ನವ ದೆಹಲಿ: ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್ (Rishi Sunak) ಪತ್ನಿ ಅಕ್ಷತಾ ಮೂರ್ತಿ ಅವರಿಗೆ ಇನ್ಫೋಸಿಸ್‌ನಿಂದ 2022ರಲ್ಲಿ 126.61 ಕೋಟಿ ರೂ. ಡಿವಿಡೆಂಡ್ ಲಭಿಸಿದೆ.
ಭಾರತದ ಎರಡನೇ ಅತಿ ದೊಡ್ಡ ಐಟಿ ಕಂಪನಿ ಇನ್ಫೋಸಿಸ್‌ನಲ್ಲಿ ಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರು ಕಳೆದ ಸೆಪ್ಟೆಂಬರ್ ಅಂತ್ಯದ ವೇಳೆಗೆ, 3.89 ಕೋಟಿ ಷೇರುಗಳನ್ನು ಹೊಂದಿದ್ದರು. ಇದರ ಮೌಲ್ಯ 5,956 ಕೋಟಿ ರೂ. (ಪ್ರತಿ ಷೇರಿನ ದರ 1,527 ರೂ.) ಆಗಿದೆ.
ಪ್ರಸಕ್ತ ಸಾಲಿಗೆ ಪ್ರತಿ ಷೇರಿಗೆ 16.5 ರೂ. ಡಿವಿಡೆಂಡ್ ಅನ್ನು ಕಂಪನಿ ಈ ತಿಂಗಳು ಘೋಷಿಸಿತ್ತು. 2021-22ರಲ್ಲಿ 16 ರೂ. ಡಿವಿಡೆಂಡ್ ನೀಡಿತ್ತು. ಎರಡೂ ಕಂತಿನ ಡಿವಿಡೆಂಡ್ 32.5 ರೂ.ಗಳಾಗಿದ್ದು, ಒಟ್ಟು 126.61 ಕೋಟಿ ರೂ.ಗಳನ್ನು ಅಕ್ಷತಾ ಮೂರ್ತಿ ಗಳಿಸಿದ್ದಾರೆ.
ಇದನ್ನೂ ಓದಿ:Rishi Sunak | ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ರಿಷಿ ಸುನಕ್! 3ನೇ ಕಿಂಗ್ ಚಾರ್ಲ್ಸ್‌ರಿಂದ ನೇಮಕ