ಮಾಸ್ಕೊ: ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ ವಿಧಿಸಿರುವ 60 ಡಾಲರ್ ಮಿತಿಯನ್ನು ರಷ್ಯಾ ತಿರಸ್ಕರಿಸಿದೆ. ಹಾಗೂ ತೈಲ ಪೂರೈಕೆಯನ್ನೇ (Russian oil) ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದೆ.
ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಜಪಾನ್, ಅಮೆರಿಕ ಮತ್ತು 27 ರಾಷ್ಟ್ರಗಳ ಒಕ್ಕೂಟ ಕಳೆದ ಶುಕ್ರವಾರ, ರಷ್ಯಾದ ಕಚ್ಚಾ ತೈಲಕ್ಕೆ, ಸೋಮವಾರದಿಂದ ಪ್ರತಿ ಬ್ಯಾರೆಲ್‌ಗೆ 60 ಡಾಲರ್ ನೀಡುವುದಾಗಿ ಮಿತಿಯನ್ನು ವಿಧಿಸಿತ್ತು. ಆದರೆ ಈ ಮಿತಿಯನ್ನು ರಷ್ಯಾ ಸಾರಾಸಗಟಾಗಿ ತಿರಸ್ಕರಿಸಿದೆ.
ಯುರೋಪ್ ತನ್ನ ತೈಲ ಇಲ್ಲದೆ ತೀವ್ರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ರಷ್ಯಾ ಎಚ್ಚರಿಸಿದೆ. ಇಡೀ ಯುರೋಪ್ ರಷ್ಯಾದ ತೈಲವನ್ನು ಅವಲಂಬಿಸಿದೆ. ಉಕ್ರೇನ್ ವಿರುದ್ಧ ಸಂಘರ್ಷ ನಡೆಸುತ್ತಿರುವುದಕ್ಕೆ ಪ್ರತಿಯಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಈ ದರ ಮಿತಿಯನ್ನು ವಿಧಿಸಿವೆ. ಆದರೆ ರಷ್ಯಾ ಇದಕ್ಕೆ ಕ್ಯಾರೇ ಮಾಡುವುದಿಲ್ಲ ಎಂದಿದೆ. ಚೀನಾ, ಭಾರತ ಸೇರಿದಂತೆ ಇತರ ರಾಷ್ಟ್ರಗಳು ರಷ್ಯಾದಿಂದ ಹೇರಳವಾಗಿ ತೈಲ ಖರೀದಿಸುತ್ತಿರುವುದು ರಷ್ಯಾದ ಆತ್ಮವಿಶ್ವಾಸಕ್ಕೆ ಮತ್ತೊಂದು ಕಾರಣವಾಗಿದೆ.