ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ತನ್ನ ಹೊಸ ಗ್ಯಾಲಕ್ಸಿ ಬಡ್ಸ್3, ಗ್ಯಾಲಕ್ಸಿ ಬಡ್ಸ್3 ಪ್ರೊ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದ್ದು, ಪ್ರೀ ಆರ್ಡರ್ ಮಾಡುವ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು (Samsung Galaxy) ಘೋಷಿಸಿದೆ.
ಗ್ಯಾಲಕ್ಸಿ ವಾಚ್ 7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ವಾಚ್‌ಗಳು ಗ್ಯಾಲಕ್ಸಿ ಎಐ ಆಧರಿತವಾದ ಧರಿಸಬಹುದಾದ ಸಾಧನಗಳಾಗಿದ್ದು, ಪ್ರತಿಯೊಬ್ಬರಿಗೂ ಆರೋಗ್ಯ ಕಾಳಜಿ ವಹಿಸಲು ವಿನ್ಯಾಸಗೊಳಿಸಲಾದ ಸಾಧನಗಳಾಗಿವೆ.
ಗ್ಯಾಲಕ್ಸಿ ವಾಚ್ ಅಲ್ಟ್ರಾ – ಗ್ಯಾಲಕ್ಸಿ ವಾಚ್ ಉತ್ಪನ್ನಗಳ ಶ್ರೇಣಿಗೆ ಹೊಸತಾದ ಮತ್ತು ಅತ್ಯಂತ ಶಕ್ತಿಯುತ ಸೇರ್ಪಡೆಯಾಗಿದೆ. ಅಪಾರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವುಳ್ಳ ಈ ವಾಚ್ ಅತ್ಯುತ್ತಮ ಫಿಟ್‌ನೆಸ್ ಅನುಭವಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಈ ಮೂಲಕ ಹೆಚ್ಚು ಫಿಟ್‌ನೆಸ್ ಸಾಧನೆ ಮಾಡಲು ಪ್ರೇರೇಪಿಸುತ್ತದೆ.
ಇದನ್ನೂ ಓದಿ: Lakshmi Hebbalkar: ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು 250 ಅಂಗನವಾಡಿ ಆಯ್ಕೆ; ಜು.22ಕ್ಕೆ ಚಾಲನೆ
ಹೆಚ್ಚು ರಕ್ಷಣೆ ಒದಗಿಸಲು ಮತ್ತು ಹೆಚ್ಚು ಚಂದ ಕಾಣಿಸುವಂತೆ ಮಾಡಲು ವಾಚ್ ಅಲ್ಟ್ರಾದಲ್ಲಿ ಹೊಸ ಕುಶನ್ ವಿನ್ಯಾಸ ನೀಡಲಾಗಿದೆ. ಇದು ಟೈಟಾನಿಯಂ ಗ್ರೇಡ್ 4 ಫ್ರೇಮ್ ಮತ್ತು 10 ಎಟಿಎಂ ವಾಟರ್ ರೆಸಿಸ್ಟೆನ್ಸ್ ಸಾಮರ್ಥ್ಯ ಹೊಂದಿದೆ. ಹಾಗಾಗಿ ಸಮುದ್ರದಲ್ಲಿ ಈಜಬಹುದಾದ ಮತ್ತು ಯಾವುದೇ ಪರಿಸರದಲ್ಲಿ ಸೈಕ್ಲಿಂಗ್ ಮಾಡಬಹುದಾದ ಸೌಕರ್ಯ ಒದಗಿಸುತ್ತಿದೆ ಮತ್ತು ಸುಧಾರಿತ ಫಿಟ್‌ನೆಸ್ ಅನುಭವವನ್ನು ನೀಡುತ್ತದೆ.
ಹೊಸದಾಗಿ ಕ್ವಿಕ್ ಬಟನ್ ಅನ್ನು ಸೇರಿಸಲಾಗಿದೆ. ಈ ಬಟನ್ ಅನ್ನು ಬಳಸಿ ನೀವು ತಕ್ಷಣವೇ ವರ್ಕೌಟ್ ಪ್ರಾರಂಭಿಸಬಹುದು ಮತ್ತು ನಿಯಂತ್ರಿಸಬಹುದು. ಜತೆಗೆ ನಿಮ್ಮ ಅಗತ್ಯಗಳಿಗೆ ಸರಿ ಹೊಂದುವಂತೆ ಇತರ ಕಾರ್ಯಗಳನ್ನು ಪ್ಲಾನ್ ಮಾಡಬಹುದು. ಹೆಚ್ಚುವರಿಯಾಗಿ ಅನಿವಾರ್ಯ ಸಂದರ್ಭಗಳಲ್ಲಿ ಸುರಕ್ಷತೆಗಾಗಿ ನೀವು ಇದರಲ್ಲಿರುವ ಎಮರ್ಜೆನ್ಸಿ ಸೈರನ್ ಅನ್ನು ಬಳಸಬಹುದು.
ವ್ಯಾಯಾಮದ ನಂತರ ಗ್ಯಾಲಕ್ಸಿ ವಾಚ್ ಅಲ್ಟ್ರಾದಲ್ಲಿರುವ ವಾಚ್ ಫೇಸ್‌ನಲ್ಲಿ ಅವತ್ತಿನ ವ್ಯಾಯಾಮಗಳ ಅಂಕಿಅಂಶಗಳನ್ನು ಪರಿಶೀಲಿಸಬಹುದು. 3,000 ನಿಟ್‌ಗಳಷ್ಟು ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ ಗ್ಯಾಲಕ್ಸಿ ವಾಚ್ ಅಲ್ಟ್ರಾ ಅತ್ಯಂತ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸಹ ಸುಲಭವಾಗಿ ಓದುವ ಸಾಮರ್ಥ್ಯ ಹೊಂದಿದೆ.
ಗ್ಯಾಲಕ್ಸಿ ವಾಚ್ ಅಲ್ಟ್ರಾ ವಾಚ್ ಗ್ಯಾಲಕ್ಸಿ ವಾಚ್ ಶ್ರೇಣಿಯಲ್ಲಿಯೇ ದೀರ್ಘವಾದ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಗ್ರಾಹಕರು ದೀರ್ಘ ಕಾಲ ಸಾಹಸ ಕ್ರೀಡೆಗಳನ್ನು ಆಡಲು ಅನುವು ಮಾಡಿಕೊಡುತ್ತದೆ. ಈ ವಾಚ್ 100 ಗಂಟೆಗಳವರೆಗಿನ ಪವರ್ ಸೇವಿಂಗ್ ಆಯ್ಕೆ ಒದಗಿಸುತ್ತದೆ ಮತ್ತು 48 ಗಂಟೆಗಳವರೆಗಿನ ಎಕ್ಸರ್ಸೈಸ್ ಪವರ್ ಸೇವಿಂಗ್ ಸೌಲಭ್ಯ ನೀಡುತ್ತದೆ.
ಗ್ಯಾಲಕ್ಸಿ ವಾಚ್ ಅಲ್ಟ್ರಾ ಟೈಟಾನಿಯಂ ಗ್ರೇ, ಟೈಟಾನಿಯಂ ವೈಟ್ ಮತ್ತು ಟೈಟಾನಿಯಂ ಸಿಲ್ವರ್ ಬಣ್ಣದಲ್ಲಿ ದೊರೆಯುತ್ತದೆ. 47 ಎಂಎಂ ಗಾತ್ರದಲ್ಲಿ ಲಭ್ಯವಿರುತ್ತದೆ. ಗ್ಯಾಲಕ್ಸಿ ವಾಚ್ ಅಲ್ಟ್ರಾ 3ಎನ್ಎಂ ಚಿಪ್‌ಸೆಟ್ ಹೊಂದಿದೆ.
ಗ್ಯಾಲಕ್ಸಿ ವಾಚ್7 ನಲ್ಲಿ ನೀವು 100ಕ್ಕೂ ಹೆಚ್ಚು ವರ್ಕ್‌ಔಟ್‌ಗಳನ್ನು ಕರೆಕ್ಟಾಗಿ ಟ್ರ್ಯಾಕ್ ಮಾಡಬಹುದು ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ವ್ಯಾಯಾಮದ ದಿನಚರಿ ಜತೆಗೆ ವಿವಿಧ ವ್ಯಾಯಾಮಗಳನ್ನು ಸಂಯೋಜಿಸುವ ಮೂಲಕ ಹೊಸ ದಿನಚರಿಯನ್ನು ಪ್ಲಾನ್ ಮಾಡಬಹುದು. ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ಮತ್ತು ರಕ್ತದೊತ್ತಡ (ಬಿಪಿ) ಮೇಲ್ವಿಚಾರಣೆ ಮಾಡಬಹುದಾಗಿರುವುದು ವಿಶೇಷ. ಈ ಮೂಲಕ ಗ್ರಾಹಕರು ತಮ್ಮ ಹೃದಯದ ಆರೋಗ್ಯದ ಕುರಿತು ವಿಸ್ತೃತ ತಿಳುವಳಿಕೆಯನ್ನು ಪಡೆಯಬಹುದು.
ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿರುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ
ಗ್ಯಾಲಕ್ಸಿ ವಾಚ್7, ವಾಚ್ ಅಲ್ಟ್ರಾ, ಬಡ್ಸ್ 3 ಸರಣಿಯ ಪ್ರಿ ಬುಕ್ ಆಫರ್‌ಗಳು
ಗ್ಯಾಲಕ್ಸಿ ವಾಚ್7 ಅನ್ನು ಪ್ರೀ ಬುಕ್ ಮಾಡುವ ಗ್ರಾಹಕರು ರೂ. 8000 ಮೌಲ್ಯದ ಬಹು-ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ ರೂ. 8000 ಮೌಲ್ಯದ ಬೋನಸ್ ಅನ್ನು ಅಪ್‌ಗ್ರೇಡ್ ಆಗಿ ಪಡೆಯುತ್ತಾರೆ. ಗ್ಯಾಲಕ್ಸಿ ವಾಚ್ ಅಲ್ಟ್ರಾ ಅನ್ನು ಮುಂಚಿತವಾಗಿ ಬುಕ್ ಮಾಡುವ ಗ್ರಾಹಕರು ರೂ. 10000 ಮೌಲ್ಯದ ಬಹು- ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ ರೂ. 10000 ಮೌಲ್ಯದ ಬೋನಸ್ ಅನ್ನು ಹೊಂದುತ್ತಾರೆ ಎಂದು ತಿಳಿಸಿದೆ.