Site icon Vistara News

Return of BGMI in India : 10 ತಿಂಗಳಿನ ಬಳಿಕ ಭಾರತಕ್ಕೆ ಮರಳಿದ BGMI ವಿಡಿಯೊ ಗೇಮ್

Return of BGMI in India

BGMI

ನವ ದೆಹಲಿ: ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟೋನ್‌ ಕಂಪನಿಯ ವಿಡಿಯೊ ಗೇಮ್‌ BGMI, ಹತ್ತು ತಿಂಗಳಿನ ಅಮಾನತು ಬಳಿಕ ಇದೀಗ ಮತ್ತೆ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದೆ. (Kraftons BGMI game) ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು, ಬಿಜಿಎಂಐ ವಿಡಿಯೊ ಗೇಮ್‌ಗೆ (Battlegrounds Mobile India ) ಮೂರು ತಿಂಗಳಿನ ಅವಧಿಯ ಪ್ರಾಯೋಗಿಕ ಅನುಮೋದನೆ ನೀಡಲಾಗಿದೆ. ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕೆ ಮುನ್ನ ನಿಕಟವಾಗಿ ಗಮನಿಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ಕೆಲ ವರ್ಷಗಳಲ್ಲಿ ಭಾರತ 300ಕ್ಕೂ ಹೆಚ್ಚು ವಿಡಿಯೊ ಗೇಮ್‌‌ ಆ್ಯಪ್‌ಗಳನ್ನು ನಿಷೇಧಿಸಿತ್ತು. ಈ ಪೈಕಿ ಬಿಜಿಎಂಐ ಮರಳಿದಂತಾಗಿದೆ. ಈ ಬಗ್ಗೆ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಖಾತೆಯ ಸಹಾಯಕ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಟ್ವೀಟ್‌ ಮಾಡಿದ್ದರು.

BGMI ಗೇಮ್‌ ಬಳಕೆದಾರರ ಮೇಲೆ ಬೀರುವ ಪರಿಣಾಮ, ಸರ್ವರ್‌ ಲೊಕೇಶನ್‌, ಡೇಟಾ ಸೆಕ್ಯುರಿಟಿ, ಅಡಿಕ್ಷನ್ ಮತ್ತು ಇತರ ವಿಚಾರಗಳ ಬಗ್ಗೆ ನಿಗಾ ವಹಿಸಲಾಗುವುದು ಎಂದು ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಬಿಜಿಎಂಐ ವಿಡಿಯೊ ಗೇಮ್‌‌ ಆ್ಯಪ್‌ ಅನ್ನು ಮಾರುಕಟ್ಟೆಗೆ ಮತ್ತೆ ಬಿಡುಗಡೆಗೊಳಿಸಲು ಅನುಮತಿ ನೀಡಿದ್ದಕ್ಕೆ ಕ್ರಾಫ್ಟೋನ್‌ ಇಂಕ್‌ ಇಂಡಿಯಾದ (Krafton Inc India) ಸಿಇಒ ಸಿಯಾನ್‌ ಹ್ಯುನಿಲ್‌ ಸೋಹನ್‌ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಆಂಡ್ರಾಯ್ಡ್‌ ಮತ್ತು ಆ್ಯಪ್‌ ಸ್ಟೋರ್‌ಗಳಲ್ಲಿ ಬಿಜಿಎಂಐ ಸಿಗಲಿದೆ.

ಕ್ರಾಪ್ಟೋನ್‌ ಭಾರತೀಯ ಸ್ಟಾರ್ಟಪ್‌ಗಳಲ್ಲಿ ಅಂದಾಜು 820 ಕೋಟಿ ರೂ. ಹೂಡಿಕೆ ಮಾಡಿದೆ. ಭಾರತೀಯ ಭಾಷೆಗಳಲ್ಲಿನ ಕಥಾ ಸಾಹಿತ್ಯವನ್ನು ಪ್ರಕಟಿಸುತ್ತಿರುವ ಪ್ರತಿಲಿಪಿ, ಗೇಮ್‌ ಸ್ಟ್ರೀಮಿಂಗ್‌ ಪ್ಲಾಟ್‌ ಫಾರ್ಮ್‌ ಲೊಕೊ, ನೋಡ್‌ವಿನ್‌ ಗೇಮಿಂಗ್‌, ಜೆಟ್‌ಸಿಂಥೆಸಿಸ್‌, ಆಡಿಯೊ ಕಂಟೆಂಟ್‌ ಪ್ಲಾಟ್‌ಫಾರ್ಮ್‌ ಕುಕು ಎಫ್‌ಎಂನಲ್ಲಿ ಕ್ರಾಫ್ಟೋನ್‌ ಹೂಡಿಕೆ ಮಾಡಿದೆ.

Read more: ದೇಶದಲ್ಲಿ ಪ್ರೇಮವಿವಾಹಗಳೇ ವಿಚ್ಛೇದನ ಹೆಚ್ಚಾಗಲು ಕಾರಣ ಎಂದ ಸುಪ್ರೀಂ ಕೋರ್ಟ್‌

Exit mobile version