ಸೆನ್ಸೆಕ್ಸ್‌ ಪತನದೊಂದಿಗೆ, ಡಾಲರ್‌ ಎದುರು ರೂಪಾಯಿ ಮೌಲ್ಯ 78 ರೂ.ಗೆ ಕುಸಿತ - Vistara News

ಪ್ರಮುಖ ಸುದ್ದಿ

ಸೆನ್ಸೆಕ್ಸ್‌ ಪತನದೊಂದಿಗೆ, ಡಾಲರ್‌ ಎದುರು ರೂಪಾಯಿ ಮೌಲ್ಯ 78 ರೂ.ಗೆ ಕುಸಿತ

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಪತನದೊಂದಿಗೆ, ಡಾಲರ್‌ ಎದುರು ರೂಪಾಯಿ ಮೌಲ್ಯ ಸೋಮವಾರ 78 ರೂ.ಗೆ ಕುಸಿತವಾಗಿದೆ. 80 ರೂ.ಗೆ ಇಳಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ತಜ್ಞರು.

VISTARANEWS.COM


on

rupee
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ಕುಸಿತದ ಜತೆಗೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಸೊಮವಾರ 36 ಪೈಸೆ ಕುಸಿದು 78 ರೂ.ಗೆ ಇಳಿಯಿತು. ಇದರೊಂದಿಗೆ 80 ರೂ.ಗೆ ಕುಸಿಯುವ ಆತಂಕ ಉಂಟಾಗಿದೆ.

ಡಾಲರ್‌ಗೆ ಭಾರಿ ಬೇಡಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಬಹುತೇಕ ಕರೆನ್ಸಿಗಳು ದುರ್ಬಲವಾಯಿತು. ದೇಶೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದು, ಇದು ಕೂಡ ರೂಪಾಯಿಯನ್ನು ದುರ್ಬಲಗೊಳಿಸಿತು. ವಿದೇಶಿ ಹೂಡಿಕೆದಾರರು ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ಈಕ್ವಿಟಿ ಮಾರುಕಟ್ಟೆಯಿಂದ 24 ಶತಕೋಟಿ ಡಾಲರ್‌ (ಅಂದಾಜು 1.84 ಲಕ್ಷ ಕೋಟಿ ರೂ.) ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.

ಈ ನಡುವೆ ಬಿಎಸ್‌ಇನಲ್ಲಿ ಸೆನ್ಸೆಕ್ಸ್‌ ಸೂಚ್ಯಂಕದ ಕುಸಿತದ ಪರಿಣಾಮ ಮಧ್ಯಂತರ ವಹಿವಾಟಿನಲ್ಲಿ ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ನಷ್ಟವಾಯಿತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತ ಕೂಡ ರೂಪಾಯಿ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ. ಡಾಲರ್‌ ಎದುರು ರೂಪಾಯಿ ಬಡಪಾಯಿಯಾದರೆ ಆಮದು ವೆಚ್ಚ ಹೆಚ್ಚುತ್ತದೆ. ಹಣದುಬ್ಬರ ಹೆಚ್ಚಲು ಕಾರಣವಾಗುತ್ತದೆ. ವಿದೇಶ ಪ್ರವಾಸ, ಶಿಕ್ಷಣ ವೆಚ್ಚ ವೃದ್ಧಿಸುತ್ತದೆ. ಆದರೆ ರಫ್ತುದಾರರಿಗೆ ರೂಪಾಯಿ ಲೆಕ್ಕದಲ್ಲಿ ಆದಾಯ ವೃದ್ಧಿಸುತ್ತದೆ.

ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣ

  • ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆಯ ಹೊರ ಹರಿವು ಹೆಚ್ಚಳವಾಗಿರುವದು.
  • ಅಮೆರಿಕದ ಫೆಡರಲ್‌ ರಿಸರ್ವ್‌ನಿಂದ ಬಡ್ಡಿ ದರ ಏರಿಕೆ ಸಂಭವ
  • ಅಮೆರಿಕದಲ್ಲಿ ಹಣದುಬ್ಬರ 40 ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿರುವುದು.
  • ಚಾಲ್ತಿ ಖಾತೆ ಕೊರತೆ (CAD) ಹೆಚ್ಚಳವಾಗಿರುವುದು
  • ಕಚ್ಚಾ ತೈಲ ದರದ ಏರುಗತಿ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

RCB vs CSK: ಅದೇ ದಿನ, ಅದೇ ವಾರ, ಮಳೆ ಭೀತಿ; ಇದೆಂಥಾ ಕಾಕತಾಳೀಯ! ಆರ್​ಸಿಬಿಗೆ ಇದು ಅದೃಷ್ಟವಾ?

RCB vs CSK: 11 ವರ್ಷಗಳ ಹಿಂದೆ ನಡೆದಿದ್ದ ಪಂದ್ಯಕ್ಕೂ ನಾಳೆ ನಡೆಯುವ ಪಂದ್ಯಕ್ಕೂ ದಿನಾಂಕ, ದಿವಸ ಮತ್ತು ಮಳೆಯ ಅಂಕಿ ಸಂಖ್ಯೆಗಳ ಚಮತ್ಕಾರ ತಾಳೆಯಾಗುತ್ತಿದ್ದು ಈ ಆಧಾರದಲ್ಲಿ ಆರ್​ಸಿಬಿ ಗೆಲುವು ಸಾಧಿಸಲಿದೆ ಎಂದು ಅಭಿಮಾನಿಗಳು ಭವಿಷ್ಯ ನುಡಿಯಲಾರಂಭಿಸಿದ್ದಾರೆ.

VISTARANEWS.COM


on

RCB vs CSK
Koo

ಬೆಂಗಳೂರು: ನಾಳೆ(ಶನಿವಾರ) ನಡೆಯುವ ಪ್ಲೇ ಆಫ್​ ಪ್ರವೇಶದ ಮಹತ್ವದ ಪಂದ್ಯದಲ್ಲಿ ಆರ್​ಸಿಬಿ(RCB vs CSK) ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಮಳೆ ಭೀತಿ ಇದ್ದರೂ ಕೂಡ ಕಾಕತಾಳೀಯ ಲೆಕ್ಕಾಚಾರವೊಂದರ ಪ್ರಕಾರ ಆರ್​ಸಿಬಿ ಗೆಲುವು ಸಾಧಿಸಲಿದೆ ಎಂದು ಅಭಿಮಾನಿಗಳು ಪಂದ್ಯಕ್ಕೂ ಮುನ್ನವೇ ಭವಿಷ್ಯ ನುಡಿಯಲಾರಂಭಿಸಿದ್ದಾರೆ.

ಹೌದು, ಆರ್​ಸಿಬಿ ಮತ್ತು ಚೆನ್ನೈ 2013ರಲ್ಲಿ ತನ್ನ ಕೊನೆಯ ಲೀಗ್​ ಪಂದ್ಯವನ್ನು ಮೇ 18ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಡಿತ್ತು. ಈ ಪಂದ್ಯ ಕೂಡ ಶನಿವಾರವೇ ಆಗಿತ್ತು. ಅಲ್ಲದೆ ಪಂದ್ಯಕ್ಕೆ ಮಳೆಯ ಭೀತಿಯೂ ಎದುರಾಗಿತ್ತು. ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯಂತೆ ಪಂದ್ಯಕ್ಕೆ ಮಳೆ ಕೂಡ ಅಡ್ಡಿಪಡಿಸಿತ್ತು. ಬಳಿಕ ಡಕ್​ವರ್ತ್ ಲೂಯಿಸ್​ ನಿಯಮದ ಅನುಸಾರ ಈ ಪಂದ್ಯವನ್ನು 8 ಓವರ್​ಗೆ ಸೀಮಿತಗೊಳಿಸಿ ಆಡಿಸಲಾಗಿತ್ತು.

ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ 8 ಓವರ್​ಗೆ ಕೇವಲ 2 ವಿಕೆಟ್​ ಕಳೆದುಕೊಂಡು 106 ರನ್​ ಪೇರಿಸಿತ್ತು. ಕಿಂಗ್​ ವಿರಾಟ್​ ಕೊಹ್ಲಿ ಅಜೇಯ 56 ರನ್​ ಬಾರಿಸಿದರೆ, ಕ್ರಿಸ್​ ಗೇಲ್​ 28 ರನ್​ ಬಾರಿಸಿದ್ದರು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್​ ಕಿಂಗ್ಸ್​ 6 ವಿಕೆಟ್​ ಕಳೆದುಕೊಂಡು 82 ರನ್​ಗಳಿಸಲಷ್ಟೇ ಶಕ್ತವಾಗಿ 24 ರನ್​ಗಳ ಸೋಲು ಕಂಡಿತ್ತು.

ಇದೀಗ ನಾಳೆ ನಡೆಯುವ ಪಂದ್ಯವೂ ಕೂಡ ಮೇ 18 ಶನಿವಾರವಾಗಿದೆ. ಜತೆಗೆ ಪಂದ್ಯಕ್ಕೆ ಮಳೆಯ ಭೀತಿ ಕೂಡ ಇದೆ. 11 ವರ್ಷಗಳ ಹಿಂದೆ ನಡೆದಿದ್ದ ಪಂದ್ಯಕ್ಕೂ ನಾಳೆ ನಡೆಯುವ ಪಂದ್ಯಕ್ಕೂ ದಿನಾಂಕ, ದಿವಸ ಮತ್ತು ಮಳೆಯ ಅಂಕಿ ಸಂಖ್ಯೆಗಳ ಚಮತ್ಕಾರ ತಾಳೆಯಾಗುತ್ತಿದ್ದು ಈ ಆಧಾರದಲ್ಲಿ ಆರ್​ಸಿಬಿ ಗೆಲುವು ಸಾಧಿಸಲಿದೆ ಎಂದು ಅಭಿಮಾನಿಗಳು ಭವಿಷ್ಯ ನುಡಿಯಲಾರಂಭಿಸಿದ್ದಾರೆ.

ಹವಾಮಾನ ಇಲಾಖೆ ಈಗಾಗಕೇ ಪಂದ್ಯಕ್ಕೆ ಶೇ.89 ರಷ್ಟು ಮಳೆ(Rain forecast for Bengaluru) ಇದೆ ಎಂದು, ಒಂದು ವಾರಗಳ ಹಿಂದೆಯೇ ಎಚ್ಚರಿಕೆ ನೀಡಿತ್ತು. ಶುಕ್ರವಾರ ಬೆಳಗ್ಗಿನಿಂದಲೇ ಬೆಂಗಳೂರಿನಲ್ಲಿ ಭಾರೀ ಮಳೆಯೂ ಆಗಿದೆ. ಹೀಗಾಗಿ ಶನಿವಾರವೂ ಮಳೆ ಇರುವುದು ಖಚಿತಗೊಂಡಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಆರ್​ಸಿಬಿ ಪ್ಲೇ ಆಫ್​ನಿಂದ ಹೊರಬೀಳಲಿದೆ. 15 ಅಂಕ ಪಡೆಯುವ ಚೆನ್ನೈ ಪ್ಲೇ ಆಫ್​ಗೆ ಎಂಟ್ರಿ ಕೊಡಲಿದೆ. ಈಗಾಗಲೇ ಮೂರು ತಂಡಗಳಾದ ಕೆಕೆಆರ್​, ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಾಜಸ್ಥಾನ್​ ಪ್ಲೇ ಆಫ್​ ತಲುಪಿದೆ. ಒಂದು ಸ್ಥಾನ ನಾಳೆ ನಿರ್ಧಾರವಾಗಲಿದೆ.

ಇದನ್ನೂ ಓದಿ IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿರುವ ಕಾರಣ. ಮಳೆ ಬಂದರೂ ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಮಳೆ ಬಂದರೂ ಸೀಮಿತ ಓವರ್​ಗಳ ಪಂದ್ಯವನ್ನು ನಿರೀಕ್ಷಿಸಬಹುದು.

ಒಂದೊಮ್ಮೆ ಆರ್​ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದರೂ ಕೂಡ ಪ್ಲೇ ಆಫ್​ ಟಿಕೆಟ್​ ಖಚಿತವಾಗುವುದಿಲ್ಲ. ರನ್‌ರೇಟ್‌ ಲೆಕ್ಕಾಚಾರದಲ್ಲಿ ಚೆನ್ನೈಯನ್ನು ಆರ್‌ಸಿಬಿ ಕನಿಷ್ಠ 18 ರನ್ನುಗಳಿಂದ ಮಣಿಸಬೇಕಿದೆ. ಚೇಸಿಂಗ್‌ ಲೆಕ್ಕಾಚಾರ ಬೇರೆಯೇ ಇದೆ. ಕನಿಷ್ಠ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು. ಸಣ್ಣ ಅಂತರದ ಗೆಲುವು ಕಂಡರೆ ಕಷ್ಟ.

Continue Reading

Lok Sabha Election 2024

Narendra Modi: ಅಪ್ರಾಮಾಣಿಕನಾಗಿದ್ದರೆ ನನ್ನನ್ನು ಗಲ್ಲಿಗೇರಿಸಿ: ವಿಪಕ್ಷಕ್ಕೆ ಪ್ರಧಾನಿ ಮೋದಿ ತಿರುಗೇಟು

Narendra Modi: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ”ನಾನು ಅಪ್ರಮಾಣಿಕವಾಗಿ ನಡೆದುಕೊಂಡಿದ್ದರೆ ಗಲ್ಲು ಶಿಕ್ಷೆ ಎದುರಿಸಲೂ ಸಿದ್ಧʼʼ ಎಂದು ಭಾವುಕರಾಗಿ ಹೇಳಿದ್ದಾರೆ. ತಮ್ಮ ಸರ್ಕಾರವು ಕೆಲವು ಆಯ್ದ ಕೈಗಾರಿಕೋದ್ಯಮಿಗಳ ಪರವಾಗಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು, ʼʼದೇಶದ ಸಂಪತ್ತಿನ ಸೃಷ್ಟಿಕರ್ತರ ಪರವಾಗಿ ನಾನು ದೃಢವಾಗಿ ನಿಲ್ಲುತ್ತೇನೆ ಮತ್ತು ಯಾರಿಗಾದರೂ ಅಪ್ರಾಮಾಣಿಕ ರೀತಿಯಲ್ಲಿ ಲಾಭ ಮಾಡಿಕೊಟ್ಟರೆ ಶಿಕ್ಷೆಯನ್ನು ಎದುರಿಸಲು ಸಿದ್ಧʼʼ ಎಂದು ತಿಳಿಸಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಜೋರಾಗಿದೆ. ಈಗಾಗಲೇ ದೇಶದಲ್ಲಿ 4 ಹಂತಗಳ ಮತದಾನ ಪೂರ್ಣಗೊಂಡಿದೆ. ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ”ನಾನು ಅಪ್ರಮಾಣಿಕವಾಗಿ ನಡೆದುಕೊಂಡಿದ್ದರೆ ಗಲ್ಲು ಶಿಕ್ಷೆ ಎದುರಿಸಲೂ ಸಿದ್ಧʼʼ ಎಂದು ಭಾವುಕರಾಗಿ ಹೇಳಿದ್ದಾರೆ.

ತಮ್ಮ ಸರ್ಕಾರವು ಕೆಲವು ಆಯ್ದ ಕೈಗಾರಿಕೋದ್ಯಮಿಗಳ ಪರವಾಗಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು, ʼʼದೇಶದ ಸಂಪತ್ತಿನ ಸೃಷ್ಟಿಕರ್ತರ ಪರವಾಗಿ ನಾನು ದೃಢವಾಗಿ ನಿಲ್ಲುತ್ತೇನೆ ಮತ್ತು ಯಾರಿಗಾದರೂ ಅಪ್ರಾಮಾಣಿಕ ರೀತಿಯಲ್ಲಿ ಲಾಭ ಮಾಡಿಕೊಟ್ಟರೆ ಶಿಕ್ಷೆಯನ್ನು ಎದುರಿಸಲು ಸಿದ್ಧʼʼ ಎಂದು ತಿಳಿಸಿದ್ದಾರೆ.

“ಜವಾಹರಲಾಲ್ ನೆಹರೂ ಕೂಡ ಸಂಸತ್ತಿನಲ್ಲಿ ʼಬಿರ್ಲಾ-ಟಾಟಾ ಕಿ ಸರ್ಕಾರ್‌ʼನಂತಹ ನಿಂದನೆಗಳನ್ನು ಎದುರಿಸುತ್ತಿದ್ದರು. ಈ ಕುಟುಂಬದ (ನೆಹರೂ) ಸಮಸ್ಯೆಯೆಂದರೆ ಈಗಲೂ ನಾನು ಅದೇ ನಿಂದನೆಗಳನ್ನು ಎದುರಿಸಬೇಕೆಂದು ಬಯಸುತ್ತದೆʼʼ ಎಂದು ಆರೋಪಿಸಿದ್ದಾರೆ. ʼʼದೇಶದ ಸಂಪತ್ತಿನ ಸೃಷ್ಟಿಕರ್ತರನ್ನು ಗೌರವಿಸಬೇಕು ಎಂದು ಹೇಳಲು ನನಗೆ ನಾಚಿಕೆಯಾಗುವುದಿಲ್ಲ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅತಿಥಿಗಳ ಪಟ್ಟಿ ತಯಾರಿಸುವಾಗ ನಾನು ಕ್ರೀಡಾಪಟುಗಳು ಮತ್ತು ಸಾಧಕರ ಹೆಸರನ್ನು ಸೇರಿಸುತ್ತೇನೆ. ದೇಶವು ತನ್ನ ಸಾಧಕರನ್ನು ಪೂಜಿಸದಿದ್ದರೆ ಮತ್ತು ಗೌರವಿಸದಿದ್ದರೆ, ವಿಜ್ಞಾನಿ ಮತ್ತು ಪಿಎಚ್‌ಡಿ ಮಾಡುವ ಜನರನ್ನು ನಾವು ಹೇಗೆ ಹೊಂದಲು ಸಾಧ್ಯ? ಎಲ್ಲ ವರ್ಗದ ಸಾಧಕರನ್ನು ಗೌರವಿಸಬೇಕು ಎಂಬುದು ನನ್ನ ಅಭಿಮತ” ಎಂದು ಅವರು ಹೇಳಿದ್ದಾರೆ.

“ನಾನು ಅಪ್ರಾಮಾಣಿಕನಾಗಿದ್ದರೆ ನನ್ನನ್ನು ಗಲ್ಲಿಗೇರಿಸಿ. ನಾನು ತಪ್ಪು ರೀತಿಯಲ್ಲಿ ಯಾರಿಗಾದರೂ ಪ್ರಯೋಜನ ಉಂಟು ಮಾಡಿದ್ದರೆ ನನ್ನನ್ನು ಗಲ್ಲಿಗೇರಿಸಬೇಕು. ಆದರೆ ನನ್ನ ದೇಶದ ಸಂಪತ್ತಿನ ಸೃಷ್ಟಿಕರ್ತರನ್ನು ನಾನು ಗೌರವಿಸುತ್ತೇನೆ” ಎಂದು ಮೋದಿ ಹೇಳಿದ್ದಾರೆ. ಆ ಮೂಲಕ ಅದಾನಿ-ಅಂಬಾನಿಯಂತಹ ಶ್ರೀಮಂತ ಉದ್ಯಮಿಗಳಿಗೆ ನೆರವು ನೀಡಿದ್ದಾರೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಸೂಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ.

ಸಂಪತ್ತಿನ ಸೃಷ್ಟಿಕರ್ತರು ಮತ್ತು ಕಾರ್ಮಿಕರ ಬಗ್ಗೆಯೂ ಸಮಾನವಾಗಿ ಚಿಂತಿಸುತ್ತೇನೆ ಎಂದು ಮೋದಿ ಈ ಸಂದರ್ಭದಲ್ಲಿ ಘೋಷಿಸಿದ್ದಾರೆ. “ನನ್ನ ಪ್ರಕಾರ ದೇಶದ ಅಭಿವೃದ್ಧಿಗೆ ಬಂಡವಾಳಶಾಹಿಗಳ ಹಣ, ಆಡಳಿತ ಮಂಡಳಿಯವರ ಯೋಚನೆ ಮತ್ತು ಕಾರ್ಮಿಕರ ಕಠಿಣ ಪರಿಶ್ರಮ ಅಗತ್ಯ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: PM Narendra Modi:”ಅಬ್ಬಾ.. ಎಂಥಾ ಮೇಕಪ್!”- ಮತ್ತೆ ಗಮನ ಸೆಳೆದ ಮೋದಿ; ವಿಡಿಯೋ ವೈರಲ್‌

ಮುಸ್ಲಿಂ ವಿರೋಧಿ ಆರೋಪಕ್ಕೂ ತಿರುಗೇಟು

ಕೆಲವು ದಿನಗಳ ಹಿಂದಯಷ್ಟೇ ಮೋದಿ ಅವರು ಮುಸ್ಲಿಂ ವಿರೋಧಿ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಟಾಂಗ್‌ ಕೊಟ್ಟಿದ್ದರು. ʼʼಹಿಂದು ಮುಸ್ಲಿಂ ಅಂತ ತಾರತಮ್ಯ ಮಾಡಿದ ದಿನ ನಾನು ರಾಜಕೀಯ ಬದುಕಿಗೆ ಅನರ್ಹನಾಗುತ್ತೇನೆ. ನಾನು ನನ್ನ ಜೀವನದಲ್ಲಿ ಎಂದಿಗೂ ಹಿಂದು-ಮುಸ್ಲಿಂ ಎಂದು ಭೇದ ಮಾಡೋದಿಲ್ಲ ಎಂಬುದು ನನ್ನ ಬದುಕಿನ ಧ್ಯೇಯʼʼ ಎಂದು ಸ್ಪಷ್ಟವಾಗಿ ಹೇಳಿದ್ದರು. ʼʼಹಿಂದು ಮುಸ್ಲಿಂ ಅಂತ ಹೇಳಿಕೊಂಡು ರಾಜಕೀಯ ಮಾಡಿದರೆ ನಾನು ಸಾರ್ವಜನಿಕ ಜೀವಕ್ಕೆ ಅರ್ಹನಾದ ವ್ಯಕ್ತಿಯಾಗುವುದಿಲ್ಲ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆʼʼ ಎಂದರು. 

Continue Reading

ಭವಿಷ್ಯ

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷದ ನವಮಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಶುಕ್ರವಾರವು ಕನ್ಯಾರಾಶಿಯಲ್ಲಿಯೇ ನೆಲೆಸಿರುತ್ತಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಕಟಕ ರಾಶಿಯವರು ಗಾಳಿಯಲ್ಲಿ ಮನೆ ಕಟ್ಟುವಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಬದಲಿಗೆ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ನಿಮ್ಮ ಶಕ್ತಿ ವ್ಯಯಿಸಿ. ಇಂದು ನಿಮಗೆ ಹಣದ ಲಾಭವಾಗುವ ಪೂರ್ತಿ ಸಾಧ್ಯತೆ ಇದೆ. ಆದರೆ ಇದರೊಂದಿಗೆ ನೀವು ದಾನವನ್ನು ಸಹ ಮಾಡಬೇಕು ಏಕೆಂದರೆ ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ. ಸಿಂಹ ರಾಶಿಯವರು ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಸಿಲುಕಿಕೊಳ್ಳದಂತೆ ಎಚ್ಚರಿಕೆ ವಹಿಸಿ. ನೀವು ಯಾವುದೇ ಬದ್ಧತೆಯನ್ನು ಮಾಡುವ ಮೊದಲು ಎಲ್ಲಾ ಸತ್ಯಾಸತ್ಯತೆಗಳನ್ನು ಅರಿತುಕೊಳ್ಳುವುದು ಅಗತ್ಯ ಇದೆ. ಕುಟುಂಬದಲ್ಲಿ ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸಬೇಡಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (17-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ತಿಥಿ: ನವಮಿ 08:48 ವಾರ: ಶುಕ್ರವಾರ
ನಕ್ಷತ್ರ: ಪೂರ್ವ ಪಾಲ್ಗುಣಿ 21:17 ಯೋಗ: ವ್ಯಾಘಾತ 09:19
ಕರಣ: ಕೌಲವ 08:48 ಅಮೃತ ಕಾಲ: ಮಧ್ಯಾಹ್ನ 02:05ರಿಂದ 03:53
ದಿನದ ವಿಶೇಷ: ವಿಶ್ವ ಮಾಹಿತಿ ದಿನ

ಸೂರ್ಯೋದಯ : 05:54   ಸೂರ್ಯಾಸ್ತ : 06:38

ರಾಹುಕಾಲ :ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆರೋಗ್ಯ ಸುಧಾರಣೆಗಾಗಿ ಮಾಡುವ ಪ್ರಯತ್ನಗಳು ಸಹಕಾರಿಯಾಗಲಿವೆ. ಆರ್ಥಿಕ ಭಾಗವು ಬಲಗೊಳ್ಳುವ ಪೂರ್ಣ ಸಾಧ್ಯತೆ ಇದೆ. ಸಾಲದ ಮರುಪಾವತಿ ಆಗಲಿದೆ. ಇತರರ ದೋಷಗಳನ್ನು ಹುಡುಕುತ್ತಾ ಸಮಯ ವ್ಯರ್ಥ ಮಾಡುವುದು ಬೇಡ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಇರಲಿದೆ. ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಅನಿವಾರ್ಯ ಕಾರಣಗಳಿಂದ ನೀವು ಯಾವುದಾದರೂ ಸಹಾಯ ಕೋರುವ ಸಾಧ್ಯತೆ ಇದೆ. ನಿಮ್ಮ ಪ್ರಯತ್ನಗಳು ಖಂಡಿತವಾಗಿಯೂ ಸಕಾರಾತ್ಮಕ ಫಲಿತಾಂಶ ತರುತ್ತವೆ. ಆರೋಗ್ಯ ಪರಿಪೂರ್ಣ ಇರಲಿದೆ. ಉದ್ಯೋಗಿಗಳಿಗೆ ಕೊಂಚ ಕಿರಿ ಕಿರಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಮನೆಯ ಸದಸ್ಯರು ಇಂದು ನಿಮ್ಮೊಂದಿಗೆ ಅನೇಕ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ. ಹಿರಿಯರ ಸತತ ಮಾರ್ಗದರ್ಶನ ಸಿಗಲಿದೆ. ಅವಸರದಲ್ಲಿ ಮಾತನಾಡಿದ ಕಾರಣಕ್ಕೆ ಪಶ್ಚಾತ್ತಾಪ ಮೂಡಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಆರೋಗ್ಯ ಪರಿಪೂರ್ಣವಾಗಿ ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕುಟುಂಬದಲ್ಲಿ ಸಾಮರಸ್ಯ ಇರಲಿದೆ.
ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಗಾಳಿಯಲ್ಲಿ ಮನೆ ಕಟ್ಟುವಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಬದಲಿಗೆ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ನಿಮ್ಮ ಶಕ್ತಿ ವ್ಯಯಿಸಿ. ಇಂದು ನಿಮಗೆ ಹಣದ ಲಾಭವಾಗುವ ಪೂರ್ತಿ ಸಾಧ್ಯತೆ ಇದೆ. ಆದರೆ ಇದರೊಂದಿಗೆ ನೀವು ದಾನವನ್ನು ಸಹ ಮಾಡಬೇಕು ಏಕೆಂದರೆ ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ. ಆರೋಗ್ಯ ಕುರಿತಾಗಿ ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ ಇರಲಿದೆ.
ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಸಿಲುಕಿಕೊಳ್ಳದಂತೆ ಎಚ್ಚರಿಕೆ ವಹಿಸಿ. ನೀವು ಯಾವುದೇ ಬದ್ಧತೆಯನ್ನು ಮಾಡುವ ಮೊದಲು ಎಲ್ಲಾ ಸತ್ಯಾಸತ್ಯತೆಗಳನ್ನು ಅರಿತುಕೊಳ್ಳುವುದು ಅಗತ್ಯ ಇದೆ. ಕುಟುಂಬದಲ್ಲಿ ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸಬೇಡಿ. ಮಾನಸಿಕ ಹಾಗೂ ದೈಹಿಕವಾಗಿ ಜರ್ಜರಿತರಾಗುವ ಬದಲು ಯೋಗ ಧ್ಯಾನ ಮಾಡಿ ಮನಸ್ಸಿನ ಮೂಲೆಯಲ್ಲಿ ಸಂತಸ ಚಿಗರಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಕೊಂಚ ಕಿರಿ ಕಿರಿ ಇರಲಿದೆ. ಕೌಟುಂಬಿಕವಾಗಿ ಸಾಧರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಿಸಿಕೊಳ್ಳಲು ಬಿಡಬೇಡಿ. ಶಾಂತವಾಗಿ ಮತ್ತು ಒತ್ತಡ ಮುಕ್ತವಾಗಿ ಉಳಿಯಲು ಪ್ರಯತ್ನಿಸಿ ಹಾಗೂ ಅದು ನಿಮ್ಮ ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತವಾಗಿರಲಿದೆ. ಸಂಬಂಧಿಗಳ ಆಗಮನ ಸಂತಸ ತರಲಿದೆ. ಸಂಗಾತಿಯ ಹಸ್ತಕ್ಷೇಪ ಮುಜುಗರ ಉಂಟು ಮಾಡಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಾಮ ಮತ್ತು ಸಂತೋಷ ತರುತ್ತದೆ. ಈ ರಾಶಿಚಕ್ರದ ದೊಡ್ಡ ಉದ್ಯಮಿಗಳು ಇಂದು ತುಂಬಾ ಯೋಚಿಸಿ ಅರ್ಥಮಾಡಿಕೊಂಡು ಹಣದ ಹೂಡಿಕೆ ಮಾಡುವ ಅಗತ್ಯವಿದೆ. ನಿಮ್ಮ ಸ್ಪರ್ಧಾತ್ಮಕ ಸ್ವಭಾವ ನೀವು ಪ್ರವೇಶಿಸುವ ಯಾವುದೇ ಸ್ಪರ್ಧೆಯಲ್ಲೂ ನಿಮ್ಮನ್ನು ಗೆಲ್ಲಿಸುತ್ತದೆ. ಪ್ರೇಮಿಗಳಿಗೆ ಮನೆಯಿಂದ ಹಸಿರು ನಿಶಾನೆ ಸಿಗಲಿದೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ಭಾವನಾತ್ಮಕ ನಿರ್ಧಾರ ಕೈಗೊಳ್ಳುವ ಭರದಲ್ಲಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವುದು ಬೇಡ. ಅಜಾಗೃತ ಕಾರ್ಯ ನಿಮಗೆ ಆರ್ಥಿಕ ನಷ್ಟ ಉಂಟು ಮಾಡಬಹುದು.ಕಠಿಣ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗುವಿರಿ.ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರಿಕಿರಿಯಾಗಲಿದೆ. ಕುಟುಂಬದಲ್ಲಿ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಅದೃಷ್ಟ ಸಂಖ್ಯೆ: 2

Horoscope Today

ಧನಸ್ಸು: ನೀವು ದೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಸಣ್ಣ ಉದ್ಯೋಗವನ್ನು ಮಾಡುವ ಜನರು, ಇಂದು ತಮ್ಮ ಆಪ್ತರಿಂದ ಯಾವುದೇ ಸಲಹೆಯನ್ನು ಪಡೆಯಬಹುದು. ಇದರಿಂದ ಅವರಿಗೆ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ. ಇಂದು ಹಣದ ಬಗ್ಗೆ ಕುಟುಂಬ ಸದಸ್ಯರಲ್ಲಿ ಗೊಂದಲ ಉಂಟಾಗಬಹುದು.ಆದಷ್ಟು ಸಾಲ ಮಾಡದಂತೆ ಎಚ್ಚರಿಕೆ ವಹಿಸಿ.ಆರೋಗ್ಯ ಪರಿಪೂರ್ಣ.ಮೇಲಾಧಿಕರಿಗಳು ನಿಮ್ಮ ಸಹನೆ ಪರೀಕ್ಷಿಸುವ ಸಾಧ್ಯತೆ, ಆದಷ್ಟು ಮೌನದಿಂದ ಕೆಲಸ ಸಾಧಿಸಿಕೊಳ್ಳಿ. ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಶುಭ ಫಲ.ಅದೃಷ್ಟ ಸಂಖ್ಯೆ: 9

Horoscope Today

ಮಕರ: ಮನಸ್ಸಿನ ಭಾವನೆಗಳನ್ನ ಹತೋಟಿಯಲ್ಲಿ ಇಟ್ಟುಕೊಳ್ಳಿ ಆ ಸಿಟ್ಟನ್ನು ಇತರರ ಮೇಲೆ ಹಾಕಿ ಪಶ್ಚಾತ್ತಾಪ ಪಡುವುದು ಬೇಡ. ಹಳೆಯ ಪ್ರೀತಿಯ ನೆನಪು ಮರುಕಳಿಸಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಸಿಗಲಿದೆ. ಆರೋಗ್ಯದ ಕುರಿತು ಕೊಂಚ ಕಾಳಜಿ ವಹಿಸಿ.ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ಒಂದು ಲಾಭಕರವಾದ ದಿನವಾಗಲಿದೆ ಮತ್ತು ನೀವು ಧೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ಮೂರನೇ ವ್ಯಕ್ತಿಯ ಹಸ್ತಕ್ಷೇಪ ನೀವು ಮತ್ತು ನಿಮ್ಮ ಪ್ರೀತಿಪಾತ್ರರಲ್ಲಿ ಕಂದಕ ತರಬಹುದು ಆದಷ್ಟು ಅಂತವರಿಂದ ಎಚ್ಚರಿಕೆ ವಹಿಸಿ. ಆರೋಗ್ಯ ಪರಿಪೂರ್ಣ ಇರಲಿದೆ.ಉದ್ಯೋಗಿಗಳಿಗೆ ಕಿರಿ ಕಿರಿ.ಕೌಟುಂಬಿಕವಾಗಿ ಸಾಧಾರಣ ಫಲ.ಅದೃಷ್ಟ ಸಂಖ್ಯೆ: 6

Horoscope Today

ಮೀನ: ಅಧ್ಯಾತ್ಮದ ಒಲವು ಹೆಚ್ಚಾಗಲಿದೆ. ನಿಮ್ಮ ಕನಸು ನನಸಾಗುವ ಕಾಲವಿದು. ಆರೋಗ್ಯ ಪರಿಪೂರ್ಣವಾಗಿರಲಿದೆ. ನೀವು ಹಣಕಾಸಿನ ಲಾಭ ತರುವ ಅದ್ಭುತವಾದ ಹೊಸ ಕಲ್ಪನೆಗಳನ್ನು ಪ್ರಸ್ತುತಪಡಿಸುತ್ತೀರಿ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಒಪ್ಪಿಕೊಂಡರೆ ಸಾಲದು, ಪಾಕ್‌ ತನ್ನನ್ನು ಸರಿಪಡಿಸಿಕೊಳ್ಳಲಿ

ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಕಾಶ್ಮೀರ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸುತ್ತ ಭಾರತಕ್ಕೆ ಮುಜುಗರ ಸೃಷ್ಟಿಸಲು ವಿಫಲ ಪ್ರಯತ್ನ ಮಾಡುತ್ತಿರುವ ಪಾಕ್‌ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ಗಮನಿಸಲಿ.

VISTARANEWS.COM


on

Pakistan
Koo

ಕೆಲವು ದಿನಗಳ ಹಿಂದೆ ಪಾಕ್‌(Pakistan) ಸಂಸತ್‌ನಲ್ಲೇ ಅಲ್ಲಿನ ವಿಪಕ್ಷ ನಾಯಕನೇ ಭಾರತವನ್ನು ಹಾಡಿ ಹೊಗಳಿರುವ ವಿಡಿಯೋವೊಂದು ವೈರಲ್‌(Viral Video) ಆಗಿತ್ತು. ಇದೀಗ ಮತ್ತೊಬ್ಬ ಸಂಸದ ಭಾರತದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ಸಂಸದ ಸಯ್ಯದ್‌ ಮುಸ್ತಾಫಾ ಕಮಲ್‌ ಭಾರತ ಮತ್ತು ಪಾಕಿಸ್ತಾನವನ್ನು ಹೋಲಿಕೆ ಮಾಡಿ ಮಾತನಾಡಿದ್ದು, ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನದ ಸ್ಥಿತಿ ಹೇಗಿದೆ ನೋಡಿ ಎಂದು ಹೇಳಿದ್ದಾರೆ. ಇದೀಗ ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಮಕ್ಕಳು ಚರಂಡಿ ಬೀಳುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದೇವೆ. ಕರಾಚಿಯಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದಲ್ಲಿ 2.6 ಕೋಟಿ ಮಕ್ಕಳಿದ್ದು, ಅವರಿಗೆ ಶಿಕ್ಷಣ ಸೌಲಭ್ಯವೂ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಇಡೀ ಪ್ರಪಂಚದಲ್ಲೇ ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ನಾವು ಮಾತ್ರ ಹಣಕಾಸಿನ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಮೌಲಾನ ಫಜ್ಲೂರ್‌ ರೆಹಮಾನ್‌ ಹೇಳಿದ್ದರು. ಅವರು ಪಾಕಿಸ್ತಾನ ಸಂಸತ್‌ನಲ್ಲಿ ಸರ್ಕಾರ ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಭಾರತ ಜಾಗತಿಕ ಮಟ್ಟದಲ್ಲಿ ಸೂಪರ್‌ ಪವರ್‌ಫುಲ್‌ ರಾಷ್ಟ್ರವಾಗಿ ಬೆಳೆಯುತ್ತಿದೆ ಪಾಕಿಸ್ತಾನ ಮಾತ್ರ ದಿವಾಳಿತನದತ್ತ ಸಾಗುತ್ತಿದೆ. 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಇಂದು ಭಾರತದ ಸ್ಥಿತಿ ಎಲ್ಲಿದೆ ಹಾಗೂ ನಮ್ಮ ಸ್ಥಿತಿ ಎಲ್ಲಿದೆ? ಇಷ್ಟಕ್ಕೆಲ್ಲಾ ಯಾರು ಹೊಣೆ ಎಂದು ಕಟುವಾಗಿ ಪ್ರಶ್ನಿಸಿದ್ದರು.

ಪಾಕಿಸ್ತಾನದ ವೈಫಲ್ಯಗಳ ಪಟ್ಟಿ ಮಾಡಹೊರಟರೆ ಮುಗಿಯುವುದೇ ಇಲ್ಲ. ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ಆಧುನಿಕ ಶಿಕ್ಷಣ ಕಲಿಸುವ ಶಾಲೆಗಳಿಲ್ಲ. ಸಿಂಧ್‌ ಪ್ರಾಂತ್ಯದಲ್ಲಿ 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಅಲ್ಲಿ ಒಟ್ಟು 2.62 ಕೋಟಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಮತಾಂಧತೆ ಕಲಿಸುವ ಮದ್ರಸ ಶಿಕ್ಷಣ ಮಾತ್ರ ವ್ಯಾಪಕವಾಗಿದೆ. ಹಣದುಬ್ಬರದ ಏರಿಕೆಯಿಂದಾಗಿ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಯು ದಿನೇದಿನೆ ಜಾಸ್ತಿಯಾಗುತ್ತಿದ್ದು, ಜನ ಹೈರಾಣಾಗುತ್ತಿದ್ದಾರೆ. ಒಂದು ಲೀಟರ್‌ ಪೆಟ್ರೋಲ್‌ಗೆ 290 ರೂ. (ಪಾಕಿಸ್ತಾನದ ರೂಪಾಯಿ) ಆದರೆ, ಒಂದು ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ಕೊಡಬೇಕಾಗಿದೆ. ಒಂದು ರೊಟ್ಟಿಗೆ 25 ರೂ. ನೀಡಬೇಕಾಗಿದೆ. ಇದರಿಂದಾಗಿ ಸಾಮಾನ್ಯ ಜನ ಮೂರು ಹೊತ್ತು ಊಟ ಮಾಡಲು ಕೂಡ ತೊಂದರೆಯಾಗುತ್ತಿದೆ. ಹಣಕಾಸಿನ ಕೊರತೆಯಿಂದ ಬಳಲುತ್ತಿರುವ ಪಾಕ್‌ನ ವಿದೇಶಿ ವಿನಿಮಯ ಮೀಸಲು ನಿಧಿ ಆಮದನ್ನು ಪೂರೈಸಲು ಸಾಕಾಗುತ್ತಿಲ್ಲ.

ಉಗ್ರರ ಪೋಷಣೆ, ಅವರಿಗೆ ಹಣಕಾಸು ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದ ಪಾಕಿಸ್ತಾನ ದಿವಾಳಿಯಾಗಿದೆ. ಇದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಎದುರು ಹಣಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಈಗಾಗಲೇ ಐಎಂಎಫ್‌ 3 ಶತಕೋಟಿ ಡಾಲರ್‌ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಮೂರು ವರ್ಷಗಳವರೆಗೆ 6 ಶತಕೋಟಿ ಡಾಲರ್‌ ಸಾಲ ನೀಡಿ ಎಂದು ಪಾಕಿಸ್ತಾನ ಮನವಿ ಮಾಡುತ್ತಿದೆ. ಆದರೆ, ಪಾಕ್‌ನಲ್ಲಿ ದಿನೇದಿನೆ ಹಣದುಬ್ಬರದ ಏರಿಕೆಯಾಗುತ್ತಿರುವ ಕಾರಣ ಸಾಲ ನೀಡಲು ಐಎಂಎಫ್‌ ಹಿಂದೇಟು ಹಾಕುತ್ತಿದೆ. ಇದಕ್ಕಾಗಿಯೇ, ಆಡಳಿತ ಕಾರ್ಯತಂತ್ರದ ಘಟಕಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಐಎಂಎಫ್‌ ಪಾಕಿಸ್ತಾನಕ್ಕೆ ಸೂಚಿದ ಶಿಫಾರಸ್ಸಿನ ಪಟ್ಟಿಯಲ್ಲಿ ನಷ್ಟದಲ್ಲಿರುವ ಸರ್ಕಾರಿ ಉದ್ಯಮಗಳ ಖಾಸಗೀಕರಣವೂ ಸೇರಿದೆ.

ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಕಾಶ್ಮೀರ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸುತ್ತ ಭಾರತಕ್ಕೆ ಮುಜುಗರ ಸೃಷ್ಟಿಸಲು ವಿಫಲ ಪ್ರಯತ್ನ ಮಾಡುತ್ತಿರುವ ಪಾಕ್‌ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ಗಮನಿಸಲಿ. ಅಲ್ಲಿನ ರಾಜಕೀಯ ನಾಯಕರೇ ತಮ್ಮ ಸ್ಥಿತಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಾಗ, ತಿದ್ದಿಕೊಳ್ಳಲು ಸರಿಯಾದ ಕಾಲ ಬಂದಿದೆ ಎಂದರ್ಥ.

ಇದನ್ನೂ ಓದಿ: CAA: ಪಾಕಿಸ್ತಾನದಿಂದ ಬಂದ ಹಿಂದುಗಳಿಗೆ ಸಿಎಎ ಅನ್ವಯ ಭಾರತದ ಪೌರತ್ವ; ದೆಹಲಿಯಲ್ಲಿ ಸಂಭ್ರಮ, Video ಇಲ್ಲಿದೆ

Continue Reading
Advertisement
Viral Video
ಕ್ರೀಡೆ4 mins ago

Viral Video: ಗಲ್ಲಿ ಕ್ರಿಕೆಟ್​ನಲ್ಲಿ ಎಡಗೈ ಬ್ಯಾಟಿಂಗ್​ ನಡೆಸಿದ ಕೆ.ಎಲ್​ ರಾಹುಲ್​

Physical Abuse
ಕ್ರೈಂ20 mins ago

Physical Abuse: ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅರ್ಚಕನಿಂದ ನಿರೂಪಕಿ ಮೇಲೆ ಅತ್ಯಾಚಾರ

anjali murder suspect girish2
ಕ್ರೈಂ21 mins ago

Anjali Murder Case: ಥಳಿಸಿದವರಿಗೆ ಈತ ಅಂಜಲಿ ಹಂತಕ ಎಂದು ಗೊತ್ತೇ ಇರಲಿಲ್ಲ! ಕೊಲೆಗಾರ ಸಿಕ್ಕಿಬಿದ್ದಿದ್ದು ಹೀಗೆ

Viral video
ವೈರಲ್ ನ್ಯೂಸ್25 mins ago

Viral Video: ಅಬ್ಬಾ.. ಮದ್ವೆ ಮಂಟಪದಲ್ಲೇ ಬಿಗ್‌ ಫೈಟ್‌; ವರನಿಗಾಗಿ ಯುವತಿಯರ ಮಾರಾಮಾರಿ-ವಿಡಿಯೋ ವೈರಲ್‌

T20 World Cup 2024
ಕ್ರೀಡೆ33 mins ago

T20 World Cup 2024: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತದ ಎದುರಾಳಿ ಯಾರು?

Anushka Shetty producer marriage news viral
ಟಾಲಿವುಡ್42 mins ago

Anushka Shetty: ಕನ್ನಡ ನಿರ್ಮಾಪಕನ ಜತೆ ʻಟಾಲಿವುಡ್‌ ಸ್ವೀಟಿʼ ಅನುಷ್ಕಾ ಶೆಟ್ಟಿ ಮದುವೆ?

RCB vs CSK
ಕ್ರೀಡೆ56 mins ago

RCB vs CSK: ಅದೇ ದಿನ, ಅದೇ ವಾರ, ಮಳೆ ಭೀತಿ; ಇದೆಂಥಾ ಕಾಕತಾಳೀಯ! ಆರ್​ಸಿಬಿಗೆ ಇದು ಅದೃಷ್ಟವಾ?

shoot out doddaballapur murder case
ಕ್ರೈಂ1 hour ago

Shoot Out: ದೊಡ್ಡಬಳ್ಳಾಪುರ ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ

Narendra Modi
Lok Sabha Election 20241 hour ago

Narendra Modi: ಅಪ್ರಾಮಾಣಿಕನಾಗಿದ್ದರೆ ನನ್ನನ್ನು ಗಲ್ಲಿಗೇರಿಸಿ: ವಿಪಕ್ಷಕ್ಕೆ ಪ್ರಧಾನಿ ಮೋದಿ ತಿರುಗೇಟು

Pakistan
ವಿದೇಶ1 hour ago

Pakistan: ಟಾಪ್‌ ಕಂಪನಿಗಳಲ್ಲಿ ಭಾರತೀಯರೇ CEO; ಆದರೆ ನಮ್ಮ ಮಕ್ಕಳು? ಪಾಕ್‌ ಸಂಸದನ ವಿಡಿಯೊ ವೈರಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ4 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ20 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು24 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌