ ಪಡೆದಿದೆ. ನಿರ್ದಿಷ್ಟ ಸಮಯದೊಳಗೆ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಮರೆಯಬೇಡಿ.

4. CVV ಸಂಖ್ಯೆಯನ್ನು ಹಂಚಿಕೊಳ್ಳಬೇಡಿ

ಆನ್‌ಲೈನ್ ಪಾವತಿಗಳನ್ನು ಮಾಡುವಾಗ ಕಾರ್ಡ್‌ನ ಹಿಂಭಾಗದಲ್ಲಿ ಮುದ್ರಿಸಲಾದ ಕಾರ್ಡ್ ಪರಿಶೀಲನೆ ಮೌಲ್ಯ (CVV) ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಈ ಸಂಖ್ಯೆ ಯಾರಿಗಾದರೂ ಲಭ್ಯವಾದರೆ ಸುಲಭವಾಗಿ ಅವರು ನಿಮ್ಮ ಕಾರ್ಡ್ ಅನ್ನು ದುರ್ಬಳಕೆ ಮಾಡಬಹುದು.

5. ಕ್ಲಿಷ್ಟವಾದ ಪಾಸ್‌ವರ್ಡ್‌ ಬಳಸಿ

ಆನ್‌ಲೈನ್ ಶಾಪಿಂಗ್‌ನ ಹೆಚ್ಚುತ್ತಿರುವ ಜನಪ್ರಿಯತೆಯು ದೃಢವಾದ ಸೈಬರ್‌ ಸೆಕ್ಯುರಿಟಿ ಅಭ್ಯಾಸಗಳನ್ನು ಅನುಸರಿಸುವ ಅಗತ್ಯವನ್ನು ಉಂಟು ಮಾಡಿದೆ. ಕ್ರೆಡಿಟ್ ಕಾರ್ಡ್ ಅಥವಾ ಹಣಕಾಸು ಖಾತೆಗಳನ್ನು ದುರುಪಯೋಗದಿಂದ ರಕ್ಷಿಸಲು ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳ ಮಿಶ್ರಣವನ್ನು ಬಳಸಿಕೊಂಡು ಬಲವಾದ ಮತ್ತು ಅನನ್ಯವಾದ ಪಾಸ್‌ವರ್ಡ್‌ಗಳನ್ನು ರಚಿಸುವುದನ್ನು ಒಳ್ಳೆಯದು. ವಹಿವಾಟುಗಳಿಗೆ ಹೆಚ್ಚುವರಿ ಭದ್ರತೆಯಾಗಿ ಸಾಧ್ಯವಿರುವಲ್ಲೆಲ್ಲಾ ಎರಡು ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸಿ.

6. ವಂಚನೆಯ ಬಗ್ಗೆ ಜಾಗರೂಕರಾಗಿರಿ

ಇತ್ತೀಚಿನ ದಿನಗಳಲ್ಲಿ ಫಿಶಿಂಗ್ ಸ್ಕ್ಯಾಮ್‌ಗಳು ಮೋಸದ ಇ-ಮೇಲ್‌, ಸಂದೇಶ ಅಥವಾ ಫೋನ್ ಕರೆಗಳನ್ನು ಒಳಗೊಂಡಿರುತ್ತವೆ. ಅದು ಬ್ಯಾಂಕ್‌ ಅಥವಾ ಪ್ರಸಿದ್ಧ ಕಂಪೆನಿಗಳ ಕಾನೂನುಬದ್ಧ ಮೂಲಗಳನ್ನು ಬಳಸಿ ಎಐ ನಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಮಾಡಲಾಗುತ್ತದೆ. ಈ ಬಗ್ಗೆ ಅನುಮಾನಿಸುವುದು ಕಷ್ಟ. ಹೀಗಾಗಿ ಯಾವುದೇ ಮಾಹಿತಿಯನ್ನು ಎಸ್ ಎಂಎಸ್ , ಇಮೇಲ್, ಕರೆಗೆ ನೀಡಬೇಡಿ. ಸಂದೇಹವಿದ್ದಲ್ಲಿ, ಸಂವಹನದ ದೃಢೀಕರಣವನ್ನು ಪರಿಶೀಲಿಸಲು ತಕ್ಷಣವೇ ನಿಮ್ಮ ಬ್ಯಾಂಕ್ ಅಥವಾ ಕಾರ್ಡ್ ವಿತರಕರನ್ನು ಸಂಪರ್ಕಿಸಿ.

ಇದನ್ನೂ ಓದಿ: Money Guide: ಬ್ಯಾಂಕ್‌ ಖಾತೆ, ಮ್ಯೂಚುವಲ್‌ ಫಂಡ್‌ ಹೊಂದಿದ್ದೀರಾ? ಹಾಗಾದರೆ ಮೊದಲು ಈ ಕೆಲಸ ಮಾಡಿ

7. ಸುರಕ್ಷಿತ ವೆಬ್‌ಸೈಟ್‌ಗಳಲ್ಲಿ ಮಾತ್ರ ಬಳಸಿ

ಆನ್‌ಲೈನ್ ಶಾಪಿಂಗ್ ಪ್ರಪಂಚವು ವಿಶಾಲವಾಗಿದೆ ಮತ್ತು ಕೆಲವೊಮ್ಮೆ ಅಪಾಯಕಾರಿಯಾಗಿದೆ. ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ, ಕ್ರೆಡಿಟ್ ಕಾರ್ಡ್ ಅನ್ನು ಸುರಕ್ಷಿತ ಮತ್ತು ವಿಶ್ವಾಸಾರ್ಹ ವೆಬ್‌ಸೈಟ್‌ಗಳಲ್ಲಿ ಮಾತ್ರ ಬಳಸಿ. ವಹಿವಾಟು ನಡೆಸುವ ಮೊದಲು ಅಥವಾ ನಿಮ್ಮ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವ ಮೊದಲು ವೆಬ್‌ಸೈಟ್‌ನ ದೃಢೀಕರಣವನ್ನು ಪರಿಶೀಲಿಸಲು ಪ್ರತಿಷ್ಠಿತ ನಿವ್ವಳ ದೃಢೀಕರಣ ಏಜೆನ್ಸಿಯನ್ನು ಬಳಸಿಕೊಳ್ಳಿ.


8. ಸಾಧನಗಳನ್ನು ಸುರಕ್ಷಿತಗೊಳಿಸಿ

ಆನ್‌ಲೈನ್ ವಹಿವಾಟು ನಡೆಸಲು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಅನ್ನು ಬಳಸಿದರೆ ನಿಮ್ಮ ಸಾಧನಗಳು ಸುರಕ್ಷಿತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಸೈಬರ್ ಬೆದರಿಕೆಗಳಿಂದ ರಕ್ಷಿಸಲು ಸಾಧನದ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ನವೀಕರಿಸಿ. ಕಂಪ್ಯೂಟರ್‌ನ ಆಪರೇಟಿಂಗ್ ಸಿಸ್ಟಂ ಮತ್ತು ಅಪ್ಲಿಕೇಶನ್‌ಗಳನ್ನು ನಿಯಮಿತವಾಗಿ ಅಪ್‌ಡೇಟ್ ಮಾಡುವುದರಿಂದ ಭದ್ರತಾ ದೋಷಗಳನ್ನು ಸರಿಪಡಿಸಲು ಮತ್ತು ಸೈಬರ್ ದಾಳಿಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಹಣಕಾಸಿನ ವಹಿವಾಟುಗಳಿಗಾಗಿ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳನ್ನು ಬಳಸುವುದನ್ನು ತಪ್ಪಿಸಿ.

9. ಖರ್ಚಿನ ಮಿತಿ ನಿಗದಿಪಡಿಸಿ

ಹೆಚ್ಚಿನ ಕ್ರೆಡಿಟ್ ಕಾರ್ಡ್ ಕಂಪನಿ ಮತ್ತು ಬ್ಯಾಂಕ್‌ಗಳು ತಮ್ಮ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ವಹಿವಾಟು ಮಿತಿಗಳನ್ನು ಮತ್ತು ಅಲರ್ಟ್ ಗಳನ್ನು ಹೊಂದಿಸಲು ಅವಕಾಶ ಮಾಡಿಕೊಡುತ್ತವೆ. ನಿರ್ದಿಷ್ಟಪಡಿಸಿದ ಮಿತಿಯನ್ನು ಮೀರಿದ ವಹಿವಾಟುಗಳು ಸೇರಿದಂತೆ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ಯಾವುದೇ ವಹಿವಾಟಿನ ಕುರಿತು ಅಲರ್ಟ್ ಗಳನ್ನು ಸೂಚಿಸುತ್ತವೆ. ಈ ಅಧಿಸೂಚನೆಗಳು ನಿಮ್ಮ ಕಾರ್ಡ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ ಮತ್ತು ಅನುಮಾನಾಸ್ಪದ ವಹಿವಾಟಿನ ಸಂದರ್ಭದಲ್ಲಿ ತಕ್ಷಣದ ಕ್ರಮವನ್ನು ತೆಗೆದುಕೊಳ್ಳಲು ನೆರವಾಗುತ್ತದೆ. ಖರ್ಚು ಮಿತಿಗಳನ್ನು ಫಿಕ್ಸ್ ಮಾಡುವುದರಿಂದ ಜೇಬಿಗೂ ಅನುಕೂಲಕರ!

Continue Reading

ತಂತ್ರಜ್ಞಾನ

WhatsApp Update : ವಾಯ್ಸ್ ನೋಟ್ ಅವಧಿ ಹೆಚ್ಚಿಸಲಿದೆ ವಾಟ್ಸ್ಆ್ಯಪ್; ವಿಸ್ತರಣೆ ಅವಧಿ ಎಷ್ಟು ಗೊತ್ತೇ?

ವಾಟ್ಸ್ ಆಪ್ ನಲ್ಲಿ ಪ್ರಸ್ತುತ ಬಳಕೆದಾರರು ಕೇವಲ 30 ಸೆಕೆಂಡ್ ಉದ್ದದ ಧ್ವನಿ ಸಂದೇಶಗಳನ್ನು ಹಂಚಿಕೊಳ್ಳಲು ಮಾತ್ರ ಅನುಮತಿ ಇದೆ. ಆದರೆ ಇನ್ನು ಮುಂದೆ ಸುಮಾರು ಒಂದು ನಿಮಿಷಗಳ ಕಾಲದ ಧ್ವನಿ ಸಂದೇಶವನ್ನು (WhatsApp Update) ಕಳುಹಿಸಬಹುದಾಗಿದೆ.

VISTARANEWS.COM


on

By

WhatsApp Update
Koo

ಜಗತ್ತಿನಾದ್ಯಂತ ಕೋಟ್ಯಂತ ಬಳಕೆದಾರರನ್ನು (users) ಹೊಂದಿರುವ ತ್ವರಿತ ಸಂದೇಶ (messaging app) ಕಳುಹಿಸುವ ವೇದಿಕೆಯಾದ ವಾಟ್ಸ್​​ಆ್ಯಪ್ (WhatsApp Update) ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ. ಇದೀಗ ಧ್ವನಿ ಸಂದೇಶಗಳ (voice message) ಕಾಲಾವಧಿಯನ್ನು ಹೆಚ್ಚಿಸಿ ಹೊಸ ಅಪ್ಡೇಟ್ ನೀಡಿದೆ.

ಪ್ರಸ್ತುತ ವಾಟ್ಸ್ ಆಪ್ ಆವೃತ್ತಿಯು ಬಳಕೆದಾರರಿಗೆ ಕೇವಲ 30 ಸೆಕೆಂಡ್​ಗಳಷ್ಟು ಅವಧಿಯ ಧ್ವನಿ ಸಂದೇಶಗಳನ್ನು ಹಂಚಿಕೊಳ್ಳಲು ಮಾತ್ರ ಅನುಮತಿ ನೀಡುತ್ತಿತ್ತು. ಆದರೆ ಇನ್ನು ಮುಂದೆ ಸುಮಾರು ಒಂದು ನಿಮಿಷಗಳ ಕಾಲದ ಧ್ವನಿ ಸಂದೇಶವನ್ನು ವಾಟ್ಸ್​​ಆ್ಯಪ್​ ಮೂಲಕ ಕಳುಹಿಸಬಹುದು.

ಈ ಕುರಿತು ವಾಬೀಟಾಇನ್ಫೋ ನೀಡಿರುವ ಮಾಹಿತಿ ಪ್ರಕಾರ ಒಂದು ನಿಮಿಷದವರೆಗೆ ಧ್ವನಿ ಸಂದೇಶಗಳನ್ನು ಕಳುಹಿಸುವ ವಿಧಾನವನ್ನು ಬೆಂಬಲಿಸಲು ವಾಟ್ಸ್ ಆಪ್ ನ ಕಾರ್ಯವಿಧಾನಗಳನ್ನು ಅಪ್‌ಗ್ರೇಡ್ ಮಾಡಲಾಗಿದೆ. ಇದು ಇದು ಹಿಂದಿನ ಧ್ವನಿ ಸಂದೇಶ ಕಳುಹಿಸುವ ಮಿತಿಗಿಂತ ದ್ವಿಗುಣವಾಗಿದೆ ಎಂದು ತಿಳಿಸಿದೆ.

ಇನ್ನು ಮುಂದೆ ಧ್ವನಿ ರೂಪದಲ್ಲಿ ಸಂದೇಶಗಳನ್ನು ಹಂಚಿಕೊಳ್ಳಲು ಬಯಸುವ ಬಳಕೆದಾರರಿಗೆ ವಿಸ್ತೃತ ಅವಧಿಯ ಸಂದೇಶ ಕಳುಹಿಸಲು ಇದು ಪ್ರಯೋಜನಕಾರಿಯಾಗಲಿದೆ. ಇದರಿಂದ ಬಳಕೆದಾರರು ಇನ್ನು ಮುಂದೆ ತಮ್ಮ ಆಡಿಯೋ ರೆಕಾರ್ಡಿಂಗ್‌ಗಳನ್ನು ಹಲವು ಭಾಗಗಗಳಾಗಿ ವಿಭಜಿಸಬೇಕಾಗಿಲ್ಲ. ದೀರ್ಘಾವಧಿಯಲ್ಲಿ ಇದು ಲಭ್ಯವಾಗುವುದರಿಂದ ಸಮಯವನ್ನು ಉಳಿಸಲು ಮತ್ತು ಸಂವಹನ ಪ್ರೊಸೆಸರ್ ಅನ್ನು ಹೆಚ್ಚು ಅನುಕೂಲಕರವಾಗಿಸಲು ಸಹಾಯ ಮಾಡುತ್ತದೆ.


ಆಂಡ್ರಾಯ್ಡ್ ಮತ್ತು ಐಒಎಸ್ ಗಾಗಿ ವಾಟ್ಸ್​​ಆ್ಯಪ್​ ಬೀಟಾ ಆವೃತ್ತಿಯಲ್ಲಿರುವ ಕೆಲವು ಬಳಕೆದಾರರು ಈಗ ಒಂದು ನಿಮಿಷದ ಧ್ವನಿ ಟಿಪ್ಪಣಿಯನ್ನು ತಮ್ಮ ವಾಟ್ಸ್​​ಆ್ಯಪ್​ನಲ್ಲಿ ಮಾಡಿಕೊಳ್ಳಬಹುದು. ಆದರೆ ಈ ವಾಯ್ಸ್​ ನೋಟ್​ ಆಲಿಸಲು ವಾಟ್ಸ್ ಆಪ್ ನ ಇತ್ತೀಚಿನ ಆವೃತ್ತಿಯನ್ನು ಮೊಬೈಲ್ ನಲ್ಲಿ ನವೀಕರಿಸಲೇ ಬೇಕಾಗುತ್ತದೆ.

ನವೀಕರಣ ಮಾಡುವುದು ಹೇಗೆ?

ವಾಟ್ಸ್​​ಆ್ಯಪ್​ ನಲ್ಲಿರುವ ವಾಯ್ಸ್​ ನೋಟ್​ಗಳನ್ನು ಅಪ್ಡೇಡ್ ಮಾಡಲು ಫೋನ್‌ನಲ್ಲಿ ವಾಟ್ಸ್ ಆಪ್ ಅನ್ನು ತೆರೆಯಿರಿ. ಕೆಳಗಿನ ಬಾರ್‌ ನಲ್ಲಿರುವ ‘ಅಪ್‌ಡೇಟ್‌ಗಳು’ ಟ್ಯಾಬ್‌ಗೆ ಹೋಗಿ ಅಲ್ಲಿ ಪೆನ್ಸಿಲ್‌ನಂತಹ ಐಕಾನ್ ಮೇಲೆ ಟ್ಯಾಪ್ ಮಾಡಿ. ಈಗ, ಪರದೆಯ ಕೆಳಗಿನ ಬಲಭಾಗದಲ್ಲಿರುವ ಮೈಕ್ರೊಫೋನ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಬಳಿಕ ಒಂದು ನಿಮಿಷದ ಅವಧಿಯ ಧ್ವನಿ ಟಿಪ್ಪಣಿಯನ್ನು ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ. ಅನಂತರ ಅದನ್ನು ಹಂಚಿಕೊಳ್ಳಬಹುದು.

ಪರೀಕ್ಷೆ ಹಂತದಲ್ಲಿದೆ

ಒಂದು ನಿಮಿಷದ ಅವಧಿಯ ಈ ಧ್ವನಿ ಸಂದೇಶಗಳಿಗೆ ಅಪ್‌ಡೇಟ್‌ ಮಾಡುವ ಸಾಮರ್ಥ್ಯವು ಪ್ರಸ್ತುತ ಕೆಲವು ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ. ಆದರೆ ಅದು ಯಾವಾಗ ಎನ್ನುವ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಇದನ್ನೂ ಓದಿ: WhatsApp AI: WhatsAppಗೂ ಬಂತು ಎಐ; ನಿಮ್ಮ ಪ್ರೊಫೈಲ್‌ ಫೋಟೊ ಇನ್ನು AI ಜನರೇಟೆಡ್!‌

ಹಲವು ಅಪ್ಡೇಟ್ ಗಳು

ಕಳೆದ ಕೆಲವು ವಾರಗಳಿಂದ ವಾಟ್ಸ್ ಆಪ್ ನಿರಂತರವಾಗಿ ವಿವಿಧ ಪರೀಕ್ಷೆಗಳನ್ನು ನಡೆಸುತ್ತಿದೆ. ಎಐ ರಚಿತ ಫೋಟೋಗಳನ್ನು ಪ್ರೊಫೈಲ್ ಚಿತ್ರಗಳಾಗಿ ಹೊಂದಿಸುವ ಸಾಮರ್ಥ್ಯದಂತಹ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಿದೆ. ಐಫೋನ್‌ಗಳಲ್ಲಿ ಪ್ರೊಫೈಲ್ ಚಿತ್ರಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳದಂತೆ ಬಳಕೆದಾರರನ್ನು ತಡೆಯಲು ಪ್ರಯತ್ನಿಸುತ್ತಿದೆ. ಕರೆ ಮಾಡುವವರನ್ನು ಹೆಸರಿಸಲು ಧ್ವನಿ ಕರೆಯನ್ನು ಮರುವಿನ್ಯಾಸಗೊಳಿಸಲಾಗುತ್ತಿದೆ ಎನ್ನಲಾಗಿದೆ.

Continue Reading
Advertisement
Haveri Lok Sabha Constituency
ಹಾವೇರಿ27 mins ago

Haveri Lok Sabha Constituency: ಹಾವೇರಿಯಲ್ಲಿ ಅನುಭವಿ vs ಉತ್ಸಾಹಿ; ಯಾರಿಗೆ ಜಯದ ಮಾಲೆ?

Hyderabad City : Hyderabad no longer joint capital of Andhra Pradesh, Telangana from today
ಪ್ರಮುಖ ಸುದ್ದಿ31 mins ago

Hyderabad City : ಹೈದರಾಬಾದ್​ ಇನ್ನು ತೆಲಂಗಾಣಕ್ಕಷ್ಟೇ ರಾಜಧಾನಿ; ಏನಿದು ವಿಂಗಡಣೆ?

Loksabha Election 2024
Lok Sabha Election 202438 mins ago

Lok Sabha Election 2024: ಮತ ಎಣಿಕೆಗೆ 1 ದಿನವಷ್ಟೇ ಬಾಕಿ; ಚುನಾವಣಾ ಆಯೋಗದ ಕದ ತಟ್ಟಿದ ಎನ್‌ಡಿಎ, ʼಇಂಡಿಯಾʼ ಮೈತ್ರಿಕೂಟ

Chikballapur lok sabha constituency
ಪ್ರಮುಖ ಸುದ್ದಿ57 mins ago

Chikballapur lok sabha constituency : ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಇನ್ನಷ್ಟು ಬಲ ತರುವರೇ ಸುಧಾಕರ್​?

Bangalore Rain
ಕರ್ನಾಟಕ1 hour ago

Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

Kannada New Movie
ಸಿನಿಮಾ1 hour ago

Kannada New Movie: ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರದಲ್ಲಿ ಒಂದಾದ ದುನಿಯಾ ವಿಜಯ್, ಶ್ರೇಯಸ್ ಮಂಜು

Koppal Lok Sabha Constituency
ಕೊಪ್ಪಳ1 hour ago

Koppal Lok Sabha Constituency: ಮಾಜಿ ಶಾಸಕರ ಪುತ್ರರ ನಡುವಿನ ಸ್ಪರ್ಧೆಯಲ್ಲಿ ಯಾರಾಗುವರು ಸಂಸದ?

kolar lok sabha constituency
ಪ್ರಮುಖ ಸುದ್ದಿ2 hours ago

Kolar lok sabha constituency : ಕೋಲಾರವನ್ನು ವಾಪಸ್​ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದೇ ಕಾಂಗ್ರೆಸ್​

Money Guide
ಮನಿ-ಗೈಡ್2 hours ago

Money Guide: ಗೃಹಸಾಲದ ಕಂತು ಪೂರ್ತಿಯಾಯ್ತೆ? ನಿಲ್ಲಿ, ನಿಮ್ಮ ಜವಾಬ್ದಾರಿ ಇನ್ನೂ ಇದೆ!

mandya lok sabha constituency
ಪ್ರಮುಖ ಸುದ್ದಿ2 hours ago

Mandya Lok Sabha Constituency : ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಕುಮಾರಸ್ವಾಮಿಗೆ ಗೆಲುವು ಸಿಗುವುದೇ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ11 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌