Site icon Vistara News

ಸೆನ್ಸೆಕ್ಸ್‌ ಪತನದೊಂದಿಗೆ, ಡಾಲರ್‌ ಎದುರು ರೂಪಾಯಿ ಮೌಲ್ಯ 78 ರೂ.ಗೆ ಕುಸಿತ

rupee

ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ಕುಸಿತದ ಜತೆಗೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಸೊಮವಾರ 36 ಪೈಸೆ ಕುಸಿದು 78 ರೂ.ಗೆ ಇಳಿಯಿತು. ಇದರೊಂದಿಗೆ 80 ರೂ.ಗೆ ಕುಸಿಯುವ ಆತಂಕ ಉಂಟಾಗಿದೆ.

ಡಾಲರ್‌ಗೆ ಭಾರಿ ಬೇಡಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಬಹುತೇಕ ಕರೆನ್ಸಿಗಳು ದುರ್ಬಲವಾಯಿತು. ದೇಶೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದು, ಇದು ಕೂಡ ರೂಪಾಯಿಯನ್ನು ದುರ್ಬಲಗೊಳಿಸಿತು. ವಿದೇಶಿ ಹೂಡಿಕೆದಾರರು ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ಈಕ್ವಿಟಿ ಮಾರುಕಟ್ಟೆಯಿಂದ 24 ಶತಕೋಟಿ ಡಾಲರ್‌ (ಅಂದಾಜು 1.84 ಲಕ್ಷ ಕೋಟಿ ರೂ.) ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.

ಈ ನಡುವೆ ಬಿಎಸ್‌ಇನಲ್ಲಿ ಸೆನ್ಸೆಕ್ಸ್‌ ಸೂಚ್ಯಂಕದ ಕುಸಿತದ ಪರಿಣಾಮ ಮಧ್ಯಂತರ ವಹಿವಾಟಿನಲ್ಲಿ ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ನಷ್ಟವಾಯಿತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತ ಕೂಡ ರೂಪಾಯಿ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ. ಡಾಲರ್‌ ಎದುರು ರೂಪಾಯಿ ಬಡಪಾಯಿಯಾದರೆ ಆಮದು ವೆಚ್ಚ ಹೆಚ್ಚುತ್ತದೆ. ಹಣದುಬ್ಬರ ಹೆಚ್ಚಲು ಕಾರಣವಾಗುತ್ತದೆ. ವಿದೇಶ ಪ್ರವಾಸ, ಶಿಕ್ಷಣ ವೆಚ್ಚ ವೃದ್ಧಿಸುತ್ತದೆ. ಆದರೆ ರಫ್ತುದಾರರಿಗೆ ರೂಪಾಯಿ ಲೆಕ್ಕದಲ್ಲಿ ಆದಾಯ ವೃದ್ಧಿಸುತ್ತದೆ.

ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣ

Exit mobile version